ಮಕ್ಕಳನ್ನು ಕರಕೊಂಡು ಪಿಕ್‌ನಿಕ್‌ ಹೋಗಬಹುದಾದ ತಾಣಗಳಿವು

ಮಕ್ಕಳಿಗೆ ಎಕ್ಸಾಂ ಹತ್ತಿರ ಬಂತು. ಹಾಗಾಗಿ ಸಪ್ಪೆ ವೀಕೆಂಡ್, ಟೆನ್ಶನ್ ಸಾಮಾನ್ಯ. ಈ ಟೈಮ್ನಲ್ಲಿ ಮಕ್ಕಳನ್ನು ಹೊರಗೆಲ್ಲೂ ಕರ್ಕೊಂಡು ಹೋಗದೇ ಮನೆಯಲ್ಲೇ ಕೂರಿಸಿ ಓದು ಓದು ಅನ್ನುವ ಪೋಷಕರೇ ತೊಂಭತ್ತು ಶೇಕಡಾ ಇದ್ದಾರೆ. ಆದರೆ ಹೀಗೆ ಮಾಡೋದ್ರಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರದೇ ಜಿಗುಪ್ಸೆ ಬರಬಹುದು. ಬದಲಿಗೆ ಈ ವೀಕೆಂಡ್ ನಲ್ಲಿ ಸಮೀಪದ ಜಾಗಗಳಿಗೆ ಕರ್ಕೊಂಡು ಹೋಗಿ ಟೆನ್ಶನ್ ಫ್ರೀ ಮಾಡಿಸಿ. ಬೆಂಗಳೂರಿನ ಸಮೀಪದಲ್ಲಿರುವ ಕೆಲವು ಜಾಗಗಳ ವಿವರ ಇಲ್ಲಿದೆ.

 

Family picnic spots near Bangalore

ಮಕ್ಕಳಿಗೆ ಎಕ್ಸಾಂ ಹತ್ತಿರ ಬಂತು. ಹಾಗಾಗಿ ಸಪ್ಪೆ ವೀಕೆಂಡ್, ಟೆನ್ಶನ್ ಸಾಮಾನ್ಯ. ಈ ಟೈಮ್ ನಲ್ಲಿ ಮಕ್ಕಳನ್ನು ಹೊರಗೆಲ್ಲೂ ಕರ್ಕೊಂಡು ಹೋಗದೇ ಮನೆಯಲ್ಲೇ ಕೂರಿಸಿ ಓದು ಓದು ಅನ್ನುವ ಪೋಷಕರೇ ತೊಂಭತ್ತು ಶೇಕಡಾ ಇದ್ದಾರೆ. ಆದರೆ ಹೀಗೆ ಮಾಡೋದ್ರಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರದೇ ಜಿಗುಪ್ಸೆ ಬರಬಹುದು. ಬದಲಿಗೆ ಈ ವೀಕೆಂಡ್ ನಲ್ಲಿ ಸಮೀಪದ ಜಾಗಗಳಿಗೆ ಕರ್ಕೊಂಡು ಹೋಗಿ ಟೆನ್ಶನ್ ಫ್ರೀ ಮಾಡಿಸಿ. ಬೆಂಗಳೂರಿನ ಸಮೀಪದಲ್ಲಿರುವ ಕೆಲವು ಜಾಗಗಳ ವಿವರ ಇಲ್ಲಿದೆ.

 

ರಾಮನಗರ ಬೆಟ್ಟ

ಸುತ್ತಲೂ ಬೆಟ್ಟಗುಡ್ಡಗಳಿಂದ ಸುತ್ತುವರಿದ ಊರು ರಾಮನಗರ. ಬೆಂಗಳೂರಿನಿಂದ ಐವತ್ತು ಕಿಮೀಗಳ ಆಸುಪಾಸು. ಇಲ್ಲಿನ ರಾಮನಗರ ಬೆಟ್ಟ ಬಹಳ ಫೇಮಸ್ಸು. ತುದಿಯವರೆಗೂ ಹತ್ತಲು ಮೆಟ್ಟಿಲುಗಳಿವೆ. ತುತ್ತತುದಿಗೆ ಏರಲು ಕಲ್ಲನ್ನೇ ಕೊರೆದು ಜಾಗ ಮಾಡಿದ್ದಾರೆ. ಬೆಟ್ಟದ ತುದಿಯಲ್ಲಿ ಬಂಡೆಗಳು, ವ್ಯೂ ಪಾಯಿಂಟ್ ಗಳು ಇವೆ. ರಾಮನಗರದ ಊರಿನ ಒಳಗೆ ಹೋದರೆ ಸುತ್ತಲಿನ ಹಸಿರು ನಿಮ್ಮ ಮನಸ್ಸಿಗೆ ಖುಷಿ ನೀಡುತ್ತದೆ. ಅದೇ ರೀತಿ ಇಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಇನ್ನೊಂದು ಬೆಟ್ಟ ರೇವಣ ಸಿದ್ದೇಶ್ವರ. ಇಲ್ಲಿ ಸೂರ್ಯೋದಯ ಸೂರ್ಯಾಸ್ತ ನೋಡೋದು ಭಲೇ ಸೊಗಸು. ಬೆಟ್ಟದ ಮೇಲಿನ ದೃಶ್ಯಗಳಂತೂ ಅದ್ಭುತವಾಗಿವೆ. ಬೆಳಗ್ಗೆಯೇ ಇಲ್ಲಿಗೆ ಹೋದರೆ ಬಿಸಿಲೇರುವ ಮೊದಲೇ ವಾಪಾಸಾಗಬಹುದು. ಇಲ್ಲಿಂದ ಇನ್ನೂ ಸ್ವಲ್ಪ ದೂರದಲ್ಲಿ ಜಾಲಮಂಗಲ ಬೆಟ್ಟವಿದೆ. ರಾಮನಗರಕ್ಕೂ ಸ್ವಲ್ಪ ಮೊದಲೇ ಹಂದಿಗುಂದಿ ಬೆಟ್ಟವಿದೆ. ವಾಪಾಸಾಗುವಾಗ ದೊಡ್ಡಾಲದ ಮರಕ್ಕೂ ಹೋಗಿ ಬರಬಹುದು.

 

ಪೂರ್ವ-ಪಶ್ಚಿಮಗಳ ಸಂಗಮ ಗೋಕರ್ಣ; ಇಲ್ಲಿನ ಕಡಲ ತೀರದ ನೋಟ ವಿಹಂಗಮ!

 

ಮಾಗಡಿಯ ಬೆಟ್ಟಗಳು

ಇದು ಬೆಟ್ಟಗಳ ಊರು. ಇಲ್ಲಿ ಸಾವನದುರ್ಗದಂಥಾ ಬೆಟ್ಟಗಳಿಗೆ ದೊಡ್ಡ ಹುಡುಗರು ಟ್ರೆಕ್ಕಿಂಗ್‌ ಮಾಡಬಹುದು. ಮುಂಜಾನೆ ಎದ್ದು ಹೊರಟರೆ ಬೆಟ್ಟ ಹತ್ತಿ ಮಧ್ಯಾಹ್ನಕ್ಕೆಲ್ಲ ವಾಪಾಸ್ ಮನೆ ಸೇರಬಹುದು. ಬೆಂಗಳೂರಿನಿಂದ ಕೇವಲ ಅರುವತ್ತು ಕಿಮೀ ದೂರದಲ್ಲಿದೆ. ಇದು ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟ. ಏರೋದು ಕಷ್ಟವೇ. ಆದರೆ ಒಮ್ಮೆ ಬೆಟ್ಟ ಹತ್ತಿದರೆ ಆ ರೋಮಾಂಚನವನ್ನು ಮಾತಲ್ಲಿ ಹೇಳೋದು ಕಷ್ಟ. ಒಣ ಕಾಡುಗಳು ಸಿಗುತ್ತವೆ. ಬಂಗಾರದ ಬಣ್ಣಕ್ಕೆ ತಿರುಗಿದ ಹುಲ್ಲುಗಳು ನಿಮ್ಮ ಮನಸ್ಸಿನ ಆಹ್ಲಾದ ಹೆಚ್ಚಿಸಬಹುದು. ಇದರ ಜೊತೆಗೆ ಮಾಗಡಿಯಲ್ಲಿ ಅನೇಕ ಚಿಕ್ಕ ದೊಡ್ಡ ಬೆಟ್ಟಗಳ ಸಾಲುಗಳಿವೆ.

 

ದೇವರಾಯನ ದುರ್ಗ

ಇದು ತುಮಕೂರು ಜಿಲ್ಲೆಯಲ್ಲಿರುವ ಸೊಗಸಾದ ಬೆಟ್ಟ. ಇಲ್ಲಿ ಎರಡು ಯೋಗ ನರಸಿಂಹ ಹಾಗೂ ಭೋಗ ನರಸಿಂಹ ದೇವಾಲಯಗಳಿವೆ. ಈ ಬೆಟ್ಟದ ನಡುವೆ ಇರುವ ಊರನ್ನು ಕಣ್ತುಂಬಿಕೊಳ್ಳೋದು ಉತ್ತಮ ಅನುಭವವೇ. ಈ ಬೆಟ್ಟದ ಒಂದು ಭಾಗದವರೆಗೆ ವಾಹನ ಹೋಗುತ್ತದೆ. ಆಮೇಲೆ ಏರಬೇಕು. ಅದನ್ನು ಏರುವ ಖುಷಿಯೇ ಬೇರೆ. ಕೆಳಗಿನಿಂದಲೇ ಏರುತ್ತಲೂ ಹೋಗಬಹುದು.

 

 ಸೆಕೆಂಡ್ ಸಿಟಿ ಟ್ರಾವೆಲಿಂಗ್‍ಗೆ ರೆಡಿನಾ ನೀವು?

 

ಶಿವಗಂಗೆ ಬೆಟ್ಟ

ತುಮಕೂರಿನ ದಾಬಸ್‌ಪೇಟೆ ಬಳಿ ಇರುವ ಈ ಶಿವಗಂಗೆ ಬೆಟ್ಟ ಅದ್ಭುತ ರಮ್ಯ ಪ್ರಾಕೃತಿಕ ತಾಣವೂ ಹೌದು. ಭಕ್ತರನ್ನು ಸೆಳೆಯುವ ಆಸ್ತಿಕ ತಾಣವೂ ಹೌದು, ಇಲ್ಲಿ ಶಿವ ಹಾಗೂ ಗಂಗೆಯ ಸಾನಿಧ್ಯವಿದೆ. ಕೆಳಗಿನಿಂದ ಬೆಟ್ಟದ ಮೇಲಿನವರೆಗೂ ಮೆಟ್ಟಲುಗಳಿವೆ. ಆದರೆ ಕೆಲವೆಡೆ ಸ್ವಲ್ಪ ಕಡಿದಾಗಿಯೂ ಇದೆ. ಮಕ್ಕಳೊಂದಿಗೆ ಹೋಗಲು ಸೂಕ್ತ ತಾಣ. ಮೇಲೆ ಹೋದಾಗ ಮನಸೆಳೆಯುವ ವಾತಾವರಣ ಇದೆ. ಬೆಂಗಳೂರಿನಿಂದ ಕೇವಲ ೫೪ ಕಿಲೋಮೀಟರ್‌ ದೂರ ಇರೋ ಈ ತಾಣಕ್ಕೆ ಹೋಗೋದು ಅಂಥ ಕಷ್ಟವೇನೂ ಅಲ್ಲ. ಬೆಟ್ಟದ ಬುಡದವರೆಗೆ ಸಾರ್ವಜನಿಕ ಸಾರಿಗೆ ಇದೆ.

 

ಗೋವಾಕ್ಕೆ ಹೋದ್ರೆ ಈ ಜಾಗಗಳನ್ನು ನೋಡೋದು ಮರೀಬೇಡಿ

 

ಮಾಕಳಿದುರ್ಗ

ಇದು ದೊಡ್ಡಬಳ್ಳಾಪುರದ ಹತ್ತಿರ ಇದೆ. ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನೀವು ಹೋದರೆ ಇಲ್ಲಿಗೂ ಬಹಳ ಸುಲಭವಾಗಿ ಹೋಗಬಹುದು. ಅರಣ್ಯ ಇಲಾಖೆಗೆ ಸ್ವಲ್ಪ ಫೀಸ್‌ ಕಟ್ಟಿ ಹೋಗಬೇಕಾಗುತ್ತದೆ. ಬೆಟ್ಟದ ಬುಡದಲ್ಲಿ ದಟ್ಟ ಅರಣ್ಯವಿದ್ದರೆ, ತುದಿಯವರೆಗೂ ಸುಲಭವಾದ ದಾರಿಯಿದೆ. ಪರಿಸರ ನಾಶಗೊಂಡಿಲ್ಲ. ಬೆಟ್ಟದ ತುದಿಯಲ್ಲಿ ಪುಟ್ಟ ಹಳೆಯ, ನಂದಿ ಹಾಗೂ ಶಿವನ ಗುಡಿ ಇದೆ. ಮಾರ್ಕಂಡೇಯ ಋಷಿ ಇಲ್ಲಿ ತಪಸ್ಸು ಮಾಡಿದ್ದರು ಅಂತ ಕತೆ.

Latest Videos
Follow Us:
Download App:
  • android
  • ios