Asianet Suvarna News Asianet Suvarna News

ಟಾಯ್ಲೆಟ್ ಹುಡುಕಲು ಮೊಬೈಲ್ ಆ್ಯಪ್‌: ಟೂರಿಸಂ ಐಡಿಯಾ ಟಾಪ್!

ಪಬ್ಲಿಕ್ ಟಾಯ್ಲೆಟ್ಸ್ ಹುಡುಕಲು ಪಡಬೇಕಿಲ್ಲ ಚಿಂತೆ| ಪ್ರವಾಸೋದ್ಯಮ ಇಲಾಖೆಯಿಂದ ಇ-ಟಾಯ್ಲೆಟ್ಸ್ ಮಾಹಿತಿಯುಳ್ಳ ಆ್ಯಪ್‌| ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ವಿನೂತನ ಹೆಜ್ಜೆ| ಹತ್ತಿರದ ಇ-ಟಾಯ್ಲೆಟ್ಸ್ ಗಳ ಕುರಿತು ಸಂಪೂರ್ಣ ಮಾಹಿತಿ| ರಾಜ್ಯದ ಒಟ್ಟು 750 ಶೌಚಾಲಯಗಳ ಕುರಿತು ಸ್ಪಷ್ಟ ಮಾಹಿತಿ|

Kerala Tourism Department Launches Mobile App To Find Public Toilet
Author
Bengaluru, First Published Jul 2, 2019, 4:12 PM IST
  • Facebook
  • Twitter
  • Whatsapp

ತಿರುವನಂತಪುರಂ(ಜು.02): ಸಾರ್ವಜನಿಕ ಶೌಚಾಲಯ ಹುಡುಕುವುದು ಅದೆಷ್ಟು ಕಷ್ಟ ಎಂದು ಆ ಸಂಕಷ್ಟ ಎದುರಿಸಿದವರಿಗೇ ಗೊತ್ತು. ಬೇಕೆಂದಾಗ ಸಿಗದ ಈ ಸಾರ್ವಜನಿಕ ಶೌಚಾಲಯಗಳಿಗೆ ಕೆಲವೊಮ್ಮೆ ನಾವು ನೀವೆಲ್ಲಾ ಹಿಡಿ ಶಾಪ ಹಾಕುವುದುಂಟು.

ಆದರೆ ಪಕ್ಕದ ಕೇರಳದಲ್ಲಿ ಮಾತ್ರ ಪಬ್ಲಿಕ್ ಟಾಯ್ಲೇಟ್ಸ್ ಹುಡುಕುವುದು ಕಷ್ಟವಲ್ಲ. ಕಾರಣ ಸಾರ್ವಜನಿಕ ಶೌಚಾಲಯಗಳ ಕುರಿತು ಮಾಹಿತಿ ನೀಡುವ ಆ್ಯಪ್‌'ವೊಂದನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಪಡಿಸಿದೆ.

ರಾಜ್ಯದಲ್ಲೆಡೆ ಇರುವ ಸಾರ್ವಜನಿಕ ಇ-ಟಾಯ್ಲೆಟ್ಸ್ ಕುರಿತು ಈ ಆ್ಯಪ್‌ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ನಿಮ್ಮ ಹತ್ತಿರ ಇರುವ ಇ-ಟಾಯ್ಲೆಟ್ ಕುರಿತು ಈ ಆ್ಯಪ್‌ ಮಾಹಿತಿ ನೀಡುತ್ತದೆ. ಜೊತೆಗೆ ಆ ನಿರ್ದಿಷ್ಟ ಶೌಚಾಲಯ ಭಾರತೀಯ ಶೈಲಿಯದ್ದೋ ಅಥವಾ ಪೌರಾತ್ಯ ಶೈಲಿಯಲ್ಲದ್ದೋ ಎಂಬುದರ ಕುರಿತೂ ಈ ಆ್ಯಪ್‌ ಮಾಹಿತಿ ನೀಡುತ್ತದೆ.

ಒಟ್ಟು 750 ಸಾರ್ವಜನಿಕ ಶೌಚಾಲಯಗಳ ಕುರಿತು ಈ ಆ್ಯಪ್‌ ಮಾಹಿತಿ ಹೊಂದಿದ್ದು, ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಇದು ತುಂಬ ಅನುಕೂಲವಾಗಲಿದೆ ಎಂದು ಇಲಾಖೆ ತಿಳಿಸಿದೆ.

Follow Us:
Download App:
  • android
  • ios