Asianet Suvarna News Asianet Suvarna News

ಅಕ್ಕ ಪಕ್ಕವೇ ಹರಿಯುತ್ತೆ ಕಪ್ಪು-ಬಿಳಿ ನದಿ, ಆದ್ರೂ ಒಂದಾಗೋಲ್ಲ, ಪ್ರಕೃತಿ ವಿಸ್ಮಯಕ್ಕೆ ತಲೆ ಬಾಗದಿರಲು ಆಗುತ್ತಾ?

ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಕೆಲ ಸ್ಥಳಗಳು ಕುತೂಹಲ, ವಿಸ್ಮಯದಿಂದ ಕೂಡಿರುತ್ತದೆ. ಅದೆಷ್ಟೋ ಜನರಿಗೆ ನೀರು, ವಿದ್ಯುತ್ ನೀಡುವ ಕೆಲ ನದಿಗಳು ತಮ್ಮದೇ ರಹಸ್ಯದಿಂದ ಗಮನ ಸೆಳೆದಿವೆ. ಅದ್ರಲ್ಲಿ ಅರಗ್ವಿ ನದಿ ಕೂಡ ಒಂದು.
 

Phenomenon And Tourist Attractions White And Black River That Do Not Mix roo
Author
First Published Nov 24, 2023, 1:02 PM IST

ಭಾರತ ಮಾತ್ರವಲ್ಲ ವಿಶ್ವದ ಅನೇಕ ಭಾಗಗಳಲ್ಲಿ ನದಿ ಹರಿಯುತ್ತದೆ. ಪ್ರತಿಯೊಂದು ನದಿಯೂ ತನ್ನದೇ ವಿಶೇಷತೆಯನ್ನು ಹೊಂದಿದೆ. ಪ್ರಕೃತಿಯ ಕೆಲವು ಸುಂದರ ವಿದ್ಯಮಾನಗಳು ನಮ್ಮನ್ನು ಬಹಳ ವಿಸ್ಮಯಗೊಳಿಸುತ್ತವೆ.  ಪ್ರಕೃತಿಯಿಂದ ಸೃಷ್ಟಿಗೊಂಡ ಕೆಲ ನದಿಗಳು ಕುತೂಹಲಕಾರಿ ವಿಷ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಅದರಲ್ಲಿ ಜಾರ್ಜಿಯಾದ ಅರಗ್ವಿ ನದಿ ಒಂದು. ಈ ನದಿ ಬಹಳ ವಿಶೇಷತೆಯನ್ನು ಹೊಂದಿದೆ. ಕಪ್ಪು ನದಿ ಹಾಗೂ ಬಿಳಿ ನದಿ ಅಕ್ಕಪಕ್ಕದಲ್ಲಿ ಹರಿದ್ರೂ ಅವು ಒಂದುಗೂಡೋದಿಲ್ಲ ಎನ್ನುವುದು ಈ ನದಿಯ ವಿಶೇಷ. ನಾವಿಂದು ಅರಗ್ವಿ ನದಿಯ ರಹಸ್ಯದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಜಾರ್ಜಿಯಾ (Georgia) ಏಷ್ಯಾದ ಅತ್ಯಂತ ಸುಂದರವಾದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಅದ್ಭುತ ಮತ್ತು ಆಕರ್ಷಕ ನೋಟಗಳು, ರುಚಿಕರವಾದ ಪಾಕಪದ್ಧತಿ, ಅದ್ಭುತ ಹವಾಮಾನ, ಕಡಲತೀರಗಳು, ಪರ್ವತಗಳು, ಸ್ನೇಹಪರ ಜನರು ಪ್ರವಾಸಿಗರನ್ನು ಸೆಳೆಯುತ್ತವೆ. ಎಲ್ಲಕ್ಕಿಂತ ಇಲ್ಲಿ  ವಿಶೇಷವಾಗಿದ್ದು ಅರಗ್ವಿ ನದಿ.

ಕೂತ್ರೂ ನಿಂತ್ರೂ ಗೋಡೆ ಮೇಲೆ ಜೇಡ ಕಂಡ್ರೂ ಇಲ್ಲಿ ದಂಡ ವಿಧಿಸ್ಬೇಕು, ಹೇಗೆ ಬದುಕ್ತಾರೆ ಮಂದಿ ಇಲ್ಲಿ?

ಅರಗ್ವಿ ನದಿ ಎಲ್ಲಿದೆ? : ಜಾರ್ಜಿಯಾದಲ್ಲಿ ಈ ಅರಗ್ವಿ (Aragvi) ನದಿ ಹರಿಯುತ್ತದೆ. ಟೆಟ್ರಿ ಅರಗ್ವಿ ಅಂದ್ರೆ ವೈಟ್ ಅರಗ್ವಿ,  ಗುಡೌರಿಯಿಂದ ಪಸನೌರಿ ಪಟ್ಟಣಕ್ಕೆ ಹರಿಯುತ್ತದೆ. ಅಲ್ಲಿ ಈಶಾನ್ಯಕ್ಕೆ ಗುಡಮಕರಿಯ ಮುಖ್ಯ ನದಿಯಾದ ಶಾವಿ ಅರಗ್ವಿ ಅಂದ್ರೆ ಕಪ್ಪು ಅರಗ್ವಿ ಸೇರುತ್ತದೆ. ಪಸನೌರಿಯಿಂದ ಈ ಎರಡು ನದಿಗಳು ಒಟ್ಟಿಗೆ ಹರಿಯುವುದ್ರಿಂದ ಅದನ್ನು ಅರಗ್ವಿ  ಎಂದು ಕರೆಯಲಾಗುತ್ತದೆ. ಈ ನದಿಗಳು ಪಸನೌರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಯಾಕೆಂದ್ರೆ ಈ ಎರಡೂ ನದಿಗಳು ಒಂದೇ ಕಡೆ ಹರಿದ್ರೂ ನದಿಯ ನೀರು ಒಂದಕ್ಕೊಂದು ಬರೆಯುವುದಿಲ್ಲ. ಎರಡೂ ಅಕ್ಕಪಕ್ಕದಲ್ಲಿ ಹರಿಯುತ್ತಿರುವ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತದೆ.

ಆಸ್ಟ್ರೇಲಿಯಾದಲ್ಲಿ ವಿಚಿತ್ರ ಪ್ರಾಣಿ ಜೊತೆ ಅನುಶ್ರೀ! ಈ ಪ್ರಾಣಿ ಯಾವ್ದು ಕಂಡು ಹಿಡಿರಿ ನೋಡೋಣ ಅಂತಿದ್ದಾರೆ ಮಾತಿನ ಮಲ್ಲಿ

ಅರಗ್ವಿಯು ಕಾಕಸಸ್ ಪರ್ವತಗಳ ದಕ್ಷಿಣ ಇಳಿಜಾರುಗಳಲ್ಲಿ ಹರಿಯುತ್ತದೆ. ಜಾರ್ಜಿಯಾದಲ್ಲಿ 112 ಕಿಲೋಮೀಟರ್ ಉದ್ದದ ನದಿ ಇದಾಗಿದೆ. ಪಸನೌರಿಯಿಂದ ಮುಂದೆ ಅರಗ್ವಿಯು ಆಗ್ನೇಯಕ್ಕೆ ಜಿನ್ವಾಲಿ ಜಲಾಶಯ ಸೇರುತ್ತದೆ. ಅಲ್ಲಿ ಇದು ದಕ್ಷಿಣಕ್ಕೆ ಹರಿಯುವ ಮೊದಲು ಪ್ಶಾವ್ ಅರಗ್ವಿಯನ್ನು ಸೇರಿಕೊಳ್ಳುತ್ತದೆ. ಪೂರ್ವ ಜಾರ್ಜಿಯಾದ ಪುರಾತನ ರಾಜಧಾನಿ ಟಿಬಿಲಿಸಿಯ ಉತ್ತರ ಭಾಗವಾದ Mtskheta ಮೂಲಕ Mtkvari ಯೊಂದಿಗೆ ವಿಲೀನಗೊಳ್ಳುತ್ತದೆ.

ಕಪ್ಪು – ಬಿಳಿ ನದಿ ಹಿಂದಿದೆ ಈ ಕಥೆ : ಸ್ಥಳೀಯ ದಂತಕಥೆಯ ಪ್ರಕಾರ, ಎರಡು ನದಿಗಳು ಸಹೋದರಿಯರು. ಸುಂದರ ಕೂದಲಿನ ಸಹೋದರಿ ರಾಜನ ಪ್ರೀತಿಗೆ ಬಿದ್ದಳು. ರಾಜ ಅವಳನ್ನು ವಿವಾಹವಾದ. ಕಪ್ಪು ಕೂದಲಿನ ಸಹೋದರಿ, ಅವರಿಂದ ದೂರವಾಗಲು ಪರ್ವತದಿಂದ ಹಾರಿ ಕಪ್ಪು ನದಿಗೆ ಸೇರಿದಳು. ಆದ್ರೆ ಕಪ್ಪು ಕೂದಲಿನ ಸಹೋದರಿಯನ್ನು ಕಳೆದುಕೊಂಡ ನೋವು ಸುಂದರ ಕೂದಲಿನ ಸಹೋದರಿಗೆ ಕಾಡಲು ಶುರುವಾಯ್ತು. ಹಾಗಾಗಿ ಆಕೆ ಕೂಡ ಪ್ರಾಣ ಬಿಟ್ಟಳು. ಆಕೆ ಬಿಳಿ ನದಿಯಾಗಿ ಹರಿಯಲು ಶುರು ಮಾಡಿದಳು ಎನ್ನಲಾಗುತ್ತದೆ. 

ವಿದ್ಯುತ್ ಉತ್ಪಾದನೆ (Power Production): ಜಿನ್ವಾಲಿ ಅಣೆಕಟ್ಟನ್ನು 1986 ರಲ್ಲಿ ಅರಗ್ವಿ ನದಿಯ ಮೇಲೆ ನಿರ್ಮಿಸಲಾಗಿದೆ. ಇದರಿಂದ ಉತ್ಪತ್ತೊಯಾಗುವ ವಿದ್ಯುತ್ ಜಾರ್ಜಿಯಾದ ಬಹುತೇಕ ಜಾಗವನ್ನು ತಲುಪುತ್ತದೆ.

ಈ ನದಿಯಲ್ಲಡಗಿದೆ ದುಃಖ ಮತ್ತು ಸಂತೋಷದ ಕಥೆ : ಈ ನದಿಯು ಲಾಶಾ ಮತ್ತು ತಾಮರ್ ಎಂಬ ಪ್ರೇಮಿಗಳ ಕಥೆಯನ್ನು ಹೇಳುತ್ತದೆ. ತಾಮರ್ ಶ್ರೀಮಂತರ ಮನೆ ಮಗಳಾಗಿದ್ದು, ಲಾಶಾ ಕುರುಬನಾಗಿದ್ದ. ಇಬ್ಬರ ಪ್ರೀತಿ ಇದೇ ನದಿಯ ದಡದ ಮೇಲೆ ಚಿಗುರಿತ್ತು. ಆದ್ರೆ ಮನೆಯ ವಿರೋಧ ದಿಕ್ಕರಿಸಿದ ಇಬ್ಬರು ನದಿಯಲ್ಲೇ ತಮ್ಮ ಪ್ರಯಾಣ ಶುರು ಮಾಡಿದ್ದರು. ಹೊಸ ಬದುಕುಕಟ್ಟಿಕೊಳ್ಳುವ ಆತುರದಲ್ಲಿದ್ದರು. ಆದ್ರೆ ಚಂಡಮಾರುತ ಅವರನ್ನು ಬಲಿ ಪಡೆದಿತ್ತು. ಈ ನದಿ ಅವರಿಬ್ಬರ ಸಂತೋಷ ಹಾಗೂ ದುಃಖದ ಸಂಕೇತವೆಂದು ಈಗ್ಲೂ ಜನರು ನಂಬುತ್ತಾರೆ. 
 

Follow Us:
Download App:
  • android
  • ios