ಹಲವು ಸುರಕ್ಷತಾ ಕ್ರಮಗಳಿದ್ದರೂ ಏರ್‌ಲೈನ್ಸ್‌ವೊಂದರ ಸಿಬ್ಬಂದಿಯ ಎಡವಟ್ಟಿನಿಂದಾಗಿ ಮಗುವೊಂದು ತಾನು ಹೋಗಬೇಕಾದ ವಿಮಾನ ಬಿಟ್ಟು ಬೇರೆ ವಿಮಾನ ಏರಿದ ಘಟನೆ ನಡೆದಿದ್ದು, ಈಗ ವಿಮಾನಯಾನ ಸಂಸ್ಥೆ ತಾನು ಮಾಡಿದ ತಪ್ಪಿಗೆ ಪೋಷಕರ ಕ್ಷಮೆ ಕೇಳಿದೆ.

ಪುಟ್ಟ ಮಕ್ಕಳನ್ನು ಕೆಲವು ಪೋಷಕರು ಏಕಾಂಗಿಯಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ವಿಮಾನದಲ್ಲಿ ಕಳುಹಿಸುತ್ತಾರೆ. ತಮಗೆ ಜೊತೆಗೆ ಸಾಗಲು ಸಮಯವಿಲ್ಲದಿರುವುದು ಹಾಗೂ ಕೆಲವು ಕಾರಣಾಂತರಗಳಿಂದ ಪೋಷಕರು ಮಕ್ಕಳನ್ನು ಏಕಾಂಗಿಯಾಗಿಯೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಥವಾ ಇನ್ನೊಂದು ನಗರಗಳಿಗೆ ಕಳುಹಿಸುತ್ತಾರೆ. ಈ ವೇಳೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಹಲವು ನಿಯಮಗಳನ್ನು ಪಾಲಿಸಲಾಗುತ್ತದೆ. ವಿಮಾನ ಮಗು ಹೋಗುವ ಪ್ರದೇಶವನ್ನು ತಲುಪಿದ ನಂತರ ಮಗುವನ್ನು ಕರೆದುಕೊಂಡು ಹೋಗಲು ಬರುವವರ ವಿವರವನ್ನು ಫೋಟೋ ಸಮೇತ ವಿಮಾನಯಾನ ಸಂಸ್ಥೆಗೆ ನೀಡಬೇಕಾಗುತ್ತದೆ. ಇಷ್ಟೆಲ್ಲಾ ಸುರಕ್ಷತಾ ಕ್ರಮಗಳಿದ್ದರೂ ಏರ್‌ಲೈನ್ಸ್‌ವೊಂದರ ಸಿಬ್ಬಂದಿಯ ಎಡವಟ್ಟಿನಿಂದಾಗಿ ಮಗುವೊಂದು ತಾನು ಹೋಗಬೇಕಾದ ವಿಮಾನ ಬಿಟ್ಟು ಬೇರೆ ವಿಮಾನ ಏರಿದ ಘಟನೆ ನಡೆದಿದ್ದು, ಈಗ ವಿಮಾನಯಾನ ಸಂಸ್ಥೆ ತಾನು ಮಾಡಿದ ತಪ್ಪಿಗೆ ಪೋಷಕರ ಕ್ಷಮೆ ಕೇಳಿದೆ.

ಸ್ಪಿರೀಟ್ ಏರ್‌ಲೈನ್ಸ್ ಈ ರೀತಿ ಎಡವಟ್ಟು ಮಾಡಿದ ವಿಮಾನಯಾನ ಸಂಸ್ಥೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ವಿಮಾನಯಾನ ಸಂಸ್ಥೆಯ ಎಡವಟ್ಟಿಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಫ್ಲೋರಿಡಾದ ಫೋರ್ಟ್‌ಮೈರ್ಸ್‌ಗೆ ಹೋಗಬೇಕಿತ್ತು. ಆದರೆ ಆ ಮಗುವನ್ನು ಒರ್ನಾಲ್ಡೋಗೆ ಹೋಗುವ ಸ್ಪೀರಿಟ್ ಏರ್‌ಲೈನ್ಸ್‌ನಲ್ಲಿ ಕೂರಿಸಲಾಗಿತ್ತು. ಮಗು ಫೋರ್ಟ್‌ಮೈರ್ಸ್‌ನಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗುವುದಕ್ಕಾಗಿ ಮಗುವಿನ ಪೋಷಕರು ಆಕೆಯನ್ನು ವಿಮಾನದಲ್ಲಿ ಕಳುಹಿಸಿದ್ದರು. 

ವಿಮಾನಯಾನ ಸಂಸ್ಥೆಗಳಿಂದ್ಲೇ ದರ ಸ್ವಯಂ ನಿಯಂತ್ರಣ; ಈ ನೀತಿಯಿಂದ ಟಿಕೆಟ್ ಬೆಲೆ ಕಡಿಮೆಯಾಗುತ್ತೆ: ಜ್ಯೋತಿರಾದಿತ್ಯ ಸಿಂಧಿಯಾ

ಈ ಬಗ್ಗೆ ಕ್ಷಮೆ ಕೇಳಿರುವ ಸ್ಪಿರೀಟ್ ಏರ್‌ಲೈನ್ಸ್, ಮಗು ಫಿಲಡೆಲ್ಫಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೋರ್ಟ್‌ಮೈರೇಯಲ್ಲಿರುವ ಸೌತ್‌ವೆಸ್ಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಬೇಕಿತ್ತು. ಆದರೆ ವಿಮಾನ ಸಿಬ್ಬಂದಿ ತಪ್ಪಾಗಿ ಮಗುವನ್ನು ಬೇರೆ ವಿಮಾನಕ್ಕೆ ಏರಿಸಿದ್ದಾರೆ. ಮಗುವನ್ನು ಸ್ಪೀರಿಟ್ ವಿಮಾನಯಾನ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆಯನ್ನು ಅರಿತುಕೊಂಡು ಅವರ ಕುಟುಂಬವನ್ನು ಸಂಪರ್ಕಿಸಿ ಅವರನ್ನು ಮತ್ತ ಒಂದು ಮಾಡುತ್ತೇವೆ ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಜ್ಜಿ ಟಿವಿಯೊಂದಕ್ಕೆ ಮಾತನಾಡಿದ್ದು, ಮಗುವನ್ನು ಕರೆದುಕೊಂಡು ಹೋಗಲು ಏರ್‌ಪೋರ್ಟ್‌ಗೆ ಆಗಮಿಸಿದ ನಾನು ಅಲ್ಲಿ ಮಗುವಿಲ್ಲದಿರುವುದು ನೋಡಿ ಶಾಕ್ ಆದೆ. ಈ ಮಧ್ಯೆ ಒರ್ಲಾಂಡೋದಲ್ಲಿ ಮಗುವಿದ್ದ ವಿಮಾನ ಲ್ಯಾಂಡ್ ಆಗಿದ್ದು, ಅಜ್ಜಿಗೆ ಮಗು ಕರೆ ಮಾಡಿದೆ. ನಂತರ ಅಜ್ಜಿ ಮರಿಯಾ ರಾಮೋ ಅವರು ತನ್ನ ಮೊಮ್ಮಗುವನ್ನು ಕರೆತರಲು 160 ಮೈಲು ದೂರದ ಒರ್ಲಾಂಡೋಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ವಿಮಾನಯಾನ ಸಂಸ್ಥೆ ಅಜ್ಜಿಗೆ ಪ್ರಯಾಣ ವೆಚ್ಚ ನೀಡುವುದಾಗಿ ಹೇಳಿದೆ. ಆದರೆ ಅಜ್ಜಿ ಈ ಅನಾಹುತಕ್ಕೆ ಕಾರಣ ಏನು ಎಂದು ನಾನು ತಿಳಿಯಬೇಕು ಎಂದು ಆಗ್ರಹಿಸಿದ್ದಾರೆ.

ವಿಮಾನಗಳ ಸಿಗ್ನಲ್ ಜ್ಯಾಮಿಂಗ್: ಪೈಲಟ್‌ಗಳಿಗೆ ಎಸ್ಒಪಿ ಸಿದ್ಧಪಡಿಸಲು ಏರ್‌ಲೈನ್ಸ್‌ಗೆ ಸೂಚಿಸಿದ ಡಿಜಿಸಿಎ