ನೆಚ್ಚಿನ ತಾಣ ಗೋವಾ ಇದೀಗ ಯಾರಿಗೂ ಬೇಡ, ವಿದೇಶಿ ಪ್ರವಾಸಿಗರ ಸಂಖ್ಯೆ ಶೇ.60ರಷ್ಟು ಕುಸಿತ!

ಗೋವಾ ಪ್ರವಾಸೋದ್ಯಮವನ್ನೇ ನೆಚ್ಟಿಕೊಂಡಿರುವ ರಾಜ್ಯ. ಭಾರತೀಯರು ಹಾಗೂ ವಿದೇಶಿಗರಿಗೆ ಇದು ನೆಚ್ಚಿನ ತಾಣ. ಆದರೆ ಇದೀಗ ಆತಂಕ ಹೆಚ್ಚಿಸಿದೆ. ಕಾರಣ ಗೋವಾದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಶೇಕಡಾ 60ರಷ್ಟು ಕುಸಿತ ಕಂಡಿದೆ. ಇದಕ್ಕೆ ಕೆಲ ಕಾರಣಗಳು ಬಹಿರಂಗಗೊಂಡಿದೆ.
 

Foreign tourist visit drops around 60 percent in Goa due to hefty charges ckm

ಗೋವಾ(ನ.07) ಗೋ ಗೋವಾ, ಗೋವಾ ಟ್ರಿಪ್ ಪ್ಲಾನ್ ಸೇರಿದಂತೆ ಹಲವು ಮಾತುಗಳು ತಮಾಷೆಯಾಗಿ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಜನರು ಗೋವಾ ಹೋಗಲು ಪ್ಲಾನ್ ಮಾಡುತ್ತಾರೆ. ಭಾರತೀಯರು, ವಿದೇಶಿಗರು ಸೇರಿದಂತೆ ಎಲ್ಲರಿಗೂ ಗೋವಾ ನೆಚ್ಚಿನ ತಾಣ. ಸುಂದರ ಬೀಚ್, ಗೋವಾ ಶೈಲಿಯ ಆಹಾರ, ಕಡಿಮೆ ತೆರಿಗೆ ಕಾರಣ ಕೈಗೆಟುಕುವ ದರದಲ್ಲಿ ಸಿಗುವ ಮದ್ಯ ಸೇರಿದಂತೆ ಹಲವು ಕಾರಣಗಳಿಂದ ಗೋವಾ ಪ್ರವಾಸಿಗರ ಸ್ವರ್ಗವಾಗಿ ಮಾರ್ಪಟ್ಟಿತ್ತು. ಆದರೆ ಇದೀಗ ಗೋವಾ ಆತಂಕದಲ್ಲಿದೆ. ಗೋವಾಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಭಾರಿ ಕುಸಿತ ಕಂಡಿದೆ. ಈ ಪೈಕಿ ವಿದೇಶಿ ಪ್ರವಾಸಿಗರ ಸಂಖ್ಯೆ ಶೇಕಡಾ 60 ರಷ್ಟು ಕುಸಿತ ಕಂಡಿದೆ.

CEIC ವರದಿ ಪ್ರಕಾರ, 2023ರ ಸಾಲಿನಲ್ಲಿ ಗೋವಾಗೆ ಬೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ 1.4 ಮಿಲಿಯನ್. 2019ರಲ್ಲಿ ಈ ಸಂಖ್ಯೆ 8.5 ಮಿಲಿಯನ್. ಭಾರಿ ಕುಸಿತ ಗೋವಾ ಪ್ರವಾಸೋದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ. ವಿದೇಶಿಗರು ಗೋವಾ ಭೇಟಿಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಮುಖ್ಯ ಕಾರಣ ದುಬಾರಿ ಪ್ರವಾಸಿ ತಾಣ ಅನ್ನೋದು ಬಹಿರಂಗವಾಗಿದೆ. ಥಾಯ್ಲೆಂಡ್, ಶ್ರೀಲಂಕಾ, ಬಾಲಿ ಸೇರಿದಂತೆ ಇತರ ಕೆಲ ಏಷ್ಯಾ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಗೋವಾ ಅತೀ ದುಬಾರಿಯಾಗಿದೆ ಅನ್ನೋದು ವಿದೇಶಿಗರ ಅಭಿಪ್ರಾಯ. 

.ಮುಂದಿನ ದಿನಗಳಲ್ಲಿ ಭಾರತ-ನೇಪಾಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ಕೇಂದ್ರ ಸಚಿವ ವಿ.ಸೋಮಣ್ಣ

ದೇಶಿ ಹಾಗೂ ವಿದೇಶಿ ಪ್ರವಾಸಿಗರ ಗೋವಾ ಭೇಟಿ ಕುರಿತು ಎಕ್ಸ್ ಬಳಕೆದಾರ ರಾಮನುಜ್ ಮುಖರ್ಜಿ ಮಾಹಿತಿ ಹಂಚಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಗೋವಾಕ್ಕೆ ಆಗಮಿಸುವ ವಿದೇಶಿಗರ ಸಂಖ್ಯ ಹೇಗೆ ಕುಸಿತಗೊಂಡಿದೆ ಅನ್ನೋದು ಈ ಅಂಕಿ ಅಂಶದಲ್ಲಿ ಬಯಲಾಗಿದೆ. ಇದೇ ವೇಳೆ ಮುಖರ್ಜಿ, ದುಬಾರಿ ಗೋವಾ ಇದಕ್ಕೆ ಕಾರಣ ಎಂದಿದ್ದಾರೆ. 2018ರಲ್ಲಿ 8 ಮಿಲಿಯನ್ ವಿದೇಶಿ ಪ್ರವಾಸಿಗರು, 2019ರಲ್ಲಿ 8.5 ಮಿಲಿಯನ್  ವಿದೇಶಿ ಪ್ರವಾಸಿಗರು ಗೋವಾಗೆ ಭೇಟಿ ನೀಡಿದ್ದರೆ. ಆದರೆ ಇದೀಗ 1.5 ಮಿಲಿಯನ್‌ಗೆ ಕುಸಿತವಾಗಿದೆ. 2014ರಲ್ಲಿ 6 ಮಿಲಿಯನ್, 2015ರಲ್ಲಿ 6.5 ಮಿಲಿಯನ್ ಹೀಗೆ ವಿದೇಶಿ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗಿದೆ.ಆದರೆ ಇದೀಗ ಭಾರಿ ಕುಸಿತ ಕಂಡು ಕೇವಲ 1.5 ಮಿಲಿಯನ್‌ಗೆ ಇಳಿಕೆಯಾಗಿದೆ.

 

 

ಆದರೆ ಭಾರತೀಯರ ಭೇಟಿಯಲ್ಲಿ ಏರಿಕೆಯಾಗಿದೆ. 2014ರಲ್ಲಿ 5.5 ಮಿಲಿಯನ್ ಭಾರತೀಯ ಪ್ರವಾಸಿಗರು ಗೋವಾಗೆ ಭೇಟಿ ನೀಡಿದ್ದಾರೆ. 2015ರಲ್ಲಿ 6 ಮಿಲಿಯನ್ ಸೇರಿದಂತೆ ಹೆಚ್ಚಾಗುತ್ತಲೇ ಹೋಗಿದೆ.ಕೋವಿಡ್  ಸಮಯದಲ್ಲಿ ನಿರ್ಬಂಧ ಕಾರಣ ಭಾರತೀಯರು ಭೇಟಿ ನೀಡಿಲ್ಲ. ಆದರೆ 2022ರಲ್ಲಿ 6 ಮಿಲಿಯನ್, 2023ರಲ್ಲಿ 8 ಮಿಲಿಯನ್ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಗೋವಾದಲ್ಲಿ ವಿದೇಶಿ ಪ್ರವಾಸಿಗರ ಕುಸಿತಕ್ಕೆ ದುಬಾರಿ ಅನ್ನೋದು ಒಂದು ಕಾರಣ ಹೌದು. ಇದರ ಜೊತೆಗೆ ಇತ್ತೀಚೆಗೆ ಗೋವಾಗೆ ಬೇಟಿ ನೀಡಿದ ಪ್ರವಾಸಿಗ ಆದಿತ್ಯ ತ್ರೀವೇದಿ ಅಸಮಾಧಾನ ಹೊರಹಾಕಿದ್ದಾರೆ. ಗೋವಾದಲ್ಲಿ ಬೀಚ್ ಮಾಲಿನ್ಯವಾಗಿದೆ. ಶುಚಿಯಾಗಿಲ್ಲ. ಇನ್ನು ಪ್ರವಾಸಿಗರನ್ನು ಟ್ರಾಪ್ ಮಾಡಲಾಗುತ್ತದೆ. ಟ್ಯಾಕ್ಸಿ ಸೇವೆಗೆ ಹೆಚ್ಚಿನ ಹಣ ಕಿತ್ತುಕೊಳ್ಳಲಾಗುತ್ತಿದೆ. ಇನ್ನು ಕ್ಲಬ್‌ ಪ್ರವೇಶಕ್ಕೆ ದುಬಾರಿ ಮೊತ್ತ ಪಾವತಿಸಬೇಕು. ಹೊಟೆಲ್, ಹೋಮ್ ಸ್ಟೇ, ರೆಸಾರ್ಟ್ ಎಲ್ಲವೂ ಪ್ರವಾಸಿಗರಿಂದ ಲೂಟಿ ಹೊಡೆಯುತ್ತಿದೆ. ಗೋವಾದಲ್ಲಿ ಸರಿಯಾಗಿ ಎಂಜಾಯ್ ಮಾಡಿ ಬರಲು ಇದೀಗ 55 ರಿಂದ 60 ಸಾವಿರರೂಪಾಯಿ ಬೇಕು. ಇದೇ ದುಡ್ಡಲ್ಲಿ ವಿಯೆಟ್ನಾಂಗೆ ತೆರಳಿ ಇದಕ್ಕಿಂತ ಹೆಚ್ಚು ಮೋಜು ಮಸ್ತಿ ಮಾಡಬಹುದು ಎಂದು ಪ್ರವಾಸಿದ ಆದಿತ್ಯ ಹೇಳಿದ್ದಾರೆ. ಹೀಗಾಗಿ ಭಾರತೀಯರು ಗೋವಾ ಬಹಿಷ್ಕರಿಸಿ ಎಂದು ಕರೆ ಕೊಟ್ಟಿದ್ದಾನೆ.


 

Latest Videos
Follow Us:
Download App:
  • android
  • ios