Asianet Suvarna News Asianet Suvarna News

ಬಂಡೀಪುರದಲ್ಲಿ ಮೈನವಿರೇಳಿಸುವ ವನ್ಯಜೀವಿ ಕಲರವ: ಪ್ರವಾಸಿಗರಿಗೆ ರೋಮಾಂಚನ..!

ಕಾಡು ಹಸಿರು ಆಗಿರುವುದರಿಂದ ಪ್ರಾಣಿ ಪಕ್ಷಿಗಳು ತಮಗೆ ಬೇಕಾದನ್ನು ತಿಂದು ವಿಹರಿಸುತ್ತಿದ್ದು, ಆಗಾಗ ಸಫಾರಿಗೆ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ರೋಮಾಂಚನ ಮೂಡಿಸುತ್ತಿವೆ.

Tourist Enjoy Safari in Bandipur National Park in Chamarajanagara grg
Author
First Published Aug 4, 2023, 3:00 AM IST

ಮೈಸೂರು(ಆ.04):  ಬಂಡಿಪುರ ಅರಣ್ಯ ಪ್ರದೇಶದಲ್ಲಿ ಹಸಿರು ವೈಭವದಿಂದ ಕೂಡಿದ್ದು, ವನ್ಯಜೀವಿಗಳ ಕಲರವವು ಪ್ರವಾಸಿಗರ ಆಕರ್ಷಿಸುತ್ತಿದೆ. ಪ್ರತಿನಿತ್ಯ ನೂರಾರು ಮಂದಿ ಸಫಾರಿಯಲ್ಲಿ ಪಾಲ್ಗೊಂಡು, ಹಸಿರು ವೈಭವ ಮತ್ತು ಪ್ರಾಣಿ ಪಕ್ಷಿಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯ ಅವಿಭಾಜ್ಯ ಜಿಲ್ಲೆಯಾದ ಚಾಮರಾಜನಗರವು ಬೆಟ್ಟಗುಡ್ಡಗಳಿಂದ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಜಿಲ್ಲೆಯ ಒಂದು ಭಾಗವಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕಾಡು ಸಮೃದ್ಧವಾಗಿ ಹಸಿರನ್ನು ಹೊದ್ದಿ ಮಲಗಿದ್ದು, ಕಾಡಿನ ಪ್ರಾಣಿ ಪಕ್ಷಿಗಳು ಸಹ ಖುಷಿಯಾಗಿ ವಿಹರಿಸುವ ವಾತಾವರಣ ನಿರ್ಮಾಣವಾಗಿದೆ.

ಗುಂಡ್ಲುಪೇಟೆ: ಗಾಯಗೊಂಡ ಗಂಡಾನೆ ಮರಿಯನ್ನೇ ಭಕ್ಷಿಸಿದ ಹುಲಿ!

ಸಫಾರಿಯಲ್ಲಿ ಕಂಡಿದ್ದು: 

ಕಾಡಿನಲ್ಲಿ ಜಿಂಕೆಗಳ ಓಡಾಟ ಹೆಚ್ಚಾಗಿದ್ದು, ಹಸಿರು ಮೇವನ್ನು ಮೆಯುತ್ತ ಮರಿಗಳಿಗೆ ಹಾಲುನಿಸುತ್ತಾ, ಕರಡಿ ಸೇರಿದಂತೆ ಇತರೆ ಪ್ರಾಣಿಗಳು ತಮ್ಮತ್ತಾ ಬಂದಾಗ ಗಾಬರಿಯಿಂದ ಪರಿವಾರದಿಂದ ಓಡುತ್ತಿದ್ದ ದೃಶ್ಯಗಳು ನೋಡಿಗರಿಗೆ ಕುತೂಹಲಕಾರಿ ಆಗಿತ್ತು. ಆನೆಯೊಂದು ಮರಿಗೆ ಹಾಲುಣಿಸುತ್ತಿದ್ದರೇ, ಮತ್ತೊಂದು ಆನೆಯು ಸಫಾರಿ ಸಾಗುತ್ತಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶದಿಂದ ಮಣ್ಣು ಎರಚಿತು. ಕಾಡಿನ ಮಧ್ಯೆ ಕೆರೆ ಬಳಿ ಕಡವೆ ನೀರು ಕುಡಿದು ವಿಹರಿಸುತ್ತಿದ್ದು.
ದಾಂಡೇಲಿ, ಕೇರಳ, ತಮಿಳುನಾಡಿನ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದ ಇಂಡಿಯನ್‌ ಗ್ರೇಟ್‌ ಹಾರ್ನ್‌ಬಿಲ್‌ ಪಕ್ಷಿಯು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದವು. ಹಾಗೆಯೇ, ಸರ್ಪೆಂಟ್‌ ಈಗಲ್‌ (ಸರ್ಪ ಹದ್ದು) ಹಾರಾಟ, ಕಾಡು ಹಂದಿಯು ತನ್ನ ಹತ್ತಾರು ಮರಿಗಳೊಂದಿಗೆ ಸಾಗುತ್ತಿತ್ತು. ಬಂಡಿಪುರ ಅರಣ್ಯದಲ್ಲಿ ಹುಲಿಯೊಂದು ಕಡಬತ್ತೂರುಕಟ್ಟೆಕೆರೆಯಲ್ಲಿ ವಿಹರಿಸುತ್ತಿತ್ತು. ಅಲ್ಲದೆ, ತನ್ನ ಗಡಿಪ್ರದೇಶವನ್ನು ಗುರುತು ಮಾಡುತ್ತಿತ್ತು.

ಕಾಡು ಹಸಿರು ಆಗಿರುವುದರಿಂದ ಪ್ರಾಣಿ ಪಕ್ಷಿಗಳು ತಮಗೆ ಬೇಕಾದನ್ನು ತಿಂದು ವಿಹರಿಸುತ್ತಿದ್ದು, ಆಗಾಗ ಸಫಾರಿಗೆ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ರೋಮಾಂಚನ ಮೂಡಿಸುತ್ತಿವೆ.

Follow Us:
Download App:
  • android
  • ios