MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಏನು ಬಿಟ್ಟರೂ ಭಾನುವಾರದ ನಿದ್ರೆ ಬಿಡೋರಲ್ವಾ ನೀವು? ಗುಡ್, ಇದರಿಂದ ಹೆಚ್ಚುತ್ತೆ ಆಯಸ್ಸು

ಏನು ಬಿಟ್ಟರೂ ಭಾನುವಾರದ ನಿದ್ರೆ ಬಿಡೋರಲ್ವಾ ನೀವು? ಗುಡ್, ಇದರಿಂದ ಹೆಚ್ಚುತ್ತೆ ಆಯಸ್ಸು

ನೀವು ವಾರವಿಡೀ ಓಡುವುದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿ ಬಿಡ್ತೀರಿ ಅಲ್ವಾ? ಇದರಿಂದಾಗಿ ನಿಮ್ಮ ನಿದ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ವಾರಾಂತ್ಯ ನಿಮಗೆ ಉತ್ತಮ ಅವಕಾಶ. ನೀವು ಭಾನುವಾರ ಅಥವಾ ರಜಾದಿನಗಳಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾದರೆ ಇದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತಂತೆ.  

2 Min read
Author : Suvarna News
Published : Apr 04 2024, 05:12 PM IST
Share this Photo Gallery
  • FB
  • TW
  • Linkdin
  • Whatsapp
17

ವಾರಾಂತ್ಯಗಳಲ್ಲಿ ಭಾನುವಾರ, ರಜಾದಿನಗಳಲ್ಲಿ ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಇಚ್ಛೆಯಂತೆ ಕೆಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ. ಇನ್ನು ಹೆಚ್ಚಿನ ಜನರು ರಜಾದಿನಗಳಲ್ಲಿ ಚೆನ್ನಾಗಿ ನಿದ್ರೆ ಮಾಡೋದನ್ನು ಬಯಸ್ತಾರೆ. ಹೌದು ವಾರ ಪೂರ್ತಿ ಸರಿಯಾಗಿ ನಿದ್ರೆ ಮಾಡದೇ ಓಡಾಟ, ಕೆಲಸದಲ್ಲಿ ಬ್ಯುಸಿ ಇದ್ದ ಜನರಿಗೆ ಚೆನ್ನಾಗಿ ನಿದ್ರೆ (good sleep) ಮಾಡೋದಕ್ಕೂ ಸಮಯ ಸಿಗೋದಿಲ್ಲ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನೀವೂ ಸಹ ವಾರಪೂರ್ತಿ ದಣಿದಿದ್ದರೆ, ರಜಾದಿನಗಳಲ್ಲಿ ಬೇಕಾದಷ್ಟು ನಿದ್ದೆ ಮಾಡಿ, ಇದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯುವಿರಿ. 
 

27

ಆಯಸ್ಸು ಹೆಚ್ಚುತ್ತೆ: 
ನಮಗೆ ನಿದ್ರೆ ಕಡಿಮೆಯಾದಷ್ಟು ನಮ್ಮ ಆಯಸ್ಸು ಕೂಡ ಕಡಿಮೆಯಾಗುತ್ತಂತೆ. ಅದಕ್ಕಾಗಿ ನಮ್ಮ ಹಿರಿಯರು, ತಜ್ಞರು ಎಲ್ಲಾ ಚೆನ್ನಾಗಿ ನಿದ್ರೆ ಮಾಡಿ ಎನ್ನುತ್ತಾರೆ. ಒಂದು ವೇಳೆ ನಿಮಗೆ ವಾರದಲ್ಲಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ರಜಾದಿನಗಳಲ್ಲಿ ಚೆನ್ನಾಗಿ ನಿದ್ರಿಸಿ, ಇದರಿಂದ ನೀವು ಆರೋಗ್ಯದಿಂದ ಇರುತ್ತೀರಿ, ಆಯಸ್ಸು (increase lifespan) ಕೂಡ ಹೆಚ್ಚುತ್ತೆ. 

37

ಹೃದಯಾಘಾತದ ರಿಸ್ಕ್ ಕಡಿಮೆ
ವಾರಾಂತ್ಯದಲ್ಲಿ, ಭಾನುವಾರ ಅಥವಾ ರಜಾದಿನಗಳಲ್ಲಿ ಹೆಚ್ಚು ಹೊತ್ತು ಮಲಗೋದರಿಂದ, ಅಥವಾ ಚೆನ್ನಾಗಿ ನಿದ್ರೆ ಮಾಡೋದರಿಂದ ನಿಮ್ಮ ಒತ್ತಡ ಮಟ್ಟ ಕಡಿಮೆಯಾಗುತ್ತೆ, ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತೆ, ಇದರಿಂದಾಗಿ ಹೃದಯಾಘಾತ(heart attack) ರಿಸ್ಕ್ ಕೂಡ ಕಡಿಮೆಯಾಗುತ್ತದೆ. 

47

ದೇಹ ಮತ್ತು ಮನಸ್ಸಿನ ಆಯಾಸ ದೂರವಾಗುತ್ತದೆ     
ವಾರಾಂತ್ಯದಲ್ಲಿ ಮಲಗುವುದು ನಿಮಗೆ ಒಂದು ವಾರದ ನಿದ್ರೆಯನ್ನು ನೀಡುವುದಿಲ್ಲ ನಿಜ,. ಆದರೆ ವಾರಾಂತ್ಯದ ನಿದ್ರೆ (weekend sleep) ನಿಮ್ಮನ್ನು ಮುಂದಿನ ವಾರಕ್ಕೆ ಸಿದ್ಧಪಡಿಸುತ್ತದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಇದು ನಿಮ್ಮ ದೇಹ ಮತ್ತು ಮನಸ್ಸಿನ ಆಯಾಸವನ್ನು ನಿವಾರಿಸುತ್ತದೆ.  

57

ತೂಕ ಕಡಿಮೆಯಾಗುತ್ತದೆ   
ಚೆನ್ನಾಗಿ ನಿದ್ರೆ ಮಾಡುವವರಿಗಿಂತ ಕಡಿಮೆ ನಿದ್ರೆ ಮಾಡುವವರು ಹೆಚ್ಚು ತೂಕ ಹೊಂದಿರುತ್ತಾರೆ. ಐದು ಗಂಟೆಗಳ ನಿದ್ರೆ ಪಡೆಯುವ ಜನರು ಹಸಿವನ್ನು ಉತ್ತೇಜಿಸುವ ಹಾರ್ಮೋನುಗಳನ್ನು ಶೇಕಡಾ 15 ರಷ್ಟು ಹೆಚ್ಚು ಉತ್ಪಾದಿಸುತ್ತಾರೆ ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ಅದೇ ಸಮಯದಲ್ಲಿ, ಎಂಟು ಗಂಟೆಗಳ ನಿದ್ರೆ ಮಾಡುವ ಜನರಲ್ಲಿ ಈ ಹಾರ್ಮೋನ್ ಸಾಮಾನ್ಯ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ನೀವು ವಾರಾಂತ್ಯದಲ್ಲಿ ಈ ಕೊರತೆಯನ್ನು ತುಂಬಬಹುದು. ಒತ್ತಡ (Stress) ಕಡಿಮೆ ಮಾಡುವುದು ತೂಕದ ಮೇಲೂ (weight lose) ಪರಿಣಾಮ ಬೀರುತ್ತದೆ.

67

ರೋಗನಿರೋಧಕ ಶಕ್ತಿ (Immunity Power) ಹೆಚ್ಚುತ್ತೆ
ನೀವು ಒತ್ತಡದಿಂದ ಮುಕ್ತರಾದಾಗ, ಅನೇಕ ರೀತಿಯ ರೋಗಗಳಿಂದ ದೂರವಿರುತ್ತೀರಿ. ವಾರಾಂತ್ಯದ ನಿದ್ರೆ ನಿಮಗೆ ವೃತ್ತಿಪರ ಒತ್ತಡದಿಂದ ಪರಿಹಾರ ನೀಡುತ್ತದೆ. ಇದರಿಂದಾಗಿ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ. ಇದು ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುತ್ತದೆ ಮತ್ತು ನೀವು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ವಾರಾಂತ್ಯದ ಅಥವಾ ರಜಾದಿನದ ನಿದ್ದೆ ನಿಮಗೆ ಹೊಸ ಚೈತನ್ಯದ ಟಾನಿಕ್ ನಂತೆ ಕೆಲಸ ಮಾಡುತ್ತೆ. 

77

ನೀವು ಕೂಡ ವಾರಾಂತ್ಯದಲ್ಲಿ, ಭಾನುವಾರ, ರಜಾದಿನಗಳಲ್ಲಿ ಚೆನ್ನಾಗಿ ನಿದ್ದೆ ಮಾಡೋರು ಆಗಿದ್ರೆ, ಇದು ಖಂಡಿತಾ ಖುಷಿ ಪಡುವ ವಿಚಾರ. ಒಂದು ವೇಳೆ ನಿಮ್ಮ ವೀಕೆಂಡ್ ರಜೆಯ ಬಗ್ಗೆ ಜನ ಬೈಯ್ಯುತ್ತಿದ್ದರೆ ಅವರಿಗೆ ಇದರಿಂದಾಗುವ ಪ್ರಯೋಜನಗಳ ಬಗ್ಗೆ ಹೇಳಿ ನೋಡಿ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ

Latest Videos
Recommended Stories
Recommended image1
ಮರೆವಿಗೆ ರಾಮಬಾಣ, ತಿಮರೆ ಚಟ್ನಿಯ ಆರೋಗ್ಯದ ಗುಟ್ಟು 100 ವರ್ಷ ಆಯಸ್ಸು! ಮಾಡೋದೇಗೆ?
Recommended image2
Bile Duct Cancer: ಪಿತ್ತನಾಳದ ಕ್ಯಾನ್ಸರ್‌ನ ಈ 6 ಲಕ್ಷಣಗಳು ಅಪಾಯದ ಮುನ್ಸೂಚನೆ!
Recommended image3
Spinach benefits for men: ಪುರುಷರಿಗೆ ಈ ಸೊಪ್ಪು ಅತ್ಯುತ್ತಮ ಔಷಧ.. ವಾರಕ್ಕೊಮ್ಮೆ ತಿಂದರೆ ಸಾಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved