Traveling Tips : ಹೋಟೆಲ್‌ನಲ್ಲಿ ತಂಗುವ ಮುನ್ನ ಇದನ್ನು ತಿಳಿದಿರಿ

ಹೋಟೆಲ್ ನಲ್ಲಿ ವಾಸಿಸೋದು ಎಲ್ಲರಿಗೂ ಇಷ್ಟವಾಗೋದಿಲ್ಲ. ಅನಿವಾರ್ಯ ಕಾರಣಕ್ಕೆ ಜನರು ಹೊಟೇಲ್ ವಾಸ ಆಯ್ಕೆ ಮಾಡಿಕೊಳ್ತಾರೆ. ಆದ್ರೆ ಅಲ್ಲಿ ಆಗುವ ಕೆಲ ಯಡವಟ್ಟುಗಳಿಂದ ಮುಂದೆ ತೊಂದರೆ ಅನುಭವಿಸ್ತಾರೆ. ಹೊಟೇಲ್ ರೂಮ್ ನಲ್ಲಿ ಉಳಿಯುವ ವೇಳೆ ಸ್ಮಾರ್ಟ್ ಆಗಿ ಯೋಚಿಸಿದ್ರೆ ಚಿಂತೆಯಿಲ್ಲದೆ ಇರಬಹುದು.
 

Know about hotel safety when you on travelling

ಮನೆ (Home) ಯಷ್ಟು ಸುರಕ್ಷಿತ ಜಾಗ ಮತ್ತ್ಯಾವುದೂ ಇಲ್ಲ. ಆದ್ರೆ ಎಲ್ಲ ಸಂದರ್ಭದಲ್ಲಿ ಮನೆಯಲ್ಲೇ ಇರೋಕೆ ಸಾಧ್ಯವಿಲ್ಲ. ಬೇರೆ ಬೇರೆ ಕೆಲಸಕ್ಕೆ ಅಥವಾ ಪ್ರವಾಸಕ್ಕೆ ಹೋದಾಗ ಹೋಟೆಲ್ ನಲ್ಲಿ ವಾಸಿಸುವುದು ಅನಿವಾರ್ಯವಾಗುತ್ತದೆ. ಅನೇಕರು ಹೋಟೆಲ್ (Hotel ) ನಲ್ಲಿ ತಂಗಲು ಭಯಪಡ್ತಾರೆ. ಅಸುರಕ್ಷಿತ ಭಾವನೆ ಎದುರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕವೇ ನೀವು ಹೊಟೇಲ್ ರೂಮ್ ಬುಕ್ ಮಾಡ್ಬಹುದು. ಆಫ್ಲೈನ್ ನಲ್ಲಿ ಇರಲಿ ಇಲ್ಲ ಆನ್ಲೈನ್ (Online) ನಲ್ಲಿ ಇರಲಿ ಹೊಟೇಲ್ ಬಗ್ಗೆ ಸರಿಯಾದ ಮಾಹಿತಿ ಸಿಗೋದಿಲ್ಲ. ಆಫ್ ಲೈನ್ ನಲ್ಲಿ ರೂಮ್ ಬುಕ್ ಮಾಡಿದಾಗ ನಾವು ಹೋಟೆಲ್ ಹೊರಗಿನ ಪರಿಸರವನ್ನು ನೋಡಬಹುದು. ಆನ್ಲೈನ್ ನಲ್ಲಿ ಇದೂ ಸಾಧ್ಯವಿಲ್ಲ. ಆದ್ರೆ ಕೆಲ ಟಿಪ್ಸ್ ಪಾಲನೆ ಮಾಡಿದ್ರೆ ಹೋಟೆಲ್ ನಲ್ಲೂ ನೀವು ಆರಾಮವಾಗಿರಬಹುದು. ಇಂದು ನಾವು ಹೋಟೆಲ್ ನಲ್ಲಿ ಆರಾಮವಾಗಿರಲು ಏನೆಲ್ಲ ಕ್ರಮಕೈಗೊಳ್ಳಬೇಕು ಎಂಬುದನ್ನು ಹೇಳ್ತೇವೆ.

ನೈರ್ಮಲ್ಯ (Cleanliness) ಕಾಪಾಡಿಕೊಳ್ಳಿ : ಅದು ಎಷ್ಟೇ ದೊಡ್ಡ ಹೋಟೆಲ್ ಆಗಿದ್ದರೂ ಮನೆಯಷ್ಟು ನೈರ್ಮಲ್ಯ ಕಾಪಾಡಲು ಸಾಧ್ಯವಿಲ್ಲ. ಹೋಟೆಲ್ ರೂಮಿನಲ್ಲಿರುವ ಎಲ್ಲ ವಸ್ತುಗಳನ್ನು ಪ್ರತಿ ದಿನ ಸ್ವಚ್ಛಗೊಳಿಸುವುದಿಲ್ಲ. ಹಾಗಾಗಿ ಹೋಟೆಲ್ ಗೆ ಹೋದ ಸಂದರ್ಭದಲ್ಲಿ ನೀವು ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೂಮ್ ನಲ್ಲಿರುವ ಜಾರ್ ನಿಂದ ನೀರು ಕುಡಿಯಬಾರದು. ಮಿನರಲ್ ವಾಟರ್ ಆರ್ಡರ್ ಮಾಡೋದನ್ನು ಮರೆಯಬಾರದು. ಹಾಗೆಯೇ ಅಲ್ಲಿರುವ ಗ್ಲಾಸ್ ನಲ್ಲಿ ನೀರು ಕುಡಿಯುತ್ತೀರಿ ಎಂದಾದ್ರೆ ಮೊದಲು ಅದನ್ನು ಸೋಪ್ ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ಸಾಧ್ಯವಾದ್ರೆ ನಿಮ್ಮ ಮನೆಯಿಂದಲೇ ಬೆಡ್ ಶೀಟ್ ತೆಗೆದುಕೊಂಡು ಹೋಗ್ಬೇಕು. ಅಲ್ಲಿ ನೀಡುವ ಟವೆಲ್ ಬಳಸುವ ಬದಲು ಮನೆಯಿಂದಲೇ ಟವೆಲ್ ತೆಗೆದುಕೊಂಡು ಹೋಗಲು ಮರೆಯಬೇಡಿ.

ಮನೆಗೆ ಹೋಗೋದಕ್ಕಿಂತ ಗೋವಾ ವಿಮಾನವೇ ಚೀಪರ್ ! ಊಬರ್ ಬಿಲ್ ನೋಡಿದ ವ್ಯಕ್ತಿ ಶಾಕ್

ಮಾಹಿತಿ (Information) ಹಂಚಿಕೊಳ್ಳಬೇಡಿ : ಹೋಟೆಲ್ ನಲ್ಲಿ ತಂಗುವ ಸಮಯದಲ್ಲಿ, ನಿಮ್ಮ ಹೋಟೆಲ್ ವಿವರಗಳನ್ನು ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ. ಅಲ್ಲದೆ, ರಿಸೆಪ್ಷನ್‌ನಲ್ಲಿ ಕೀ ತೆಗೆದುಕೊಳ್ಳುವಾಗ ನಿಮ್ಮ ಕೊಠಡಿಯ ಸಂಖ್ಯೆಯನ್ನು ಯಾರಿಗೂ ತಿಳಿಸಬೇಡಿ. ಮತ್ತೊಂದೆಡೆ, ನಿಮ್ಮ ಸುತ್ತಲೂ ನಿಂತಿರುವ ಯಾವುದೇ ಅಪರಿಚಿತ ವ್ಯಕ್ತಿಗೆ ನಿಮ್ಮ ಕೊಠಡಿಯ ಸಂಖ್ಯೆಯ ಬಗ್ಗೆ ತಿಳಿದಿದ್ದರೆ, ತಕ್ಷಣ ನಿಮ್ಮ ಕೊಠಡಿಯನ್ನು ಬದಲಾಯಿಸಿ ಮತ್ತು ಎಚ್ಚರದಿಂದಿರಿ.

ಜಾಗರೂಕರಾಗಿರಿ : ಹೋಟೆಲ್‌ನಲ್ಲಿರುವ ಕೆಲ ಸ್ಥಳಗಳು ಅಪಾಯಕಾರಿ ಆಗಿರಬಹುದು. ಆದ್ದರಿಂದ, ಹೋಟೆಲ್ ಛಾವಣಿ ಮತ್ತು ಬಾಲ್ಕನಿ ತುದಿಯಲ್ಲಿ ನಿಲ್ಲಬೇಡಿ. ಪ್ರತಿ ಕ್ಷಣ ನಿಮ್ಮ ಸುರಕ್ಷತೆ ಬಗ್ಗೆ ಗಮನವಿರಲಿ. ಕೋಣೆಯ ಒಳಗೆ ಏನು ನಡೆಯುತ್ತಿದೆ ಎಂಬುದು ಹೊರಗಿನವರಿಗೆ ತಿಳಿಯಬಾರದು. ಹಾಗಾಗಿ ಪರದೆಯನ್ನು ಹಾಕಿಕೊಳ್ಳುವುದು ಹಾಗೂ ಕೋಣೆ ಬಾಗಿಲನ್ನು ಸದಾ ಮುಚ್ಚಿರುವುದು ಒಳ್ಳೆಯದು.   

ಹೋಟೆಲ್ ಬಗ್ಗೆ ಸರಿಯಾದ ಮಾಹಿತಿ ಇರಲಿ : ಆನ್ಲೈನ್ ನಲ್ಲಿ (Online) ಹೋಟೆಲ್ ಬುಕ್ ಮಾಡ್ತಿರಲಿ ಇಲ್ಲ ಆಫ್ ಲೈನ್ ನಲ್ಲಿ ಬುಕ್ ಮಾಡ್ತಿರಲಿ ಮೊದಲು ಹೋಟೆಲ್ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ.  ಹೋಟೆಲ್ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಿದ ನಂತರವೇ ಕೊಠಡಿಯನ್ನು ಬುಕ್ ಮಾಡಿ. ಆಫ್‌ಲೈನ್‌ನಲ್ಲಿ ಬುಕ್ ಮಾಡುವ ಮೊದಲು ಫೋನ್‌ನಲ್ಲಿ ಹೋಟೆಲ್ ವಿಮರ್ಶೆಯನ್ನು ಪರಿಶೀಲಿಸಲು ಮರೆಯಬೇಡಿ.

ಪ್ರವಾಸಿಗರನ್ನು ಸೆಳೆಯುವ ಚಾರ್ಮಾಡಿಯ ಮಿನಿ ಜಲಪಾತಗಳು

ಸುರಕ್ಷತೆ (Safety) ಬಗ್ಗೆ ಕಾಳಜಿ : ಹೋಟೆಲ್ ನಲ್ಲಿ ಕ್ಯಾಮರಾ ಅಳವಡಿಸಿರುವ ಅನೇಕ ಸುದ್ದಿಗಳು ಬರ್ತಿರುತ್ತವೆ. ಹಾಗಾಗಿ ನಿಮ್ಮ ಕೊಠಡಿಯಲ್ಲೂ ಕ್ಯಾಮರಾ ಅಳವಡಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಕೋಣೆಯ ಕನ್ನಡಿಯನ್ನು ಪರೀಕ್ಷಿಸಲು ಮರೆಯಬೇಡಿ. ನಿಮ್ಮ ಕೋಣೆಯಲ್ಲಿ ಎರಡು ಬದಿಯ ಕನ್ನಡಿ ಇದ್ದರೆ, ಅದು ಪಕ್ಕದ ಕೋಣೆಗೆ ಕಾಣಿಸುವಂತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಬಾಗಿಲಿನ ರಂಧ್ರವನ್ನು ಚೆನ್ನಾಗಿ ಪರೀಕ್ಷಿಸಿ ಮತ್ತು ಹಾಸಿಗೆಯ ಬಳಿ ಇರುವಾಗ ಬಾಗಿಲಿನ ರಂಧ್ರವನ್ನು ಕೆಲವು ಕಾಗದದಿಂದ ಮುಚ್ಚಿ. ಹಾಗೆಯೇ ಬಾತ್ ರೂಮಿನಲ್ಲಿ ಕನ್ನಡಿಯಿದ್ದರೆ ಅದನ್ನೂ ಪರೀಕ್ಷಿಸಿ.  
 

Latest Videos
Follow Us:
Download App:
  • android
  • ios