Asianet Suvarna News Asianet Suvarna News

ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ಬಳಿಕ ಬೇಲೂರು ದೇಗುಲಕ್ಕೆ ಯುನೆಸ್ಕೋ ನಿರ್ದೇಶಕರ ಟೀಂ ಭೇಟಿ

ಬೇಲೂರು ಶ್ರೀ ಚನ್ನಕೇಶವ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ್ದು ಯುನೆಸ್ಕೋ ನಿರ್ದೇಶಕರು ಭೇಟಿ ನೀಡಿದರು.

unesco director visited  beluru Halebidu Hoysala Temples after World Heritage Sites gow
Author
First Published Aug 12, 2024, 4:31 PM IST | Last Updated Aug 12, 2024, 4:44 PM IST

ಬೇಲೂರು (ಆ.12): ಬೇಲೂರು ಶ್ರೀ ಚನ್ನಕೇಶವ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ್ದು ಯುನೆಸ್ಕೋ ನಿರ್ದೇಶಕರಾದ ಪ್ಯಾರಿಸ್‌ನ ಡಾ. ಲೆಜಾರೆ ಎಲೌಂಡು ಅಸ್ಸೋಮೋ ಹಾಗೂ ಎಲಿಜಬೆತ್ ಕ್ರಿಸ್ಟೇನ್ ಗ್ಯೂಮೊಸ್ ಭೇಟಿ ನೀಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಇದೊಂದು ವಿಶಿಷ್ಟ ಶಿಲ್ಪಕಲೆಯಯನ್ನು ಹೊಂದಿರುವ ದೇಗುಲ ಅತ್ಯತ್ಭುತವಾದ ಕಲೆ, ನಾಟ್ಯ ಸೇರಿದಂತೆ ಎಲ್ಲಾ ಕಲಾಕೃತಿಗಳಿಂದ ವಿಶ್ವದ ಹಲವು ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. 2023ರಲ್ಲಿ ಯುನೆಸ್ಕೊ ವಿಶ್ವಪಾರಂಪರಿಕ ಪಟ್ಟಿಗೆ ಹೊಯ್ಸಳೇಶ್ವರ ದೇವಾಲಯವಾದ ಬೇಲೂರು ಮತ್ತು ಹಳೆಬೀಡನ್ನು ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ವಿಶ್ವ ಮಾನ್ಯತಾ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ. ಪ್ರತಿನಿತ್ಯ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಮಾಹಿತಿಯನ್ನು ನೀಡಲು ಇಲ್ಲಿಗೆ ಬಂದಿದ್ದು ಮೊದಲ ಹಂತದಲ್ಲಿ ಪರಿಶೀಲನೆ ಮಾಡಿದ್ದು ಎರಡನೇ ಹಂತದಲ್ಲಿ ಸಂಪೂರ್ಣ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುವುದು. ಇಲ್ಲಿ ಯಾವ ರೀತಿ ತಾಣವನ್ನಾಗಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದೇವೆ ಎಂದರು.

ಪಾರಂಪರಿಕ ತಾಣಗಳ ರಕ್ಷಣೆ ಅತ್ಯವಶ್ಯಕ: ಈ ಭೇಟಿಯ ಉದ್ದೇಶ ಹಿಂದಿನವರು ಉಳಿಸಿದ ದೇವಾಲಯಗಳು, ಕಟ್ಟಡಗಳು ಹಾಗೂ ಸಂಸ್ಕೃತಿಯನ್ನು ಅದರ ಪರಂಪರೆಯನ್ನು ಕಾಪಾಡುವುದು ಮತ್ತು ಸಂರಕ್ಷಣೆ ಮಾಡುವುದು. ಜೊತೆಗೆ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಯುನೆಸ್ಕೋ ತಂಡ ಭೇಟಿ ನೀಡಿದೆ ಎಂದು ತಿಳಿದರು.

ಲಾಲ್‌ಬಾಗ್‌ ಫ್ಲವರ್‌ ಶೋ ,ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ, ಪೇಪರ್ ಟಿಕೆಟ್ ಎಲ್ಲಿ ಸಿಗಲಿದೆ?

ಸ್ಥಳೀಯರ ಸಹಕಾರ ಅತ್ಯಗತ್ಯ: ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಳೇಬೀಡು ದೇವಾಲಯದ ಸಂರಕ್ಷಣೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಜೊತೆಗೆ ಸ್ಥಳೀಯರು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಉಳಿಸುವ, ಬೆಳೆಸುವ ಅವುಗಳನ್ನು ಗೌರವಿಸುವ ಮತ್ತು ಕಾಪಾಡುವುದು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ ಪಾರಂಪರಿಕ ತಾಣಗಳು ಅಭಿವೃದ್ಧಿಯನ್ನು ಕಾಣುತ್ತವೆ. ಶತಮಾನಗಳು ಕಳೆದರೂ ಅವುಗಳು ಬಿಂಬಿತವಾಗುತ್ತಿರಬೇಕು. ಈ ದೃಷ್ಠಿಯಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಪ್ರೇರಣೆ ಹಾಗೂ ಇಚ್ಛಾಶಕ್ತಿ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎಂದರು.

ದೇವಾಲಯಗಳ ಸಂಪ್ರದಾಯ ಯಥಾಸ್ಥಿತಿಯಲ್ಲಿ ಉಳಿಸುವುದು ಆದ್ಯ ಕರ್ತವ್ಯ. ದೇವಾಲಯದ ಸಾಪ್ರದಾಯಿಕ ಆಚರಣೆಗಳ ಸಂಪ್ರದಾಯಗಳು, ಸಂಸ್ಕೃತಿ ಇವೆಲ್ಲವನ್ನೂ ಗೌರವಿಸುವುದು ನಮ್ಮ ಕರ್ತವ್ಯ, ಜನರ ನಂಬಿಕೆ, ಭಾವನೆಗಳಿಗೆ ಪೂರಕವಾಗಿ ನಡೆದುಕೊಳ್ಳಲು ಯಾವುದೇ ತೊಂದರೆ ಇಲ್ಲ ವೆಂದು ಅವರು ತಿಳಿಸಿದರು.

ಜಲಪಾತ ವೀಕ್ಷಣೆಗೆ ತಮಿಳುನಾಡು, ಕರ್ನಾಟಕ ನಿಷೇಧ ತೆರವು, ಹೊಗೇನಕಲ್‌ಗೆ ಪ್ರವಾಸಿಗರ ದಂಡು! 

ಮಾನವೀಯ ಮೌಲ್ಯಗಳ ಪ್ರತೀಕ: ಯುನೆಸ್ಕೋ ತಂಡ ಸಹಾಯಕ ನಿರ್ದೇಶಕರಾದ ಜ್ಯೋತಿ ಅಗ್ರಹಾರ ಮಾತನಾಡಿ, ದೇವಾಲಯಗಳು ನಮ್ಮ ಆಸ್ಮಿತತೆಗಳು. ಅವುಗಳನ್ನುರಕ್ಷಣೆ ಮಾಡುವುದು ಇಲಾಖೆಯ ಜವಾಬ್ದಾರಿ ಅದನ್ನು ನಾವು ಅಚ್ಚುಕಟ್ಟಾಗಿ ಮಾಡಿದ್ದೇವೆ. ಜೊತೆಗೆ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಲು, ರಕ್ಷಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.

ಯುನೆಸ್ಕೋ ಉಪ ಆಯುಕ್ತೆ ಜ್ಯೋತಿ ಹೊಸ ಅಗ್ರಹಾರ ಮಾತನಾಡಿ, ವಿಶ್ವಮಾನ್ಯತೆ ಪಟ್ಟಿಯ 47ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೊದಲು ಇಲ್ಲಿಗೆ ಆಗಮಿಸಿದ್ದು ಬೇಲೂರು ಹಳೆಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಸ್ಥಳೀಯ ಅಧಿಕಾರಿಗಳ ಹಾಗೂ ದೇಗುಲಗಳ ಸಂಕ್ಷಿಪ್ತ ಮಾಹಿತಿ ದೇವಾಲಯದ ಅಕ್ಕಪಕ್ಕ ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂಬ ಮಾಹಿತಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು ಅದನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ದೇವಾಲಯಕ್ಕೆ ಮತ್ತು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂಬುವುದರ ಬಗ್ಗೆ ಆಯುಕ್ತರಿಗೆ ತಹಸೀಲ್ದಾರ್‌ ಎಂ ಮಮತಾ ಹಾಗೂ ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಾ ನಾರಾಯಣಸ್ವಾಮಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿನ ಕೇಂದ್ರ ಪುರಾತತ್ವ ಇಲಾಖೆಯ ಅಧ್ಯಕ್ಷರಾದ ಬಿಪಿನ್ ನೇಗಿ, ಹಾಸನ ಅಧಿಕಾರಿ ಗೌತಮ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶಿಲ್ಪ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿ ವೀರ ರಾಘವನ್, ಕುಮಾರ್, ಛಾಯಾಗ್ರಾಹಕ ಬಸವರಾಜು, ಬೇಲೂರು ತಹಸೀಲ್ದಾರ್ ಮಮತಾ, ಇ.ಒ.ಸತೀಶ್ ಗ್ರಾಮಪಂಚಾಯಿತಿ ಅಧ್ಯಕ್ಷ ನಿತ್ಯಾನಂದ್.ಪಿಡಿ.ಒ.ವಿರುಪಾಕ್ಷ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ. ಎಮ್.ಸಿ.ಕುಮಾರ್, ಅರ್ಚಕರಾದ ಸುಬ್ರಮಣ್ಯ ಮತ್ತು ಉದಯ್ ಕುಮಾರ್ ಮುಂತಾದವರು ಹಾಜರಿದ್ದರು. ಯುನೆಸ್ಕೋ ತಂಡದವರಿಗೆ ಸ್ಥಳಿಯ ಮಾರ್ಗದರ್ಶಿ ರಾಘವೇಂದ್ರ(ರಘು) ಫ್ರೆಂಚ್ ಭಾಷೆಯಲ್ಲಿ ದೇವಾಲಯದ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios