32 ಕೋಟಿ ಮೌಲ್ಯದ ಐಷಾರಾಮಿ ಅರಮನೆ 1,000 ರೂ.ಗೆ ಸಿಗ್ತಿದೆ! ಒಂದಿಷ್ಟು ಕಂಡೀಷನ್ ಸಹ ಇದೆ

ಮನೆ ಖರೀದಿ ಮಾಡಲು ಅನೇಕರು ಆಸಕ್ತಿ ತೋರುತ್ತಾರೆ. ಐಷಾರಾಮಿ ಮನೆ ಸಾಮಾನ್ಯರಿಗೆ ಸಿಗೋದಿಲ್ಲ. ಆದ್ರೆ ದುಬಾರಿ ಬೆಲೆ ಕಡಿಮೆ ಬೆಲೆಗೆ ಸಿಕ್ಕಿದ್ರೆ? ಈ ದೇಶದಲ್ಲಿ ಭರ್ಜರಿ ಅವಕಾಶವೊಂದಿದೆ.
 

Get Beautiful Villa Worth Thirty Two Crore In Just One Thousand Rupees Under One Strict Condition roo

ಸ್ವಂತಕ್ಕೊಂದು ಮನೆ ಖರೀದಿ ಮಾಡ್ಬೇಕು ಎನ್ನುವುದು ಎಲ್ಲರ ಆಸೆ. ಜೀವನಪರ್ಯಂತ ದುಡಿದು ಆ ಹಣವನ್ನು ಮನೆ ಖರೀದಿಗೆ ಬಳಸುವ ಅನೇಕ ಜನರಿದ್ದಾರೆ. ಈಗಿನ ದಿನಗಳಲ್ಲಿ ಮನೆ ಬಾಡಿಗೆ ಪಡೆಯೋದೆ ಕಷ್ಟ. ಹೀಗಿರುವಾಗ ಸ್ವಂತ ಮನೆ ಖರೀದಿ ಕಷ್ಟ. ಮಾಹಿತಿ ಒಂದರ ಪ್ರಕಾರ, ಭಾರತದ ಮಹಾನಗರಗಳ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆ ಹೆಚ್ಚಾಗಿದೆ. ಇಲ್ಲಿ ಮನೆ ಬಾಡಿಗೆ ಪಡೆಯೋದು ದುಬಾರಿ ಎನ್ನುವ ಕಾರಣಕ್ಕೆ ಬಹುತೇಕ ಜನರು ಮನೆ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಮನೆಗೆ ಬಾಡಿಗೆ ನೀಡುವ ಹಣವನ್ನು ಬ್ಯಾಂಕ್ ಲೋನ್ ರೀತಿಯಲ್ಲಿ ತೀರಿಸಬಹುದು ಎಂಬ ನಂಬಿಕೆ ಅವರದ್ದು. ಸಮೀಕ್ಷೆ ಒಂದರಲ್ಲಿ ಪಾಲ್ಗೊಂಡಿದ್ದ ಭಾರತದ ಅನೇಕ ಜನರು, ಮುಂದಿನ ವರ್ಷ ಮನೆ ಖರೀದಿ ಮಾಡೋದಾಗಿ ಹೇಳಿದ್ದಾರೆ. ಮನೆ ಖರೀದಿ ಮಾಡುವವರು ದಾಖಲಾತಿ ಸರಿ ಇದ್ಯಾ ಎಂದು ಪರೀಕ್ಷೆ ಮಾಡ್ತಾರೆ. ಅದ್ರ ಜೊತೆ ಕಡಿಮೆ ಬೆಲೆಗೆ ಎಲ್ಲಿ ಮನೆ ಸಿಗುತ್ತೆ ಎಂಬುದನ್ನು ಹುಡುಕ್ತಾರೆ. ನಲವತ್ತು – ಐವತ್ತು ಲಕ್ಷಕ್ಕೆ ಮನೆ ಇದೆ ಅಂತಾ ಜಾಹೀರಾತು ನೀಡಿದ್ರೆ ಕೆಲವೇ ಕ್ಷಣಗಳಲ್ಲಿ ಅದು ಮಾರಾಟವಾಗಿರುತ್ತದೆ. 32 ಕೋಟಿ ಮೌಲ್ಯದ ಆಸ್ತಿ 1000 ರೂಪಾಯಿಗೆ ಸಿಗ್ತಿದೆ ಅಂದ್ರೆ ನೀವು ಬಿಡ್ತಿರಾ? ನೀವಲ್ಲ ನಾವೂ ಬಿಡೋದಿಲ್ಲ. ಅಷ್ಟಕ್ಕೂ ಭಾರತದಲ್ಲಿ ಈ ಮನೆ ಸಿಗ್ತಿಲ್ಲ. 

ಇಲ್ಲಿದೆ ಐಷಾರಾಮಿ (Luxury) ಮನೆ ಖರೀದಿಗೆ ಅವಕಾಶ :  ಸ್ಪೇನ್‌ (Spain) ನಲ್ಲಿ ಈ ಐಷಾರಾಮಿ ಮನೆ ಖರೀದಿಗೆ ಅವಕಾಶವಿದೆ. ಬಾಲೆರಿಕ್ ದ್ವೀಪದಲ್ಲಿ ಈ ಮನೆ ಮಾರಾಟಕ್ಕಿದೆ. ಈ ಮನೆಯ ಸೌಂದರ್ಯ (Beauty) ಎಲ್ಲರನ್ನು ಸೆಳೆಯುತ್ತದೆ. ಇಲ್ಲಿ ವಾಸಿಸಲು ಕೋಟಿಗಟ್ಟಲೆ ಹಣ ಖರ್ಚು ಮಾಡುವವರಿದ್ದಾರೆ. ಆದ್ರೆ ಈಗ ಆ ಮನೆ ಖರೀದಿ ಮಾಡಲು ಸುವರ್ಣಾವಕಾಶವೊಂದು ಸಿಗ್ತಿದೆ. 

ಬಂಡೀಪುರದಲ್ಲಿ ಆನೆಗಳ ಹಿಂಡು, ಜಿಂಕೆಗಳ ದಂಡು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವನ್ಯಮೃಗಗಳು..!

ಸ್ಪೇನ್ ನ ಬಾಲೆರಿಕ್ ದ್ವೀಪದಲ್ಲಿ ಕಡಿಮೆ ಬೆಲೆಗೆ ಮನೆ ಖರೀದಿ ಮಾಡಲು ಜನವರಿ 28ರವರೆಗೆ ಅವಕಾಶವಿದೆ. ಈ ಸಮಯದಲ್ಲಿ ನೀವು ಒಂದು ಸಾವಿರ ರೂಪಾಯಿಗೆ ವಿಲ್ಲಾ ಪಡೆಯಬಹುದು. ವಿಲ್ಲಾವನ್ನು ಚಾರಿಟಿ ಸೂಪರ್‌ಡ್ರಾ ಅಡಿಯಲ್ಲಿ 1,000 ರೂಪಾಯಿಗೆ ಖರೀದಿ ಮಾಡಬಹುದು.

ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಗೆ 7 ನೇ ಸ್ಥಾನ..!

ಮನೆ ಖರೀದಿಗೆ ಈ ಷರತ್ತು :  ಒಂದು ಸಾವಿರ ರೂಪಾಯಿಗೆ ಸಿಗುವ ಈ ಮನೆಯಲ್ಲಿ ಎಲ್ಲ ಸೌಲಭ್ಯವೂ ಇದೆ. ಪಿಠೋಪಕರಣ ಕೂಡ ನೀವು ಖರೀದಿ ಮಾಡಬೇಕಾಗಿಲ್ಲ. ದಿ ಒಮೇಜ್ ಮಿಲಿಯನ್ ಪೌಂಡ್ ಹೌಸ್ ಸೂಪರ್‌ಡ್ರಾ ಆಯೋಜಿಸಿದೆ. ನೀವು ಲಾಟರಿ ಖರೀದಿ ಮಾಡಬೇಕು. ಇದರ ನೋಂದಣಿ ಶುಲ್ಕವನ್ನು ಯುಕೆಯಲ್ಲಿ ಆಲ್ಝೈಮರ್ನ ಸಂಶೋಧನೆಗಾಗಿ ಬಳಸಲಾಗುತ್ತದೆ. ಆದ್ರೆ ಇದಕ್ಕೆ ಒಂದು ಷರತ್ತಿದೆ. ಯುಕೆ (UK) ನಿವಾಸಿಗಳು ಮಾತ್ರ ಈ ಡ್ರಾದಲ್ಲಿ ಭಾಗವಹಿಸಬಹುದು. ನಿಮ್ಮ ಬಳಿ ಯುಕೆ ಪೌರತ್ವವಿದ್ದರೆ ನೀವು ಈ ವಿಲ್ಲಾ ಖರೀದಿಸಲು ಇದು ಒಳ್ಳೆ ಅವಕಾಶ. 

ಯುಕೆಯಲ್ಲಿ ಹೆಚ್ಚು ಜನರನ್ನು ಕಾಡ್ತಿದೆ ಈ ರೋಗ : ಮಾಹಿತಿಯೊಂದರ ಪ್ರಕಾರ, ಆಲ್ಝೈಮರ್ ರೋಗವು ಮಾರಣಾಂತಿಕವಾಗ್ತಿದೆ. 2022ರಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 74 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆಲ್ಝೈಮರ್ನ ಖಾಯಿಲೆಯನ್ನು ಮರೆವಿನ ಕಾಯಿಲೆ ಎಂದು ಕರೆಯಲಾಗುತ್ತದೆ. ಜ್ಞಾಪಕ ಶಕ್ತಿಯ ಕೊರತೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆ, ಮಾತನಾಡಲು ತೊಂದರೆ  ಸೇರಿದಂತೆ ಅನೇಕ ಸಮಸ್ಯೆ ಈ ರೋಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮೆದುಳಿನ ಭಾಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ನರ ಕೋಶ ನಾಶವಾಗುತ್ತದೆ. ಆಲ್ಝೈಮರ್ನ ಕಾಯಿಲೆಯು  ವಯಸ್ಸು ಮತ್ತು ಸಮಯದೊಂದಿಗೆ ಉಲ್ಬಣಗೊಳ್ಳುತ್ತದೆ.
 

Latest Videos
Follow Us:
Download App:
  • android
  • ios