ಹಾವುಗಳು ಆತ್ಮರಕ್ಷಣೆ ಹಾಗೂ ಬೇಟೆಗಾಗಿ ವಿಷ ಬಳಸುತ್ತವೆ. ಭಾರತದಲ್ಲಿ ನಾಗರಹಾವು, ಕ್ರೈಟ್, ಎರಡು ವಿಧದ ವೈಪರ್‌ಗಳು ಅತ್ಯಂತ ವಿಷಕಾರಿ. ಹಾವು ಕಡಿತಕ್ಕಿಂತ ಭಯದಿಂದಲೇ ಹೆಚ್ಚು ಸಾವು ಸಂಭವಿಸುತ್ತದೆ. ಭಾರತದಲ್ಲಿ ವಾರ್ಷಿಕವಾಗಿ ಸಾವಿರಾರು ಜನ ಹಾವು ಕಡಿತಕ್ಕೆ ಬಲಿಯಾಗುತ್ತಾರೆ.
ಜಗತ್ತಿನ ಅತ್ಯಂತ ವಿಷಕಾರಿ ಪ್ರಾಣಿ (Poisonous animal) ಅಂದ್ರೆ ಅದು ಹಾವು (snake). ತನ್ನ ವಿಷದಿಂದ ಮನುಷ್ಯನನ್ನು ಅರೆ ಕ್ಷಣದಲ್ಲಿ ಸಾಯಿಸುವ ಶಕ್ತಿ ಹಾವುಗಳಿಗಿದೆ. ಆದ್ರೆ ವೈದ್ಯರು, ಮನುಷ್ಯ ಹಾವಿನ ವಿಷಕ್ಕಿಂತ ಭಯಕ್ಕೆ ಸಾಯ್ತಾನೆ ಎನ್ನುತ್ತಾರೆ. ಹಾವಿನಲ್ಲೂ ಅನೇಕ ವಿಧಗಳಿವೆ. ಕೆಲ ಹಾವು ವಿಷಕಾರಿಯಲ್ಲ. ಆದ್ರೆ ಅದು ಕಚ್ಚಿದ ಭಯಕ್ಕೆ ಜನರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಾರೆ.
ಭೂಮಿಯ ಮೇಲೆ ಕಾಣ ಸಿಗುವ ಎಲ್ಲ ಹಾವುಗಳು ಭಿನ್ನ ರೀತಿಯಲ್ಲಿ ವಿಷವನ್ನು ಉತ್ಪಾದನೆ ಮಾಡುತ್ತವೆ. ಕೆಲ ಹಾವು ಕಡಿಮೆ ಪ್ರಮಾಣದಲ್ಲಿ ವಿಷವನ್ನು ಉತ್ಪಾದನೆ ಮಾಡಿದ್ರೆ ಮತ್ತೆ ಕೆಲ ಹಾವು ವಿಪರೀತ ಎನ್ನುವಷ್ಟು ವಿಷ ತಯಾರಿಸುತ್ತವೆ. ಕೆಲ ಹಾವಿನ ಒಂದೇ ಒಂದು ವಿಷದ ಹನಿ ಮನುಷ್ಯನ ದೇಹ ಸೇರಿದ್ರೂ ಆತ ಸಾವನ್ನಪ್ಪುತ್ತಾನೆ. ವಿಶ್ವದಲ್ಲಿ 3,789 ಜಾತಿಯ ಹಾವುಗಳಿವೆ. ಭಾರತದಲ್ಲಿ 300 ಜಾತಿಯ ಹಾವುಗಳಿವೆ. ಭಾರತದಲ್ಲಿ ಕಾಣಸಿಗುವ ಹಾವುಗಳಲ್ಲಿ ಶೇಕಡಾ 60ರಷ್ಟು ಹಾವುಗಳು ವಿಷಕಾರಿಯಾಗಿವೆ. ಅದ್ರಲ್ಲಿ ನಾಲ್ಕು ವಿಪರೀತ ವಿಷ ಉತ್ಪಾದನೆ ಮಾಡುತ್ತವೆ. ಅವು ಬಹಳ ಅಪಾಯಕಾರಿ ಹಾವುಗಳಾಗಿವೆ.
ಭಾರತದ ಈ ರಾಜ್ಯದಲ್ಲಿ ಹಾವುಗಳೇ ಇಲ್ಲ, ಇದು ಭಾರತದ ಅತ್ಯಂತ ಸುಂದರ ತಾಣ
ಭಾರತದ ನಾಗರಹಾವು (cobra), ಕಾಮನ್ ಕ್ರೈಟ್ (common krait), ರಸೆಲ್ ವೈಪರ್ (Russells viper) ಹಾಗೂ ಸಾ ಸ್ಕೇಲ್ಡ್ ವೈಪರ್ (saw scaled viper) ವಿಷಕಾರಿ. ನಾಗರಹಾವಿನಂತಹ ವಿಷಕಾರಿ ಹಾವು ಒಂದು ದಿನಕ್ಕೆ ಸರಾಸರಿ 100 -200 ಮಿಲಿಗ್ರಾಂ ವಿಷವನ್ನು ಉತ್ಪಾದನೆ ಮಾಡುತ್ತದೆ. ರಸೆಲ್ ವೈಪರ್ ಜಾತಿಯ ಹಾವುಗಳು ದಿನಕ್ಕೆ ಸರಾಸರಿ 50 -100 ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತವೆ. ಕ್ರೈಟ್ ಜಾತಿಯ ಹಾವು ದಿನಕ್ಕೆ ಸುಮಾರು 10-15 ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತವೆ. ಸಾ ಸ್ಕೇಲ್ಡ್ ವೈಪರ್ ಒಂದು ದಿನಕ್ಕೆ ಸರಾಸರಿ 5-10 ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತದೆ. ಈ ವಿಷ ಉತ್ಪಾದನೆ ಪ್ರತಿ ದಿನ ಒಂದೇ ರೀತಿ ಇರುವುದಿಲ್ಲ. ವಾತಾವರಣ ಮತ್ತು ಪರಿಸರವನ್ನು ಅವಲಂಬಿಸಿರುತ್ತದೆ.
ಭಾರತದಲ್ಲಿರುವ ನಾಗರ ಹಾವಿನ ವಿಷ ಅಪಾಯಕಾರಿ. 5 ಮಿಲಿಗ್ರಾಂನಷ್ಟು ಈ ನಾಗರಹಾವಿನ ವಿಷ ಮನುಷ್ಯನ ದೇಹವನ್ನು ಸೇರಿದ್ರೂ ಆತ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಮನುಷ್ಯ ಬದುಕುಳಿಯುವ ಸಾಧ್ಯತೆ ಇರುತ್ತದೆ. ಅಮೇರಿಕನ್ ಸೊಸೈಟಿ ಆಫ್ ಟ್ರಾಪಿಕಲ್ ಮೆಡಿಸಿನ್ ಅಂಡ್ ಹೈಜೀನ್ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 46,000 ಜನರು ಹಾವು ಕಡಿತದಿಂದ ಸಾಯುತ್ತಾರೆ. ಭಾರತದ ಅಧಿಕೃತ ಮಾಹಿತಿಯ ಪ್ರಕಾರ, ಪ್ರತಿ ವರ್ಷ 2,000 ಜನರು ಹಾವಿನ ವಿಷದಿಂದ ಸಾಯುತ್ತಾರೆ.
ಕಾಳಿಂಗ ಸರ್ಪ 100 ವರ್ಷ ಬದುಕೋದು ನಿಜವೇ? ಇಲ್ಲಿದೆ ನೋಡಿ ಸತ್ಯಾಸತ್ಯತೆ
ಹಾವು ಏಕೆ ಕಚ್ಚುತ್ತದೆ ? : ಹಾವಿಗೆ ವಿಷವಿದ್ದರೆ ಮತ್ತು ಚೂಪಾದ ಹಲ್ಲುಗಳಿದ್ದರೆ ಅದು ಖಂಡಿತವಾಗಿಯೂ ಕಚ್ಚುತ್ತದೆ ಎಂದು ಅನೇಕರು ನಂಬುತ್ತಾರೆ. ಆದ್ರೆ ಇದು ಸುಳ್ಳು. ಹಾವುಗಳಿಗೆ ನಾವು ಹೆದರುವುದಕ್ಕಿಂತ ಅವು ನಮಗೆ ಹೆದರುತ್ತದೆ. ಹಾವುಗಳು ಭಯದಿಂದ ಅಡಗಿಕೊಳ್ಳುವ ಪ್ರಯತ್ನ ನಡೆಸುತ್ತವೆ. ಹಾವುಗಳು ಮ್ಮ ಹಲ್ಲುಗಳು ಮತ್ತು ವಿಷವನ್ನು ಬೇಟೆಯಾಡಲು ಮತ್ತು ಆತ್ಮರಕ್ಷಣೆಗೆ ಬಳಸಿಕೊಳ್ಳುತ್ತವೆ. ಆಹಾರ ಹುಡುಕುತ್ತಾ ಹೊರಟ ಹಾವು ತನ್ನ ಬೇಟೆಯನ್ನು ಕಚ್ಚಿ ಅದರ ದೇಹಕ್ಕೆ ವಿಷವನ್ನು ಚುಚ್ಚುತ್ತದೆ. ವಿಷದಿಂದಾಗಿ, ಬೇಟೆಯು ಸ್ವಲ್ಪ ದೂರ ಹೋಗಿ ಪ್ರಜ್ಞೆ ತಪ್ಪಿ ಬೀಳುತ್ತದೆ. ವಿಷದ ವಾಸನೆ ಮೇಲೆ ಹಾವು ಬೇಟೆಯನ್ನು ತಲುಪುತ್ತದೆ. ಹಾವು ತನ್ನ ವಿಷವನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಹ ಬಳಸುತ್ತದೆ. ಮನುಷ್ಯ ಅದಕ್ಕೆ ಹಾನಿಯುಂಟು ಮಾಡಲು ಪ್ರಯತ್ನಿಸಿದಾಗ ತನ್ನ ರಕ್ಷಣೆಗೆ ಅದು ಮುಂದಾಗುತ್ತದೆ. ಹಲ್ಲು ಹಾಗೂ ವಿಷವನ್ನು ಆಯುಧವಾಗಿ ಬಳಸಿಕೊಳ್ಳುತ್ತದೆ.
