Asianet Suvarna News Asianet Suvarna News

ಕುಮಾರ ಪರ್ವತ ತಪ್ಪಲಲ್ಲಿ ಕಾಣಿಸಿದ ಒಂದೂವರೆ ಸಾವಿರಕ್ಕೂ ಹೆಚ್ಚು ಚಾರಣಿಗರು, ಕಂಗಾಲಾದ ಅರಣ್ಯಾಧಿಕಾರಿಗಳು!

ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇರುವ ಕುಮಾರ ಪರ್ವತ ಚೆಕ್‌ಪೋಸ್ಟ್‌ನಲ್ಲಿ ಸಾವಿರಾರು ಚಾರಣಿಗರು ಸರದಿ ಸಾಲಿನಲ್ಲಿ ನಿಂತಿರುವುದನ್ನು ಸೆರೆಹಿಡಿಯುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. 

Kumara Parvatha Trekkers traffic during long weekend urge for Online booking emerges gow
Author
First Published Jan 29, 2024, 3:26 PM IST

ಕಡಬ (ಜ.29): ಲಾಂಗ್‌ ವೀಕೆಂಡ್‌  ಸಮೀಪಿಸುತ್ತಿದ್ದಂತೆ, ದೈನಂದಿನ ಜೀವನದಿಂದ ದೂರ ನಿಂತು ಜನರು ಪ್ರವಾಸಿ ತಾಣಗಳತ್ತ  ತೆರಳಲು ಯೋಚಿಸುತ್ತಾರೆ. ಕೆಲವೊಮ್ಮೆ ಪ್ರಸಿದ್ಧ ತಾಣಗಳಲ್ಲಿ ಜನ ಸಂದಣಿ ತುಂಬಿ ತುಳುಕುತ್ತವೆ. ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಈ ಸನ್ನಿವೇಶವು ವಿವಿಧ ಪ್ರವಾಸಿ ಹಾಟ್‌ಸ್ಪಾಟ್‌ಗಳಲ್ಲಿ ಹೆಚ್ಚು ಸಾಮಾನ್ಯವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಈ ರೀತಿಯ ದೃಶ್ಯಗಳು ಕಾಣಿಸಿಕೊಂಡಿದೆ. 

ಅದೇ ರೀತಿ ಗಣರಾಗಣರಾಜ್ಯೋತ್ಸವದ ದೀರ್ಘ ವಾರಾಂತ್ಯದಲ್ಲಿ, ಜನರು ಜಂಜಾಟದಿಂದ ಮುಕ್ತರಾಗಲು ಪಾದಯಾತ್ರೆ, ಟ್ರೆಕ್ಕಿಂಗ್ ಮತ್ತು ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಇದರ ಭಾಗವಾಗಿ  ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇರುವ ಕುಮಾರ ಪರ್ವತ ಚೆಕ್‌ಪೋಸ್ಟ್‌ನಲ್ಲಿ ಸಾವಿರಾರು ಚಾರಣಿಗರು ಸರದಿ ಸಾಲಿನಲ್ಲಿ ನಿಂತಿರುವುದನ್ನು ಸೆರೆಹಿಡಿಯುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.

ವೀಕೆಂಡ್ ಟ್ರಿಪ್‌ನಿಂದ ಮರಳುತ್ತಿದ್ದ ವೇಳೆ ನಿದ್ದೆಗೆ ಜಾರಿದ ಚಾಲಕ, ಭೀಕರ ಅಪಘಾತದಲ್ಲಿ 6 ಮಂದಿ ಸಾವು!

ಪುಷ್ಪಗಿರಿ ಬೆಟ್ಟಗಳು ಎಂದೂ ಕರೆಯಲ್ಪಡುವ ಕುಮಾರ ಪರ್ವತವು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿದೆ. ಈ ಟ್ರೆಕ್ಕಿಂಗ್ ಸ್ಥಳವು ಅಪಾರ ಜನಪ್ರಿಯತೆಯನ್ನು ಗಳಿಸಿದೆ, ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮಾನ್ಯತೆಯಿಂದ ಉತ್ತೇಜಿಸಲ್ಪಟ್ಟಿದೆ. ಪ್ರವಾಸಿಗರ ಭೇಟಿಯ ಉಲ್ಬಣವು ಒಂದು ನಿರ್ಣಾಯಕ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಹೊಸ ಖ್ಯಾತಿಯು ವರವೋ ಅಥವಾ ಶಾಪವೋ? ಎಂಬ ಪ್ರಶ್ನೆ ಎದ್ದಿದೆ.

ಏಕೆಂದರೆ ಜನವರಿ 26 ರಂದು, ಒಂದೇ ದಿನದಲ್ಲಿ 1,000 ಕ್ಕೂ ಹೆಚ್ಚು ಟ್ರೆಕ್ಕಿಂಗ್ ಉತ್ಸಾಹಿಗಳನ್ನು ಈ ದಾರಿಯಲ್ಲಿ ವೀಕ್ಷಿಸಲಾಯಿತು. ಇದು ಪರಿಸರವಾದಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಪ್ರಸಿದ್ಧ ಚಾರಣ ಸ್ಥಳವು ಈಗ ಹೆಚ್ಚು ಬೇಡಿಕೆಯಿರುವ ಟ್ರೆಕ್ಕಿಂಗ್ ತಾಣಗಳಲ್ಲಿ ಒಂದಾಗಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಅಂದರೆ ಬೆಂಗಳೂರು ಮತ್ತು ಹೊರಗಿನ  ಚಾರಣ ಉತ್ಸಾಹಿಗಳನ್ನು ಆಕರ್ಷಿಸುತ್ತಿದೆ. ಗುಂಪು ಪ್ಯಾಕೇಜ್‌ಗಳ ಲಭ್ಯತೆ ಅದರ ಜನಪ್ರಿಯತೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ.

ಹೊಸಪೇಟೆ: ಹಂಪಿಯಲ್ಲಿ ದೇವರ ದರ್ಶನಕ್ಕೂ ಬಂತು ಡ್ರೆಸ್‌ ಕೋಡ್‌..!

 ವೈರಲ್ ವೀಡಿಯೋದಲ್ಲಿ 12 ಕಿಮೀ ಉದ್ದದ ಚಾರಣವನ್ನು ಪ್ರಾರಂಭಿಸುವ ಮೊದಲು ತಮ್ಮ ಪ್ಲಾಸ್ಟಿಕ್ ವಸ್ತುಗಳ ತಪಾಸಣೆಗಾಗಿ ಕಾಯುತ್ತಿರುವ ಜನರ ಉದ್ದನೆಯ ಸಾಲನ್ನು ತೋರಿಸುತ್ತದೆ. ವೀಡಿಯೊ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಆನ್‌ಲೈನ್ ಬುಕಿಂಗ್ ವ್ಯವಸ್ಥೆಗಾಗಿ ಒತ್ತಾಯ ಮಾಡಿದ್ದಾರೆ. ಜೊತೆಗೆ  ಅನುಮತಿಸಲಾದ ಚಾರಣಿಗರ ಸಂಖ್ಯೆಯ ಮೇಲೆ ದೈನಂದಿನ ಮಿತಿಯನ್ನು ವಿಧಿಸಲು ಸರ್ಕಾರವನ್ನು ಒತ್ತಾಯಿಸಿರ್ಧಧಾಋಏ

ವಿಡಿಯೀ ಬಗ್ಗೆ ಪ್ರತಿಕ್ರಿಯಿಸಿರುವ @nacionprimero, ಎಂಬ ಬಳಕೆದಾರ,  ಪ್ಯಾಕೇಜ್ಡ್ ಟ್ರಿಪ್‌ಗಳ ಉಲ್ಬಣದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಬೆಂಗಳೂರಿನಂತಹ ನಗರಗಳಿಂದ, ಜನದಟ್ಟಣೆಗೆ ಗಣನೀಯವಾಗಿ ಕೊಡುಗೆ ನೀಡುತ್ತಿದ್ದಾರೆ. ಇಂತಹ ಗುಂಪು ಪ್ರವಾಸಗಳನ್ನು ನಿಷೇಧಿಸುವ ಬಗ್ಗೆ ಪರಿಗಣಿಸಿ ಎಂದು  ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮತ್ತೊಬ್ಬ ಬಳಕೆದಾರ, @omieejackson, ಈ ಸುದೀರ್ಘ ವಾರಾಂತ್ಯದಲ್ಲಿ ಕುಮಾರಪರ್ವತ ಚಾರಣವನ್ನು ಆನಂದಿಸಿದೆ, ಆದರೆ ಜನಸಂದಣಿಯಿಂದ ತುಂಬಿ ತುಳುಕಿದೆ. ಪ್ರವೇಶ ಸ್ಥಳದಲ್ಲಿ ಕೇವಲ 6 ಅಧಿಕಾರಿಗಳು ಮಾತ್ರ ಚೆಕ್ ಮಾಡುತ್ತಿರುವುದು ಈ ವಿಳಂಬಕ್ಕೆ ಕಾರಣವಾಯ್ತು. ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಸುಸ್ಥಿರ ಚಾರಣವನ್ನು ಉತ್ತೇಜಿಸಲು ಪೂರ್ವ ಬುಕಿಂಗ್ ವ್ಯವಸ್ಥೆ ಮಾಡುವುದು ಉತ್ತಮ ಎಂದಿದ್ದಾರೆ.

 

ಗಂಭೀರ ಸಲಹೆಗಳು ಮತ್ತು ಕಳವಳಗಳ ನಡುವೆ, ಕೆಲವು ಹಾಸ್ಯಮಯ ಕಾಮೆಂಟ್‌ಗಳು ಕೂಡ ಈ ವಿಡಿಯೋಗೆ ಬಂದಿದೆ. ಒಬ್ಬ ಬಳಕೆದಾರನು ತಮಾಷೆಯಾಗಿ ಸರ್ಕಾರವು ಜನಸಂಖ್ಯೆಯ ಮೇಲೆ ನಿರ್ಬಂಧಗಳನ್ನು ಹೇರಬೇಕು ಅಥವಾ ನಗರದ ಹೊರಗೆ ಉದ್ಯೋಗಗಳನ್ನು ವ್ಯವಸ್ಥೆಗೊಳಿಸಬೇಕು ಎಂದು ಹೇಳಿದ್ದಾರೆ. ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಕಾಲ್ತುಳಿತವನ್ನು ನಿರ್ವಹಿಸಲು ಚಿಂತನಶೀಲ ಕ್ರಮಗಳ ಅಗತ್ಯವನ್ನು 'ಟ್ರೆಕ್ಕರ್ಸ್ ಟ್ರಾಫಿಕ್'ನ ವೈರಲ್ ವೀಡಿಯೊ ಎತ್ತಿ ತೋರಿಸಿದೆ. 
 

Follow Us:
Download App:
  • android
  • ios