ನಮ್ಮೂರಲ್ಲಿ ಸ್ವಲ್ಪ ಚಳಿಯಾದರೆ ಸಾಕು, ಬೆಡ್ ಶೀಟ್, ಕಂಬಳಿ, ಸ್ವೆಟರ್ ಹಾಕ್ಕೊಂಡು ಬೆಚ್ಚಗೆ ಮಲಗುತ್ತೇವೆ. ಇನ್ನು ಕಾಶ್ಮೀರ, ಲಢಾಕ್ ಕಡೆ -2 ಡಿಗ್ರಿ ಇದ್ದರೆ? ಅವರ ಜೀವನ ಹೇಗಿರುತ್ತೆ ನೀವೇ ಊಹಿಸಿ. ಅದನ್ನು ಕಲ್ಪಿಸಿಕೊಳ್ಳುವುದಂತೂ ಕರಾವಳಿ ಮಂದಿಗೆ ಕಷ್ಟ ಕಷ್ಟ. ಆದರೆ, ಈ ಊರಿನ ಉಷ್ಣಾಂಶದ ಬಗ್ಗೆ ಕೇಳಿದರೆ ಮೈ ಜುಮ್ ಅನ್ನುತ್ತೆ...

ರಷ್ಯಾದ ಸೈಬೀರಿಯಾದ ನಗರದವೊಂದರಲ್ಲಿ ನಾರೀಲ್ಸ್ಕ್ ಎಂಬೊಂದು ಊರಿದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಚಳಿ ಇರೋ ಪ್ರದೇಶ. ವರದಿಯೊಂದರ ಪ್ರಕಾರ ಡಿಸೆಂಬರ್‌ ಹಾಗೂ ಜನವರಿ, ಫೆಬ್ರವರಿಯಲ್ಲಂತೂ ಸೂರ್ಯ ಈ ಊರಲ್ಲಿ ತಲೆ ಹಾಕೋದೇ ಇಲ್ಲ. ಸೂರ್ಯನ ಕಿರಣಗಳನ್ನೇ ಕಾಣದ ಈ ಊರಿನ ಮಂದಿಗೆ ಪೋಲಾರ್ ನೈಟ್ ಸಿಂಡ್ರೋಮ್ ಎನ್ನುವ ಮಾನಸಿಕ ಖಿನ್ನತೆಯೂ ಕಾಡುತ್ತದೆ. 

ವರ್ಷದ 365 ದಿನಗಳಲ್ಲಿ ಸುಮಾರು 270 ದಿನಗಳು ಈ ಊರಿನಲ್ಲಿ ಹಿಮಾವೃತವಾಗಿರುತ್ತದೆ. ಇನ್ನು ಚಳಿಗಾಲ ಬಂದರಂತೂ ಕಥೆಯೇ ಮುಗಿಯಿತು. ಇಲ್ಲಿನ ತಾಪಮಾನ ಮೈನಸ್ 55 ಡಿಗ್ರಿ ಸೆಲ್ಷಿಯಸ್ ತಲುಪುತ್ತದೆ. ಇಲ್ಲಿ ಸಾಮಾನ್ಯ ದಿನಗಳಲ್ಲೇ ತಾಪಮಾನ ಮೈನಸ್ 10 ಡಿಗ್ರಿ ಸೆ. ಇರುತ್ತದೆ. 

ಸ್ವರ್ಗಸೀಮೆಯ ಮಡಿಲು, ಅತಿ ಸುಂದರ ಬೀಚ್, ದ್ವೀಪ ಪ್ರಪಂಚ ಫುಕೆಟ್

ಇಷ್ಟು ಚಳಿ ಇರುವ ಈ ಊರಿನ ಜನಸಂಖ್ಯೆ 1.75 ಲಕ್ಷ.  ಸೈಬೀರಿಯದಲ್ಲಿರುವ ಯಾಕೂತ್ಸ್ ನಗರ ಹೆಚ್ಚು ತಂಪಾದ ತಾಣವೆಂದೂ ಕೆಲವರು ಹೇಳುವುದುಂಟು. ಆದರೆ ಅಲ್ಲಿನ ತಾಪಮಾನ ಮೈನಸ್ 41 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇಲ್ಲಿ ಮೂರು ದಿನಕ್ಕೊಮ್ಮೆ ಒಂದು ಬಾರಿ ಹಿಮ ಬಿರುಗಾಳಿಯೂ ಬೀಸುತ್ತದೆ. 

ನಾರೀಲ್ಸ್ಕ್ ಉಳಿದ ದೇಶಗಳಿಂದ ದೂರವಿದ್ದರೂ, ಅಭಿವೃದ್ಧಿಯಿಂದ ದೂರವಾಗಿಲ್ಲ. ಇದು ಅತ್ಯಂತ ಸಮೃದ್ಧಿ ಹೊಂದಿದ್ದು, ಇಲ್ಲಿ ಟ್ರಾನ್ಸ್‌ಪೋರ್ಟ್, ಕೆಫೆ, ಚರ್ಚ್, ಬಾರ್, ಆರ್ಟ್ ಗ್ಯಾಲರಿ ಮತ್ತು ಥಿಯೇಟರ್ ಜೊತೆಗೆ ಎಲ್ಲಾ ವ್ಯವಸ್ಥೆಯೂ ಇವೆ. ವಾಸ್ತವವಾಗಿ  ನಾರೀಲ್ಸ್ಕ್ ಪ್ರಪಂಚದ ಅತ್ಯಂತ ದೊಡ್ಡ  ನಿಕ್ಕಲ್, ಪ್ಲಾಟಿನಂ ಮತ್ತು ಪೆಲೆಡಿಯಮ್ ಉತ್ಪಾದಕ ತಾಣವಾಗಿದೆ. ಆದುದರಿಂದ ಇದು ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆದಿದೆ.