Travel Guide : ಭಾರತದಲ್ಲಿ ಅನೇಕರ ಹೊಟ್ಟೆ, ಜೇಬು ತುಂಬೋದು ಭಾನುವಾರ ಸಿಗುವ ಕೆಲ್ಸದಿಂದ. ಆದ್ರೆ ವಿಶ್ವದಲ್ಲಿ ವಿಚಿತ್ರ ದೇಶವೊಂದಿದೆ. ಅಲ್ಲಿ ಭಾನುವಾರ ಯಾವುದೇ ಕೆಲ್ಸ ಮಾಡುವ ಹಾಗಿಲ್ಲ. ಒಪ್ಪಿಗೆ ಇಲ್ದೆ ಮಾಡಿದ್ರೆ ಶಿಕ್ಷೆಯಾಗುತ್ತೆ.
ಶುಕ್ರವಾರ ಮಧ್ಯಾಹ್ನ ಆಗ್ತಿದ್ದಂತೆ ಅನೇಕರು ವೀಕೆಂಡ್ ಮೂಡ್ ಗೆ ಬಂದಿರ್ತಾರೆ. ಭಾರತದಲ್ಲಿ ಶನಿವಾರ ಹಾಗೂ ಭಾನುವಾರ ಅಂದ್ರೆ ಅದು ಸುತ್ತಾಟ, ಶಾಪಿಂಗ್ ಗೆ ಮೀಸಲು. ಅಂಗಡಿ, ಹೊಟೇಲ್ ಸೇರಿದಂತೆ ಬೇರೆ ಬ್ಯುಸಿನೆಸ್ ಮಾಡುವ ಅನೇಕರಿಗೆ ಶನಿವಾರ ಹಾಗೂ ಭಾನುವಾರವೇ ಹೆಚ್ಚು ವ್ಯಾಪಾರವಾಗುತ್ತೆ. ಭಾನುವಾರ ರಜೆ ಅಂತ ಬೋರ್ಡ್ ಹಾಕಿ ಹೋದ್ರೆ ನಷ್ಟ ಗ್ರಾಹಕರಿಗಲ್ಲ. ಹಾಗಾಗಿಯೇ ಭಾರತ (India)ದಲ್ಲಿ ಸರ್ಕಾರಿ ಕಚೇರಿ, ಬ್ಯಾಂಕ್, ಐಟಿ ಸೇರಿದಂತೆ ಕೆಲ ಕಂಪನಿಗಳಿಗೆ ಭಾನುವಾರ, ಶನಿವಾರ ರಜೆ ಇದ್ರೂ ಉಳಿದ ಅನೇಕ ಉದ್ಯೋಗಿಗಳಿಗೆ, ಕಂಪನಿಗಳಿಗೆ ರಜೆ ಇಲ್ಲ. ಆದ್ರೆ ವಿಶ್ವದ ಒಂದು ದೇಶದಲ್ಲಿ ಭಾನುವಾರ ಕೆಲ್ಸ ಮಾಡುವಂತೆ ಇಲ್ಲ. ಅದನ್ನು ಕಾನೂನು ಬಾಹಿರ ಅಂತ ಪರಿಗಣಿಸಲಾಗುತ್ತೆ.
ಭಾನುವಾರ (Sunday) ಕೆಲ್ಸ ಮಾಡಿದ್ರೆ ಶಿಕ್ಷೆ
ಭಾನುವಾರ ಮೋಜು, ವಿಶ್ರಾಂತಿಗೆ ಮೀಸಲಾದ್ರೂ ಭಾನುವಾರ ಕೆಲ್ಸ ಮಾಡೋದನ್ನು ಅಪರಾಧ ಎಂದು ಎಲ್ಲೂ ಪರಿಗಣಿಸಲಾಗಿಲ್ಲ. ಆದ್ರೆ ಈ ಪಟ್ಟಿಗೆ ಟೋಂಗಾ ಪೆಸಿಫಿಕ್ ಮಹಾಸಾಗರ (Tonga Pacific Ocean) ಸೇರೋದಿಲ್ಲ. ಟೋಂಗಾ ಪೆಸಿಫಿಕ್ ಮಹಾಸಾಗರ ಒಂದು ಸಣ್ಣ, ಸುಂದರವಾದ ದೇಶ. ಅಲ್ಲಿ ಭಾನುವಾರದಂದು ಕೆಲಸ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ.
ಲಾಂಗ್ ವೀಕೆಂಡ್‌ನಲ್ಲಿ ಹೆಚ್ಚು ಬುಕ್ಕಿಂಗ್ ಆಗಿರುವ ಸ್ಥಳ ಯಾವ್ದು?, MakeMyTrip
ಸಂವಿಧಾನದಲ್ಲಿ ಭಾನುವಾರದಂದು ನಾಗರಿಕರು ಕೆಲಸ ಮಾಡುವುದನ್ನು ನಿಷೇಧಿಸಿರುವ ವಿಶ್ವದ ಏಕೈಕ ದೇಶ ಟೋಂಗಾ. ಹೆಚ್ಚಿನ ದೇಶಗಳಲ್ಲಿ, ಭಾನುವಾರಗಳು ಒಂದು ಸಂಪ್ರದಾಯ ಅಥವಾ ಕಾರ್ಮಿಕ ಕಾನೂನಿನ ಭಾಗವಾಗಿವೆ. ಆದ್ರೆ ಟೋಂಗಾದಲ್ಲಿ, ಇದು ದೇಶದ ಸರ್ವೋಚ್ಚ ಕಾನೂನು, ಸಂವಿಧಾನದ ಭಾಗವಾಗಿದೆ.
ಭಾನುವಾರ ಏನು ಮಾಡ್ತಾರೆ?
ಟೋಂಗಾದ ಸಂವಿಧಾನದ 6 ನೇ ವಿಧಿಯ ಪ್ರಕಾರ, ಭಾನುವಾರಗಳನ್ನು ಪವಿತ್ರ ಸಬ್ಬತ್ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಈ ದಿನದಂದು ಇಡೀ ದೇಶವನ್ನು ಅಧಿಕೃತವಾಗಿ ಮುಚ್ಚಲಾಗುತ್ತದೆ. ಇಲ್ಲಿನ ಜನರು ಈ ದಿನವನ್ನು ಸಂಪೂರ್ಣವಾಗಿ ಪ್ರಾರ್ಥನೆ ಮತ್ತು ಕುಟುಂಬದೊಂದಿಗೆ ವಿಶ್ರಾಂತಿಗೆ ಮೀಸಲಿಡುತ್ತಾರೆ.
ಟೋಂಗಾದಲ್ಲಿ ಭಾನುವಾರದ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ. ಕಚೇರಿಗಳು ಮಾತ್ರವಲ್ಲ, ಬಹುತೇಕ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಸಣ್ಣ ಬೀದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಶೋರೂಮ್ಗಳವರೆಗೆ ಎಲ್ಲವೂ ಮುಚ್ಚಲ್ಪಟ್ಟಿದೆ. ರಸ್ತೆ ಬದಿಯಲ್ಲಿ ನಿಮಗೆ ಒಂದು ಹಣ್ಣ ಕೂಡ ಸಿಗೋದಿಲ್ಲ. ಇಷ್ಟೇ ಅಲ್ಲ ಅಚ್ಚರಿ ವಿಷ್ಯ ಅಂದ್ರೆ ಟೋಂಗಾದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳು ಕೂಡ ಭಾನುವಾರ ಮುಚ್ಚಿರುತ್ತವೆ. ಈ ದಿನ ಯಾವುದೇ ಅಂತರರಾಷ್ಟ್ರೀಯ ವಿಮಾನಗಳು ದೇಶಕ್ಕೆ ಬರೋದಿಲ್ಲ.
ಹೊಟೇಲ್ ರೂಮಿನ ಮೂಲೆ ಮೂಲೆಯಲ್ಲಿರುತ್ತೆ ಹಿಡನ್ ಕ್ಯಾಮರಾ, ಭಯಪಡ್ಬೇಕಾಗಿಲ್ಲ ಸ್ಮಾರ್ಟ್ಫೋನ್ ಇದ್ರೆ ಎಲ್ಲ ಈಜಿ
ಶಿಕ್ಷೆ, ದಂಡ
ಒಂದ್ವೇಳೆ ಟೋಂಗಾದಲ್ಲಿ ಭಾನುವಾರದಂದು ಕೆಲ್ಸ ಮಾಡಿದ್ರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಕಾನೂನನ್ನು ಉಲ್ಲಂಘಿಸಿದರೆ ಭಾರಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ಪತ್ರೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ದಳಗಳಂತಹ ಅಗತ್ಯ ಸೇವೆಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಕೆಲವು ಆಯ್ದ ಹೋಟೆಲ್ಗಳು ವಿದೇಶಿ ಪ್ರವಾಸಿಗರಿಗೆ ಸೇವೆ ಸಲ್ಲಿಸಲು ಸರ್ಕಾರದಿಂದ ವಿಶೇಷ ಅನುಮತಿಯನ್ನು ಹೊಂದಿವೆ. ಅಲ್ಲಿ ಸಿಬ್ಬಂದಿ ಸೀಮಿತರಾಗಿರಬೇಕು, ವಾತಾವರಣ ಶಾಂತವಾಗಿರಬೇಕು.
ಟೋಂಗಾ ಜನರಿಗೆ ಇದು ಹೊರೆಯಲ್ಲ. ಇದನ್ನು ಅವರು ಸಂಸ್ಕೃತಿಯ ಭಾಗವೆಂದು ಪರಿಗಣಿಸುತ್ತಾರೆ. ಭಾನುವಾರದಂದು, ಇಡೀ ದೇಶವು ಚರ್ಚ್ ಗಂಟೆಗಳು ಮತ್ತು ಸ್ತೋತ್ರಗಳಿಂದ ಪ್ರತಿಧ್ವನಿಸುತ್ತದೆ. ಜನರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ, ಪ್ರಾರ್ಥನಾ ಸಭೆಗಳಿಗೆ ಹಾಜರಾಗುತ್ತಾರೆ ಮತ್ತು ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಸೇವಿಸುತ್ತಾರೆ.


