Asianet Suvarna News Asianet Suvarna News

ಬೇಸಿಗೆಯಲ್ಲಿ ವಿಸಿಟ್ ಮಾಡಬಹುದಾದ ಬೆಸ್ಟ್ ಕೂಲ್‌ ಕೂಲ್‌ ತಾಣಗಳು

ಬಿಸಿಲನ್ನು ಎಷ್ಟೇ ಚೆನ್ನಾಗಿ ಎಂಜಾಯ್ ಮಾಡ್ತೀವಿ ಅಂದರೂ ಒಂದು ಹಂತದ ನಂತರ ಮನಸ್ಸು ತಂಪು ಬೇಕು ಅಂತ ಬಯಸುತ್ತೆ. ಆ ಟೖಮ್ನಲ್ಲಿ ಬೇಸಿಗೆ ರಜೆಯೂ ಇರುತ್ತೆ. ಯಾವ್ಯಾವ ಜಾಗಗಳಿಗೆ ಹೋಗಬಹುದು ಅನ್ನೋ ಚಿಕ್ಕ ಲೀಸ್ಟ್ ಇಲ್ಲಿದೆ. ಇದನ್ನು ನಿಮ್ ಬಕೆಟ್ ಲೀಸ್ಟ್ನಲ್ಲೂ ಸೇರಿಸೋಕೆ ಮರೀಬೇಡಿ.

These cool spots what you should have in bucket list to visit in summer
Author
Bengaluru, First Published Mar 12, 2020, 6:08 PM IST

ಕೊರೋನ ಭೀತಿ ಎಲ್ಲೆಡೆ ಆವರಿಸಿದೆ. ಮಕ್ಕಳಿಗೆ ಸ್ಕೂಲ್‌ಗೂ ರಜೆ, ಈ ನೆವದಲ್ಲಿ ಎಕ್ಸಾಂನಿಂದಲೂ ಮುಕ್ತಿ. ಇಂಥಾ ಟೈಮ್‌ನಲ್ಲಿ ಪ್ರವಾಸ ಹೊರಡ್ತೀವಿ ಅಂದರೆ ಅದಕ್ಕೂ ನೋ ಅಂತಿದ್ದಾರೆ ವೖದ್ಯರು. ಆದರೆ ಇನ್ನೊಂದು ಸ್ಪಲ್ಪ ದಿನ ಬಿಟ್ಟು ಕೊರೋನಾ ಭೀತಿ ದೂರಾದ ಮೇಲೆ ಈ ಜಾಗಗಳಿಗೆ ಭೇಟಿ ನೀಡಬಹುದು. ಈಗಲೇ ಜಾಗಗಳ ಸೆಲೆಕ್ಷನ್‌ ಆಗಿಬಿಟ್ಟರೆ ಆಮೇಲೆ ಬ್ಯಾಗ್ ಹೆಗಲಿಗೇರಿಸಿ ಹೊರಡೋದೇ ಕೆಲಸ.
 

ಬಿಸಿಲನ್ನು ಎಷ್ಟೇ ಚೆನ್ನಾಗಿ ಎನ್ ಜಾಯ್ ಮಾಡ್ತೀವಿ ಅಂದರೂ ಒಂದು ಹಂತದ ನಂತರ ಮನಸ್ಸು ತಂಪು ಬೇಕು ಅಂತ ಬಯಸುತ್ತೆ. ಆ ಟೈಮ್ ನಲ್ಲಿ ಬೇಸಿಗೆ ರಜೆಯೂ ಇರುತ್ತೆ. ಯಾವ್ಯಾವ ಜಾಗಗಳಿಗೆ ಹೋಗಬಹುದು ಅನ್ನೋ ಚಿಕ್ಕ ಲೀಸ್ಟ್ ಇಲ್ಲಿದೆ. ಇದನ್ನು ನಿಮ್ ಬಕೆಟ್ ಲೀಸ್ಟ್ ನಲ್ಲೂ ಸೇರಿಸೋಕೆ ಮರೀಬೇಡಿ.

 

ಸಕ್ಕರೆ ಖಾಯಿಲೆ ವಾಸಿಯಾಗಬೇಕೆಂದ್ರೆ ಈ ಮಂದಿರಕ್ಕೆ ಭೇಟಿ ನೀಡಿ......

- ಕಾವೇರಿ ನಿಸರ್ಗಧಾಮ

ಇದು ಕೊಡಗು ಜಿಲ್ಲೆ ಕುಶಾಲನಗರದಲ್ಲಿದೆ. ಬೆಂಗಳೂರಿನಿಂದ ಹೊರಟು ಒಂದು ಬೆಳಗು ನೀವು ಕುಶಾಲನಗರಕ್ಕೆ ಬಂದಿಳಿದರೆ ಅಲ್ಲಿಂದ ಕೇವಲ ಮೂರು ಕಿಮೀ ದೂರದಲ್ಲಿ ಕಾವೇರಿ ನಿಸರ್ಗಧಾಮವಿದೆ. ಸ್ವಚ್ಛ, ಪರಿಶುದ್ಧವಾಗಿ ಇಲ್ಲಿ ಕಾವೇರಿ ನದಿ ಹರೀತಾಳೆ. ನೀರಲ್ಲಿ ಎಷ್ಟೊತ್ತು ಆಟ ಆಡಿದರೂ ತಡೆಯೋರಿಲ್ಲ. ಮಕ್ಕಳಿದ್ದರಂತೂ ಸಖತ್ ಎನ್ ಜಾಯ್ ಮಾಡೋದ್ರಲ್ಲಿ ಡೌಟೇ ಇಲ್ಲ. ಈ ಜಾಗದ ಇನ್ನೊಂದು ಬದಿಯಲ್ಲಿ ದುಬಾರೆ ಆನೆಗಳ ಕ್ಯಾಂಪ್ ಇದೆ. ಮಕ್ಕಳು ಆನೆಗಳನ್ನು ಹತ್ತಿರದಿಂದ ನೋಡಿ ಎನ್ ಜಾಯ್ ಮಾಡಬಹುದು.

 

- ಮಾನಂತವಾಡಿಯ ಗದ್ದೆಗಳಲ್ಲಿ ಕಳೆದುಹೋಗಿ

ನೀವು ಮೖಸೂರು ಮಾರ್ಗವಾಗಿ ಮಾನಂತವಾಡಿ ಅನ್ನುವ ಪ್ರಶಾಂತ ಜಾಗಕ್ಕೆ ಹೋಗಬಹುದು. ಇಲ್ಲಿ ಪ್ರವಾಸಿಗಳ ಜಂಗುಳಿಯಿಲ್ಲ. ಕಣ್ಣಳತೆಗೂ ಮೀರಿ ಹಬ್ಬಿದ ಬತ್ತದ ಬಯಲುಗಳಿವೆ. ಬೀಸಿ ಬರುವ ಗಾಳಿಯಲ್ಲಿ ಬತ್ತದ ಕಂಪೂ ಸೇರಿ ಮನಸ್ಸಿಗೆ ಆಹ್ಲಾದಕರ ಅನುಭವವಾಗುತ್ತದೆ. ಪಕ್ಕದಲ್ಲೇ ನದಿ ಹರಿಯುತ್ತೆ. ನೀರಲ್ಲೂ ಆಟ ಆಡಬಹುದು. ಇಲ್ಲಿ ಅನೇಕ ಹೋಂ ಸ್ಟೇಗಳಿವೆ. ನಿಮಗಿಷ್ಟವಾದದ್ದನ್ನು ಆರಿಸಿ ಅಲ್ಲಿ ಖುಷಿಯಿಂದ ಟೈಮ್ ಪಾಸ್ ಮಾಡಬಹುದು.

 

ಹನಿಮೂನ್ ಹಳೆಯದಾಯ್ತು, ಈಗೇನಿದ್ರು ಫ್ರೆಂಡ್‍ಮೂನ್ ಹವಾ!...

- ಮಾಣಿಕ್ಯಧಾರಾ ಜಲಪಾತದ ದಾರಿ

ಎಂಥಾ ಬಿಸಿಲ ಬೇಗೆಯೇ ಇರಲಿ, ಹಸಿರೆಲ್ಲ ಒಣಗಿ ಕಂದು ಬಣ್ಣಕ್ಕೆ ತಿರುಗಿರಲಿ. ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಿಂದ ಇನ್ನೂ ಒಂದಿಷ್ಟು ದೂರ ನಡೆದರೆ ನಿಮ್ಮನ್ನೇ ಎತ್ತಿಕೊಂಡು ಹೋಗುವಷ್ಟು ಗಾಳಿ ಬೀಸುವ ಜಾಗವೊಂದಿದೆ. ಇದು ಬಾಬಾ ಬುಡನ್ ಗಿರಿಯಿಂದ ಮಾಣಿಕ್ಯಧಾರಾ ಜಲಪಾತಕ್ಕೆ ಹೋಗುವ ದಾರಿಯಲ್ಲೇ ಸಿಗುತ್ತದೆ. ನಿಂತಷ್ಟು ಹೊತ್ತು ದೂರದ ಬೆಟ್ಟಗಳಲ್ಲಿ ಕಣ್ಣು ನೆಟ್ಟು ಧ್ಯಾನಸ್ಥರಾಗಬಹುದು. ಬೆಟ್ಟದ ಗಾಳಿಗೆ ಜಗತ್ತಿನ ಚಿಂತೆ ಎಲ್ಲ ಮರೆತು ನಿರಾಳವಾಗಬಹುದು. ಬಿಸಿಲಿಂದ ಮುಕ್ತಿ ಪಡೆದು ಗಾಳಿಯ ಮಕ್ಕಳಾಗಬಹುದು. ಮುಳ್ಳಯ್ಯನ ಗಿರಿ ಬೆಟ್ಟ ಇದರ ಇನ್ನೊಂದು ಭಾಗದಲ್ಲಿದೆ. ಅಲ್ಲಿ ಜನ ಜಂಗುಳಿ ಕೊಂಚ ಹೆಚ್ಚಿರಬಹುದು. ಆದರೆ ಸಂಜೆ ಹೊತ್ತಿಗೆ ಬೀಸಿ ಬರುವ ಗಾಳಿಯಲ್ಲಿ ಒಂದು ದೖವಿಕ ಅನುಭೂತಿ ಇರೋದಂತೂ ಸುಳ್ಳಲ್ಲ.

 

- ಆಗುಂಬೆಯಲ್ಲೊಂದು ಸಂಜೆ

ಆಗುಂಬೆಯಲ್ಲೀಗ ಬಿಸಿಲಿದೆ. ಆದರೆ ಅದು ಕಡು ಬಿಸಿಲಲ್ಲ. ದಟ್ಟ ಕಾಡುಗಳ ನಡುವೆ ಹಾದುಹೋಗುವಾಗ ಜಗತ್ತನ್ನೇ ಮರೆಯುವಷ್ಟು ಖುಷಿ ಸಿಗುತ್ತದೆ. ಆಗುಂಬೆಯ ವ್ಯೂ ಪಾಯಿಂಟ್ ಗೆ ಹೋಗಿ ಸೂರ್ಯೋದಯ, ಸೂರ್ಯಾಸ್ತ ನೋಡದರ ಜೊತೆಗೆ ಟೖಮ್ ಇದ್ದರೆ ಕುಂದಾದ್ರಿ ಬೆಟ್ಟವೇರಬಹುದು. ಆಗುಂಬೆಯ ಚಿಕ್ಕ ಪಟ್ಟಣದ ಜನ ಜೀವನವನ್ನು ಗಮನಿಸಬಹುದು.

 

- ಕವಲೇದುರ್ಗದ ದುರ್ಗಮ ಕೋಟೆ

ಬೆಳ್ಳಂಬೆಳಗು ಸೂರ್ಯ ನೆತ್ತಿ ಮೇಲೆ ಹೋಗುವ ಮುನ್ನವೇ ಕವಲೇ ದುರ್ಗ ಹತ್ತಿಳಿದರೆ ಚೆನ್ನ. ಈ ಬೆಟ್ಟವೇರುವ ಹಾದಿಯಲ್ಲಿ ನಿಮಗೆ ಅನೇಕ ಇತಿಹಾಸದ ಮಾಸ್ಟರ್ ಪೀಸ್ ಗಳು ಕಾಣಸಿಗುತ್ತವೆ. ಕೋಟೆಯನ್ನು ಸುತ್ತತ್ತಾ ಅಂದಿನ ಜನ ಜೀವನವನ್ನು ನಿಮ್ಮ ಮನಸ್ಸೊಳಗೇ ಕಟ್ಟುತ್ತ ಹೋಗಬಹುದು. ಇದೆಲ್ಲ ಸಾಧ್ಯವಾಗದಿದ್ದರೆ ಸುಮ್ಮನೇ ಪ್ರಕೃತಿಯನ್ನು ಎನ್ ಜಾಯ್ ಮಾಡುವ ಅವಕಾಶವೂ ಇದೆ.

Follow Us:
Download App:
  • android
  • ios