Survey: ಸಾರ್ವಜನಿಕ ಸಾರಿಗೆ ವಿಷ್ಯದಲ್ಲಿ ಬರ್ಲಿನ್ ದೇಶ ಪ್ರಗತಿ ಸಾಧಿಸಿದ್ದು ಹೇಗೆ?
ಸಾರ್ವಜನಿಕ ಸಾರಿಗೆ ಜನರಿಗೆ ಅತ್ಯಗತ್ಯ. ಕಡಿಮೆ ವೆಚ್ಚದಲ್ಲಿ ಪ್ರಯಾಣ ಬೆಳೆಸಲು ಇದು ಸಹಕಾರಿ. ಈಗ ವಿಶ್ವದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಸೌಲಭ್ಯ ಎಲ್ಲಿ ಸಿಗ್ತಿದೆ ಎಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ.
ಸಾರ್ವಜನಿಕ ಸಾರಿಗೆ ಬಡ ಜನರ ಜೀವಾಳ. ಖಾಸಗಿ ವಾಹನದಲ್ಲಿ ಪ್ರಯಾಣ ಬೆಳೆಸಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾರ್ವಜನಿಕ ಸಾರಿಗೆ ಆಸರೆ. ಈಗಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಜನರ ಅನುಕೂಲಕ್ಕಾಗಿಯೇ ಸಾರ್ವಜನಿಕ ಸಾರಿಗೆ ಇದೆ. ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತೆ ತಜ್ಞರು ಸಲಹೆ ನೀಡ್ತಾರೆ. ಇದ್ರಿಂದ ಮಾಲಿನ್ಯ ಕಡಿಮೆ ಮಾಡಬಹುದು ಎಂಬುದು ಅವರ ಅಭಿಪ್ರಾಯ. ಸಾರ್ವಜನಿಕ ಸಾರಿಗೆ, ಹೆಚ್ಚಿನ ಅಪಘಾತ ತಪ್ಪಿಸುವ ಕೆಲಸವನ್ನು ಕೂಡ ಮಾಡುತ್ತದೆ. ವಿಶ್ವದ ಎಲ್ಲ ದೇಶಗಳಲ್ಲೂ ಸಾರ್ವಜನಿಕ ಸಾರಿಗೆಯಿದೆ. ಕೆಲ ದೇಶಗಳ ಸಾರ್ವಜನಿಕ ಸಾರಿಗೆ ಅತ್ಯತ್ತಮವಾಗಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಇದು ಕಳಪೆಯಾಗಿದೆ.
ಯಾವ ದೇಶ (Country) ದ ಸಾರಿಗೆ ಉತ್ತಮವಾಗಿದೆ, ಹಾಗೆ ಯಾವುದು ಕಳಪೆಯಾಗಿದೆ ಎನ್ನುವ ಬಗ್ಗೆ ಸಮೀಕ್ಷೆ (Survey) ಯೊಂದು ನಡೆದಿದೆ. ಲಂಡನ್ (London) ನ ಟೈಮ್ ಔಟ್ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಮಾಡಿದೆ. ಟೈಮ್ ಔಟ್ ವಿಶ್ವದ ಅಗ್ರ 50 ನಗರಗಳಲ್ಲಿ ಈ ಸಮೀಕ್ಷೆ ನಡೆಸಿದೆ. 20,000 ಕ್ಕೂ ಹೆಚ್ಚು ಜನರಿಗೆ ಪ್ರಶ್ನೆ ಕೇಳಲಾಗಿದೆ. ಟೈಮ್ ಔಟ್ ಬಿಡುಗಡೆ ಮಾಡಿರುವ ಅತ್ಯುತ್ತಮ ಸಾರಿಗೆ ಸೌಲಭ್ಯ ಹೊಂದಿರುವ ನಗರಗಳ ಟಾಪ್ 20 ಪಟ್ಟಿಯಲ್ಲಿ ಭಾರತದ ನಗರವೊಂದರ ಹೆಸರೂ ಇರೋದು ವಿಶೇಷ.
ಭಾರತದ ವಿಶಿಷ್ಟ ಗ್ರಾಮಗಳ ಬಗ್ಗೆ ತಿಳಿದ್ರೆ ಹೀಗೂ ಉಂಟೆ ಅನ್ನೋದು ಖಚಿತ
ಅತ್ಯುತ್ತಮ ಸಾರ್ವಜನಿಕ ಸಾರಿಗೆ ಹೊಂದಿರುವ ದೇಶ ಯಾವುದು? : ಸಮೀಕ್ಷೆ ಪ್ರಕಾರ, ಜರ್ಮನಿಯ ಬರ್ಲಿನ್ ನಗರವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಗರದ ಶೇಕಡಾ 93ರಷ್ಟು ಜನರು ಇಲ್ಲಿನ ಸಾರ್ವಜನಿಕ ಸಾರಿಗೆ ತುಂಬಾ ಚೆನ್ನಾಗಿದೆ ಎಂದು ನಂಬಿದ್ದಾರೆ. ಬರ್ಲಿನ್ ನಲ್ಲಿ ಅಂಡರ್ ಗ್ರೌಂಡ್ ಮತ್ತು ಲೈಟ್ ರೈಲು, ಬಸ್ ಮತ್ತು ಟ್ರಾಮ್ ಸಾರ್ವಜನಿಕ ಸಾರಿಗೆ ಪಟ್ಟಿಯಲ್ಲಿ ಬರುತ್ತದೆ. ನಗರ ಸುತ್ತಲು ಪ್ರವಾಸಿಗರು ಆರಾಮವಾಗಿ ಈ ಸಾರ್ವಜನಿಕ ಸಾರಿಗೆ ಬಳಸಬಹುದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕನೆಕ್ಟಿವಿಟಿ ಇದ್ದು, ಆರಾಮ ಹಾಗೂ ಸುರಕ್ಷಿತವಾಗಿದೆ.
ಈ ಪಟ್ಟಿಯಲ್ಲಿದೆ ಭಾರತದ ಈ ನಗರದ ಹೆಸರು : ಇನ್ನು ಈ ಪಟ್ಟಿಯಲ್ಲಿ ಭಾರತದ ನಗರವೊಂದರ ಹೆಸರಿದೆ. ಅದು ಮುಂಬೈ. ವಿಶ್ವದ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಹೊಂದಿರುವ 20 ನಗರಗಳ ಪಟ್ಟಿಯಲ್ಲಿ ಮುಂಬೈ ಸ್ಥಾನ ಪಡೆದಿದೆ. ಉತ್ತಮ ಸಾರ್ವಜನಿಕ ಸಾರಿಗೆ ಪಟ್ಟಿಯಲ್ಲಿ ಮುಂಬೈ 19ನೇ ಸ್ಥಾನದಲ್ಲಿದೆ.
Travel Tips : ಬೇಸಿಗೆ ರಜೆಯಲ್ಲಿ ಕಡಿಮೆ ಖರ್ಚಿನಲ್ಲಿ ಈ ದೇಶ ಸುತ್ತಾಡಿ ಬನ್ನಿ
ಮುಂಬೈ ನಗರದ ಹೆಸರು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಮುಂಬೈ, ಅತ್ಯುತ್ತಮ ಮೆಟ್ರೋ ಸಂಪರ್ಕಕ್ಕೆ ಹೆಸರುವಾಸಿಯಾದ ದೆಹಲಿಯನ್ನು ಹಿಂದಿಕ್ಕಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರು, ಮುಂಬೈ ಸ್ಥಳೀಯ ರೈಲು, ಬಸ್, ಮೆಟ್ರೋ, ರಿಕ್ಷಾ ಮತ್ತು ಟ್ಯಾಕ್ಸಿ ಮೂಲಕ ನಗರದಲ್ಲಿ ಆರಾಮವಾಗಿ ಪ್ರಯಾಣ ಬೆಳೆಸಬಹುದು ಎಂದಿದ್ದಾರೆ. ಮುಂಬೈನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 81 ರಷ್ಟು ಸ್ಥಳೀಯರು ಸಾರ್ವಜನಿಕ ಸಾರಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಜೆಕ್ ರಿಪಬ್ಲಿಕ್, ಪ್ರೇಗ್ ನಗರದ ಹೆಸರು ಎರಡನೇ ಸ್ಥಾನದಲ್ಲಿದೆ. ಜಪಾನಿನ ಟೋಕಿಯೊದ ಹೆಸರು ಮೂರನೇ ಸ್ಥಾನದಲ್ಲಿದೆ. ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ವಿಶ್ವದಲ್ಲಿ ನಾಲ್ಕನೇ ಅತ್ಯುತ್ತಮ ಸಾರ್ವಜನಿಕ ಸಾರಿಗೆಯನ್ನು ಹೊಂದಿದೆ. ಪಟ್ಟಿಯಲ್ಲಿ ಸ್ವೀಡನ್ ಸ್ಟಾಕ್ಹೋಮ್ ಐದನೇ ಸ್ಥಾನದಲ್ಲಿದೆ. ಸಿಂಗಾಪುರ, ಹಾಂಗ್ ಕಾಂಗ್, ತೈವಾನ್‌ನ ತೈಪೆ, ಚೀನಾದ ಶಾಂಘೈ ಮತ್ತು ನೆದರ್‌ಲ್ಯಾಂಡ್‌ನ ಆಮ್ಸ್ಟರ್‌ಡ್ಯಾಮ್ ಹೆಸರುಗಳು ಟಾಪ್ 10 ನಗರಗಳ ಪಟ್ಟಿಯಲ್ಲಿ ಸೇರಿವೆ.