ಈ ದ್ವೀಪಕ್ಕೆ ಹೋದವರು ಬದುಕಿ ಬರೋ ಚಾನ್ಸೇ ಇಲ್ಲ!
ಬ್ರೆಜಿಲ್ ಬಳಿ ಸಮುದ್ರದಲ್ಲಿ ಅತ್ಯಂತ ಸುಂದರವಾದ ಒಂದು ದ್ವೀಪವಿದೆ. ಆದರೆ ಅಲ್ಲಿಗೆ ಹೋದವರ್ಯಾರೂ ತಿರುಗಿ ಬರಲಾರರು. ಅಷ್ಟು ಭಯಾನಕ!
ಇಲಾ ಡಾ ಕ್ವಿಮಾಡಾ ಗ್ರ್ಯಾಂಡ್ ಎಂದದರ ಹೆಸರು. ಬ್ರೆಜಿಲಿಯನ್ ಭಾಷೆಯಲ್ಲಿ ಅದರ ಅರ್ಥ ಎಲ್ಲ ದ್ವೀಪಗಳಿಗೆ ರಾಣಿಯಂತಿರುವ ದ್ವೀಪ ಅಂತ. ನೋಡೋಕೆ ಬಲು ಸುಂದರ. ದ್ವೀಪದ ಮೇಲೆ ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ಹಾರ್ತಾ ಕೆಳಗೆ ನೋಡಿದರೆ, ಅತ್ಯಂತ ಅದ್ಭುತವಾದ ಸಮುದ್ರ ತೀರ, ಕಡಿದಾದ ಬೆಟ್ಟದಂಚುಗಳು, ದಟ್ಟವಾಗಿ ಬೆಳೆದ ಗಿಡಮರಗಳು ಕಾಣಿಸುತ್ತದೆ. ಇದಕ್ಕೆ ಮನಸೋತು ಹೋಗಿ ನೋಡೋಣ ಎಂದುಕೊಂಡು ಹೋಗಿ ಇಳಿದಿರೋ, ರಾತ್ರಿ ಕಳೆದ ಬೆಳಗಾಗೋದರೊಳಗೆ ನೀವು ಹೆಣವಾಗೋ ಚಾನ್ಸೇ ಹೆಚ್ಚು.
ಅದಕ್ಕೆ ಕಾರಣ ಅಲ್ಲಿರುವ ಹಾವುಗಳು. ಬೇರೆಲ್ಲೂ ಇಲ್ಲದಷ್ಟು ಹಾವುಗಳು ಇಲ್ಲಿವೆ. ಪ್ರತಿ ನಾಲ್ಕು ಅಡಿಗೊಂದು ಹಾವು ಇಲ್ಲಿ ನಿಮಗೆ ಕಾಣಸಿಗತ್ತೆ. ಅಲ್ಲಿರುವ ನಾನಾ ಬಗೆಯ ಸರ್ಪಜಾತಿಗಳು, ವಿಷಕಾರಿ ಹಾವುಗಳನ್ನು ಕಂಡವರು ಅದಕ್ಕೆ ಸರ್ಪದ್ವೀಪ- ದಿ ಸರ್ಪೆಂಟ್ ಐಲ್ಯಾಂಡ್ ಎಂದೇ ಹೆಸರಿಟ್ಟಿದ್ದಾರೆ. ಅಲ್ಲಿ ಪ್ರತಿ ನಾಲ್ಕು ಹೆಜ್ಜೆಗೊಂದರಂತೆ ಹಾವುಗಳು ಸಿಗುತ್ತವೆ. ಎಂಥ ವಿಷಕಾರಿ ಹಾವುಗಳಿವೆ ಎಂದರೆ, ಅಲ್ಲಿಗೆ ಸುರಕ್ಷತಾ ಸಾಧನಗಳಿಲ್ಲದೆ ಹೋದವರ್ಯಾರೂ ಬದುಕಿ ಬಂದ ನಿದರ್ಶನಗಳು ಕಡಿಮೆ. ಹೋದವರೆಲ್ಲರಿಗೂ ಒಂದಲ್ಲ ಒಂದು ಹಾವು ಕಚ್ಚಿದೆ. ಈ ಹಾವುಕಡಿತಕ್ಕೆ ಒಂದು ಗಂಟೆಯ ಒಳಗೆ ಔಷಧ ದೊರೆಯದಿದ್ದರೆ, ಕಚ್ಚಿಲ್ಪಟ್ಟವನು ಸತ್ತೇ ಹೋಗುತ್ತಾನೆ. ಹೀಗಾಗಿ ಇದರ ವಿಚಾರ ಗೊತ್ತಿದ್ದವರ್ಯಾರೂ ಇಲ್ಲಿಗೆ ಹೋಗುವುದೇ ಇಲ್ಲ. ಇತ್ತೀಚೆಗೆ ಬಿಬಿಸಿ, ನ್ಯಾಷನಲ್ ಜಿಯೊಗ್ರಾಫಿಕ್‌ನವರು ಸಕಲ ಸುರಕ್ಷತಾ ವ್ಯವಸ್ಥೆಗಳೊಂದಿಗೆ ದ್ವೀಪಕ್ಕೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿದ್ದಾರೆ. ಅದೂ ಡಾಕ್ಟರ್‌ಗಳು, ತುರ್ತು ಚಿಕಿತ್ಸೆ ವ್ಯವಸ್ಥೆಗಳು, ವಿಷದ ಔಷಧಗಳ ಸಮೇತವೇ ಹೋಗಿದ್ದಾರೆ.
ಕೊರೋನಾದಿಂದ ಚೇತರಿಕೆ ಆದವರಲ್ಲಿ ಹಲವು ಸಮಸ್ಯೆ!
ಇಲ್ಲಿ ಯಾಕೆ ಇಷ್ಟೊಂದು ಹಾವುಗಳಿವೆ? ಯಾಕೆಂದರೆ ಈ ಸಾಗರ ಪ್ರದೇಶದಲ್ಲಿ ನೂರಾರು ವರ್ಷಗಳಿಂದಲೂ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್, ಜಪಾನ್, ಚೀನಾ ಇತ್ಯಾದಿಗಳ ವರ್ತಕರ ಹಡಗುಗಳು ಓಡಾಡುತ್ತವೆ. ಸಹಜವಾಗಿಯೇ ಬ್ರೆಜಿಲ್, ಸೊಮಾಲಿಯಾ, ಮೆಕ್ಸಿಕೋ ಮುಂತಾದೆಡೆಗಳ ಕಡಲ್ಗಳ್ಳರು ಈ ಪ್ರಾಂತ್ಯದಲ್ಲಿಯೇ ಬೀಡು ಬಿಟ್ಟಿದ್ದರು. ಇಲ್ಲೆಲ್ಲ ಓಡಾಡುವ ಶ್ರೀಮಂತ ಸರಕು ತುಂಬಿದ ಹಡಗುಗಳನ್ನು ಲೂಟಿ ಮಾಡುತ್ತಿದ್ದರು. ನಂತರ ಹೀಗೆ ಲೂಟಿ ಮಾಡಿದ ಚಿನ್ನ ವಜ್ರ ಮುಂತಾದ ಬೆಲೆಬಾಳುವ ಲೋಹಗಳು, ಆಭರಣಗನ್ನೆಲ್ಲ ಬಚ್ಚಿಡಲು ಇವರಿಗೆ ಒಂದು ಜಾಗ ಬೇಕಾಯಿತು. ಅದಕ್ಕಾಗಿ ಈ ದ್ವೀಪವನ್ನು ಕಂಡುಕೊಂಡರು. ತಾವು ದೋಚಿದ ಮುತ್ತುರತ್ನ ಬೆಳ್ಳಿ ಬಂಗಾರಗಳನ್ನು ಇಲ್ಲಿ ಹಲವು ಕಡೆ ಹೂತಿಡುತ್ತಿದ್ದರು. ಅವುಗಳನ್ನು ಯಾರೂ ದೋಚಲು ಬರದೆ ಇರಲಿ ಎಂಬ ಉದ್ದೇಶದಿಂದ ವಿಷಕಾರಿ ಹಾವುಗಳನ್ನು ತಂದು ಬಿಟ್ಟರು. ಅವುಗಳು ಸಂತಾನೋತ್ಪತ್ತಿ ಮಾಡೀ ಮಾಡೀ ಈಗ ದ್ವೀಪ ತುಂಬಾ ಹಾವುಗಳೇ ತುಂಬಿಕೊಂಡಿವೆ. ಕಡಲ್ಗಳ್ಳರ ಅವಸಾನಾನಂತರ ನಿಧಿಯೂ ರಹಸ್ಯವಾಗಿ ಉಳಿದುಹೋಗಿದೆ. ಇದರಿಂದಾಗಿ ದ್ವೀಪದಲ್ಲಿ ಈಗ ಇನ್ಯಾವ ಬಗೆಯ ಜೀವಿಗಳೂ ಇಲ್ಲ. ಸಣ್ಣಪುಟ್ಟ ಸರೀಸೃಪಗಳು ಈ ಹಾವುಗಳಿಂದಾಗಿ ಅಳಿದೇಹೋಗಿವೆ. ಪಕ್ಷಿಗಳು ಇವೆ. ಆದರೆ ಅವುಗಳನ್ನೂ ಈ ಹಾವುಗಳು ಹೊಂಚು ಹಾಕಿ ಹಿಡಿಯುತ್ತವೆ.
ಶ್ರೀಮಂತರ ಬಂಗಲೆಯಿಂದ ತುಂಬಿತ್ತು ಈ ಹಳ್ಳಿ, 2015ರಲ್ಲಿ ಕಟ್ಟ ಕಡೆಯ ವ್ಯಕ್ತಿ ಸಾವು! ...
ಈ ದ್ವೀಪದ ಬಗ್ಗೆ ಬ್ರೆಜಿಲ್‌ನಲ್ಲಿ ಒಂದು ಕತೆಯೂ ಇದೆ. ಹಿಂದೊಮ್ಮೆ ಬ್ರೆಜಿಲ್‌ನ ರಾಣಿಯೊಬ್ಬಳು ತನ್ನ ರಾಜನನ್ನು ವಂಚಿಸಿ ತನ್ನ ಸೇವಕನ ಜೊತೆಗೆ ಪರಾರಿಯಾದಳು. ಆ ಸೇವಕನಾದರೋ ವಿಷವೈದ್ಯಕೀಯ ಗೊತ್ತಿದ್ದವನು. ಆತ ರಾಣಿಯನ್ನು ಕರೆದುಕೊಂಡು ವೇಷ ಮರೆಸಿ ಒಂದು ಹಡಗಿನಲ್ಲಿ ಪ್ರಯಾಣಿಸಿ, ಈ ದ್ವೀಪದ ಬಳಿ ಬಂದಾಗ ಇಳಿದುಕೊಂಡು ರಾಣಿಯನ್ನೂ ಕರೆದುಕೊಂಡು ದ್ವೀಪಕ್ಕೆ ಹೋದ. ಆ ಕಾಲದಲ್ಲಿ ಅಲ್ಲಿ ಹಾವುಗಳು ಇರಲಿಲ್ಲ. ದ್ವೀಪ ನಿರ್ಜನವಾಗಿತ್ತು. ನಂತರ ಈ ಸೇವಕನೇ, ರಾಜನ ಕಡೆಯವರು ತಮ್ಮನ್ನು ಹುಡುಕಿಕೊಂಡು ಬರದೇ ಇರಲಿ ಎಂದು ವಿಷಕಾರಿ ಹಾವುಗಳನ್ನು ಸಾಕಿಕೊಂಡ. ಈ ಹಾವುಗಳನ್ನು ದ್ವೀಪದಲ್ಲಿ ಅಲ್ಲಲ್ಲಿ ಬಿಟ್ಟ. ನಂತರ ಇವು ಅಪಾರ ಸಂಖ್ಯೆಯಲ್ಲಿ ಬೆಳೆದವು. ಒಂದು ರಾತ್ರಿ ಈ ಹಾವುಗಳೇ ರಾಣಿಯನ್ನೂ ಸೇವಕನನ್ನೂ ಸಾಯಿಸಿದವು.
ಇಲ್ಲಿರುವ ಹಾವುಗಳಲ್ಲಿ ಮುಖ್ಯವಾದದ್ದು ಗೋಲ್ಡನ್ ಲ್ಯಾನ್ಸ್‌ಹೆಡ್ ಎಂಬ ಜಾತಿ, ಇದೊಂದು ಬಗೆಯ ಪರಮ ವಿಷಕಾರಿ ಕೊಳಕುಮಂಡಲ ಜಾತಿಯ ಹಾವು. ಈ ಪುಟ್ಟ ದ್ವೀಪದಲ್ಲಿ ಏನಿಲ್ಲವೆಂದರೂ ಸುಮಾರು ನಾಲ್ಕು ಸಾವಿರ ಈ ಹಾವುಗಳಿರಬಹುದು ಎಂಬ ಅಂದಾಜು. ಇದು ಕಡಿಸಿಕೊಂಡವನು ಒಂದೇ ಗಂಟೆಯಲ್ಲಿ ಸಾಯತ್ತಾನೆ. ೧೧೦ ಎಕರೆ ಏರಿಯಾ ಹೊಂದಿರುವ ಈ ದ್ವೀಪ ಮನುಷ್ಯನಿಗೆ ನಿಷೇಧಿತ.
ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ! ...