ದೇವರ ನಾಡಲ್ಲಿ ಕಣ್ಮನ ಸೆಳೆಯುತ್ತಿದೆ ಪಿಂಕ್ ನದಿ, ನಿಸರ್ಗ ರಮಣೀಯತೆಗೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ
ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳ (Kerala) ತನ್ನ ಅತ್ಯದ್ಭುತ ಪ್ರಾಕೃತಿಕ ಸೌಂದರ್ಯಕ್ಕೆ (Natural Beauty) ಹೆಸರುವಾಸಿ. ಪ್ರತಿನಿತ್ಯ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಸದ್ಯ ಇಲ್ಲಿನ 'ಅವಳ್ ಪಾಂಡಿ' ಎಂಬ ಪ್ರದೇಶದಲ್ಲಿ ಪಿಂಕ್ ನದಿ (Pink River)ಯೊಂದು ಹರಿಯುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಅದೇನ್ ಪಿಂಕ್ ನದಿ. ಇಲ್ಲಿದೆ ಹೆಚ್ಚಿನ ಮಾಹಿತಿ
ಹಚ್ಚ ಹಸಿರಿನ ಭೂಮಿ, ವಯ್ಯಾರದಿಂದ ಬಾಗಿ ಬಳುಕಿರುವ ತೆಂಗಿನ ಮರಗಳು, ಜುಳು ಜುಳು ಎಂದು ನಿನಾದ ಹೊರಡಿಸುತ್ತಾ ಹರಿಯುವ ನದಿಗಳು. ಹೀಗೆ ಕೇರಳ (Kerala) ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ದೇಶಾದ್ಯಂತ ಹೆಸರುವಾಸಿಯಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಪ್ರವಾಸಿಗರು (Tourists) ಕೇರಳಕ್ಕೆ ಭೇಟಿ ನೀಡಿ ಇಲ್ಲಿನ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಐಲ್ಯಾಂಡ್, ವಾಟರ್ ಬೋಟಿಂಗ್, ರೆಸಾರ್ಟ್ ಮೊದಲಾದವುಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಕೇರಳದ ಪ್ರತಿಯೊಂದು ಜಿಲ್ಲೆಯೂ ಅತ್ಯದ್ಬುತ ಪ್ರಾಕೃತಿಕ ಸೌಂದರ್ಯ (Natural Beauty)ಕ್ಕೆ ಹೆಸರುವಾಸಿಯಾಗಿದೆ. ಆದ್ರೆ ಸದ್ಯ ಎಲ್ಲೆಡೆ ದೇವರನಾಡಿನ 'ಅವಳ್ ಪಾಂಡಿ' ಎಂಬ ಸ್ಥಳ ಹೆಚ್ಚು ಫೇಮಸ್ ಆಗ್ತಿದೆ. ಅದಕ್ಕೇನು ಕಾರಣ ? ಅಲ್ಲೇನಿದೆ ? ಇಲ್ಲಿದೆ ಹೆಚ್ಚಿನ ಮಾಹಿತಿ.
ನದಿಯೆಂದರೆ ಸಾಮಾನ್ಯವಾಗಿ ಹೇಗಿರುತ್ತದೆ ಹೇಳಿ. ಸಂಪೂರ್ಣವಾಗಿ ತಿಳಿನೀರಿನಿಂದ ಕೂಡಿರುತ್ತದೆ. ಮಳೆಬಂದಾಗಲ್ಲೆಲ್ಲಾ ಮಾತ್ರ ಮಣ್ಣೆಲ್ಲಾ ಸೇರಿಕೊಂಡು ಕೆಂಪು ಬಣ್ಣದಿಂದ ಹರಿಯುತ್ತಿರುತ್ತದೆ. ಆದ್ರೆ ಕೇರಳದ ಕೋಝಿಕ್ಕೋಡ್‌ನಲ್ಲಿರುವ ನದಿಯೊಂದು ಸಂಪೂರ್ಣವಾಗಿ ಗುಲಾಬಿ ಬಣ್ಣಕ್ಕೆ ತಿರುಗಿದೆ. ಇಲ್ಲಿನ ಅವಳ್ ಪಾಂಡಿ (Avala Pandi)ಯಲ್ಲಿರುವ ನದಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಬೆಂಗಳೂರು-ಉಡುಪಿ ರಸ್ತೆಯ ಜಂಗಲ್ ಡ್ರೈವ್‌ನ ಸುಂದರ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಮುಲ್ಲನ್ ಪಾಯಲ್ ಎಂಬ ಪಿಂಕ್ ಹೂಗಳ ಸೊಬಗು
ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣವಾಗಿರೋದು ಮತ್ತೇನು ಅಲ್ಲ ಪಿಂಕ್ ಬಣ್ಣದ ಹೂಗಳು. ಸ್ಥಳೀಯವಾಗಿ ಇದನ್ನು ಮುಲ್ಲನ್ ಪಾಯಲ್ ಎಂದು ಸಹ ಕರೆಯುತ್ತಾರೆ. ಈ ಸಸ್ಯವು ಕೇರಳದ ಮೂಲವಲ್ಲ ಆದರೆ ದಕ್ಷಿಣ ಅಮೇರಿಕಾದ್ದು. ನದಿಯ ಈ ಅತ್ಯದ್ಭುತ ಸೊಬಗು ನೋಡುಗರನ್ನು ಬೆರಗುಗೊಳಿಸುತ್ತಿದೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಪಿಂಕ್ ಬಣ್ಣಕ್ಕೆ ತಿರುಗಿರುವ ಈ ನದಿಯ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. 'ಪ್ರವಾಸಿಗರು ಪಿಂಕ್ ನದಿಯ ಬಳಿ ಸೇರುತ್ತಿದ್ದಾರೆ. ಈ ಫೋಟೋವನ್ನು ನೋಡುವಾಗ ಅದು ನನ್ನ ಉತ್ಸಾಹ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ. ನಾನು ಇದನ್ನು ನನ್ನ ಹೊಸ ಸ್ಕ್ರೀನ್ ಸೇವರ್ ಮಾಡಲು ಯೋಚಿಸುತ್ತಿದ್ದೇನೆ ಮತ್ತು ಅದಕ್ಕೆ ರಿವರ್ ಆಫ್ ಹೋಪ್ ಎಂದು ಹೆಸರಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಸ್ಥಳೀಯವಾಗಿ 'ಮುಲ್ಲನ್ ಪಾಯಲ್' ಎಂದು ಕರೆಯಲ್ಪಡುವ ಈ ಸಸ್ಯವು ಕೇರಳದ ಸ್ಥಳೀಯವಲ್ಲ ಆದರೆ ದಕ್ಷಿಣ ಅಮೆರಿಕಾದ ಸಸ್ಯವಾಗಿದೆ. ಆಕಸ್ಮಿಕವಾಗಿ ಗಿಡ ನದಿಗೆ ಸೇರಿರಬಹುದು ಅಥವಾ ಸ್ಥಳೀಯರು ಗಿಡವನ್ನು ನದಿಗೆ ಎಸೆದಿರಬಹುದು ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾನವ ಚಟುವಟಿಕೆ ಕಡಿಮೆಯಾದ ಕಾರಣ ಸಸ್ಯವು ನದಿಯಲ್ಲಿ ಅರಳಿದೆ ಎಂದು ಹಲವರು ನಂಬುತ್ತಾರೆ.
ಭಾರತದಲ್ಲೇ ಈ ಸುಂದರ ಪ್ರದೇಶಗಳಿರುವಾಗ ವಿದೇಶಕ್ಕೇಕೆ ಹೋಗ್ತೀರಿ?
ಅವಳ್ ಪಾಂಡಿಯಲ್ಲಿ ಜನಸಾಗರ
ಗುಲಾಬಿ ಹೂವುಗಳು ಒಂದು ನದಿಯನ್ನು ಮಾತ್ರವಲ್ಲದೆ ಪೆರಂಬ್ರಾ ಬಳಿಯ ಕೋಝಿಕ್ಕೋಡ್‌ನ ಅವಲಾ ಪಾಂಡಿ ಗ್ರಾಮದಲ್ಲಿ ಹಲವಾರು ಇತರ ಜಲಮೂಲಗಳನ್ನು ಆವರಿಸಿವೆ. ಸಂಪೂರ್ಣ ಪಿಂಕ್ ಬಣ್ಣಕ್ಕೆ ತಿರುಗಿರುವ ನದಿಯನ್ನು ನೋಡಲು ದೇಶ-ವಿದೇಶದಿಂದ ಜನರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ಅವಳ್ ಪಿಂಡಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಮಖ್ಯೆ ದಿಢೀರ್ ಹೆಚ್ಚಳವಾಗಿರುವುದು ಪ್ರವಾಸೋದ್ಯಮಕ್ಕೂ ಖುಷಿಯನ್ನುಂಟು ಮಾಡಿದೆ.
ಕ್ಯಾಬೊಂಬೆಸಿ ಕುಟುಂಬಕ್ಕೆ ಸೇರಿದ ಫೋರ್ಕ್ಡ್ ಫ್ಯಾನ್‌ವರ್ಟ್ ಹೆಸರಿನ ಗುಲಾಬಿ ಹೂವಿನ ಸಸ್ಯವು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವ್ಯಾಪಕವಾದ ಆಸಕ್ತಿಯನ್ನು ಮೂಡಿಸಿದೆ. ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಹಿರಿಯ ಪ್ರಧಾನ ವಿಜ್ಞಾನಿ ಟಿ.ವಿ.ಸಜೀವ್, ಈ ಸಸ್ಯವು ರಾಜ್ಯದಾದ್ಯಂತ ಇರುವ ಜಲಮೂಲಗಳಲ್ಲಿ ಹರಡುತ್ತದೆ, ಅವುಗಳನ್ನು ಮತ್ತು ಒಳಚರಂಡಿ ಕಾಲುವೆಗಳನ್ನು ಉಸಿರುಗಟ್ಟಿಸುತ್ತದೆ. ಇದು ಬೆಳೆಯಲು ದೊಡ್ಡ ಪ್ರಮಾಣದ ಆಮ್ಲಜನಕದ ಅಗತ್ಯವಿರುತ್ತದೆ ಮತ್ತು ಇದು ಸಿಹಿನೀರಿನ ಜೀವವೈವಿಧ್ಯತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀರಿನ ಗುಣಮಟ್ಟವೂ ಪರಿಣಾಮ ಬೀರುತ್ತದೆ' ಎಂದು ಹೇಳಿದ್ದಾರೆ