Asianet Suvarna News Asianet Suvarna News

ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲ ಸಿರಿ, ನೋಡು ಬಾ ಭರಚುಕ್ಕಿ ಜಲಪಾತದ ಸೊಬಗ

* ನೋಡು ಬಾ ಭರಚುಕ್ಕಿ ಜಲಪಾತದ ಸೊಬಗ!.
* ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲ ಸಿರಿ.
* ಪ್ರಕೃತಿಯ ರಮ್ಯ, ರಮಣೀಯತೆಗೆ ಮನ ಸೋತ ಪ್ರವಾಸಿಗರು..

the scenic beauty of Barachukki Waterfalls  rbj
Author
Bengaluru, First Published Jul 12, 2022, 10:58 PM IST

ವರದಿ - ಪುಟ್ಟರಾಜು. ಆರ್.ಸಿ. ‌ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ

ಚಾಮರಾಜನಗರ, (ಜುಲೈ.12):
 ಕರ್ನಾಟಕದಲ್ಲೂ ಸಹ ಮಳೆ ಅಬ್ಬರ ಜೋರಾಗಿದ್ದು, ನದಿ, ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನು ಕರ್ನಾಟಕದ ಹಲವು ಜಲಾಶಯಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ಅದರಲ್ಲೂ ಹಲವು ಜಲ[ಾತಗಳಂತೂ ಭೋರ್ಗೆರೆದು ಧುಮ್ಮಿಕ್ಕುತ್ತಿದ್ದು, ಮೈದುಂಬಿ ಹರಿಯುತ್ತಿರೋ ಜಲಪಾತಗ ಕಣ್ಮನ ಸೆಳೆಯುತ್ತಿವೆ 

 ಕಬಿನಿ ಹಾಗು ಕೆ.ಆರ್. ಎಸ್ ಜಲಾಶಯಗಳಿಂದ ಒಂದು ಲಕ್ಷ ಕ್ಯೂಸೆಕ್ ಗು ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಭರಚುಕ್ಕಿ  ಭೋರ್ಗೆರೆದು ಧುಮ್ಮಿಕ್ಕುತ್ತಿದ್ದು ಕಾವೇರಿಯ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ...

ಕೇರಳದ ವೈನಾಡು ಹಾಗು ಕಬಿನಿ ಜಲಾನಯನ ಪ್ರದೇಶದಲ್ಲಿ ಹಲವು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಮೈಸೂರು ಜಿಲ್ಲೆಯಲ್ಲಿರುವ ಹೆಚ್.ಡಿ. ಕೋಟೆ ತಾಲೋಕಿನಲ್ಲಿರುವ  ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ನದಿಗೆ  38  ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಕೆ.ಆರ್.ಎಸ್ ಜಲಾಶಯದಿಂದಲು 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. 

ಭೋರ್ಗರೆಯುತ್ತಿವೆ ಜೋಗ, ದೂದ್ ಸಾಗರ: ಕಣ್ಮನ ಸೆಳೆಯುತ್ತಿವೆ ಮೈದುಂಬಿ ಹರಿಯುತ್ತಿರೋ ಜಲಪಾತಗಳು

ಮೈಸೂರು ಜಿಲ್ಲೆಯ ಮೂಲಕ ಹರಿದು ಚಾಮರಾಜನಗರ ಜಿಲ್ಲೆಯ  ಕೊಳ್ಳೇಗಾಲ ತಾಲೂಕಿಗೆ ಪ್ರವೇಶಿಸುವ  ಕಾವೇರಿ ಶಿವನಸಮುದ್ರದ ಬಳಿ ಎರಡು ಕವಲಾಗಿ  ಹರಿದು ಒಂದೆಡೆ ಗಗನಚುಕ್ಕಿಯಾಗಿ, ಇನ್ನೊಂದೆಡೆ ಭರಚುಕ್ಕಿಯಾಗಿ ಭೋರ್ಗೆರೆದು ಧುಮ್ಮಿಕುತ್ತಿದೆ. 

ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣೆಗಳೆರಡು ಸಾಲದಂತೆ ಭಾಸವಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ನೀರಿಲ್ಲದೆ  ಬಣಗುಡುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವ ಕಳೆ ಬಂದಿದೆ. ಕಾವೇರಿಯ ಜಲವೈಭವ ಅನಾವರಣಗೊಂಡಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ಭರಚುಕ್ಕಿಯಲ್ಲಿ  ಅತ್ಯಂತ ವಿಶಾಲವಾಗಿ ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುವ  ದೃಶ್ಯಕಾವ್ಯ ವರ್ಣನಾತೀತವಾಗಿದೆ. ಕಳೆದ ಎರಡು ತಿಂಗಳಿಂದ ಪ್ರವಾಸಿಗರಲ್ಲಿ ನಿರಾಸೆ ಮೂಡಿಸುತ್ತಿದ್ದ ಭರಚುಕ್ಕಿ ಜಲಪಾತ ಈಗ ನೋಡುವುದೆ ಒಂದು ಆನಂದ..

ಕಳೆದ ಬಾರಿ ಕೊರೋನಾ ಹಿನ್ನಲೆಯಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಭರಚುಕ್ಕಿ ಜಲಪಾತಕ್ಕು ಪ್ರವಾಸಿಗರ ಪ್ರವೇಶ ಇಲ್ಲದಂತಾಗಿತ್ತು. ಆದರೆ ಇದೀಗ  ಪ್ರವಾಸಿಗರಿಗೆ ಮುಕ್ತ ಅವಕಾಶವಿದ್ದು ಜಲಪಾತದ ಸೊಬಗು ಸವಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.ಅಲ್ಲದೇ ಒನ್ ಡೇ ಟ್ರಿಪ್ ಹೋಗಲೂ ಹೇಳಿ ಮಾಡಿದ ಸ್ಥಳವಾಗಿದೆ.

ನದಿಯಲ್ಲಿ ಕಂಗೊಳಿಸುತ್ತಾ  ನೀರಿನ ಹೆಚ್ಚಳದಿಂದ ಭರಚುಕ್ಕಿಯಲ್ಲಿ ಕಾವೇರಿಯ  ಒಂದೆಡೆ ರುದ್ರನರ್ತನ ಕಂಡು ಬಂದರೆ ಮತ್ತೆ ಕೆಲವೆಡೆ ಝುಳು ಝುಳು ನಿನಾದ ಕೇಳಿಬರುತ್ತಿದೆ. ಹಾಲ್ನೊರೆಯಂತಹ ಜಲಧಾರೆಗಳು ಧುಮ್ಮಿಕುತ್ತಿವೆ. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಾ ಕಾವೇರಿಯ ಸೊಬಗನ್ನು ಇಮ್ಮಡಿಗೊಳಿಸಿವೆ..

Follow Us:
Download App:
  • android
  • ios