ಇನ್‌ಸ್ಟಗ್ರಾಮ್ ತೆರೆದು ನೋಡಿ. ಒಬ್ಬರಲ್ಲ ಒಬ್ಬರು ತಾರೆ ಮಾಲ್ದೀವ್ಸ್ನ ತಿಳಿಹಸಿರು ಸಮುದ್ರದ ನೀರಿನಲ್ಲಿ ಎಂಜಾಯ್ ಮಾಡುತ್ತಿರುವ, ಈಜುತ್ತಿರುವ, ಬೀಚ್ ರೆಸಾರ್ಟ್‌ಗಳಲ್ಲಿ ರಿಲ್ಯಾಕ್ಸ್ ಮಾಡುತ್ತಿರುವ ಫೋಟೋಗಳನ್ನು ಕಾಣುತ್ತೀರಿ. ಮಲೈಕಾ ಅರೋರಾ ಖಾನ್‌ಳಿಂದ ಹಿಡಿದು ಕನ್ನಡದ ಶಾನ್ವಿ ಶ್ರೀವಾಸ್ತವ ವರೆಗೆ, ನಮ್ಮ ರಶ್ಮಿಕಾ ಮಂದಣ್ಣಳಿಂದ ಹಿಡಿದು ಹಿಂದಿಯ ಕರೀನಾ ಕಪೂರ್‌ವರೆಗೆ- ಮಾಲ್ದೀವ್ಸ್ ಬೀಚ್‌ಗಳಲ್ಲಿ ಮಜಾ ಉಡಾಯಿಸದ ತಾರೆಯರೇ ಇಲ್ಲ ಅನ್ನಬಹುದು. ಇತ್ತೀಚಿನ ಸೆಲೆಬ್ರಿಟಿ ಅಂದರೆ ಕನ್ನಡದ ಶಾನ್ವಿ ಶ್ರೀವಾಸ್ತವ. ತಾಪಸಿ ಪನ್ನು ಕೂಡ ಇತ್ತೀಚೆಗೆ ಹೋಗಿ ಬಂದಿದ್ದಳು. ಕಿಮ್‌ ಕರ್ದಾಶಿಯನ್, ಸನ್ನಿ ಲಿಯೋನ್‌ ಮುಂತಾದ ಅಂತಾರಾಷ್ಟ್ರೀಯ ನಟ ನಟಿಯರು, ಮಾಡೆಲ್‌ಗಳು ಕೂಡ ಇಲ್ಲಿಗೆ ರೆಗ್ಯುಲರ್ ವಿಸಿಟರ್‌ಗಳು. 


ಕತ್ರಿನಾ ಕೈಫ್, ದಿಶಾ ಪಟಾನಿ, ಟೈಗರ್ ಶ್ರಾಫ್, ತಾರಾ ಸುತಾರಿಯಾ, ಆದಾರ್ ಜೈನ್, ತಾಪಸಿ ಪನ್ನು, ಎಲ್ಲಿ ಆವ್ರಾಮ್, ವರುಣ್ ಧವನ್, ರಕುಲ್‌ಪ್ರೀತ್‌ ಸಿಂಗ್, ಅಂಗದ್ ಬೇಡಿ, ನೇಹಾ ಧೂಪಿಯಾ, ಕಾಜಲ್ ಅಗರ್‌ವಾಲ್‌ ಇವರೆಲ್ಲ ಇತ್ತೀಚೆಗೆ ಮಾಲ್ದೀವ್ಸ್‌ಗೆ ತೆರಳಿ ಮಜಾ ಉಡಾಯಿಸಿ ಬಂದವರು. 

ಅದೆಲ್ಲ ಸರಿ, ಸಿನಿಮಾ ತಾರೆಯರಿಗೇಕೆ ಮಾಲ್ದೀವ್ಸ್ ಅಂದರೆ ಅಷ್ಟೊಂದು ಇಷ್ಟ?

ಮಾಲ್ದೀವ್ಸ್ ಭಾರತದಿಂದ ಹೆಚ್ಚೇನೂ ದೂರವಿಲ್ಲ. ಶ್ರೀಲಂಕಾದಿಂದ ಸ್ವಲ್ಪ ಆಚೆಗಿದೆ. ಪ್ರತಿನಿತ್ಯ ವಿಮಾನ ಸೌಲಭ್ಯವಿದೆ. ಬಾಲಿವುಡ್ ತಾರೆಯರಿಗೆ ಆತಿಥ್ಯ ನೀಡುವ ಹಲವಾರು ಐಷಾರಾಮಿ ರೆಸಾರ್ಟ್‌ಗಳಿವೆ. ಆಕ್ಚುಯಲೀ, ಮಾಲ್ದೀವ್ಸ್‌ನ ಜನತೆ ಹೊಟ್ಟೆ ಹೊರೆಯುತ್ತಿರುವುದೇ ಪ್ರವಾಸೋದ್ಯಮದಿಂದ. ಬಾಲಿವುಡ್ ತಾರೆಯರಿಂದ ಹಿಡಿದು ಮುಂಬಯಿಯ ದೊಡ್ಡ ಉದ್ಯಮಪತಿಗಳವರೆಗೆ ಎಲ್ಲರೂ ಪ್ರವಾಸ, ರಿಲ್ಯಾಕ್ಸ್, ಬೀಚ್ ವಿಲಾಸಗಳಿಗೆಲ್ಲ ಮೊರೆ ಹೋಗುವುದು ಮಾಲ್ದೀವ್ಸ್‌ಗೆ. ಭಾರತಕ್ಕೂ ಮಾಲ್ದೀವ್ಸ್‌ಗೂ ಪ್ರವಾಸೋದ್ಯಮ ಸಂಬಂಧ ಉತ್ತಮವಾಗಿದೆ.

ಇನ್ನೊಂದು ಗೊತ್ತಾ? ಭಾರತೀಯ ಪ್ರಜೆಗಳು, ವೀಸಾ ಇಲ್ಲದೆಯೇ ಮಾಲ್ದೀವ್ಸ್‌ಗೆ ತೆರಳಿ ಅಲ್ಲಿ 60 ದಿನಗಳ ಕಾಲ ಟೂರ್ ಮಾಡಬಹುದು. ಪಾಸ್‌ಪೋರ್ಟ್ ಇದ್ದರೆ ಸಾಕು. ಭಾರತದಿಂದ ವೀಸಾ ರಗಳೆ ಇಲ್ಲದೆ ಹೋಗಿ ಬರಬಹುದಾದ ಬೆರಳೆಣಿಕೆಯ ದೇಶಗಳಲ್ಲಿ ಮಾಲ್ದೀವ್ಸ್ ಕೂಡ ಒಂದು. 

ಮಾಲ್ದೀವ್ಸ್‌ನ ರೆಸ್ಟುರಾ, ರೆಸಾರ್ಟ್‌ಗಳು ಇಲ್ಲಿನ ತಾರೆಯರಿಗೆ ಸದಾ ತೆರೆದೇ ಇರುತ್ತವೆ. ಅಲ್ಲಿನ ಕ್ರಿಸ್ಟಲ್ ಕ್ಲಿಯರ್ ಬೀಚ್‌ಗಳು ಇಲ್ಲಿನ ತಾರೆಯರಿಗೆ ತುಂಬಾ ಇಷ್ಟ. ಅಲ್ಲಿನ ಬೀಚ್‌ಗಳು ಎಷ್ಟು ಕ್ಲೀನ್ ಎಂದರೆ, ಇಲ್ಲಿನ ಬೀಚ್‌ಗಳನ್ನು ಅವುಗಳ ಮುಂದೆ ನಿವಾಳಿಸಿ ಎಸೆಯಬೇಕು. ಸಾಕಷ್ಟು ಖಾಸಗಿ ಬೀಚ್‌ಗಳೂ ಇವೆ. ಇಲ್ಲಿ ಇದ್ದಂತೆ ಇಲ್ಲಿನ ತಾರೆಯರಿಗೆ ಸದಾ ದುಂಬಾಲು ಬೀಳುವ, ಕಾಡುವ ಅಭಿಮಾನಿಗಳೂ ಅಲ್ಲಿ ಇರುವುದಿಲ್ಲ. ಯಾಕೆಂದರೆ ಅಲ್ಲಿ ಇವರನ್ನು ಗುರುತು ಹಿಡಿಯುವ ಭಾರತೀಯರಿಲ್ಲ. ಸಾಮಾನ್ಯ ಭಾರತೀಯರು ಅಲ್ಲಿಗೆ ಹೋಗುವುದೂ ಇಲ್ಲ. ಯಾಕೆಂದರೆ ಅಲ್ಲಿನ ಪ್ರವಾಸೋದ್ಯಮ ದುಬಾರಿ. 

ಅಷ್ಟಕ್ಕೂ ಈ ಬಾಲಿವುಡ್ ನಟಿಯರಿಗೆ ಐಶ್ವರ್ಯಾ ರೈ ಕಂಡರೇಕೆ ಇಷ್ಟು ಉರಿ? ...

ತಾರೆಯರು ಅಲ್ಲಿ ಹೋಗಿ ಏನು ಮಾಡುತ್ತಾರೆ? ಹೆಚ್ಚಾಗಿ ರಿಲ್ಯಾಕ್ಸ್ ಆಗಲೆಂದೇ ಅಲ್ಲಿಗೆ ಹೋಗುತ್ತಾರೆ. ಜೊತೆಗೆ ಪಾರ್ಟಿಗಳನ್ನೂ ಬ್ಯುಸಿನೆಸ್  ಮೀಟಿಂಗ್‌ಗಳನ್ನೂ ಅಲ್ಲಿಟ್ಟುಕೊಳ್ಳುತ್ತಾರೆ. ಆನಿವರ್ಸರಿ, ಬರ್ತ್‌ಡೇ, ಹನಿಮೂನ್ ಹೀಗೆ ನೂರೆಂಟು ಕಾರಣಗಳಿಂದ ಅಲ್ಲಿಗೆ ಹೋಗುತ್ತಾರೆ. ಇವರ ಆತಿಥ್ಯಕ್ಕಾಗಿ ಸದಾ ಸಜ್ಜಾಗಿರುವ ಸಾವಿರಾರು ರೆಸಾರ್ಟ್‌ಗಳು ಅಲ್ಲಿವೆ. ಇವು ಸೆಲೆಬ್ರಿಟಿಗಳಿಗಾಗಿಯೇ ಮೀಸಲಾದ, ಅವರಿಗೆ ಶಾಂತವಾದ ನೆಮ್ಮದಿಯ ರಿಲ್ಯಾಕ್ಸಿಂಗ್ ಸಮಯವನ್ನು ಒದಗಿಸಿಕೊಡುವ ರೆಸಾರ್ಟ್‌ಗಳು.
 
ಮಾಲ್ದೀವ್ಸ್ ಅಂದರೆ ಒಂದೇ ದ್ವೀಪವಲ್ಲ. ಅಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ದ್ವೀಪಗಳಿವೆ. ಇವೆಲ್ಲ ಕೋರಲ್ ಐಲ್ಯಾಂಡ್‌ಗಳು ಅಥವಾ ಹವಳದ ದ್ವೀಪಗಳು. ಹೀಗಾಗಿಯೇ ಅಲ್ಲಿನ ಬೀಚ್‌ಗಳು ಎಷ್ಟೇ ಆಳವಿದ್ದರೂ ತಳ ಕಾಣಬಲ್ಲಷ್ಟು ನಿರ್ಮಲ. 

ಲೆದರ್‌ ಸ್ಕರ್ಟ್‌ನಲ್ಲಿ ಬಾಲಿವುಡ್‌ ನಟಿಯರ ವಿಂಟರ್ ಲುಕ್! ...

ಹಾಗೇ ಇತ್ತೀಚೆಗೆ ಕೋವಿಡ್ ಬಂದ ನಂತರ, ಮಾಲ್ದೀವ್ಸ್‌ನ ಪ್ರವಾಸೋದ್ಯಮ ಇಲಾಖೆ ಅಲ್ಲಿನ ಪ್ರವಾಸೋದ್ಯಮವನ್ನು ಬಲು ಎಚ್ಚರಿಕೆಯಿಂದ ನಿಭಾಯಿಸುತ್ತಿದೆ. ಕ್ಲೀನ್ಲಿನೆಸ್ ಚೆನ್ನಾಗಿ ಮೇಂಟೇನ್ ಮಾಡಲಾಗಿದೆ. ಭಾರತಕ್ಕೂ ಮಾಲ್ದೀವ್ಸ್‌ಗೂ ಏರ್‌ ಬಬಲ್‌ ಇದೆ- ಅಂದರೆ ಕೆಲವು ದೇಶಗಳು ಇನ್ನೂ ಭಾರತೀಯರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲವಾದರೂ, ಮಾಲ್ದೀವ್ಸ್ ಮಾತ್ರ ಒಳಗೆ ಬಿಟ್ಟುಕೊಳ್ಳುತ್ತಿದೆ. ಇದರಿಂದಾಗಿಯೂ ಸೆಲೆಬ್ರಿಟಿಗಳು ಅತ್ತ ತೆರಳಲು ಸಹಾಯವಾಗಿದೆ. ಇದು ಇತ್ತೀಚೆಗೆ ಒಂದು ಸಣ್ಣ ವಿವಾದಕ್ಕೂ ಎಡೆಮಾಡಿಕೊಟ್ಟಿತ್ತು. ಮಾಲ್ದೀವ್ಸ್‌ಗೆ ತೆರಳಿದ ಸೆಲೆಬ್ರಿಟಿಗಳು ಅರೆನಗ್ನವಾಗಿ ಬಿಕಿನಿಯಲ್ಲಿ ಬೀಚ್‌ನಲ್ಲಿ ನಿಂತೋ ನೀರಿನಲ್ಲಿ ಈಜುತ್ತಲೋ ಫೋಟೋ ತೆಗೆದು ಇನ್‌ಸ್ಟಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುವುದು ಸಹಜ ತಾನೆ. ಇದನ್ನು ಬರ್ಕಾ ದತ್ ಮುಂತಾದವರು ಕಟುವಾಗಿ ಟೀಕಿಸಿದ್ದರು. ದೇಶದಲ್ಲಿ ಕೊರೊನಾ ಸೋಂಕು ಇಷ್ಟೊಂದು ಹೆಚ್ಚಿರುವಾಗ, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿರುವಾಗ, ಈ ಸೆಲೆಬ್ರಿಟಿಗಳು ಅದನ್ನು ಕೇರ್ ಮಾಡದೆ ತಮ್ಮದೇ ಆದ ಮೋಜು ಮಸ್ತಿಯಲ್ಲಿ ನಿರತರಾಗಿದ್ದಾರೆ ಎಂದು ಕೆಲವರು ಟೀಕಿಸಿದ್ದರು. 

ಸೌತ್‌ ಸ್ಟಾರ್‌ ಕಪಲ್‌ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ! ...