ಎಲ್ಲಿ ನೋಡಿದ್ರೂ ಬುಸ್ ಬುಸ್ ಅನ್ನುತ್ತೆ ನಾಗ, ಹೋದವರಿಗೆ ಜೀವ ಉಳಿಯುತ್ತೋ ಇಲ್ವೋ ಗೊತ್ತಾಗೋಲ್ಲ!

ಅಲ್ಲೋ ಇಲ್ಲೋ ಹಾವು ಕಾಣೋದು ನಮ್ಮಲ್ಲಿ ಮಾಮೂಲು. ಆದ್ರೆ ಅಲ್ಲಿ ಹಾವೇ ಹಾವು. ಕಲಿಟ್ಟಲ್ಲೆಲ್ಲ ಕಾಣುವ ಹಾವು ಸಾಮಾನ್ಯದ್ದಲ್ಲ. ಕಚ್ಚಿದ್ರೆ ಕಥೆ ಮುಗಿದಂತೆ. ಆ ಭಯಾನಕ ಹಾವಿನ ಲೋಕ ಎಲ್ಲಿದೆ ಎಂಬ ವಿವರ ಇಲ್ಲಿದೆ.
 

Brazil Snake Island World Most Dangerous Place On Earth roo

ಹಾವಾಡಿಗರು ಹಲ್ಲು ತೆಗೆದ, ವಿಷವಿಲ್ಲದ ಹಾವನ್ನು ನಮ್ಮ ಮುಂದೆ ಇಟ್ರೂ ಎದೆ ಝಲ್ಲೆನ್ನುತ್ತೆ. ಕನಸಿನಲ್ಲಿ ಮೂರ್ನಾಲ್ಕು ಹಾವು ಒಟ್ಟಿಗೆ ಕಂಡ್ರೆ ಇಡೀ ದಿನ ಮೂಡ್ ಆಫ್ ಆಗಿರುವ ಜೊತೆಗೆ ಅದೇನೋ ವಿಚಿತ್ರ ಭಯ ಕಾಡ್ತಿರುತ್ತದೆ. ಹಾವನ್ನು ಭಯವಿಲ್ಲದೆ ಮುಟ್ಟುವರರ ಸಂಖ್ಯೆ ಬಹಳ ಕಡಿಮೆ. ಬಹುತೇಕರು ಹಾವಿನ ಭಯ ಹೊಂದಿದ್ದಾರೆ. ಕೆಲ ಹಾವುಗಳು ಕಡಿಮೆ ವಿಷವನ್ನು ಹೊಂದಿರುತ್ತವೆಯಾದ್ದರಿಂದ ಅವು ಕಚ್ಚಿದ್ರೂ ಸಮಸ್ಯೆ ಇಲ್ಲ. ಮತ್ತೆ ಕೆಲ ಹಾವು ವಿಪರೀತ ವಿಷದಿಂದ ಕೂಡಿರುತ್ತವೆ. ಹಾವು ಕಚ್ಚಿದ ಕೆಲವೇ ಗಂಟೆಗಳಲ್ಲಿ ಇಡೀ ಶರೀರಕ್ಕೆ ವಿಷ ಆವರಿಸಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಸಾವಿನ ಭಯವೇ ಹಾವಿನ ಬಳಿ ಹೋಗಲು ಜನರನ್ನು ತಡೆಯುತ್ತದೆ.  ನಿಮಗೂ ಹಾವಿನ ಭಯವಿದೆ ಎಂದಾದ್ರೆ ಇನ್ನೊಂದಿಷ್ಟು ದಿನ ಆರಾಮವಾಗಿ ಬದುಕಬೇಕು ಎನ್ನುವ ಆಸೆ ಇದ್ರೆ ಯಾವುದೇ ಕಾರಣಕ್ಕೂ ಈಗ ನಾವು ಹೇಳುವ ಪ್ರದೇಶಕ್ಕೆ ಹೋಗ್ಬೇಡಿ. ಸಾಹಸ ಪ್ರಿಯರು ನೀವಾಗಿದ್ರೂ ಅಲ್ಲಿ ಹೋಗೋದು ಬಹಳ ಅಪಾಯಕಾರಿ. ಅದು ಹಾವುಗಳಿಂದಲೇ ತುಂಬಿರುವ ದ್ವೀಪ. ನಾವಿಂದು ನಿಮಗೆ ಸ್ನೇಕ್ ಐಲ್ಯಾಂಡ್ ಬಗ್ಗೆ ಮಾಹಿತಿ ನೀಡ್ತೇವೆ.

ಸ್ನೇಕ್ (Snake) ಐಲ್ಯಾಂಡ್ ಎಲ್ಲಿದೆ? : ಬ್ರೆಜಿಲ್‌ನ ಕರಾವಳಿ ನಗರ ಸಾವೊ ಪಾಲೊ. ಇದು ದಕ್ಷಿಣ ಅಮೆರಿಕಾದ ಅತಿದೊಡ್ಡ ದೇಶವಾಗಿದೆ. ಇಲ್ಲಿಂದ 90 ಮೈಲಿ ದೂರದಲ್ಲಿ ಒಂದು ದ್ವೀಪವಿದೆ. ಈ ದ್ವೀಪವನ್ನು ಇಲ್ಹಾ ಕ್ವಿಮಡಾ ಗ್ರಾಂಡೆ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ  4000ಕ್ಕೂ ಹೆಚ್ಚು ಹಾವುಗಳು ಇರುವ ಕಾರಣ ಅದನ್ನು ಸ್ನೇಕ್ ಐಲ್ಯಾಂಡ್ (Island) ಎಂದೇ ಕರೆಯಲಾಗುತ್ತದೆ. ಈ ದ್ವೀಪವನ್ನು ವಿಶ್ವದ ಅತ್ಯಂತ ಅಪಾಯಕಾರಿ ದ್ವೀಪ ಎಂದು ಪರಿಗಣಿಸಲಾಗಿದೆ. ವಿಶ್ವದ ಅತ್ಯಂತ ಹೆಚ್ಚು ವಿಷ (Poison) ಹೊಂದಿರುವ ಹಾವುಗಳು ಇಲ್ಲಿವೆ.  

ಸಂಗಾತಿ ಜೊತೆ ಈ ದ್ವೀಪದಲ್ಲಿದ್ರೆ ಸಿಗುತ್ತೆ 1.5 ಕೋಟಿ ಸಂಬಳ

ಸ್ನೇಕ್ ಐಲ್ಯಾಂಡ್ ನಲ್ಲಿರುವ ಹಾವುಗಳು ಯಾವುವು? : ಇಲ್ಲಿ ನೀವು ಸಾಮಾನ್ಯ ಹಾವುಗಳನ್ನು ನೋಡಲು ಸಾಧ್ಯವಿಲ್ಲ. ಇಲ್ಲಿರುವ ಹಾವುಗಳು ತುಂಬಾ ವಿಷದಿಂದ ಕೂಡಿವೆ. ಗೋಲ್ಡನ್ ಲ್ಯಾನ್ಸ್ ಹೆಡ್ ಹಾವಿನ ನೆಲೆಯಾಗಿದೆ. ಇದನ್ನುವಿಶ್ವದ ಅತ್ಯಂತ ವಿಷಕಾರಿ ವೈಪರ್ ಎಂದು ಪರಿಗಣಿಸಲಾಗಿದೆ. 

ಮಾನವನ ಸಂಪೂರ್ಣ ದೇಹ ಹೊಕ್ಕಿ ಬರ್ಬೇಕೆಂದ್ರೆ ಈ ಮ್ಯೂಸಿಯಂಗೆ ಹೋಗಿ

ಈ ಹಾವಿನ ವಿಷ, ಪ್ರಪಂಚದ ಇತರ ಭಾಗಗಳಲ್ಲಿ ಕಂಡುಬರುವ ಯಾವುದೇ ಹಾವಿನ ವಿಷಕ್ಕಿಂತ ಮೂರರಿಂದ ಐದು ಪಟ್ಟು ಹೆಚ್ಚಿದೆ. ಮನುಷ್ಯನ ಮಾಂಸವನ್ನು ಕರಗಿಸುವ ಸಾಮರ್ಥ್ಯವನ್ನು ಈ ಹಾವು ಹೊಂದಿದೆ. ಈ ಹಾವು ಕಚ್ಚಿದ ಒಂದೇ ಗಂಟೆಯಲ್ಲಿ ಮನುಷ್ಯ ಸಾವನ್ನಪ್ಪುತ್ತಾನೆ. ಅಷ್ಟು ಅಪಾಯಕಾರಿ ವಿಷವನ್ನು ಈ ಹಾವು ಹೊಂದಿದೆ. 

ಈ ಹಾವುಗಳ ಉದ್ದ ಒಂದರಿಂದ ಒಂದೂವರೆ ಅಡಿ. ಸ್ನೇಕ್ ಐಲ್ಯಾಂಡ್ ನಲ್ಲಿ ಗೋಲ್ಡನ್ ಲ್ಯಾನ್ಸ್ ಹೆಡ್ ಹಾವುಗಳ ಸಂಖ್ಯೆ 2000 ರಿಂದ 4000 ರ ನಡುವೆ ಇದೆ. ಗೋಲ್ಡನ್ ಲ್ಯಾನ್ಸ್ ಹೆಡ್ ಹಾವುಗಳು ಕಂಡುಬರುವ ವಿಶ್ವದ ಏಕೈಕ ಸ್ಥಳವೆಂದರೆ ಸ್ನೇಕ್ ಐಲ್ಯಾಂಡ್. ಗೋಲ್ಡನ್ ಲ್ಯಾನ್ಸ್ ಹೆಡ್ ಹಾವಿನ ಸಹೋದೆ ಲ್ಯಾನ್ಸ್‌ಹ್ಯಾಂಡ್ ಹಾವುಗಳು. ಹಾಗಾಗಿಯೇ ಅವು ಷಿಪೂರಿತವಾಗಿರುತ್ತವೆ. ಲ್ಯಾನ್ಸ್ ಹ್ಯಾಂಡ್ ಹಾವು ಕಚ್ಚಿ ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಿನ ಜನರು ಸಾಯುತ್ತಾರೆ. ಹಾವಿನಿಂದ ಕಚ್ಚಿಸಿಕೊಂಡವರಿಗೆ ಚಿಕಿತ್ಸೆ ಸಿಕ್ಕಿದ ನಂತ್ರವೂ ಮೂರರಷ್ಟು ಮಂದಿ ಸಾಯುತ್ತಾರೆ. ಚಿಕಿತ್ಸೆ ಇಲ್ಲದೆ ಏಳರಷ್ಟು ಮಂದಿ ಸಾವನ್ನಪ್ಪುತ್ತಾರೆ. 

ಗೋಲ್ಡನ್ ಲ್ಯಾನ್ಸ್ ಹೆಡ್ ಹಾವು ಇಷ್ಟೊಂದಿರಲು ಕಾರಣವೇನು? : ಸ್ನೇಕ್ ಐಲ್ಯಾಂಡ್ ನಲ್ಲಿ ಇಷ್ಟೊಂದು ಗೋಲ್ಡನ್ ಲ್ಯಾನ್ಸ್ ಹೆಡ್ ಹಾವಿರಲು ಕಾರಣ ಈ ಜಾಗ ಅಮೆಜಾನ್ ಕಾಡುಗಳಿಂದ ಬೇರ್ಪಟ್ಟಿರುವುದು. ಈ ದ್ವೀಪ ಮೊದಲು ಅಮೆಜಾನ್ ಕಾಡಾಗಿತ್ತು. ಆದ್ರೆ ನೀರು ಈ ದ್ವೀಪವನ್ನು ಬೇರ್ಪಡಿಸಿದೆ. ಆಗ ಬಂದ ಹಾವುಗಳು ಇಲ್ಲೇ ವಾಸಿಸುತ್ತಿವೆ. ಅಲ್ಲಿ ಬೇರೆ ಪ್ರಾಣಿಗಳಿರದ ಕಾರಣ ಹಾವಿನ ಸಂಖ್ಯೆ ಬೆಳೆಯುತ್ತ ಹೋಗಿದೆ.  
 

Latest Videos
Follow Us:
Download App:
  • android
  • ios