ಸೌಂದರ್ಯ ವೃದ್ಧಿಗೆ ನಾಗರಹಾವಿನ ಪಕೋಡಾ: ಒಂದಕ್ಕೆ ಒಂದು ಸಾವಿರ ರೂ! ಮೈ ಝುಂ ಎನ್ನೋ ವಿಡಿಯೋ ವೈರಲ್​

ನಾಗರಹಾವಿನ ಪಕೋಡಾ ಮಾರಿ ಮಾರಾಟ ಮಾಡುವ ಶಾಕಿಂಗ್​ ವಿಡಿಯೋ ಒಂದನ್ನು ಪುಡ್​ ವ್ಲಾಗರ್​ ಶೇರ್​  ಮಾಡಿಕೊಂಡಿದ್ದಾರೆ. ಅದೀಗ ವೈರಲ್​ ಆಗಿದೆ. 
 

Cobra ke Pakode Indian Vloggers shocking video of snake pakoda in Indonesia goes viral suc

ಬಿಸಿಬಿಸಿ ಪಕೋಡಾ ಎಂದ್ರೆ ಸಾಕು.. ಈ ಚುಮು ಚುಮು ಚಳಿಯಲ್ಲಿ ಎಂಥವರಿಗೂ ಬಾಯಲ್ಲಿ ನೀರು ಬರುತ್ತದೆ. ಹೊರಗಡೆ ಮಳೆ ಬೀಳುತ್ತಿದ್ದರೆ, ಮನೆಯೊಳಗೆ ಬೆಚ್ಚಗೆ ಪಕೋಡಾ ಆಸ್ವಾದಿಸುವ ಆನಂದವೇ ಬೇರೆ. ಇದೇ ಕಾರಣಕ್ಕೆ ವಿಭಿನ್ನ ತರಕಾರಿಗಳು, ಎಲೆಗಳು ಮಾತ್ರವಲ್ಲದೇ ಮೊಟ್ಟೆ, ಮಾಂಸ, ಬಿಸ್ಕಿಟ್ಟು... ಹೀಗೆ ಏನೇನೋ ಪಕೋಡಾ ವೆರೈಟಿಗಳು ಕಾಣಸಿಗುತ್ತವೆ. ನೀವು ಇವುಗಳನ್ನು ತಿಂದಿರಲಿಕ್ಕೂ ಸಾಕು. ಆದರೆ ನಾಗರಹಾವಿನ ಪಕೋಡಾ ಕೇಳಿದ್ರಾ? ನೆನೆಸಿಕೊಂಡರೇನೇ ಮೈಯೆಲ್ಲಾ ಝುಂ ಎನ್ನುತ್ತೆ ಅಲ್ವಾ? ಆದರೆ ಇಲ್ಲೊಂದು ಕಡೆ ನಾಗರಹಾವಿನ ಪಕೋಡಾ ತಯಾರಿಸುತ್ತಾರೆ. ಒಂದು ಪಕೋಡಾಕ್ಕೆ ಒಂದು ಸಾವಿರ ರೂಪಾಯಿ! ಹಾವಿನ ಪಕೋಡಾ ಮಾತ್ರವಲ್ಲದೇ ಅದರ ರಕ್ತವನ್ನೂ ಗಟಗಟ ಕುಡಿಯುತ್ತಾರೆ. ಇದಕ್ಕಾಗಿ ಕ್ಯೂ ನಿಲ್ಲಲಾಗುತ್ತೆ.

ಹೀಗೆ ಕೇಳಿದ ತಕ್ಷಣ ಅದು ಚೀನಾ ಎಂದುಕೊಳ್ಳಬಹುದು. ಇಲ್ಲಿ ಮನುಷ್ಯರನ್ನು ಬಿಟ್ಟು ಹರಿದಾಡುವ ಎಲ್ಲವನ್ನೂ ತಿನ್ನುತ್ತಾರೆ ಎನ್ನುವ ಮಾತೇ ಇದೆ ಬಿಡಿ.  ಆದರೆ ನಾಗರಹಾವಿನ ಪಕೋಡಾದ ವಿಡಿಯೋ ವೈರಲ್​ ಆಗಿರುವುದು ಇಂಡೋನೇಷ್ಯಾದಿಂದ. ಕಾಶ್​ ಚೌಧರಿ ಎನ್ನುವ ಭಾರತದ ಫುಡ್​ ವ್ಲಾಗರ್​ ಈ ಬೆಚ್ಚಿ ಬಿಳುವ ವಿಡಿಯೋ ಶೇರ್​ ಮಾಡಿದ್ದಾರೆ!  ಕೋಬ್ರಾ ಪಕೋಡಾ ಎನ್ನುವ ಬೋರ್ಡ್​ ಹಾಕಿರುವುದನ್ನು ನೋಡಿ ಅಲ್ಲಿಗೆ ಹೋಗಿ ಪಕೋಡಾ ಮಾರುತ್ತಿರುವವರನ್ನು ಮಾತನಾಡಿಸಿದ್ದಾರೆ ಕಾಶ್​. ಇಂಡೋನೇಷಿಯಾದ ಜಕರ್ತಾದಲ್ಲಿ ನಾಗರಹಾವಿನ ಪಕೋಡಾಕ್ಕೆ ಭಾರಿ ಡಿಮಾಂಡ್​ ಎನ್ನಲಾಗಿದೆ. ಒಂದು ಪಕೋಡಾಕ್ಕೆ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಒಂದು ಸಾವಿರ ರೂಪಾಯಿ. ಪಕೋಡಾ ಹೇಗೆ ಮಾಡುತ್ತಾರೆ ಎಂದು ವ್ಲಾಗರ್​ ಎದುರಿಗೇ ಅದನ್ನು ತೋರಿಸಿದ್ದರೂ, ಪುಣ್ಯಕ್ಕೆ ಅದನ್ನು ವಿಡಿಯೋದಲ್ಲಿ ತೋರಿಸಿಲ್ಲ ಕಾಶ್​.

ಹುತ್ತಕ್ಕೂ, ಹಾಲಿಗೂ, ಸಂತಾನಕ್ಕೂ ಇದೆ ವೈಜ್ಞಾನಿಕ ಸಂಬಂಧ: ಆಯುರ್ವೇದ ವೈದ್ಯೆ ಡಾ. ಗೌರಿ ಮಾತು ಕೇಳಿ

ಅಲ್ಲಿಯೇ ಇದ್ದ ಒಬ್ಬ ಆಸಾಮಿ ನಾಗರಹಾವಿನ ರಕ್ತಕ್ಕೆ ಆರ್ಡರ್​ ಮಾಡಿ ವೇಟ್​ ಮಾಡುತ್ತಿದ್ದ. ಹಾವನ್ನು ಕತ್ತರಿಸಿ ಪಕೋಡಾ ಮಾಡಿದರೆ ಅದರ ರಕ್ತವನ್ನು ಅಲ್ಲಿದ್ದ ವ್ಯಕ್ತಿ ಕುಡಿಯುವುದನ್ನು ನೋಡಬಹುದು.  ಇದು ನಿಜನೋ ಸುಳ್ಳೋ ಎಂದು ಒಂದು ಕ್ಷಣ ನಂಬುವುದು ಕಷ್ಟ. ಆದರೆ ಅಲ್ಲಿಯೇ ರಾಶಿ ರಾಶಿ ಹಾವುಗಳನ್ನು ಕೂಡಿ ಹಾಕಿರುವುದನ್ನು ನೋಡಬಹುದು. ಒಂದು ಕೋಲಿನ ಸಹಾಯದಿಂದ ಒಂದೊಂದಾಗಿ ಹಾವನ್ನು ತೆಗೆದು ಅದನ್ನು ಕತ್ತರಿಸಿ ಪಕೋಡಾ  ಮಾಡಿ ಕೊಡಲಾಗುತ್ತದೆ.  

ಅಷ್ಟಕ್ಕೂ ಹಾವಿನ ಮಾಂಸ ತಿಂದರೆ ಚರ್ಮದ ಕಾಂತಿ ಹೆಚ್ಚುತ್ತದೆಯಂತೆ, ರೋಗ ನಿರೋಧಕವಾಗಿಯೂ ಇದು ಕಾರ್ಯ ನಿರ್ವಹಿಸುತ್ತದೆ, ಶಕ್ತಿ ಬರುತ್ತದೆ. ಸೌಂದರ್ಯವರ್ಧಿಸುತ್ತದೆ ಎನ್ನುವುದು ಇಲ್ಲಿಯ ಜನರ ಮಾತು.  ದುರ್ಬಲ ಹೃದಯದವರು ಈ ವಿಡಿಯೋವನ್ನು ನೋಡಲೇಬೇಡಿ ಎಂದು ಕಾಶ್​ ಚೌಧರಿ ಹೇಳಿದ್ದರೂ ಅದರಲ್ಲಿ ಪಕೋಡಾ ಮಾಡುವುದನ್ನು ಅವರು ತೋರಿಸಿಲ್ಲ. ಆದರೆ ಅಲ್ಲಿಯ ಬೋರ್ಡ್​ ಹಾಗೂ ಹಾವನ್ನು ನೋಡಿದರೆ ಯಾವ ರೀತಿ ಪಕೋಡಾ  ಮಾಡುತ್ತಾನೆ ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲದೇ,  ಪಕೋಡಾ ಮಾರುವವರನ್ನು ಹಾವನ್ನು ಅದನ್ನು   ಗ್ರಿಲ್ ಮಾಡಿ ಮಾರುವುದು ಕೂಡ ತಿಳಿಯುತ್ತದೆ.
 

ಕಾರನ್ನು ಬೆನ್ನಟ್ಟಿ ಕೊನೆಗೂ ಕಂದಮ್ಮನ ಕಾಪಾಡಿದ ಹಸುಗಳು! ಮನ ಮಿಡಿಯುವ ವಿಡಿಯೋ ವೈರಲ್

Latest Videos
Follow Us:
Download App:
  • android
  • ios