ಘಟಪ್ರಭಾ ರೈಲ್ವೇ ನಿಲ್ದಾಣದಿಂದ ಮಂತ್ರಾಲಯದವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಬಂಡಾಯ

ಘಟಪ್ರಭಾದಿಂದ ಮಂತ್ರಾಲಯದ ವರೆಗೆ ನರಗುಂದ ಮಾರ್ಗವಾಗಿ ರೈಲು ಮಾರ್ಗ ನಿರ್ಮಿಸಬೇಕು ಎಂಬ ಬೇಡಿಕೆ ಇಟ್ಟು ಹೋರಾಟಕ್ಕೆ ಬಂಡಾಯ ನೆಲದ ಹೋರಾಟಗಾರರು ಸಜ್ಜಾಗುತ್ತಿದ್ದಾರೆ.

planning Nargund to Mantralayam via Ghataprabha Long Distance railway gow

ಎಸ್.ಜಿ. ತೆಗ್ಗಿನಮನಿ

ನರಗುಂದ: ಘಟಪ್ರಭಾದಿಂದ ಮಂತ್ರಾಲಯದ ವರೆಗೆ ನರಗುಂದ ಮಾರ್ಗವಾಗಿ ರೈಲು ಮಾರ್ಗ ನಿರ್ಮಿಸಬೇಕು ಎಂಬ ಬೇಡಿಕೆ ಇಟ್ಟು ಹೋರಾಟಕ್ಕೆ ಬಂಡಾಯ ನೆಲದ ಹೋರಾಟಗಾರರು ಸಜ್ಜಾಗುತ್ತಿದ್ದಾರೆ.

ಜು. 2ರಂದು ಪಟ್ಟಣದ ಪಂಚಗೃಹ ಹಿರೇಮಠದಲ್ಲಿ ಸಭೆ ಕರೆಯಲಾಗಿದೆ. ಈ ಭಾಗದ ಮಠಾಧೀಶರು, ರೈತರು, ಕನ್ನಡಪರ ಹೋರಾಟಗಾರರು, ವ್ಯಾಪಾರಸ್ಥರ, ಸಾಹಿತಿಗಳು ಭಾಗವಹಿಸಲಿದ್ದು, ಹೋರಾಟಕ್ಕೆ ನಾಂದಿ ಹಾಡಲಿದ್ದಾರೆ.

ನರಗುಂದ ತಾಲೂಕವು ಆರ್ಥಿಕ, ಶೈಕ್ಷಣಿಕವಾಗಿ ಅತಿ ವೇಗದಲ್ಲಿ ಬೆಳೆಯುತ್ತಿದೆ. ಈ ರೈಲು ಮಾರ್ಗ ನಿರ್ಮಾಣವಾದರೆ ಇನ್ನೂ ವೇಗವಾಗಿ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ಈ ಭಾಗದ ಜನರ ಆಶಯ.

ಮಾಜಿ ಸಂಸದೆ ಸುಮಲತಾ ವಿರೋಧಿಸಿದ್ದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಸಿದ್ಧತೆ!

ಮಾರ್ಗದ ವಿವರ: ಘಟಪ್ರಭಾದಿಂದ ಮಂತ್ರಾಲಯ ವರೆಗೆ 350 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ಹೋರಾಟಗಾರರ ಬೇಡಿಕೆ. ಈ ಮಾರ್ಗದಲ್ಲಿ ಬರುವ ನರಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ರಾಯಚೂರು, ಮುನವಳ್ಳಿ, ಸವದತ್ತಿ, ಗೊಡಚಿ, ಗೋಕಾಕ ಈ ಪ್ರದೇಶಗಳಿಗೆ ಅನುಕೂಲವಾಗಲಿದೆ.

600 ಎಕರೆ ಜಮೀನು: 1 ಕಿಮೀ ರೈಲ್ವೆ ಹಳಿ ಸ್ಥಾಪನೆ ಆಗಬೇಕಾದರೆ 10 ಎಕರೆ ಜಮೀನು ಬೇಕಾಗುತ್ತದೆ. ಈ ಮಾರ್ಗದಲ್ಲಿ ಒಂದು ರೈಲ್ವೆ ನಿಲ್ದಾಣ ಸ್ಥಾಪನೆಗೆ 20 ಎಕರೆ ಜಮೀನು ಮೀಸಲಿಡಬೇಕು. ಘಟಪ್ರಭಾದಿಂದ ಮಂತ್ರಾಲಯದ ವರೆಗೆ ಈ ಮಾರ್ಗ ನಿರ್ಮಾಣ ಆಗಬೇಕೆಂದರೆ 500ರಿಂದ 600 ಎಕರೆ ಜಮೀನು ಬೇಕು. ಅದೇ ರೀತಿ 1 ಕಿಮೀ ರೈಲ್ವೆ ಹಳಿ ಹಾಕಲು ₹15 ಕೋಟಿ ಬೇಕು. ಒಟ್ಟು 350 ಕಿಮೀ ಮಾರ್ಗದ ಯೋಜನೆಗೆ ₹5250 ಕೋಟಿ ವೆಚ್ಚವಾಗುತ್ತದೆ.

ವಿಜಯಪುರದಲ್ಲಿ ಒಂಟಿ ಎತ್ತು ದಾಖಲೆಯ ಮಾರಾಟ, 18 ಲಕ್ಷ 1 ಸಾವಿರಕ್ಕೆ ಸೋಲ್ಡ್‌!

ಹೊಸ ರೈಲ್ವೆ ಮಾರ್ಗ ಮಾಡಿದರೆ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಅನುಕೂಲವಾಗುವುದು. ಈ ಭಾಗದಲ್ಲಿ ಬರುವ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿ ಮಾಡಿಸಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳುತ್ತಾರೆ.

ಈ ಭಾಗದಲ್ಲಿ ಸುಪ್ರಸಿದ್ಧ ದೇವಸ್ಥಾನಗಳಾದ ಯಲ್ಲಯ್ಮನಗುಡ್ಡ, ಗೊಡಚಿ ಶ್ರೀ ವೀರಭದ್ರೇಶ್ವರ, ರೋಣ ತಾಲೂಕಿನ ಇಟಗಿ ಶ್ರೀ ಭೀಮಾಂಬಿಕಾ ದೇವಸ್ಥಾನಗಳಿಗೆ ಹೋಗಲು ಭಕ್ತರಿಗೆ ಈ ರೈಲು ಮಾರ್ಗದಿಂದ ಅನುಕೂಲವಾಗಲಿದೆ. ಸದ್ಯ ಈ ಭಾಗ ಹಿಂದುಳಿದ ಪ್ರದೇಶವಾಗಿದೆ. ರೈಲ್ವೆ ಮಾರ್ಗವಾದರೆ ಸಾಕಷ್ಟು ಅಭಿವೃದ್ಧಿಯಾಗಲು ಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿ ಮಾಡಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಹೇಳುತ್ತಾರೆ.

Latest Videos
Follow Us:
Download App:
  • android
  • ios