ತಿರುವನಂತಪುರಂ(ಜೂ.14): ಕನ್ನಡ ಭಾಷೆ ಸಪ್ತ ಸಾಗರಗಳನ್ನು ದಾಟಿ ಶತಮಾನಗಳೇ ಉರುಳಿವೆ. ವಿಶ್ವದ ಯಾವುದೇ ಮೂಲೆಯಲ್ಲೂ ಇಂದು ಕನ್ನಡದ ಕಲರವ ಕೇಳಿ ಬರುತ್ತದೆ.

ಅದರಂತೆ ಪಕ್ಕದ ಕೇರಳದಲ್ಲೂ ಕನ್ನಡ ಭಾಷೆಯ ಕಲರವ ಕೇಳಿ ಬರುತ್ತಿದ್ದು, ಕನ್ನಡ ಭಾಷೆಯ ಮೇಲೆ ಅಲ್ಲಿನ ಸರ್ಕಾರ ಮಾರು ಹೋದಂತಿದೆ. ಅರೆ! ಕೇರಳದಲ್ಲೇಕೆ ಕನ್ನಡ ಅಂತೀರಾ?. ಕೇರಳದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಫೇಸ್'ಬುಕ್'ನಲ್ಲಿ ಕನ್ನಡ ಭಾಷೆಯದ್ದೇ ಪಾರುಪತ್ಯ ಕಂಡು ಬರುತ್ತಿದೆ.

ಕೇರಳದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಫೇಸ್'ಬುಕ್'ನಲ್ಲಿ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳ ಹೆಸರುಗಳನ್ನು ಕನ್ನಡದಲ್ಲಿ ಬರೆಯಲಾಗಿದೆ.

ಅತಿರಪಲ್ಲಿ ಫಾಲ್ಸ್, ವರ್ಕಳಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಹೆಸರುಗಳು ಕನ್ನಡದಲ್ಲಿದ್ದು, ಇದಕ್ಕೆ ದೇಶಾದ್ಯಂತ ಕನ್ನಡಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮನ್ನಾರ್ ಮತ್ತು ಇಡುಕಿ ಪ್ರವಾಸಿ ತಾಣಗಳ ಕುರಿತಾದ ಕನ್ನಡ ವಿವರಣೆ ಇದುವರೆಗೂ ಸುಮಾರು 44 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿರುವುದು ವಿಶೇಷ.