ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಿಸಲು, ದಕ್ಷಿಣ ರೈಲ್ವೆಯು ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರಿನ ಕಂಟೋನ್ಮೆಂಟ್, ಎಸ್‌ಎಂವಿಟಿ, ಮತ್ತು ಯಶವಂತಪುರ ನಿಲ್ದಾಣಗಳಿಂದ ತಿರುವನಂತಪುರಂಗೆ ಈ ರೈಲುಗಳು ಸಂಚರಿಸಲಿದ್ದು, ಅವುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರ ಇಲ್ಲಿದೆ.
ತಿರುವನಂತಪುರಂ: ಓಣಂ ಹಬ್ಬದ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ದಕ್ಷಿಣ ರೈಲ್ವೆ, ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರು ಕಂಟೋನ್ಮೆಂಟ್, ಎಸ್‌ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಿಂದ ತಿರುವನಂತಪುರಂ ನಾರ್ತ್ ರೈಲ್ವೆ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಾಪಸ್ ಬರಲು ಈ ಹೊಸ ಎಕ್ಸ್‌ಪ್ರೆಸ್ ವಿಶೇಷ ರೈಲುಗಳು ಸಂಚರಿಸಲಿವೆ. ಈ ಮೂರೂ ರೈಲುಗಳು ಕೊಟ್ಟಾಯಂ ಮಾರ್ಗವಾಗಿ ಚಲಿಸುತ್ತವೆ. ರೈಲುಗಳ ವೇಳಾಪಟ್ಟಿ ಮತ್ತು ಇತರ ವಿವರಗಳು ಹೀಗಿವೆ.
1. ಬೆಂಗಳೂರು ಕಂಟೋನ್ಮೆಂಟ್ - ತಿರುವನಂತಪುರಂ ನಾರ್ತ್ (06579/06580)
ಈ ರೈಲು ಆಗಸ್ಟ್ 28ರಂದು ಸಂಜೆ 4:40ಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಹೊರಟು, ಮರುದಿನ ಅಂದರೆ ಆಗಸ್ಟ್ 29ರಂದು ಬೆಳಗ್ಗೆ 10:30ಕ್ಕೆ ತಿರುವನಂತಪುರಂ ನಾರ್ತ್ ನಿಲ್ದಾಣವನ್ನು ತಲುಪಲಿದೆ. ಮರಳಿ, ಆಗಸ್ಟ್ 29ರಂದು ಮಧ್ಯಾಹ್ನ 12:40ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಡುವ ರೈಲು, ಆಗಸ್ಟ್ 30ರಂದು ಮುಂಜಾನೆ 5:15ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ಬಂದು ಸೇರಲಿದೆ. ಈ ರೈಲಿಗೆ ಕೆ.ಆರ್. ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕರುನಾಗಪಲ್ಲಿ, ಸಾಸ್ತಾಂಕೋಟ್ಟ, ಕೊಲ್ಲಂ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಆಗಸ್ಟ್ 21ರ ಬೆಳಗ್ಗೆ 8 ಗಂಟೆಯಿಂದಲೇ ಈ ರೈಲಿನ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಿದೆ.
2. ಎಸ್‌ಎಂವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ (06575/06576)
ಈ ರೈಲು ಎಸ್‌ಎಂವಿಟಿ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಆಗಸ್ಟ್ 22ರಂದು ಸಂಜೆ 4:40ಕ್ಕೆ ಹೊರಟು, ಆಗಸ್ಟ್ 23ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರಂ ನಾರ್ತ್ ನಿಲ್ದಾಣವನ್ನು ತಲುಪಲಿದೆ. ಮರಳಿ, ಆಗಸ್ಟ್ 23ರಂದು ಮಧ್ಯಾಹ್ನ 12:40ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಡುವ ರೈಲು, ಆಗಸ್ಟ್ 24ರಂದು ಮುಂಜಾನೆ 5:15ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ಬಂದು ಸೇರಲಿದೆ. ಈ ರೈಲಿಗೆ ಬೆಂಗಳೂರು ಕಂಟೋನ್ಮೆಂಟ್, ಕೆ.ಆರ್. ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ, ಕರುನಾಗಪಲ್ಲಿ, ಸಾಸ್ತಾಂಕೋಟ್ಟ, ಕೊಲ್ಲಂ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಆಗಸ್ಟ್ 21ರ ಬೆಳಗ್ಗೆ 8 ಗಂಟೆಯಿಂದಲೇ ಈ ರೈಲಿನ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಿದೆ.
3. ಯಶವಂತಪುರ - ತಿರುವನಂತಪುರಂ ನಾರ್ತ್ (06573/06574)
ಯಶವಂತಪುರ ರೈಲ್ವೆ ನಿಲ್ದಾಣದಿಂದ ಆಗಸ್ಟ್ 21ರಂದು ರಾತ್ರಿ 8:45ಕ್ಕೆ ಹೊರಡುವ ಈ ರೈಲು, ಆಗಸ್ಟ್ 22ರಂದು ಮಧ್ಯಾಹ್ನ 1:30ಕ್ಕೆ ತಿರುವನಂತಪುರಂ ನಾರ್ತ್ ನಿಲ್ದಾಣವನ್ನು ತಲುಪಲಿದೆ. ಮರಳಿ, ಆಗಸ್ಟ್ 22ರಂದು ಮಧ್ಯಾಹ್ನ 3:15ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಟು, ಆಗಸ್ಟ್ 23ರಂದು ಬೆಳಗ್ಗೆ 9:45ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ. ಈ ರೈಲಿಗೆ ಹೊಸೂರು, ಧರ್ಮಪುರಿ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ, ಕರುನಾಗಪಲ್ಲಿ, ಸಾಸ್ತಾಂಕೋಟ್ಟ, ಕೊಲ್ಲಂ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.


