ಜಗತ್ತಿನಾದ್ಯಂತ ಕೆಲವೊಂದು ಹಬ್ಬಗಳು ಹಾಗೂ ಆಚರಣೆಗಳು ಜನರನ್ನು ಒಗ್ಗೂಡಿಸುವುದಷ್ಟೇ ಅಲ್ಲ, ಅವು ಮನೋರಂಜನೆ ನೀಡುವ ಜೊತೆಗೆ ಕ್ರೇಜಿಯಾಗಿಯೂ ಇರುತ್ತವೆ. ಈ ಹಬ್ಬಗಳಿಗಾಗಿ ಅಲ್ಲಿಯ ಜನ ವರ್ಷವಿಡೀ ಕಾಯುವಷ್ಟು  ಮಜವಾಗಿರುತ್ತವೆ. ಆದರೆ, ಈ ಬಾರಿ ಕೊರೋನಾ ವೈರಸ್ ಭೀತಿಯಲ್ಲಿ ಈ ಕೆಲವೊಂದು ಹಬ್ಬಗಳ ಮಜಾ ಮನೆಯೊಳಗಿಗೇ ಸೀಮಿತವಾಗಬಹುದು. ಅದೇನೇ ಇರಲಿ, ಅವುಗಳ ಆಚರಣೆ ಬಗ್ಗೆ ತಿಳಿದುಕೊಳ್ಳಲು ಅಡ್ಡಿ ಇಲ್ಲ ಅಲ್ಲವೇ?

ದಿ ಸಾಂಕ್ರಾನ್ ಹಬ್ಬ, ಥೈಲ್ಯಾಂಡ್
ಪ್ರತಿ ವರ್ಷ ಏಪ್ರಿಲ್‌ನಲ್ಲಿ ಇಡೀ ಥೈಲ್ಯಾಂಡ್‌ಗೆ ಥೈಲ್ಯಾಂಡೇ ಸಂತೋಷದಲ್ಲಿ ಮಿಂದೇಳುತ್ತದೆ. ಇದಕ್ಕೆ ಕಾರಣ ಅವರ ವಿಶಿಷ್ಠವಾದ ಹೊಸ ವರ್ಷಾಚರಣೆ. ಈ ಸಂದರ್ಭದಲ್ಲಿ ಅಲ್ಲಿನ ಜನರೆಲ್ಲರೂ ನೀರು ತುಂಬಿದ ಪಿಸ್ತೂಲ್, ಗನ್, ಬಕೆಟ್ ಹಿಡಿದು, ಆನೆಗಳನ್ನು ಬಳಸಿಕೊಂಡು ಸಿಕ್ಕಸಿಕ್ಕವರ ಮೇಲೆ ನೀರನ್ನು ಹಾರಿಸುತ್ತಾರೆ. ಯಾವುದೇ ಕಟ್ಟುಪಾಡುಗಳಿಲ್ಲದ ನೀರಾಟ ಬೇಸಿಗೆಯ ಬಿಸಿಲಿಗೆ ಮುದ ನೀಡುತ್ತದೆ. 

ಟಫ್ ಅಂತ 'ಅಲ್ಲಿಗೆ' ಟಚ್ ಮಾಡಿ ಓಡಿಹೋಗ್ತಾರೆ; ಟಿಕ್‌ಟಾಕ್‌ನಲ್ಲಿ ಹೊಸ ...

ದಿ ಟ್ಯೂನಾರಮಾ ಹಬ್ಬ, ಆಸ್ಟ್ರೇಲಿಯಾ
ಇದು ಕೇವಲ ಹಬ್ಬವಲ್ಲ, ಇದೊಂದು ಗ್ರ್ಯಾಂಡ್ ಈವೆಂಟ್. ಇಲ್ಲಿ ಆಸ್ಟ್ರೇಲಿಯನ್ನರು ಫೀಲ್ಡ್‌ಗಿಳಿದು ಟ್ಯೂನಾ ಮೀನನ್ನು ಎಸೆಯುವ ಆಟ ಆಡುತ್ತಾರೆ. ಪ್ರತಿಯೊಬ್ಬ ಸ್ಪರ್ಧಿಗಳೂ 8ರಿಂದ 10 ಕೆಜಿ ಇರುವ ಮೀನನ್ನು ಎತ್ತಿ ಸಾಧ್ಯವಾದಷ್ಟು ದೂರ ಎಸೆಯುವುದೇ ನಿಯಮ. ಆರಂಭದ ಸುತ್ತುಗಳಲ್ಲಿ ಪ್ಲ್ಯಾಸ್ಟಿಕ್ ಮಾಡೆಲ್ ಬಳಸುವ ಇವರು ಕಡೆಕಡೆಯ ಸುತ್ತುಗಳಿಗೆ ನಿಜವಾದ ಮೀನನ್ನೇ ಎಸೆಯುತ್ತಾರೆ. ಈ ಆಟದಲ್ಲಿ 37 ಮೀಟರ್ ದೂರಕ್ಕೆ ಮೀನನ್ನು ಎಸೆದು ಸಿಯಾನ್ ಕಾರ್ಲಿನ್ ಎಂಬಾತ ವಿಶ್ವ ದಾಖಲೆಯನ್ನೂ ಮಾಡಿದ್ದಾನೆ. 

ದಿ ನೈಟ್ ಆಫ್ ರ್ಯಾಡಿಶಸ್, ಮೆಕ್ಸಿಕೋ
ಹೆಸರು ಕೇಳಿ ಯಾವುದೇ  ಹಾರರ್ ಚಿತ್ರದ ಹೆಸರು ಎಂದುಕೊಳ್ಳಬೇಡಿ. ಇದು ಮೆಕ್ಸಿಕೋದ ವಿಶಿಷ್ಠ ಹಬ್ಬ. ಈ ಹಬ್ಬದಲ್ಲಿ ರಾತ್ರಿ ಪೂರ್ತಿ ಮೆಕ್ಸಿಕನ್ನರು ಮೂಲಂಗಿಯನ್ನು ಚಿತ್ರವಿಚಿತ್ರವಾದ ಆಕಾರದಲ್ಲಿ, ಕಲಾತ್ಮಕ, ಸೃಜನಾತ್ಮಕವಾಗಿ ಕೆತ್ತುವುದರಲ್ಲಿ ಕಳೆಯುತ್ತಾರೆ. ಹೀಗೆ ಮೂಲಂಗಿಯ ಮೇಲೆ ಮುಖ, ನಿಸರ್ಗ, ಪ್ರಾಣಿಗಳು ಇತ್ಯಾದಿಯನ್ನು ಕೆತ್ತಲಾಗುತ್ತದೆ. ಕ್ರಿಸ್ಮಸ್ ಸಂದರ್ಭದಲ್ಲಿ ಆಚರಿಸುವ ಈ ಹಬ್ಬ ಇತ್ತೀಚೆಗೆ ಸ್ಪರ್ಧೆಯಾಗಿಯೂ ಬದಲಾಗುತ್ತಿದೆ. ಈ ಹಬ್ಬದ ಬಗ್ಗೆ ಮೆಕ್ಸಿಕನ್ನರಿಗೆ ಅದೆಷ್ಟು ಕ್ರೇಜ್ ಎಂದರೆ ಇದಕ್ಕಾಗಿಯೇ ಇಲ್ಲಿನ ಓಕ್ಸಾಕಾ ಎಂಬ ನಗರದ ಭೂಮಿಯನ್ನು ಕೇವಲ ಮೂಲಂಗಿ ಬೆಳೆಯಲು ಮೀಸಲಿರಿಸಲಾಗಿದೆ. 

ಹೊಟ್ಟೆಯ ಅಜೀರ್ಣ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಮದ್ದು

ಬೋಲಾಸ್ ದೆ ಫ್ಯೂಗೋ, ಸ್ಯಾನ್ ಸಾಲ್ವೇಡಾರ್
ಈ ಹಬ್ಬಕ್ಕೊಂದು ಇತಿಹಾಸದ ಕೊಂಡಿ ಇದೆ. 20ನೇ ಶತಮಾನದ ಆರಂಭದ ಹೊತ್ತಿಗೆ ಸ್ಯಾನ್ ಸಾಲ್ವೇಡಾರ್‌ನ ನೆಜಪ ಎಂಬ ನಗರವು ಜ್ವಾಲಾಮುಖಿಗೆ ಸಂಪೂರ್ಣ ಬಲಿಯಾಗಿತ್ತು. ಈ ಘಟನೆಯ ನೆನಪಿಗಾಗಿ ಪ್ರತಿ ವರ್ಷ ಮರುಹುಟ್ಟುಗೊಂಡ ನೆಜಪದ ಜನರು ಸಣ್ಣ ಸಣ್ಣ ಕಸದ ಚೆಂಡುಗಳನ್ನು ಮಾಡುತ್ತಾರೆ. ನಂತರ ಅವನ್ನು ಸೀಮೆಎಣ್ಣೆಯಲ್ಲಿ ನೆನೆಸಿ ತಿಂಗಳ ಕಾಲ ಹೊತ್ತಿಸಿ ಉರಿಸುತ್ತಾರೆ. ಈ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಮೆಕ್ಸಿಕನ್ ಕಾಫಿ ಕುಡಿವ ಜೊತೆಗೆ ಎಲ್ಲೆಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನಿಯೋಜಿಸಿ ಸಂಭ್ರಮಿಸುತ್ತಾರೆ. 

ಕೊನಾಕಿ ಸುಮೋ, ಜಪಾನ್
ಇದೊಂತರಾ ವಿಚಿತ್ರವಾದ ಆಚರಣೆ. ಇದಕ್ಕಾಗಿ ಜಪಾನ್‌ನ ಸುಮೋ ವ್ರೆಶ್ಲರ್‌ಗಳು ಸಣ್ಣ ಮಗುವನ್ನು ತಮ್ಮ ಕೈಯ್ಯಲ್ಲಿರಿಸಿಕೊಂಡು ಕುಸ್ತಿ(ವ್ರೆಶ್ಲಿಂಗ್)ಗೆ ಸಜ್ಜಾಗುತ್ತಾರೆ. ಇಲ್ಲಿ ಕೇವಲ ಕುಸ್ತಿಯಲ್ಲಿ ಗೆಲ್ಲುವುದಷ್ಟೇ ಅಲ್ಲ, ಯಾರ ಕೈಲಿರುವ ಮಗು ಮೊದಲು ಅಳುತ್ತದೆಯೋ ಅವರು ಸೋತಂತೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ಈ ಹಬ್ಬ ಜಪಾನ್‌ನ ದೇವಾಲಯಗಳಲ್ಲಿ ನಡೆಯುತ್ತದೆ. ಈ ಹಬ್ಬ 400 ವರ್ಷಗಳಿಂದ ನಡೆದು ಬರುತ್ತಿರುವುದು ವಿಶಿಷ್ಠ. ಜಪಾನಿಗರ ಪ್ರಕಾರ ಅಳುವ ಮಕ್ಕಳು ಬೇಗ ಬೆಳೆಯುತ್ತಾರೆ. ಈಗಲೂ ಕೂಡಾ ಅವರ ಈ ನಂಬಿಕೆಯನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. 

ಈ ಇಬ್ಬರಿಗೆ ಕೊರೋನಾ ಬಂದ್ರೆ ಬೇಗ ವಾಸಿಯಾಗುತ್ತೆ

ಬೇಬಿ ಜಂಪಿಂಗ್ ಫಿಯೆಸ್ಟಾ, ಸ್ಪೇನ್
ಬಟ್ಟೆಯ ಮೇಲೆ ಮಲಗಿರುವ ಮಕ್ಕಳಿಂದಾಚೆಗೆ ಜಂಪ್ ಮಾಡುವ ವಿಚಿತ್ರ ಆಚರಣೆ ಈ ಹಬ್ಬದ್ದು. ಸಂಸ್ಕೃತಿ, ಸಂಪ್ರದಾಯ, ಧರ್ಮಾಚರಣೆಯಿಂದ ತುಂಬಿರುವ ಈ ಹಬ್ಬ ನೋಡುಗನ ಎದೆಬಡಿತವನ್ನೇ ನಿಲ್ಲಿಸಿದರೂ ಅಚ್ಚರಿಯಿಲ್ಲ.