Asianet Suvarna News Asianet Suvarna News

Amazing Couple: ಪ್ರವಾಸಕ್ಕಿಲ್ಲ ವಯಸ್ಸಿನ ಮಿತಿ, 96ರ ಹರೆಯದಲ್ಲಿ ವಿಮಾನವೇರಿದ ಜೋಡಿ!

50, 60, 70 ಹೀಗೆ ಈ ನಂಬರ್ ಬರೀ ವಯಸ್ಸನ್ನು ಲೆಕ್ಕ ಹಾಕುತ್ತೆ ಅಷ್ಟೆ. ಆಸಕ್ತಿ, ಛಲವಿದ್ರೆ ವಯಸ್ಸನ್ನು ಮರೆಯುವ ಕೆಲಸ ಮಾಡ್ಬಹುದು. ಅದಕ್ಕೆ ನೇಪಾಳದ ಜೋಡಿ ಉತ್ತಮ ನಿದರ್ಶನ. ವಯಸ್ಸು 100 ಹತ್ತಿರವಿದ್ರೂ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ.
 

Amazing Couple Ninety Six Year Old Couple Toured Japan Its Never Too Late To Enjoy Life roo
Author
First Published Jul 26, 2023, 1:06 PM IST

ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ವಯಸ್ಸು 60 ದಾಟುತ್ತಿದ್ದಂತೆ ಎಲ್ಲ ಮುಗೀತು ಅಂತಾ ಕುಳಿತುಕೊಳ್ಳೋದಲ್ಲ. ಯಾಕೆಂದ್ರೆ ಸಾವು ಅರವತ್ತರಲ್ಲೂ ಬರಬಹುದು ಇಲ್ಲ 110ರಲ್ಲೂ ಬರಬಹುದು. 60 ವಯಸ್ಸಿನಲ್ಲೇ ಸಾವು ಸಮೀಪಿಸುತ್ತಿದೆ, ಇನ್ನು ಜಗತ್ತು ನೋಡಿ, ಹೊಸ ಹೊಸ ವಿಷ್ಯವನ್ನು ತಿಳಿದಕೊಂಡು ಪ್ರಯೋಜನವೇನು ಎಂದುಕೊಳ್ಳಬಾರದು. ಈಗಿನ ದಿನಗಳಲ್ಲಿ 30 ವರ್ಷದ ವ್ಯಕ್ತಿಗೆ ಹೋಲಿಸಿದ್ರೆ 60 ವರ್ಷ ವಯಸ್ಸಿನ ವ್ಯಕ್ತಿ ಚುರುಕಾಗಿರ್ತಾನೆ. ವಯಸ್ಸು 30 ದಾಟುತ್ತಿದ್ದಂತೆ ಜೀವನ (Life) ದಲ್ಲಿ ಜಿಗುಪ್ಸೆ ಬಂದಂತೆ ಆಡೋರು ಒಂದು ಕಡೆಯಾದ್ರೆ ಮತ್ತೊಂದು ಕಡೆ ಸದಾ ಒಂದಲ್ಲ ಒಂದು ಕಾರಣಕ್ಕೆ ಕೊರಗುವ ಜನರೇ ಹೆಚ್ಚು. ವರ್ಷ 20 ಆದ್ರೂ ಒಮ್ಮೆಯೂ ವಿಮಾನ ಹತ್ತಿಲ್ಲ ಗೊತ್ತಾ ಎನ್ನುವ ಮಕ್ಕಳ ಮಾತನ್ನು ನೀವು ಕೇಳಿರ್ತೀರಾ. ವಿಮಾನ ಹತ್ತೋದಿರಲಿ, ವಿದೇಶಿ ಪ್ರವಾಸ (Trip) ಮಾಡೋದಿರಲಿ ಅದಕ್ಕೆ ವಯಸ್ಸಿನ ಮಿತಿಯಿಲ್ಲ.

ಕೆಲವರು ಅನುಕೂಲವಿದ್ರೆ ಹುಟ್ಟಿದ ವರ್ಷದಲ್ಲೇ ನಾನಾ ಊರುಗಳನ್ನು ಸುತ್ತುವ ಅದೃಷ್ಟ ಪಡೆದಿರುತ್ತಾರೆ. ಕೆಲ ದಿನಗಳ ಹಿಂದೆ 10 ವರ್ಷದ ಹುಡುಗಿ 50 ದೇಶ ಸುತ್ತಿದ ಸುದ್ದಿಯನ್ನು ನೀವು ಓದಿದ್ದೀರಿ. ನಿಮಗೆ 90 ವರ್ಷವಾಗಿದ್ದು ನೀವು ವಿಮಾನದಲ್ಲಿ ಪ್ರಯಾಣ ಬೆಳೆಸಲು ಸಾಧ್ಯವೇ ಇಲ್ಲ ಎಂದಲ್ಲ. ನೀವು ಹಾಸಿಗೆ ಹಿಡಿಯದೆ ಫಿಟ್ ಆಗಿದ್ರೆ ಎಲ್ಲಿ ಬೇಕಾದ್ರೂ ಸುತ್ತಾಡಬಹುದು. ಇದಕ್ಕೆ ನೇಪಾಳ (Nepal) ದ ಈ ಅಜ್ಜ – ಅಜ್ಜಿ ಉದಾಹರಣೆ. ಹಿರಿಯ ವಯಸ್ಕರಿಗೆ ಇವರು ಮಾದರಿಯಾಗಿದ್ದಾರೆ. ಜೀವನ ಸಾಕಪ್ಪಾ ಸಾಕು, ದುಡಿದು ದಣಿವಾಗಿದೆ. ಇನ್ಮುಂದೆ ಆರಾಮವಾಗಿ ಮನೆಯಲ್ಲಿ ರೆಸ್ಟ್ ಮಾಡೋಣ ಎನ್ನುವ ಪಕ್ಷಕ್ಕೆ ಸೇರಿಲ್ಲ ಈ ಅಜ್ಜ ಅಜ್ಜಿ. ಧೈರ್ಯ ಮಾಡಿ ಜಪಾನ್ ಸುತ್ತುವ ಸಾಹಸಕ್ಕೆ ಕೈ ಹಾಕಿದ್ದಾರೆ. ಫೇಸ್ಬುಕ್ ನಲ್ಲಿ ಈ ಕ್ಯೂಟ್ ಕಪಲ್ ಫೋಟೋ ವೈರಲ್ ಆಗಿದೆ. ಅದನ್ನು ನೋಡಿದ ಜನರು ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಬಜೆಟ್‌ನಲ್ಲಿ Manali ಹೋಗುವುದ್ಹೇಗೆ? ನಟಿ ಐಶ್ವರ್ಯಾ ಶಿಂಧೋಗಿ ಕೊಡ್ತಾರೆ ಟಿಪ್ಸ್!

ಇಳಿ ವಯಸ್ಸಿನಲ್ಲಿ ಪ್ರವಾಸ ಹೊರಟವರು ಯಾರು? : ನೇಪಾಳದ ಗೋಪಿ ಕೃಷ್ಣ ಆಚಾರ್ಯ ಮತ್ತು ಅವರ ಪತ್ನಿ ಮಿನ್ ಲಕ್ಷ್ಮಿ ಆಚಾರ್ಯ ಜಪಾನ್ ಪ್ರವಾಸ ಮಾಡ್ತಿದ್ದಾರೆ. ಗೋಪಿ ಕೃಷ್ಣ ಆಚಾರ್ಯ ಅವರಿಗೆ 96 ವರ್ಷ. ಇನ್ನು ಪತ್ನಿ ಮಿನ್ ಲಕ್ಷ್ಮಿ ಆಚಾರ್ಯ ಅವರಿಗೆ 93 ವರ್ಷ. ಜಪಾನ್ ಗೆ ಅವರು ಈ ವಯಸ್ಸಿನಲ್ಲಿ ಪ್ರವಾಸಕ್ಕೆ ಹೋಗಿದ್ದು ಒಂದು ವಿಶೇಷವಾದ್ರೆ ಇನ್ನೊಂದು ವಿಶೇಷವೆಂದರೆ ಅವರು ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಪ್ರವಾಸವನ್ನು ಮಾಡಿದ್ದಾರೆ. ಮೊದಲ ಬಾರಿಗೆ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. 

Routine of Nepal banda ಫೇಸ್ಬುಕ್ ಖಾತೆಯಲ್ಲಿ ಗೋಪಿ ಕೃಷ್ಣ ಆಚಾರ್ಯ ಮತ್ತು ಮಿನ್ ಲಕ್ಷ್ಮಿ ಆಚಾರ್ಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಜೀವನವನ್ನು ಆನಂದಿಸಲು ಎಂದಿಗೂ ತಡವಾಗೋದಿಲ್ಲ ಎಂದು ಇದ್ರಲ್ಲಿ ಬರೆಯಲಾಗಿದೆ. ಗೋಪಿ ಕೃಷ್ಣ ಆಚಾರ್ಯ ಮತ್ತು ಮಿನ್ ಲಕ್ಷ್ಮಿ ಆಚಾರ್ಯ ಫೋಟೋಕ್ಕೆ ಫೇಸ್ಬುಕ್ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರವಾಸ ಸುಖಕರವಾಗಿರಲಿ, ಹೀಗೆ ಸಂತೋಷವಾಗಿರಿ ಎಂದು ದೇವರನ್ನು ಪ್ರಾರ್ಥಿಸಿದ್ದಾರೆ.  

ಪ್ರವಾಸಿಗರಿಗೊಂದು ಮನವಿ: ಮಳೆ ನಿಲ್ಲೋವರೆಗೂ ಚಿಕ್ಕಮಗಳೂರು ಪ್ರವಾಸಕ್ಕೆ ಬರಬೇಡಿ

ವಯಸ್ಸು ಅನ್ನೋದು ಬರಿ ನಂಬರ್ ಮಾತ್ರ. ಯಾರು ಬೇಕಾದ್ರೂ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು. ಆರೋಗ್ಯ, ಫಿಟ್ನೆಸ್ ಗೆ ತಕ್ಕಂತೆ ಪ್ರವಾಸದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳೋದು ಮುಖ್ಯ. ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವೇಳೆ ಇನ್ನೊಬ್ಬರು ಇವರ ಜೊತೆಗಿದ್ರೆ ಒಳ್ಳೆಯದು. ವಿಮಾನ ಹಾರಾಟ ಶುರು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಕೊಳ್ಳಬೇಕು. ಕೆಲ ಕಂಪನಿಗಳು ಈ ವಯಸ್ಸಿನ ಜನರಿಗಾಗಿಯೇ ವಿಶೇಷ  ಟ್ರಾವೆಲ್ ಪ್ಯಾಕೇಜ್ ನಡೆಸುತ್ತಿದೆ.  
 

Follow Us:
Download App:
  • android
  • ios