Interesting Facts: ಈ ರನ್ ವೇಯಲ್ಲಿ ಎಚ್ಚರ ತಪ್ಪಿದ್ರೆ ಜೀವ ಹೋದಂತೆ
ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಆಗುವ ವೇಳೆ ಭಯ ಸಾಮಾನ್ಯ. ಅದ್ರಲ್ಲೂ ಅಪಾಯಕಾರಿ ವಿಮಾನ ನಿಲ್ದಾಣದಲ್ಲಿ ಉಸಿರು ಬಿಗಿಹಿಡಿದು ಕುಳಿತ್ಕೊಳ್ಬೇಕು. ವಿಶ್ವದ ಅತ್ಯಂತ ಚಿಕ್ಕ ವಿಮಾನ ನಿಲ್ದಾಣದ ರನ್ ವೇ ಕೂಡ ಖತರ್ನಾಕ್ ಆಗಿದೆ.
ಪ್ರಪಂಚದಾದ್ಯಂತ ಎಷ್ಟು ವಿಮಾನ ನಿಲ್ದಾಣಗಳಿವೆ ಅಂದ್ರೆ ಥಟ್ ಅಂತಾ ಹೇಳೋದು ಕಷ್ಟ. ವಿಶ್ವದಲ್ಲಿ 41,700ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿವೆ. ಯುನೈಡೆಟ್ ಸ್ಟೇಟ್ ಒಂದರಲ್ಲೇ 13000 ವಿಮಾನ ನಿಲ್ದಾಣಗಳಿವೆ. ಕಿಂಗ್ ಫಹದ್ ಇಂಟರ್ನ್ಯಾಷನಲ್ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಅದು 776 km2 ವಿಸ್ತೀರ್ಣವನ್ನು ಹೊಂದಿದೆ. ಚೀನಾದ ಬೀಜಿಂಗ್ ಕ್ಯಾಪಿಟಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎರಡನೇ ಸ್ಥಾನದಲ್ಲಿದ್ದು ಅದು 46.6 km2 ವಿಸ್ತೀರ್ಣ ಹೊಂದಿದೆ.
ವಿಮಾನ (Plane) ಗಳು ನಮ್ಮ ಪ್ರಯಾಣದ ಅವಧಿಯನ್ನು ಬಹಳ ಕಡಿಮೆ ಮಾಡುತ್ತವೆ. ಆರಾಮದಾಯಕ ಹಾಗೂ ಸಮಯ ಉಳಿಸಬಲ್ಲ ಪ್ರಯಾಣವೆಂದ್ರೆ ಅದು ವಿಮಾನ ಪ್ರಯಾಣವಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಕ್ಕೆ ಹೆಚ್ಚು ಬೇಡಿಕೆಯಿದೆ. ಇದೇ ಕಾರಣಕ್ಕೆ ಅನೇಕ ವಿಮಾನ ನಿಲ್ದಾಣಗಳ ವಿಸ್ತೀರ್ಣ ಹೆಚ್ಚಾಗಿದೆ. ವಿಮಾನಗಳ ಹಾರಾಟ ಸಂಖ್ಯೆ ಕೂಡ ಏರಿಕೆಯಾಗಿದೆ. ವಿಮಾನ ನಿಲ್ದಾಣದಲ್ಲಿ ರನ್ ವೇ (Runway) ಮುಖ್ಯ ಪಾತ್ರವನ್ನು ವಹಿಸುತ್ತದೆ. ಟೇಕ್ ಅಪ್ ಹಾಗೂ ಲ್ಯಾಂಡಿಂಗ್ ವೇಳೆ ರನ್ ವೇ ಉದ್ದವಿದ್ದಷ್ಟು ಅನುಕೂಲ ಹೆಚ್ಚು. ಆದ್ರೆ ವಿಶ್ವದಲ್ಲಿ ಅತ್ಯಂತ ಸಣ್ಣ ರನ್ ವೇ ಹೊಂದಿರುವ ವಿಮಾನ ನಿಲ್ದಾಣವಿದ್ದು, ನಾವಿಂದು ಚಿಕ್ಕ ವಿಮಾನ ನಿಲ್ದಾಣದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!
ಅತಿ ಚಿಕ್ಕ ವಿಮಾನ ನಿಲ್ದಾಣ ಎಲ್ಲಿದೆ? : ವಿಶ್ವದ ಅತ್ಯಂತ ಚಿಕ್ಕ ವಿಮಾನ ನಿಲ್ದಾಣ ಕೆರಿಬಿಯನ್ ದ್ವೀಪವಾದ ಸಬಾಹ್ ನಲ್ಲಿದೆ. ಅದರ ಹೆಸರು ಜುವಾಂಚೊ ಯರುಸ್ಕಿನ್ (Juancho Yaroslavl) ವಿಮಾನ ನಿಲ್ದಾಣ. ಅದು ಅತ್ಯಂತ ಚಿಕ್ಕ ರನ್ ವೇ ಹೊಂದಿರುವ ವಾಣಿಜ್ಯ ವಿಮಾನ ನಿಲ್ದಾಣವಾಗಿದೆ. ಇದು ಕೇವಲ 1,312 ಅಡಿ (400 ಮೀ) ಉದ್ದವಿದೆ. ರನ್ ವೇ ಒಂದು ಕಡೆ ಸಮುದ್ರವಿದೆ. ರನ್ ವೇ ನಂತ್ರ ವಿಮಾನ ಸಮುದ್ರದ ಮೇಲೆ ಹಾರಬೇಕು. ವಿಂಡೋ ಏರ್ ವಿಮಾನ, ಈ ವಿಮಾನ ನಿಲ್ದಾಣಕ್ಕೆ ಸೇವೆ ಸಲ್ಲಿಸುತ್ತಿರುವ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ. ಹತ್ತಿರದ ಸೇಂಟ್ ಮಾರ್ಟಿನ್ ಮತ್ತು ಸೇಂಟ್ ಯುಸ್ಟಾಟಿಯಸ್ ವಿಮಾನ ನಿಲ್ದಾಣಕ್ಕೆ ಇಲ್ಲಿಂದ ವಿಮಾನ ಲಭ್ಯವಿದೆ. ದಿನಕ್ಕೆ ಎರಡು ಬಾರಿ ಸೇಂಟ್ ಮಾರ್ಟಿನ್ ಮತ್ತು ಸೇಂಟ್ ಯುಸ್ಟಾಟಿಯಸ್ ಕ್ಕೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಸೇಂಟ್ ಮಾರ್ಟಿನ್ ಮತ್ತು ಸೇಂಟ್ ಯುಸ್ಟಾಟಿಯಸ್ ಗೆ, ಜುವಾಂಚೊ ಯರುಸ್ಕಿನ್ ವಿಮಾನ ನಿಲ್ದಾಣದಿಂದ 15 ನಿಮಿಷದಲ್ಲಿ ತಲುಪಬಹುದಾಗಿದೆ.
ವಿಮಾನ ನಿಲ್ದಾಣದ ಇತಿಹಾಸ : ಈ ವಿಮಾನ ನಿಲ್ದಾಣ ತುಂಬಾ ಹಳೆಯದು. ಸೆಪ್ಟೆಂಬರ್ 18, 1963 ರಂದು ವಿಮಾನ ನಿಲ್ದಾಣದ ಕೆಲಸ ಪೂರ್ಣಗೊಂಡಿತ್ತು. ವಾರಕ್ಕೆ ಒಂದು ವಿಮಾನ ಮಾತ್ರ ಇಲ್ಲಿಂದ ಪ್ರಯಾಣ ಬೆಳೆಸುತ್ತಿದ್ದ ಕಾಲವಿತ್ತು. ಆದ್ರೀಗ ಜನರ ಬೇಡಿಕೆಗೆ ತಕ್ಕಂತೆ ವಿಮಾನದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ದಿನಕ್ಕೆ ನಾಲ್ಕು ಚಾರ್ಟರ್ ವಿಮಾನಗಳು ಇಲ್ಲಿಗೆ ಬಂದು ಹೋಗುತ್ತವೆ. ಜೆಡ್ ವಿಮಾನಕ್ಕೆ ಇಲ್ಲಿ ಪ್ರವೇಶವಿಲ್ಲ.
ನೋಡ ಬನ್ನಿ, ಹಚ್ಚ ಹಸಿರ ಪರಿಸರ, ಮನಸಿಗೆ ಮುದ ನೀಡುವ ಗಿರಿಧಾಮ
ಎಚ್ಚರಿಕೆ ತಪ್ಪಿದ್ರೆ ಅಪಾಯ : ವಿಮಾನ ನಿಲ್ದಾಣದ ರನ್ ವೇ ತುಂಬಾ ಚಿಕ್ಕದಾಗಿದೆ. ಹಾಗಾಗಿ ಎಚ್ಚರಿಕೆಯಿಂದ ವಿಮಾನ ಚಲಾಯಿಸಬೇಕು. ಪರಿಣಿತ ಚಾಲಕರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತದೆ. ಸ್ವಲ್ಪ ಯಡವಟ್ಟಾದ್ರೂ ವಿಮಾನ ಬಂಡೆಗೆ ಡಿಕ್ಕಿ ಹೊಡೆಯುವ ಇಲ್ಲವೆ ಸಮುದ್ರಕ್ಕೆ ಬೀಳುವ ಅಪಾಯವಿರುತ್ತದೆ. ರನ್ ವೇ ತುಂಬಾ ಚಿಕ್ಕದಾಗಿರುವ ಕಾರಣಕ್ಕೆ ಜೆಟ್ ವಿಮಾನಕ್ಕೆ ಇಲ್ಲಿ ಅವಕಾಶವಿಲ್ಲ.
ಈ ವಿಮಾನ ನಿಲ್ದಾಣವೂ ಚಿಕ್ಕದು : ಬರೀ ಜುವಾಂಚೊ ಯರುಸ್ಕಿನ್ ವಿಮಾನ ನಿಲ್ದಾಣ ಮಾತ್ರವಲ್ಲ ಮೊಶೋಶು I ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ಒಂದು ಚಿಕ್ಕ ವಿಮಾನ ನಿಲ್ದಾಣವಾಗಿದೆ. ರಾಷ್ಟ್ರೀಯ ವಿಮಾನದ ಜೊತೆ ಅಂತರಾಷ್ಟ್ರೀಯ ವಿಮಾನ ಹಾರಾಟ ಇಲ್ಲಿ ನಡೆಯುತ್ತದೆ.