ಉತ್ತರ ಕೋರಿಯಾ ಸರ್ವಾಧಿಕಾರಿ ಕಿಮ್ ವಿರುದ್ಧ ದಂಗೆ ಏಳಲು ಚಿಂತಿಸಿದವನಿಗೆ ಘೋರ ಶಿಕ್ಷೆ
ತಪ್ಪು ಮಾಡಿದವರಿಗೆ ಶಿಕ್ಷೆ ನೀಡೋದು ಸಾಮಾನ್ಯ ಸಂಗತಿ. ಘೋರ ತಪ್ಪು ಮಾಡಿದವರನ್ನು ಗಲ್ಲಿಗೇರಿಸಲಾಗುತ್ತದೆ. ಆದ್ರೆ ಉತ್ತರ ಕೋರಿಯಾ ಕಿಂಗ್ ಕಿಮ್ ಜೊಂಗ್, ತಪ್ಪು ಮಾಡಿದ ವ್ಯಕ್ತಿಗೆ ನರಕವನ್ನೇ ತೋರಿಸಿದ್ದಾರೆ.
ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್-ಉನ್ ಬಗ್ಗೆ ಜನರಿಗೆ ತಿಳಿದಿದೆ. ಸರ್ವಾಧಿಕಾರಿ ಕಿಮ್ ಜೊಂಗ್ – ಉನ್ ತನ್ನ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಕೀನ್ಯಾದ ದೊರೆ, ರಾಜ ಎಂದೆಲ್ಲ ಕರೆಸಿಕೊಳ್ಳುವ ಕಿಮ್ ಜೊಂಗ್ ಉನ್ ಘೋರ ಶಿಕ್ಷೆ ನೀಡುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಶಿಕ್ಷೆ ವಿಧಾನ ಜನಸಾಮಾನ್ಯರನ್ನು ದಂಗಾಗಿಸುತ್ತದೆ. ತಪ್ಪು ಮಾಡಿದೋರು ಯಾರೇ ಇರಲಿ ಅವರಿಗೆ ಶಿಕ್ಷೆ ನೀಡಲು ಕಿಮ್ ಜೊಂಗ್ ಉನ್ ಹಿಂಜರಿಯೋದಿಲ್ಲ. ಪ್ರತಿಯೊಬ್ಬರಿಗೂ ಭಿನ್ನವಾಗಿ, ಘನಘೋರವಾಗಿ ಶಿಕ್ಷಿ ನೀಡುವ ಕಿಮ್ ಜೊಂಗ್ ಉನ್ ಆಗಾಗ ಸುದ್ದಿ ಮಾಡ್ತಾನೆ ಇರ್ತಾರೆ. ಈಗ ಮತ್ತೊಂದು ಹೃದಯ ವಿದ್ರಾವಕ ಘಟನೆ ಬಹಿರಂಗವಾಗಿದೆ. ಕಿಮ್ ಜೊಂಗ್-ಉನ್ ನೀಡಿದ ಶಿಕ್ಷೆ ಎಲ್ಲರ ಎದೆ ನಡುಗಿಸಿದೆ. ಕಿಮ್ ಜೊಂಗ್-ಉನ್ ಎಷ್ಟು ಕ್ರೂರಿ ಎಂಬುದನ್ನು ಈ ಸುದ್ದಿ ಮತ್ತೊಮ್ಮೆ ಸಾಭೀತುಪಡಿಸ್ತಿದೆ.
ವರದಿಯ ಪ್ರಕಾರ, ಈ ಬಾರಿ ಕಿಮ್ ಜೊಂಗ್-ಉನ್ (Kim Jong Un), ಜನರಲ್ ಒಬ್ಬರಿಗೆ ಶಿಕ್ಷೆ ನೀಡಿದ್ದಾರೆ. ಜನರಲ್ (General) ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು. ಜನರಲ್ ದಂಗೆಗೆ ಪ್ಲಾನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತಿತ್ತು. ಇದ್ರಿಂದ ಕೋಪಗೊಂಡ ಕಿಮ್ ಜೊಂಗ್-ಉನ್ ಎಲ್ಲರು ನಡುಗುವಂತ ಶಿಕ್ಷೆಯನ್ನು ಜನರಲ್ ಗೆ ನೀಡಿದ್ದಾರೆ. ಜನರಲ್, ಕಿಮ್ ಜೊಂಗ್-ಉನ್ ನೀಡಿದ ಶಿಕ್ಷೆ (Punishment) ಗೆ ನರಳಿ ನರಳಿ ಸಾವನ್ನಪ್ಪಿದ್ದಾರೆ.
ಕಾಮಸೂತ್ರದ ಈ ಸಲಹೆ ಪಾಲಿಸಿದ್ರೆ, ಗಂಡ ಹೆಂಡತಿ ಜಗಳ ಆಗುವುದೇ ಇಲ್ಲ!
ಕಿಮ್ ಜೊಂಗ್-ಉನ್ ಜನರಲ್ ಗೆ ನೀಡಿದ ಶಿಕ್ಷೆ ಏನು? : ಜನರಲ್ ಹೆಸರು ಹಾಗೆ ಅವರು ಎಲ್ಲಿ ಕೆಲಸ ಮಾಡ್ತಿದ್ದರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದ್ರೆ ಜನರಲ್ ಕಿಮ್ ಜೊಂಗ್-ಉನ್ ಸರ್ವಾಧಿಕಾರದ ವಿರುದ್ಧ ದಂಗೆ ಏಳುವ ಆಲೋಚನೆ ಮಾಡಿದ್ದರಂತೆ. ಈ ವಿಷ್ಯ ಕಿಮ್ ಜೊಂಗ್-ಉನ್ ಕಿವಿಗೆ ಬಿದ್ದಿದೆ. ಒಮ್ಮೆಯೂ ಜನರಲ್ ಕುಟುಂಬದ ಬಗ್ಗೆ ಆಲೋಚನೆ ಮಾಡದ ಕಿಮ್ ಜೊಂಗ್-ಉನ್, ಜನರಲ್ ಹತ್ಯೆ ಮಾಡಿದ್ದಾರೆ. ಕಿಮ್ಸ್ ಜೊಂಗ್ ಉನ್ ರ ರಿಯಾಂಗ್‌ಸಾಂಗ್ ನಿವಾಸದಲ್ಲಿ ಒಂದು ದೊಡ್ಡ ಮೀನಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಿಮ್‌ನ ಈ ಬೃಹತ್ ಅಕ್ವೇರಿಯಂನಲ್ಲಿ ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ನೂರಾರು ಪಿರಾನ್ಹಾ ಮೀನುಗಳಿವೆ. ದಂಗೆ ಏಳುವ ಪ್ಲಾನ್ ಮಾಡಿದ್ದ ಜನರಲ್ ಈ ಮೀನುಗಳಿಗೆ ಆಹಾರವಾಗಿದ್ದಾರೆ.
ಹನಿಮೂನ್‌ಗೆ ಹೋಗದೇ ಫ್ರೆಂಡ್ಸ್ ಜೊತೆ ಟೂರ್? ಏನಾಯ್ತು ಪರಿಣಿತಿ ಚೋಪ್ರಾ ಲೈಫಲ್ಲಿ?
ಮೊದಲು ಕಿಮ್, ಜನರಲ್ ಕೈ ಹಾಗೂ ಕಾಲುಗಳನ್ನು ಕತ್ತರಿಸಿದ್ದಾರೆ. ನಂತ್ರ ಅಕ್ವೇರಿಯಂ ಟ್ಯಾಂಕ್ ಗೆ ಜನರಲ್ ದೇಹವನ್ನು ಎಸೆದಿದ್ದಾರೆ. ಜನರಲ್‌ನ ದೇಹದ ಮೇಲೆ ಅನೇಕ ಗಾಯಗಳಿವೆ. ಮೀನುಗಳಿಂದ ನಿರಂತರವಾಗಿ ಕಚ್ಚಿಸಿಕೊಂಡ ಜನರಲ್, ಅಲ್ಲಿಯೇ ಸಾವನ್ನಪ್ಪಿದ್ದಾರೆ. ಪಿರಾನ್ಹಾ ಮೀನಿನ ಹಲ್ಲುಗಳು ತುಂಬಾ ತೀಕ್ಷ್ಣವಾಗಿರುತ್ತವೆ. ಈ ಮೀನುಗಳು ಕೆಲವೇ ನಿಮಿಷಗಳಲ್ಲಿ ಮಾನವ ದೇಹವನ್ನು ಹರಿದು ಮಾಂಸವನ್ನು ತಿನ್ನುತ್ತವೆ. 2011 ರಲ್ಲಿ ಅಧಿಕಾರ ವಹಿಸಿಕೊಂಡ ಕಿಮ್ ಈವರೆಗೆ 16 ಹಿರಿಯ ಅಧಿಕಾರಿಗಳಿಗೆ ಈ ರೀತಿಯ ಮರಣದಂಡನೆ ವಿಧಿಸಿದ್ದಾರೆ.
ಸಿನಿಮಾದಿಂದ ಪ್ರೇರಣೆಗೊಂಡ ಕಿಮ್ ನೀಡಿದ್ದಾರೆ ಈ ಶಿಕ್ಷೆ : ಜನರಲ್ ಗೆ ಈ ಶಿಕ್ಷೆ ನೀಡಲು ಕಿಮ್ ಗೆ ಪ್ರೇರಣೆಯಾಗಿದ್ದು ಸಿನಿಮಾ ಎನ್ನಲಾಗ್ತಿದೆ. 1977 ರ ಜೇಮ್ಸ್ ಬಾಂಡ್ ಚಲನಚಿತ್ರ ದಿ ಸ್ಪೈ ಹೂ ಲವ್ಡ್ ಮಿ ಚಿತ್ರದಲ್ಲಿ ದೇಶದ್ರೋಹಿಗಳಿಗೆ ನೀಡುವ ಮರಣ ದಂಡನೆಯನ್ನೇ ಇಲ್ಲೂ ಅನುಸರಿಸಿದ್ದಾರೆ. ಈ ಚಿತ್ರದಲ್ಲಿ ವಿಲನ್ ಕಾರ್ಲ್ ಸ್ಟ್ರಾಂಬರ್ಗ್ ತನ್ನ ಶತ್ರುಗಳನ್ನು ದೊಡ್ಡ ಸಂಖ್ಯೆಯ ಅಪಾಯಕಾರಿ ಶಾರ್ಕ್‌ಗಳಿರು ಟ್ಯಾಂಕ್‌ಗೆ ಎಸೆಯುವ ಮೂಲಕ ಕೊಲ್ಲುತ್ತಾನೆ. ಇದನ್ನೇ ಕಿಮ್ ಅನುಸರಿಸಿದ್ದಾರೆ.