ಕಾಶ್ಮೀರದಿಂದ ಪಂಜಾಬ್‌ಗೆ ಚಲಿಸಿದ ಚಾಲಕ ರಹಿತ ರೈಲು, ತಂತ್ರಜ್ಞಾನವಲ್ಲ ಹ್ಯಾಂಡ್ ಬ್ರೇಕ್ ಮರೆತ ಚಾಲಕ!
ಕಾಶ್ಮೀರದ ಕತುವಾ ನಿಲ್ದಾಣದಿಂದ 100 ಕಿ.ಮೀ ವೇಗದಲ್ಲಿ ಬರೋಬ್ಬರಿ 84 ಕಿ.ಮೀ ದೂರವನ್ನು ಚಾಲಕನಿಲ್ಲದೆ ರೈಲು ಪ್ರಯಾಣಿಸಿದೆ. ಭಾರತೀಯ ರೈಲ್ವೇ ಹಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಚಾಲಕ ರಹಿತ ರೈಲು ಎಂದು ಹಿಗ್ಗಬೇಡಿ, ಇದು ರೈಲು ನಿಲ್ಲಿಸುವಾಗ ಚಾಲಕ ಹ್ಯಾಂಡ್ ಬ್ರೇಕ್ ಹಾಕಲು ಮರೆತ ಪರಿಣಾಮ.
ನವದೆಹಲಿ(ಫೆ.25) ಉದ್ಯಾನನಗರಿ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಪ್ರಯೋಗ ನಡೆಯುತ್ತಿದೆ. ಇನ್ನು ದೇಶದಲ್ಲಿ ಅತ್ಯಾಧುನಿಕ ವಂದೇ ಭಾರತ್ ರೈಲು, ಅಮೃತ್ ಭಾರತ ರೈಲುಗಳು ಓಡಾಡುತ್ತಿದೆ. ಬುಲೆಟ್ ರೈಲು ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆ ಭಾರತೀಯ ರೈಲ್ವೇ ಹಳಿಯಲ್ಲಿ ಏಕಾಏಕಿ ಚಾಲಕ ರಹಿತ ರೈಲೊಂದು ಓಡಾಡಿದೆ. ಜಮ್ಮು ಮತ್ತು ಕಾಶ್ಮೀರದ ಕತುವಾ ರೈಲ ನಿಲ್ದಾಣದಿಂದ ಪಂಜಾಬ್‌ನ ಮುಕೇರಿಯನ್ ಜಿಲ್ಲೆವರೆಗೆ ಅಂದರೆ 84 ಕಿಲೋಮೀಟರ್ ದೂರ ಚಾಲಕ ರಹಿತ ರೈಲು ಯಾವುದೇ ಅಡಿ ತಡೆ ಇಲ್ಲದೆ ಪ್ರಯಾಣಿಸಿದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಈ ರೈಲು ಚಲಿಸಿದೆ. 84ಕಿ.ಮಿ ಬಳಿಕ ರೈಲನ್ನು ನಿಲ್ಲಿಸಲಾಗಿದೆ. ಈ ವೇಳೆ ಇದು ಚಾಲಕ ರಹಿತ ರೈಲಲ್ಲ, ಚಾಲಕ ನಿಲ್ಲಿಸುವಾಗ ಹ್ಯಾಂಡ್ ಬ್ರೇಕ್ ಹಾಕಲು ಮರೆತ ಕಾರಣ ನಡೆದ ಅಚಾತುರ್ಯ ಅನ್ನೋದು ಬಯಲಾಗಿದೆ.
ಫೆ.25ರ ಬೆಳಗ್ಗೆ 7 ಗಂಟೆಗೆ ಈ ಅಚಾತುರ್ಯ ನಡೆದಿದೆ. ಅದೃಷ್ಠವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಂಕ್ರೀಟ್ ಸೇರಿದಂತೆ ಹಲವು ಸರಕುಗಳನ್ನು ತುಂಬಿದ ಗೂಡ್ಸ್ ರೈಲು ಜಮ್ಮು ಮತ್ತು ಕಾಶ್ಮೀರದ ಪಠಾಣ್‌ಕೋಟ್ ಸಮೀಪದ ಕತುವಾ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ರೈಲುು ನಿಲ್ದಾಣದಲ್ಲಿ ಗೂಡ್ಸ್ ರೈಲಿನ ಸಿಬ್ಬಂದಿಗಳು ಬದಲಾವಣೆಯಾಗಬೇಕು. ಶಿಫ್ಟ್ ಮುಗಿದ ಸಿಬ್ಬಂದಿಗಳು ಇಳಿದು, ಹೊಸ ಶಿಫ್ಟ್ ಸಿಬ್ಬಂದಿಗಳು ರೈಲು ಹತ್ತುತ್ತಾರೆ. ಬಳಿಕ ರೈಲು ಪ್ರಯಾಣ ಬೆಳೆಸಲಿದೆ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇನ್ಮುಂದೆ ಪ್ರಯಾಣಿಕರಿಗೆ ಆಹಾರ ತಲುಪಿಸಲಿದೆ ಸ್ವಿಗ್ಗಿ, ಬುಕ್ ಮಾಡೋದು ಹೇಗೆ?
ಕತುವಾ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ನಿಲ್ಲಿಸಿದ ಚಾಲಕ ಹಾಗೂ ಸಹ ಚಾಲಕ ರೈಲಿನ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದಾರೆ ಎಂದು ಮೂಲಗಳು ಹೇಳಿವೆ. ನಿಲ್ದಾಣ ಕೊಂಚ ಇಳಿಜಾರಿನ ಪ್ರದೇಶದಲ್ಲಿದೆ. ಜೊತೆಗೆ ಗೂಡ್ಸ್ ರೈಲಿನಲ್ಲಿ ರೈಲ್ವೇ ನಿಲ್ದಾಣ ನಿರ್ಮಾಣದ ಸರಕು ತುಂಬಿದ್ದ ಕಾರಣ ರೈಲು ಕೆಲ ಹೊತ್ತಿನಲ್ಲೇ ನಿಧಾನವಾಗಿ ನಿಲ್ದಾಣದಿಂದ ಚಲಿಸಿದೆ.
ಚಾಲಕ ಇಲ್ಲ, ಸಹ ಚಾಲಕ ಇಲ್ಲ, ಸಿಬ್ಬಂದಿಗಳೂ ಇಲ್ಲ. ರೈಲಿನಲ್ಲಿ ಸರಕು ಬಿಟ್ಟರೆ ಬೇರೇನೂ ಇಲ್ಲ. ಇಳಿಜಾರಿನ ಕಾರಣ ರೈಲು ಒಂದೇ ಸಮನೆ ವೇಗ ಪಡೆದುಕೊಂಡಿದೆ. ಬರೋಬ್ಬರಿ 100 ಕಿ.ಮೀ ವೇಗದಲ್ಲಿ ರೈಲು ಚಲಿಸಿದೆ. ರೈಲಿಗೆ ಹಸಿರು ನಿಶಾನೆ ತೋರಿಸಿಲ್ಲ. ಸಿಗ್ನಲ್ ಕೊಟ್ಟಿಲ್ಲ. ಆದರೂ ರೈಲು ಚಲಿಸಿದ ಬೆನ್ನಲ್ಲೇ ನಿಲ್ದಾಣದ ಸಿಬ್ಬಂದಿಗಳು ಎಚ್ಚೆತ್ತುಕೊಂಡಿದ್ದಾರೆ. ಸೂಚನೆಗಳನ್ನು ನೀಡಲಾಗಿದೆ.
ಮುಂಬೈ ಲೋಕಲ್ ಟ್ರೈನಲ್ಲಿ ವಿತ್ತ ಸಚಿವೆ ಪಯಣ, ಸಹ ಪ್ರಯಾಣಿಕರು ಪುಲ್ ಖುಷ್!
ಮುಂದಿನ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸು ಪ್ರಯತ್ನಗಳು ನಡೆದಿದೆ. ಆದರೆ ಸಾಧ್ಯವಾಗಿಲ್ಲ. ಕೊನೆಗ ಪಂಜಾಬ್‌ನ ಮುಕೇರಿಯನ್ ಜಿಲ್ಲೆಯಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಈ ರೈಲು ಸಂಚರಿಸಿದ ಹಳಿಯಲ್ಲಿ ಯಾವುದೇ ಬೇರೆ ರೈಲುಗಳು ಆಗಮಿಸಿಲ್ಲ. ಹೀಗಾಗಿ ದುರಂತ ಸಂಭವಿಸಿಲ್ಲ. ಇದೀಗ ರೈಲ್ವೇ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.