Asianet Suvarna News Asianet Suvarna News

ಚಿಕ್ಕಮಗಳೂರು: ಉಗ್ರ ಸ್ವರೂಪ ತಾಳಿದ ಕಲ್ಲತ್ತಿಗರಿ ಜಲಪಾತ, ಪಾಲ್ಸ್‌ ಬಳಿ ನಿಲ್ಲೋದಕ್ಕೂ ಪ್ರವಾಸಿಗರಿಗೆ ಭಯ..!

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮೈದುಂಬಿ ಕಲ್ಲತ್ತಿಗರಿ ಜಲಪಾತ ಧುಮ್ಮಿಕ್ತಿ ಹರಿಯುತ್ತಿದೆ. ಕಳೆದ ವಾರ ಜಲಪಾತದಲ್ಲಿ ನೀರಿನ ಪ್ರಮಾಣ ಸಾಧಾರಣವಾಗಿತ್ತು. ಆದ್ರೆ, ನಾಲ್ಕೈದು ದಿನದಿಂದ ವರುಣ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ಜಲಪಾತ ಧುಮ್ಮಿಕ್ಕುತ್ತಿದೆ.   
 

tourist rush to visit to kallattigiri falls in chikkamagaluru grg
Author
First Published Jul 19, 2024, 5:10 PM IST | Last Updated Jul 19, 2024, 5:22 PM IST

ಚಿಕ್ಕಮಗಳೂರು(ಜು.19):  ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಲ್ಲತ್ತಿಗರಿ ಜಲಪಾತ ಉಗ್ರ ಸ್ವರೂಪ ಪಡೆದಿದೆ. ಹೌದು,  ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿದೆ ಫಾಲ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. 

ತರೀಕೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮೈದುಂಬಿ ಕಲ್ಲತ್ತಿಗರಿ ಜಲಪಾತ ಧುಮ್ಮಿಕ್ತಿ ಹರಿಯುತ್ತಿದೆ. ಕಳೆದ ವಾರ ಜಲಪಾತದಲ್ಲಿ ನೀರಿನ ಪ್ರಮಾಣ ಸಾಧಾರಣವಾಗಿತ್ತು. ಆದ್ರೆ, ನಾಲ್ಕೈದು ದಿನದಿಂದ ವರುಣ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ಜಲಪಾತ ಧುಮ್ಮಿಕ್ಕುತ್ತಿದೆ. 

ಭೂಕುಸಿತ, ಪ್ರವಾಹ ಭೀತಿ, ಇನ್ನೆಷ್ಟು ಕಾಲ ಈ ಜಲದಿಗ್ಬಂಧನ? ಯಾವ್ಯಾವ ಜಿಲ್ಲೆಗಳ ಪರಿಸ್ಥಿತಿ ಏನಾಗಿದೆ..?

ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಜಲಪಾತ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಜಲಪಾತದ ಬಳಿ ನಿಲ್ಲೋದಕ್ಕೂ ಪ್ರವಾಸಿಗರು ಭಯ ಪಡುತ್ತಿದ್ದಾರೆ.

Latest Videos
Follow Us:
Download App:
  • android
  • ios