Asianet Suvarna News Asianet Suvarna News

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮ ಪ್ರವಾಸಿಗರಿಗೆ ಮುಕ್ತ

ತಾತ್ಕಾಲಿಕ ಪರ್ಯಾಯ ಸೇತುವೆ ಮೂಲಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ, ಮರಳಿನ ಮೂಟೆ, ಸಿಮೆಂಟ್ ಪೈಪ್ ಮರಗಳನ್ನು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ 

Kaveri Nisargadhama Reopened in Kodagu grg
Author
First Published Nov 27, 2022, 12:59 PM IST

ಕೊಡಗು(ನ.27):  ಪ್ರಸಿದ್ಧ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮ ಪುನರ್ ಆರಂಭಗೊಂಡಿದೆ. ಹೌದು,(ಭಾನುವಾರ) ಇಂದಿನಿಂದ ಕಾವೇರಿ ನಿಸರ್ಗಧಾಮ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. 

ತಾತ್ಕಾಲಿಕ ಪರ್ಯಾಯ ಸೇತುವೆ ಮೂಲಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮರಳಿನ ಮೂಟೆ,  ಸಿಮೆಂಟ್ ಪೈಪ್ ಮರಗಳನ್ನು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. 5 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುಗಿದ್ದು, ಸೇತುವೆಯನ್ನ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದ್ದಾರೆ. 

ಚುಮುಚುಮು ಚಳಿಯಲ್ಲಿ ಹನಿಮೂನ್ ಎಂಜಾಯ್ ಮಾಡಲು ಈ ತಾಣಗಳು ಬೆಸ್ಟ್

ನಿಸರ್ಗಧಾಮದ ತೂಗು ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯಕ್ಕಾಗಿ ಪ್ರವಾಸಿ ತಾಣ ಬಂದ್ ಮಾಡಲಾಗಿತ್ತು. ತೂಗು‌ ಸೇತುವೆ ದುರಸ್ತಿಗೆ ಹೆಚ್ಚು ಸಮಯ‌ ಹಿಡಿಯುವ ಹಿನ್ನೆಲೆಯಲ್ಲಿ ಇದೀಗ ಪರ್ಯಾಯವಾಗಿ  ತಾತ್ಕಾಲಿಕ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ. 2800 ಮರಳಿನ ಮೂಟೆ, 9 ಸಿಮೆಂಟ್ ಪೈಪ್ ಹಾಗೂ ಮರದ ಹಲಗೆಯಿಂದ ಸೇತುವೆಯನ್ನ ನಿರ್ಮಿಸಲಾಗಿದೆ.

Follow Us:
Download App:
  • android
  • ios