ಹಾವು – ಇಲಿ ತಿನ್ನೋರಿಗೆ ಹಾಲು ಜೀರ್ಣಿಸಿಕೊಳ್ಳೇಕೆ ಸಾಧ್ಯವಿಲ್ಲ!

ನಾವು ತಿಂದ ಎಲ್ಲ ಆಹಾರವನ್ನು ದೇಹ ಜೀರ್ಣಿಸಿಕೊಳ್ಳೋದಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಆಗದೆ ಹೋದಾಗ ಸಮಸ್ಯೆ ಕಾಡುತ್ತದೆ. ಆಹಾರ ಸರಿ, ನಮ್ಮ ನೆಚ್ಚಿನ ಹಾಲು ಕೂಡ ಜೀರ್ಣ ಆಗಲ್ಲ ಅಂದರೆ ಹೆಂಗೆ? ಈ ದೇಶದ ಬಹುತೇಕ ಜನರಿಗೆ ಹಾಲು ಜೀರ್ಣವಾಗೋದೆ ಇಲ್ಲ ಅಂದ್ರೆ ನೀವು ನಂಬ್ಲೇಬೇಕು. 
 

People Of This Country Who Can Digest Even The Biggest Animals Are Unable To Digest Milk What Is The Reason roo

ಭಾರತಕ್ಕೂ ಹಸುವಿನ ಹಾಲಿಗೂ ಅವಿನಾಭಾವ ಸಂಬಂಧ. ಹಸು – ಎಮ್ಮೆ ಹಾಲನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ  ಬಹುತೇಕರು ಸೇವನೆ ಮಾಡ್ತಾರೆ. ಹಾಲಿನಲ್ಲಿರುವ ಕ್ಯಾಲ್ಸಿಯಂ, ಪೋಷಕಾಂಶ ಮೂಳೆಯನ್ನು ಬಲಪಡಿಸುತ್ತದೆ ಎಂದು ಭಾರತೀಯರು ನಂಬಿದ್ದಾರೆ. ಹಸು – ಎಮ್ಮೆ ಹಾಲು ಆರೋಗ್ಯವನ್ನು ಹಾಳು ಮಾಡುತ್ತದೆ ಎಂಬ ಮಾತು ಈಗಿನ ದಿನಗಳಲ್ಲಿ ಕೇಳಿ ಬರ್ತಿದ್ದರೂ ಅದರ ಸೇವನೆ ಕಡಿಮೆ ಮಾಡಿದವರ ಸಂಖ್ಯೆ ಬಹಳ ಕಡಿಮೆ. ಹಾಲಿನ ಜೊತೆ ಹಾಲಿನ ಉತ್ಪನ್ನಕ್ಕೂ ಭಾರತದಲ್ಲಿ ಬಹುಬೇಡಿಕೆ ಇದೆ. ಭಾರತೀಯರ ಪ್ರತಿನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಲಿನ ಬಳಕೆಯಾಗುತ್ತದೆ. ಆದ್ರೆ ಒಂದು ದೇಶದಲ್ಲಿ ಹಾಲನ್ನು ಜನರು ಕುಡಿಯೋದೇ ಇಲ್ಲ. ಅವರಿಗೆ ಹಾಲನ್ನು ಜೀರ್ಣಿಸಿಕೊಳ್ಳೋದೇ ಕಷ್ಟ. ಆ ದೇಶ ಯಾವುದು? ಹಾಲು ಜೀರ್ಣವಾಗದಿರಲು ಕಾರಣವೇನು ಎಂಬೆಲ್ಲದರ ವಿವರ ಇಲ್ಲಿದೆ.

ಈ ದೇಶ (Country) ದಲ್ಲಿ ಹಾಲು ಕುಡಿಯಲ್ಲ ಜನ..! : ಹಾಲು (Milk) ಜೀರ್ಣವಾಗಲ್ಲ ಅಂದ್ರೆ ಭಾರತೀಯರು ನಗ್ತಾರೆ. ಅದು ಅವರಿಗೆ ವಿಚಿತ್ರವೆನ್ನಿಸುತ್ತದೆ. ಅದ್ರಲ್ಲೂ ಚೀನಾ (China) ಜನ ಹಾಲು ಜೀರ್ಣವಾಗಲ್ಲ ಅಂದ್ರೆ ಬಿದ್ದು ಬಿದ್ದು ನಗೋರೇ ಹೆಚ್ಚು. ಯಾಕೆಂದ್ರೆ ನಮ್ಮ ನೆರೆ ದೇಶ ಚೀನಾದ ಜನ ತಿನ್ನದೆ ಇರುವ ಆಹಾರವಿಲ್ಲ. ಹಾವು, ಚೇಳು, ಬಾವಲಿ, ಜಿರಳೆ ಸೇರಿದಂತೆ ಭಾರತೀಯರು ತಿನ್ನದ ಆಹಾರವನ್ನು ಕೂಡ ತಿಂದು ಜೀರ್ಣಿಸಿಕೊಳ್ತಾರೆ. ಆದ್ರೆ ಅವರು ಹಾಲನ್ನು ಕುಡಿಯೋದೇ ಇಲ್ಲ. ಹಾಲು ಜೀರ್ಣವಾಗದ ಕಾರಣ ಹಾಲನ್ನು ಕೆಟ್ಟ ಆಹಾರ ಎಂಬ ಪಟ್ಟಿಗೆ ಅವರು ಸೇರಿಸಿದ್ದಾರೆ.

ಕಲ್ಲಂಗಡಿ ಹಣ್ಣು ಫ್ರಿಡ್ಜ್‌ನಲ್ಲಿಟ್ಟು ತಿನ್ನೋ ಅಭ್ಯಾಸವಿದ್ಯಾ? ಆರೋಗ್ಯಕ್ಕೆಷ್ಟು ಕೆಟ್ಟದ್ದು ಗೊತ್ತಿರ್ಲಿ

ಹಾಲು ಜೀರ್ಣವಾಗದಿಲು ಕಾರಣ ಏನು? : ಚೀನಾದ ಶೇಕಡಾ 90 ರಷ್ಟು ಜನರು  ಲ್ಯಾಕ್ಟೋಸ್ ಅಸಹಿಷ್ಣುತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲ್ಯಾಕ್ಟೋಸ್ (Lactose) ಅಸಹಿಷ್ಣುತೆ ಅಂದ್ರೆ ಹಾಲು ಅಥವಾ ಹಾಲಿನ ಉತ್ಪನ್ನ ಜೀರ್ಣವಾಗದೆ ಅಜೀರ್ಣವಾಗುವ ಸಮಸ್ಯೆಯಾಗಿದೆ. ಹಾಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಜನರಲ್ಲಿ ನೀವು ಲ್ಯಾಕ್ಟೋಸ್ ಅಸಹಿಷ್ಣುತೆ ಸಮಸ್ಯೆಯನ್ನು ನೋಡಬಹುದು. ಹಾಲಿನಲ್ಲಿ ಲ್ಯಾಕ್ಟೋಸ್ ಇರುತ್ತದೆ. ಇದನ್ನು ಸಣ್ಣ ಕರುಳು ಜೀರ್ಣಿಸುವುದಿಲ್ಲ. ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಅಗತ್ಯವಾದ ಕಿಣ್ವಗಳನ್ನು ಸಣ್ಣ ಕರುಳು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಆಗ ಸಮಸ್ಯೆ ಕಾಡುತ್ತದೆ. ಚೀನಾದ ಜನರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ನೀವು ಈ ಸಮಸ್ಯೆಯನ್ನು ಕಾಡಬಹುದಾಗಿದೆ. ಹಾಗಾಗಿಯೇ ಚೀನಾ ಜನರು ಹಾಲಿನ ಸೇವನೆ ಮಾಡುವುದಿಲ್ಲ. ಬರೀ ಹಾಲು ಮಾತ್ರವಲ್ಲ ಹಾಲಿನ ಉತ್ಪನ್ನಗಳಿಂದ ಅವರು ದೂರವಿರ್ತಾರೆ. 

ಹಾಲಿನಲ್ಲಿರುವ ಸಕ್ಕರೆಯನ್ನು ಲ್ಯಾಕ್ಟೋಸ್ ಎಂದು ಕರೆಯಲಾಗುತ್ತದೆ. ಹಾಲಿನ ಎಲ್ಲ ಉತ್ಪನ್ನದಲ್ಲಿ ಇದು ಇರುವ ಕಾರಣ, ಹಾಲು ಹಾಗೂ ಹಾಲಿನ ಉತ್ಪನ್ನ ತಿಂದ ನಂತ್ರ ಅತಿಸಾರ, ಗ್ಯಾಸ್ ಮತ್ತು ಉಬ್ಬುವಿಕೆ ಸಮಸ್ಯೆ ಕಾಡುತ್ತದೆ.   ಹೊಟ್ಟೆಯಲ್ಲಿ ಊತ, ವಾಂತಿ, ಹೊಟ್ಟೆ ನೋವು, ವಾಕರಿಕೆ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. 

ಏನು ಬಿಟ್ಟರೂ ಭಾನುವಾರದ ನಿದ್ರೆ ಬಿಡೋರಲ್ವಾ ನೀವು? ಗುಡ್, ಇದರಿಂದ ಹೆಚ್ಚುತ್ತೆ ಆಯಸ್ಸು

ಒಂದ್ವೇಳೆ ನಿಮಗೂ ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದಲ್ಲಿ ಹಾಲು ಸೇವನೆ ಮಾಡಿದ ನಂತ್ರ ಈ ಎಲ್ಲ ಸಮಸ್ಯೆ ಆಗ್ತಿದ್ದರೆ ನೀವು ಹಾಲು ಹಾಗೂ ಹಾಲಿನ ಉತ್ಪನ್ನದ ಸೇವನೆ ಮಾಡಬೇಡಿ. ಅದರ ಬದಲು ನೀವು ಸಮುದ್ರಾಹಾರವನ್ನು ಡಯಟ್ ನಲ್ಲಿ ಸೇರಿಸಬಹುದು. ಇದು ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದಲ್ಲದೆ ಬಾದಾಮಿ ಹಾಗೂ ಹಸಿರು ತರಕಾರಿಯನ್ನು ಡಯಟ್ ನಲ್ಲಿ ಸೇರಿಸಿ. ಇವುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಕ್ಯಾಲ್ಸಿಯಂ ಜೊತೆ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ವಿಟಮಿನ್ ಇ ಬಾದಾಮಿಯಲ್ಲಿ ಕಂಡುಬರುತ್ತವೆ. ಇದು ಕ್ಟೋಸ್ ಅಸಹಿಷ್ಣುತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. 
 

Latest Videos
Follow Us:
Download App:
  • android
  • ios