Asianet Suvarna News Asianet Suvarna News

ವಿಮಾನಗಳ ಸಿಗ್ನಲ್ ಜ್ಯಾಮಿಂಗ್: ಪೈಲಟ್‌ಗಳಿಗೆ ಎಸ್ಒಪಿ ಸಿದ್ಧಪಡಿಸಲು ಏರ್‌ಲೈನ್ಸ್‌ಗೆ ಸೂಚಿಸಿದ ಡಿಜಿಸಿಎ

ಭಾರತದಲ್ಲಿ ನಾಗರಿಕ ವಿಮಾನಯಾನ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಪೈಲಟ್‌ಗಳಿಗೆ  ಸ್ಟ್ಯಾಂಟರ್ಡ್‌ ಆಪರೇಟಿಂಗ್ ಪ್ರೊಸಿಜರ್( SOP) ಅಂದರೆ ಪ್ರಮಾಣಿಕೃತ ಕಾರ್ಯ ವಿಧಾನ ಸಿದ್ಧಪಡಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ  ನಾಗರಿಕ ವಿಮಾನಯಾನ ನಿರ್ದೇಶನಾಲಯವೂ ಸೂಚಿಸಿದೆ.

Satalite Signal jamming DGCA instructed to prepare SOP for pilots akb
Author
First Published Nov 25, 2023, 2:59 PM IST

ಮುಂಬೈ: ಭಾರತದಲ್ಲಿ ನಾಗರಿಕ ವಿಮಾನಯಾನ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಪೈಲಟ್‌ಗಳಿಗೆ  ಸ್ಟ್ಯಾಂಟರ್ಡ್‌ ಆಪರೇಟಿಂಗ್ ಪ್ರೊಸಿಜರ್( SOP) ಅಂದರೆ ಪ್ರಮಾಣಿಕೃತ ಕಾರ್ಯ ವಿಧಾನ ಸಿದ್ಧಪಡಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ  ನಾಗರಿಕ ವಿಮಾನಯಾನ ನಿರ್ದೇಶನಾಲಯವೂ ಸೂಚಿಸಿದೆ.

ಉಪಗ್ರಹ ಸಿಗ್ನಲ್ ಜ್ಯಾಮಿಂಗ್ ಅಥವಾ ಸ್ಫೋಯಿಂಗ್ ಸಂಭವಿಸಿದಾಗ ಇದು ವಿಮಾನದ ನ್ಯಾವಿಗೇಷನ್ ಸಿಸ್ಟಮ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಡೆಯುವುದಕ್ಕಾಗಿ ಡಿಜಿಸಿಎ ಈ ಕ್ರಮಕ್ಕೆ ಮುಂದಾಗಿದೆ. ಪೈಲಟ್‌ಗಳು ಎಸ್‌ಒಪಿ ಹೊಂದಿದ್ದಲ್ಲಿ ಇಂತಹ ಸಂದರ್ಭ ಎದುರಾದಾಗ ಕೂಡಲೇ ತಮ್ಮ ಏರ್‌ಲೈನ್‌ ಎಸ್‌ಒಪಿಗಳನ್ನು ಬಳಸಬಹುದಾಗಿದೆ.  ಈ ಹಿನ್ನೆಲೆಯಲ್ಲಿ ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯ ಹಸ್ತಕ್ಷೇಪವನ್ನುನಿರ್ವಹಿಸುವ ಕುರಿತು  ಪೈಲಟ್‌ಗಳು, ಏರ್‌ಲೈನ್ಸ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಈ ಸಲಹಾವಳಿಯನ್ನು ನೀಡಿದೆ. 

ಪ್ರಯಾಣಿಕರಿಗೆ ಸೌಲಭ್ಯ ನೀಡದ ಹಿನ್ನೆಲೆ: ಡಿಜಿಸಿಎನಿಂದ ಏರ್‌ ಇಂಡಿಯಾಗೆ 10 ಲಕ್ಷ ರು. ದಂಡ

ಇದರ ಜೊತೆಗೆ GNSS ಹಸ್ತಕ್ಷೇಪದ ನಿಜವಾದ ಅಥವಾ ಶಂಕಿತ ಪ್ರಕರಣಗಳನ್ನು ವರದಿ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಕೇಳಿದೆ. ಆನ್-ಬೋರ್ಡ್ ಜಿಎನ್‌ಎಸ್‌ಎಸ್‌ ಆಧಾರಿತ ನ್ಯಾವಿಗೇಷನ್ ಸಿಸ್ಟಮ್‌ಗಳ ನಷ್ಟದಿಂದಾಗಿ ಸಂಭವಿಸಬಹುದಾದ ಅಪಾಯಗಳು ಮತ್ತು ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ, ಪೈಲಟ್‌ಗಳಿಗೆ ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು  SOPಗಳನ್ನು ಸಿದ್ಧಪಡಿಸುವುದು, ಪೈಲಟ್‌ಗಳ ಪುನರಾವರ್ತಿತ ತರಬೇತಿಯಲ್ಲಿ ಈ ವಿಷಯವನ್ನು ಸೇರಿಸುವುದು ಮತ್ತು ಮುಖ್ಯವಾಗಿ, ಸುರಕ್ಷತೆಯ ಅಪಾಯದ ಮೌಲ್ಯಮಾಪನವನ್ನು ನಡೆಸುವುದಕ್ಕಾಗಿ ಎಸ್‌ಒಪಿ ಸಿದ್ಧಪಡಿಸಲು ಡಿಜಿಸಿಎ ಕೇಳಿದೆ. 

ಕಳೆದ ಕೆಲವು ತಿಂಗಳುಗಳಲ್ಲಿ  ಮಧ್ಯ ಪ್ರಾಚ್ಯ ಮತ್ತು ಯುರೋಪ್‌ ಮಧ್ಯ ಭಾಗಗಳಲ್ಲಿ ವಿಮಾನಯಾನ ಮತ್ತು ಚಾರ್ಟರ್ ಜೆಟ್‌ಗಳು ಸಂಘರ್ಷ ವಲಯಗಳ ಸಮೀಪದಲ್ಲಿ ಹಾರುತ್ತಿರುವ ಹಲವು ಘಟನೆಗಳು ನಡೆದ ಬಗ್ಗೆ ಹೆಚ್ಚು ವರದಿ ಆಗಿವೆ. ಇಲ್ಲಿ ನ್ಯಾವಿಗೇಷನ್‌ ಸಮಸ್ಯೆಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಈ ಪ್ರದೇಶಗಳಲ್ಲಿ ಏರ್ ಇಂಡಿಯಾ ಹಾಗೂ ಇಂಡಿಗೋ ತಮ್ಮ ಕೆಲವು ವಿಮಾನ ಸೇವೆ ನೀಡುತ್ತಿದೆ. ಹೀಗಾಗಿ ಇಂತಹ ಪ್ರದೇಶಗಳಲ್ಲಿ ಹಾರಾಟ ನಡೆಸುವಾಗ ಪ್ರದೇಶವಾರು ನಿರ್ದಿಷ್ಟತೆಯ ಎಸ್‌ಒಪಿ ಇರಬೇಕು. ಈ ಎಸ್‌ಒಪಿ ಪೈಲಟ್‌ಗಳ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಈ ಸಂದರ್ಭವನ್ನು ನಿರ್ವಹಿಸುವುದಕ್ಕೆ ವಿಮಾನ ಚಾಲಕನಿಗೆ ಸುಲಭವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಶಿವಮೊಗ್ಗದಿಂದ 3 ಹೊರ ರಾಜ್ಯಗಳಿಗೆ ನೇರ ವಿಮಾನಯಾನ ಸೇವೆಗೆ ಚಾಲನೆ ಕೊಟ್ಟ ಸಂಸದ ರಾಘವೇಂದ್ರ!

Follow Us:
Download App:
  • android
  • ios