ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಲಗ್ಗೆ ಇಟ್ಟು ಬಿಟ್ರಾ ಡಾ.ಬ್ರೋ? ಮೈ ಝುಂ ಎನ್ನುವ ಭಯಾನಕ ದೃಶ್ಯದ ಸೆರೆ...
ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಲಗ್ಗೆ ಇಟ್ಟು ಬಿಟ್ರಾ ಡಾ.ಬ್ರೋ? ಭಯಾನಕ ದೃಶ್ಯದ ಸೆರೆಯಾಗಿದೆ. ಅಷ್ಟಕ್ಕೂ ಈ ದೃಶ್ಯ ಎಲ್ಲಿಯದ್ದು?
ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ.
ಇದೀಗ ಭೂಮಿ ಬಿಟ್ಟು ಗಗನ್ ಬೇರೆ ಲೋಕಕ್ಕೆ ಹೋಗಿಬಿಟ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಅವರು ತೋರಿಸಿರುವ ಈ ವಿಡಿಯೋ. ಖುದ್ದು ಅವರೇ ಇಲ್ಲಿನ ಮಾಹಿತಿಯನ್ನು ವಿವರಿಸುತ್ತಾ, ತಮಗೆ ಬೇರೆ ಲೋಕಕ್ಕೆ ಹೋದ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ಇಲ್ಲಿನ ಪ್ರಪಾತ ದೃಶ್ಯ ಕಂಡರೆ ಮೈಯೆಲ್ಲಾ ಜುಂ ಎನ್ನುತ್ತದೆ. ಅದು ಎಷ್ಟು ಆಳವಿದೆ ಎನ್ನುವುದನ್ನು ತೋರಿಸಿದ್ದಾರೆ ಗಗನ್. ಇಲ್ಲಿ ಏನಾದ್ರೂ ಕಾಲು ಜಾರಿದ್ರೆ ಮತ್ತೆ ಮೂಳೆನೂ ಸಿಗುವುದಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಇದು, ಇನ್ನೊಂದು ಮುಸ್ಲಿಂ ರಾಷ್ಟ್ರ ಲಿಬಿನಾನ್.
ಅರಬ್ ದೇಶ ಲೆಬಿನಾನ್ನಲ್ಲಿ ಅರಳಿದ ಕಮಲ! ಒಂದೇ ದಿನ 8 ಲಕ್ಷ ವ್ಯೂಸ್ ಕಂಡ ಡಾ.ಬ್ರೋ ವಿಡಿಯೋದಲ್ಲೇನಿದೆ?
ಹಲವಾರು ಮಿಲಿಯನ್ ವರ್ಷಗಳಿಂದ ಭೂ ಕುಸಿತ ಉಂಟಾಗಿ ಈ ಭಯಾನಕ ಗುಹೆ ನಿರ್ಮಾಣ ಆಗಿದೆ ಎಂದಿದ್ದಾರೆ ಡಾ.ಬ್ರೋ. ಆದರೆ ಅದರಲ್ಲಿಯೇ ಹೋಗಿ ಅದರ ಅದ್ಭುತ ಪರಿಚಯವನ್ನು ಮಾಡಿಸಿದ್ದಾರೆ ಅವರು. ಲೆಬಿನಾನ್ನ ಹಲವು ಭಾಗಗಳು, ರಾಸಾಯನಿಕ ಕಾರ್ಖಾನೆಗಳು, ಅಲ್ಲಿಯ ಜನರ ನೋವು, ಬವಣೆಗಳು, ದೇಶ ಬಿಟ್ಟು ಓಡಿ ಹೋದ ಜನರ ಹಿನ್ನೆಲೆ, ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ನಗುತ್ತಲೇ ಇರುವ ಕೆಲವು ವರ್ಗಗಳು, ವೈನ್ ಫ್ಯಾಕ್ಟರಿ... ಹೀಗೆ ಲೆಬಿನಾನ್ನ ಹತ್ತು-ಹಲವು ವಿಶೇಷತೆಗಳನ್ನು ತಿಳಿಸಿರುವ ಡಾ.ಬ್ರೋ ಅಲ್ಲಿನ ವಾಸ್ತುಶಿಲ್ಪದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಸಾಧ್ಯ ಎಂಬಂಥ ಕಲ್ಲು ಕಂಬಗಳನ್ನು ನಿಲ್ಲಿಸಿರುವುದರ ಬಗ್ಗೆ ತಿಳಿಸುತ್ತಲೇ ಇದು ಭಾರತೀಯ ವಾಸ್ತುಶಿಲ್ಪಿಗಳಿಂದ ತಯಾರಾಗಿರುವ ಮಾಹಿತಿ ನೀಡಿದ್ದಾರೆ.
ಅಲ್ಲಿನ ಹಲವಾರು ಕಲ್ಲಿನ ಕೆತ್ತನೆಗಳ ಮೇಲೆ ಭಾರತೀಯ ವಾಸ್ತುಶಿಲ್ಪದ ಛಾಯೆ ಇರುವುದನ್ನು ನೋಡಬಹುದು. ತಮ್ಮ ಮಾತಿಗೆ ಇನ್ನಷ್ಟು ಪುಷ್ಟಿ ನೀಡಲು ಅಲ್ಲಿನ ಕಲ್ಲಿನ ಕಂಬದ ಮೇಲೆ ಇರುವ ಕಮಲದ ಹೂವಿನ ಶಿಲ್ಪವನ್ನು ತೋರಿಸಿದ್ದಾರೆ ಡಾ.ಬ್ರೋ. ಸಾಮಾನ್ಯವಾಗಿ ಭಾರತದ ಶಿಲ್ಪಿಗಳು ಶಿಲ್ಪದ ಆರಂಭಕ್ಕೂ ಮುನ್ನ ಚಿತ್ರಿಸುವ ಕಮಲದ ಹೂವು ಇದಾಗಿದೆ. ಮಧ್ಯ ಪ್ರಾಚೀನ ಅರಬ್ ರಾಷ್ಟ್ರದವರು ಕಮಲ ಎನ್ನುವ ಹೆಸರೇ ಕೇಳಿರಲಿಕ್ಕಿಲ್ಲ. ಇನ್ನು ಹೂವಿನದ್ದು ದೂರದ ಮಾತು. ಆದ್ದರಿಂದ ಇದು ಭಾರತದ ವಾಸ್ತುಶಿಲ್ಪ ಎನ್ನುವುದಕ್ಕೆ ಸ್ಪಷ್ಟ ಉತ್ತರ ಎಂದಿದ್ದಾರೆ ಡಾ.ಬ್ರೋ.
ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ