ಇಡೀ ಹಳ್ಳಿಗೆ ಇರೋದು ಒಬ್ಳೇ ಹೆಣ್ಣು, ಅಬ್ಬಬ್ಬಾ ಅಂದ್ರೆ ತೋಳ ಕೂಗೋದು ಕೇಳ್ಬಹುದು!
ಫ್ರಾನ್ಸ್ ನಲ್ಲಿ ವಿಚಿತ್ರ ಹಳ್ಳಿಯೊಂದಿದೆ. ಅಲ್ಲಿ ಇರುವ ಜನಸಂಖ್ಯೆ ಬರೀ ಒಂದು. ಸ್ಮಶಾನ, ಚರ್ಚ್, ತೋಳದ ಜೊತೆ ಇರುವ ಮಹಿಳೆ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಆ ಹಳ್ಳಿ ಇರೋದೆಲ್ಲಿ ಗೊತ್ತಾ?
ವಿಶ್ವದಲ್ಲಿ ಪ್ರತಿಯೊಬ್ಬರೂ ತಮ್ಮದೇ ವ್ಯಕ್ತಿತ್ವ ಹೊಂದಿದ್ದಾರೆ. ಕೆಲವರು ಜನರ ಮಧ್ಯೆ ವಾಸ ಇಷ್ಟಪಟ್ಟರೆ ಮತ್ತೆ ಕೆಲವರು ಜನರಿಂದ ದೂರವಿರಲು ಬಯಸ್ತಾರೆ. ಶಾಂತವಾದ ಪರಿಸರದಲ್ಲಿ ಒಂಟಿಯಾಗಿ ಜೀವನ ನಡೆಸಲು ಅವರಿಗೆ ಭಯವಾಗೋದಿಲ್ಲ. ಇದಕ್ಕೆ ಜೋಸೆಟ್ ಹೆಸರಿನ ಮಹಿಳೆ ಉತ್ತಮ ನಿದರ್ಶನ.
ಜೋಸೆಟ್, ಫ್ರಾನ್ಸ್ (France) ನ ಒಂದು ಹಳ್ಳಿಯಲ್ಲಿ ವಾಸವಾಗಿದ್ದಾಳೆ. ಆ ಹಳ್ಳಿಯ ಹೆಸರು ರೋಚೆಫೋರ್‌ಚಾಟ್ (Rochefourchat). ಇದನ್ನು ಮಿಡಲ್ ಆಫ್ ನೋವೇರ್ ಎಂದೂ ಕರೆಯುತ್ತಾರೆ.
ಈ ಹಳ್ಳಿ (Village) ಯಲ್ಲಿರೋದು ಮಹಿಳೆ ಹಾಗೂ ತೋಳ (Wolf) ಮಾತ್ರ : ರೋಚೆಫೋರ್‌ಚಾಟ್ ಹಳ್ಳಿಯಲ್ಲಿ 65 ವರ್ಷದ ಜೋಸೆಟ್ ಮಾತ್ರ ವಾಸವಾಗಿದ್ದಾಳೆ. ಅವಳನ್ನು ಬಿಟ್ಟರೆ ಈ ಹಳ್ಳಿಯಲ್ಲಿ ಮತ್ತ್ಯಾರ ವಾಸವೂ ಇಲ್ಲ. ಅಲ್ಲಿ ಯಾವುದೇ ಮನುಷ್ಯರು ವಾಸವಾಗಿಲ್ಲ. ರೋಚೆಫೋರ್‌ಚಾಟ್ ಹಳ್ಳಿಯಲ್ಲಿ ತೋಳಗಳ ಸಂಖ್ಯೆ ಮಾತ್ರ ಸಾಕಷ್ಟಿದೆ. ಮನೆಯಲ್ಲಿ ಮಾತ್ರವಲ್ಲ ಇಡೀ ಹಳ್ಳಿಯಲ್ಲಿ ಒಬ್ಬಳೇ ವಾಸವಾಗಿರುವ ಜೋಸೆಟ್ ಗೆ ಭಯವಿಲ್ಲ. ಆಕೆಯ ಧೈರ್ಯವನ್ನು ಮೆಚ್ಲೇಬೇಕು.
ಮುಟ್ಟಾದ ಮಹಿಳೆಯನ್ನು ಸ್ಪರ್ಶಿಸಿದ್ರೆ ರೋಗ ಬರುತ್ತಂತೆ… ಹೀಗಿತ್ತು ನೇಪಾಳದ ಸಂಪ್ರದಾಯ!
ಹಳೆ ಚರ್ಚ್, ಸ್ಮಶಾನ, ಟೆಲಿಫೋನ್ ಬೂತ್ : ಫ್ರಾನ್ಸ್‌ನಲ್ಲಿ ಒಟ್ಟು 35,083 ಪುರಸಭೆಗಳಿವೆ. ಅದರಲ್ಲಿ ರೋಚೆಫೌರ್ಚಾಟ್ ಚಿಕ್ಕ ಪುರಸಭೆಯಾಗಿದೆ. ಇಡೀ ಗ್ರಾಮದಲ್ಲಿ ಜೋಸೆಟ್ ಮನೆ, ತೋಳ ಬಿಟ್ಟರೆ ಹಳೆ ಚರ್ಚ್ ಇದೆ. ಇದಲ್ಲದೆ ಒಂದು ದೂರವಾಣಿ ಬೂತ್ ಇದೆ. ನಾಲ್ಕೈದು ಜನರ ಮನೆಯನ್ನು ನೀವಿಲ್ಲ ನೋಡ್ಬಹುದು. ಆದ್ರೆ ಯಾರೂ ಆ ಮನೆಯಲ್ಲಿ ವಾಸವಾಗಿಲ್ಲ. ಮೇಯರ್, ಜೀನ್ ಬ್ಯಾಪ್ಟಿಸ್ಟ್ ಡಿ ಮಾರ್ಟಿಗ್ನಿ ಸೇರಿದಂತೆ ಕೆಲವರು ಆಗಾಗ ತಮ್ಮ ಮನೆಗೆ ಬಂದು ಹೋಗ್ತಾರೆ. ಜೋಟೆಸ್ ಮೂರು ಮನೆಯನ್ನು ಹೊಂದಿದ್ದಾಳೆ. 2005ರಿಂದ ಜೋಸೆಟ್ ಇಲ್ಲಿ ವಾಸ ಶುರು ಮಾಡಿದ್ದಾಳೆ. ತಿಂಗಳಲ್ಲಿ ಹದಿನೈದು ದಿನ ರೋಚೆಫೌರ್ಚಾಟ್ ನಲ್ಲಿ ವಾಸಮಾಡುವ ಜೋಸೆಟ್ ಮತ್ತೆ ಹದಿನೈದು ದಿನ ಜನರು ವಾಸವಿರುವ ಹಳ್ಳಿಯಲ್ಲಿ ವಾಸ ಮಾಡ್ತಾಳೆ.
ಐಷಾರಾಮಿ ಜೀವನಕ್ಕಿಂತ ನಾನು ಶಾಂತಿಯನ್ನು ಹೆಚ್ಚು ಇಷ್ಟಪಡುತ್ತೇನೆ. ಹಾಗಾಗಿ ನಾನು ಹದಿನೈದು ದಿನ ರೋಚೆಫೌರ್ಚಾಟ್ ಗೆ ಬಂದು ವಾಸ ಮಾಡುತ್ತೇನೆ ಎನ್ನುತ್ತಾಳೆ ಜೋಸೆಟ್. ಗ್ರಾಮದಲ್ಲಿ ನಾನೊಬ್ಬನೇ ವಾಸ ಮಾಡ್ತೇನೆ ಎನ್ನುವ ಕಾರಣಕ್ಕೆ ನಾನು ಸನ್ಯಾಸಿನಿಯಲ್ಲ ಎನ್ನುತ್ತಾಳೆ. ಆಕೆ ನಾಯಿಯನ್ನು ಸಾಕುತ್ತಿದ್ದು, ಹದಿನೈದು ದಿನ ನಾಯಿ ಕೂಡ ಆಕೆ ಜೊತೆ ರೋಚೆಫೌರ್ಚಾಟ್ ನಲ್ಲಿ ವಾಸ ಮಾಡ್ತಾಳೆ. ಊಟ, ಆಹಾರಕ್ಕೆ ಸಂಬಂಧಿಸಿದ ಯಾವುದೇ ವಸ್ತು ರೋಚೆಫೌರ್ಚಾಟ್ ನಲ್ಲಿ ಸಿಗೋದಿಲ್ಲ. ಹಾಗಾಗಿ ಅಲ್ಲಿಂದ ಆರು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗೆ ಹೋಗಿ ಆಹಾರ ಸಾಮಗ್ರಿಯನ್ನು ಜೋಸೆಟ್ ತರ್ತಾಳೆ.
ಆಗಾಗ ರೋಚೆಫೌರ್ಚಾಟ್ ಗೆ ಬರುವ ಕುಟುಂಬಸ್ಥರು : ರೋಚೆಫೌರ್ಚಾಟ್ ನಲ್ಲಿ ಜೋಸೆಟ್ ವಾಸಮಾಡುವ ಕಾರಣ ಆಗಾಗ ಅಲ್ಲಿಗೆ ಆಕೆ ಕುಟುಂಬಸ್ಥರು ಬರ್ತಾರಂತೆ. ಅಲ್ಲಿ ನಾಲ್ಕೈದು ದಿನ ವಾಸವಿರುವ ಕುಟುಂಬಸ್ಥರು ಕಾಡು ಹಂದಿಯನ್ನು ಬೇಟೆಯಾಡಲು ಹೋಗ್ತಾರೆ.
ದೀಪಾವಳಿ ರಜೆ ಎಂಜಾಯ್ ಮಾಡಲು ಬೆಂಗಳೂರ ಸುತ್ತಲಿನ ಈ ತಾಣಗಳು ಬೆಸ್ಟ್
ತೋಳದ ಭಯವಿಲ್ಲ : ಹಳ್ಳಿಯಲ್ಲಿ ಒಂಟಿಯಾಗಿ ಬದುಕುತ್ತಿರುವ ಜೋಸೆಟ್ ನೆಮ್ಮದಿ ತೋಳಗಳ ಕೂಗಿನಿಂದ ಕೆಡುತ್ತದೆ. ಅದನ್ನು ಬಿಟ್ರೆ ಮತ್ತೆ ಅಲ್ಲಿ ಯಾವುದೇ ಶಬ್ಧವಿರೋದಿಲ್ಲ. ಕ್ಯಾಮೆರಾದಲ್ಲಿ ಸಾಕಷ್ಟು ತೋಳಗಳನ್ನು ನೋಡಿದ್ದೇನಾದ್ರೂ ಯಾವುದೇ ತೋಳ ನನ್ನ ಎದುರಿಗೆ ಬಂದಿಲ್ಲ ಎನ್ನುತ್ತಾಳೆ ಜೋಸೆಟ್.
ಹೆಚ್ಚಾಗಲಿದೆ ಈ ಗ್ರಾಮದ ಜನಸಂಖ್ಯೆ : ಸಾಮಾಜಿಕ ಜಾಲತಾಣಗಳಲ್ಲಿ ಈ ಹಳ್ಳಿಯ ವಿಡಿಯೋಗಳು ವೈರಲ್ ಆಗಿದ್ದು, ಇನ್ಮುಂದೆ ಇಲ್ಲಿನ ಜನಸಂಖ್ಯೆ (Population) ಮೂರಾಗಲಿದೆ ಎಂದು ಫ್ಯಾನ್ಸ್ ಅಧಿಕಾರಿಗಳು ಹೇಳಿದ್ದಾರೆ. ಜೋಸೆಟ್ ಬಿಟ್ಟು ಇನ್ನಿಬ್ಬರು ಇಲ್ಲಿ ವಾಸಿಸುವ ಮನಸ್ಸು ಮಾಡಿದ್ದಾರೆ.