ತಾಜ್ ಮಹಲ್ ಆಯ್ತು ಈಗ ವೈಟ್‌ಹೌಸ್ ರಹಸ್ಯವೂ ಬಯಲಾಯ್ತು!
ಐಫೆಲ್ ಟವರ್‌ನ ಸೀಕ್ರೆಟ್ ಅಪಾರ್ಟ್‌ಮೆಂಟ್, ಟ್ರಫಲ್ಗರ್ ಸ್ಕ್ವೇರ್‌ನ ಪೋಲೀಸ್ ಸ್ಟೇಶನ್, ವೈಟ್‌ಹೌಸ್‌ನೊಳಗೆ ಮಾಲ್... ಹೀಗೆ ಜಗತ್ತಿನ ಫೇಮಸ್ ಸ್ಥಳಗಳಲ್ಲೆಲ್ಲ ಒಂದು ರಹಸ್ಯ ಅಡಗಿದೆ.
ಜಗತ್ತಿನ ಅತಿ ಖ್ಯಾತ ಸ್ಥಳಗಳಲ್ಲಿ ಕೆಲವಕ್ಕೆ ನೀವು ಭೇಟಿ ನೀಡಿರಬಹುದು, ಇಲ್ಲವೇ ಅವುಗಳ ಕುರಿತ ಫೋಟೋ, ವಿಡಿಯೋ ನೋಡಿರಬಹುದು. ಆದರೆ, ಈ ಎಲ್ಲ ಪ್ರಖ್ಯಾತ ಸ್ಥಳಗಳೂ ಕೆಲವೊಂದು ರಹಸ್ಯಗಳನ್ನು ಅಡಗಿಸಿಕೊಂಡಿರುವುದರ ಬಗ್ಗೆ ನಿಮಗೆ ಖಂಡಿತಾ ಗೊತ್ತಿರಲಿಕ್ಕಿಲ್ಲ. ಇವುಗಳಲ್ಲಿ ಸೀಕ್ರೆಟ್ ಚೇಂಬರ್ಸ್‌ನಿಂದ ಹಿಡಿದು ರಹಸ್ಯ ಒಳಮಾರ್ಗಗಳು, ಯಾರಿಗೂ ಕಾಣದ ಅಪಾರ್ಟ್‌ಮೆಂಟ್ ಮುಂತಾದ ಗುಟ್ಟುಗಳಿವೆ. ಅವುಗಳಲ್ಲಿ ಕೆಲವೊಂದನ್ನು ನಾವಿಲ್ಲಿ ರಟ್ಟು ಮಾಡುತ್ತೇವೆ.
ಟ್ರಫಲ್ಗರ್ ಸ್ಕ್ವೇರ್, ಲಂಡನ್
ಒಮ್ಮೆ ಈ ಜನಪ್ರಿಯ ಚೌಕದ ಗ್ಯಾಲರಿಗಳನ್ನೆಲ್ಲ ನೋಡಿ ಮುಗಿಸಿ, ಜನರು, ಪಾರಿವಾಳಗಳಿಗೆಲ್ಲ ಡಿಕ್ಕಿ ಹೊಡೆದಾದ ಮೇಲೆ ಇಲ್ಲಿನ ಆಗ್ನೇಯ ಮೂಲೆಯನ್ನೊಮ್ಮೆ ಕಣ್ಣು ಹಾಯಿಸಿ. ನಿಮಗೆಲ್ಲೊಂದು ವಿಶೇಷ ಕಂಡರೆ ಹೇಳಿ, ಹೌದು, ಲಂಡನ್‌ನ ಅತಿ ಚಿಕ್ಕ ಪೋಲೀಸ್ ಸ್ಟೇಶನ್ ಅಲ್ಲಿ ನಾಯಿಯ ಮನೆಯಂತೆ ಸಣ್ಣಗೆ ನಿಂತಿದೆ. 1926ರಲ್ಲಿ ಲ್ಯಾಂಪ್ ಪೋಸ್ಟ್ ಆಗಿ ಕಟ್ಟಲಾದ ಇಲ್ಲಿ ಮುಂಚೆ ಪೋಲೀಸ್ ಕುಳಿತುಕೊಂಡು ದಾರಿಹೋಕರ ಮೇಲೆ ಕಣ್ಣಿಡುತ್ತಿದ್ದರು. ಈಗ ಅದನ್ನು ಪೌರಕಾರ್ಮಿಕರ ಸ್ಟೋರ್‌ರೂಂನಂತೆ ಬಳಸಲಾಗುತ್ತಿದೆ.
ರಜೆ ಮುಗಿಯಿತು, ನಾಳೆ ಆಫೀಸ್‍ಗೆ ಹೋಗಬೇಕಲ್ಲ ಎಂದು ಕೊರಗುವವರಿಗೆ 9 ಟಿಪ್ಸ್!
ತಾಜ್‌ಮಹಲ್, ಆಗ್ರಾ
ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿಕೊಂಡಿರುವ ತಾಜ್‌ಮಹಲನ್ನು ಮೊಘಲ್ ದೊರೆ ಶಹಜಹಾನ್ ತನ್ನ ಪತ್ನಿ ಮಮ್ತಾಜ್‌ಳ ಮೇಲಿನ ಪ್ರೀತಿಯ ದ್ಯೋತಕವಾಗಿ ಕಟ್ಟಿಸಿದ್ದಾನೆಂದು ಎಲ್ಲರಿಗೂ ಗೊತ್ತು. ಈ ಚೆಂದದ ಅಮೃತಶಿಲೆಯ ಕಟ್ಟಡದ ಒಳಗೆ ಶಹಜಹಾನ್ ಹಾಗೂ ಮಮ್ತಾಜ್ ಸಮಾಧಿಯಿದೆ. ಆದರೆ, ಬಹಳಷ್ಟು ಪ್ರವಾಸಿಗರಿಗೆ ಗೊತ್ತಿರದ ವಿಷಯವೇನೆಂದರೆ ಇವು ನಿಜವಾದ ಸಮಾಧಿಗಳಲ್ಲ. ನಿಜವಾದ ಸಮಾಧಿಗಳು ಉದ್ಯಾನದ ಮಟ್ಟದಲ್ಲಿ ಕೆಳಗಿದ್ದು, ಸಾರ್ವಜನಿಕರಿಗೆ ಇಲ್ಲಿಗೆ ಪ್ರವೇಶವಿಲ್ಲ.
ದಿ ಎಂಪೈರ್ ಸ್ಟೇಟ್ ಬಿಲ್ಡಿಂಗ್, ನ್ಯೂಯಾರ್ಕ್
ಹಲವಾರು ಮೂವಿಗಳಲ್ಲಿ ಈ ಕಟ್ಟಡದ ಸೌಂದರ್ಯವನ್ನು ನೀವು ಸವಿದಿರಬಹುದು. ಒಂದು ಕಾಲದಲ್ಲಿ ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು. ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅವರಲ್ಲಿ ಶೇ.90ರಷ್ಟು ಜನಕ್ಕೆ ಈ ಕಟ್ಟಡದ ಗುಟ್ಟೊಂದು ಗೊತ್ತಿಲ್ಲ. ಈ ಕಟ್ಟಡದ 103ನೇ ಅಂತಸ್ತಿನಲ್ಲಿರುವ ಅಬ್ಸರ್ವೇಶನ್ ಡೆಕ್ ಸಾರ್ವಜನಿಕರಿಗೆ ಮುಚ್ಚಲಾಗಿದೆ. ಆದರೆ ಇಲ್ಲಿಂದ ನೋಡಿದರೆ ಇಡೀ ನ್ಯೂಯಾರ್ಕ್ ನಗರ ಬಹಳ ಸುಂದರವಾಗಿ ಕಾಣುತ್ತದೆ.
ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!
ಐಫೆಲ್ ಟವರ್, ಪ್ಯಾರಿಸ್
ಜಗತ್ತಿನ ಅತಿ ಫೇಮಸ್ ಟವರ್‌ಗಳಲ್ಲೊಂದಾಗಿರುವ ಇದನ್ನು ಗಸ್ಟೇವ್ ಐಫೆಲ್ ನಿರ್ಮಿಸಿದರು. ಇದರ ಮೂರನೇ ಅಂತಸ್ತಿನಲ್ಲಿ ಸೀಕ್ರೆಟ್ ಅಪಾರ್ಟ್‌ಮೆಂಟ್ ಇದ್ದು, ಕೆಲಸಕ್ಕಾಗಿ ಹಾಗೂ ಅಪರೂಪಕ್ಕೆ ಬರುವ ಥಾಮಸ್ ಎಡಿಸನ್‌ನಂಥ ವಿಜ್ಞಾನಿಗಳನ್ನು ಮನರಂಜಿಸಲು ಬಳಸಲಾಗುತ್ತಿತ್ತು. ಈ ಸಣ್ಣ ಅಪಾರ್ಟ್‌ಮೆಂಟನ್ನು ಖಗೋಳ ಹಾಗೂ ಶಾರೀರಿಕ ಅಬ್ಸರ್ವೇಶನ್‌ಗಾಗಿ ಐಫೆಲ್ ಬಳಸುತ್ತಿದ್ದರು. 19ನೇ ಶತಮಾನದ ಪ್ಯಾರಿಸ್‌ನ ಅತಿ ಶ್ರೀಮಂತರೆನಿಸಿಕೊಂಡವರೆಲ್ಲ ಈ ಅಪಾರ್ಟ್‌ಮೆಂಟ್‌ನಲ್ಲಿ ಕನಿಷ್ಠ ಒಂದು ರಾತ್ರಿ ಉಳಿಯಬೇಕೆಂಬ ಬಯಕೆ ವ್ಯಕ್ತಪಡಿಸಿದರೂ, ಅದನ್ನು ಕೊಳ್ಳಲು ಮನಸ್ಸು ಮಾಡಿದರೂ ಐಫೆಲ್ ಇದನ್ನು ನೀಡಲಿಲ್ಲ. ಇಂದು ಇಲ್ಲಿ ವಿಸಿಟರ್‌ಗಳನ್ನು ಒಳಬಿಡಲಾಗುತ್ತಿದೆ.
ದಿ ವೈಟ್ ಹೌಸ್, ವಾಷಿಂಗ್ಟನ್ ಡಿಸಿ
ಜಗತ್ತಿನ ಅತಿ ಪವರ್‌ಫುಲ್ ಮನೆ ಎನಿಸಿಕೊಂಡ ಶ್ವೇತಭವನದ ಬಗ್ಗೆ ಯಾರಿಗೆ ಗೊತ್ತಿಲ್ಲ? ಆದರೆ ಇದರ ಬೇಸ್‌ಮೆಂಟ್‌ನಲ್ಲಿ ಹಲವಾರು ರೂಂಗಳಿರುವುದು, ಬೌಲಿಂಗ್ ಆ್ಯಲಿ, ಹೂವಿನಂಗಡಿ, ಬಡಗಿಯ ಅಂಗಡಿ ಹಾಗೂ ದಂತವೈದ್ಯರ ಕ್ಲಿನಿಕ್ ಎಲ್ಲವೂ ಇದ್ದು, ಇದು ಬಹುತೇಕ ಯಾರಿಗೂ ಗೊತ್ತಿಲ್ಲ. ಇದನ್ನು ನೋಡಿದರೆ ದೊಡ್ಡ ಮಾಲೊಂದಕ್ಕೆ ಹೋದ ಅನುಭವವಾಗುತ್ತದೆ.
'ಮಾಯನ್' ನಾಗರೀಕತೆಯ ಈ ವಿಷಯಗಳು ಅಚ್ಚರಿಗೊಳಿಸುವುದರಲ್ಲಿ ಅನುಮಾನವಿಲ್ಲ !
ಶೇಖ್ ಝಾಯೆದ್ ಗ್ರ್ಯಾಂಡ್ ಮಸೀದಿ, ಅಬು ಧಾಬಿ
ಜಗತ್ತಿನ ಅತಿ ದೊಡ್ಡ ಮಸೀದಿಗಳಲ್ಲೊಂದು ಎನಿಸಿಕೊಂಡಿರುವ ಶೇಖ್ ಝಾಯೆದ್ ಗ್ರ್ಯಾಂಡ್ ಮಸೀದಿ ಒಂದು ಬಾರಿಗೆ 40 ಸಾವಿರಕ್ಕೂ ಹೆಚ್ಚು ಭಕ್ತರನ್ನು ಒಳಗೊಳ್ಳಬಲ್ಲದು. ಇದರಲ್ಲಿ 82 ಡೋಮ್‌ಗಳಿದ್ದು, 24 ಕ್ಯಾರೆಟ್ ಚಿನ್ನದ ಹಲವಾರು ದೀಪಗಳನ್ನು ಹೊಂದಿದೆ. ಇವೆಲ್ಲಕ್ಕಿಂತ ಹೆಚ್ಚು ಲಕ್ಷುರಿಯಸ್ ಆಗಿದ್ದೂ ಹಲವರ ಗಮನಕ್ಕೆ ಬಾರದಿರುವುದು ನೆಲ. ಹೌದು, ಈ ಮಸೀದಿಗೆ ಜಗತ್ತಿನ ಅತಿ ದೊಡ್ಡ ಹ್ಯಾಂಡ್‌ಮೇಡ್ ನೆಲಹಾಸು ಬಳಸಲಾಗಿದೆ. ಇದನ್ನು ಮಾಡಲು 1200 ಮಹಿಳೆಯರಿಗೆ 2 ವರ್ಷಗಳು ಬೇಕಾಗಿವೆ. ಸುಮಾರು 35 ಟನ್ ತೂಕವಿರುವ ಕಾರ್ಪೆಟ್, 60,000 ಚದರ ಅಡಿಗಿಂತ ದೊಡ್ಡದಿದೆ.