ಆಗಸದಲ್ಲಿ ಸ್ಥಗಿತಗೊಂಡ ವಿಮಾನದ ಎಸಿ : ತಲೆ ತಿರುಗಿ ಬಿದ್ದ 3 ಪಯಣಿಗರು
ಮಧ್ಯ ಆಗಸದಲ್ಲಿ ಚಲಿಸುತ್ತಿದ್ದ ವಿಮಾನವೊಂದರಲ್ಲಿ ಎಸಿ ಸ್ಥಗಿತಗೊಂಡು ಮೂವರು ಮೂರ್ಛೆ ಹೋದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಎಂದು ಹೇಳಿಕೊಂಡಿರುವ ರೋಶ್ನಿ ವಾಲಿಯಾ ಎಂಬುವವರು ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ.
ನವದೆಹಲಿ: ಮಧ್ಯ ಆಗಸದಲ್ಲಿ ಚಲಿಸುತ್ತಿದ್ದ ವಿಮಾನವೊಂದರಲ್ಲಿ ಎಸಿ ಸ್ಥಗಿತಗೊಂಡು ಮೂವರು ಮೂರ್ಛೆ ಹೋದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಎಂದು ಹೇಳಿಕೊಂಡಿರುವ ರೋಶ್ನಿ ವಾಲಿಯಾ ಎಂಬುವವರು ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. ಅವರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಎಸಿ ಕೆಟ್ಟಿದ್ದರಿಂದ ಕಂಗೆಟ್ಟ ಪ್ರಯಾಣಿಕರು ಗಾಳಿಗಾಗಿ ತಮಗೆ ನೀಡಿದ ಸುರಕ್ಷತಾ ಸೂಚನಾ ಕಾರ್ಡ್ (safety instruction card) ಅನ್ನು ಬಳಸಿಕೊಂಡು ಗಾಳಿ ಬೀಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಗೋ ಫಸ್ಟ್ ವಿಮಾನದಲ್ಲಿ ಈ ಅನಾಹುತ ನಡೆದಿದೆ. ವಿಮಾನದಲ್ಲಿ ಮಧ್ಯ ಆಗಸದಲ್ಲಿ ಹಾರುತ್ತಿದ್ದಾಗಲೇ ವಿಮಾನದ ಹವಾನಿಯಂತ್ರಕವೂ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದರಿಂದ ಪ್ರಯಾಣಿಕರು ಉಸಿರಾಡಲು ಕಷ್ಟಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಕೆಲವರು ಮೂರ್ಛೆ ಕೂಡ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಬೇಸಿಗೆಯ ಋತುವಿನ ಅತೀ ಹೆಚ್ಚು ಸೆಖೆ ಇರುವ ಕೊನೆ ತಿಂಗಳಿನಲ್ಲಿ ಈ ಘಟನೆ ನಡೆದಿದೆ. ವಿಮಾನದೊಳಗೆ ಮಹಿಳೆಯೊಬ್ಬರು ಅಳುತ್ತಿರುವುದು ಕಂಡು ಬಂದಿದೆ.
Travel Tips: ಸಾಮಾಜಿಕ ಜಾಲತಾಣದಲ್ಲಿ ಬೋರ್ಡಿಂಗ್ ಪಾಸ್ ಪೋಸ್ಟ್ ಮಾಡುವ ಮುನ್ನ ಎಚ್ಚರ
ವಿಮಾನ ಸಂಖ್ಯೆ G8 2316 ನಲ್ಲಿ ಈ ಘಟನೆ ನಡೆದಿದೆ. ಇದು ಕೆಟ್ಟ ಅನುಭವಗಳಲ್ಲಿ ಒಂದಾಗಿದೆ. ಇದರೊಳಗೆ ಎಸಿ ಕೆಲಸ ಮಾಡುತ್ತಿರಲಿಲ್ಲ. ಎತ್ತರದಲ್ಲಿ ಹಾರಾಡುತ್ತಿದ್ದಿದ್ದರಿಂದ ಉಸಿರಾಟದ ತೊಂದರೆಯಾಗಿದೆ. ಈ ಉಸಿರುಗಟ್ಟುವಿಕೆಯಿಂದ ಹೊರಬರಲು ಪ್ರಯಾಣಿಕರಿಗೆ ಬೇರೆ ದಾರಿ ಇರಲಿಲ್ಲ. ವಿಪರೀತ ಬೆವರುತ್ತಿದ್ದ ಕೆಲ ಪ್ರಯಾಣಿಕರು ಕುಸಿದು ಬೀಳುವ ಅಂಚಿನಲ್ಲಿದ್ದರು. 3 ಜನರು ಮೂರ್ಛೆ ಹೋದರು, ವಿಮಾನದಲ್ಲಿದ್ದ ಕೀಮೋ ಥೆರಪಿಗೆ ಒಳಗಾಗಿದ್ದ ಕ್ಯಾನ್ಸರ್ ಪೇಶೆಂಟ್ ಒಬ್ಬರಿಗಂತೂ ಉಸಿರಾಡಲು ಕೂಡ ಸಾಧ್ಯವಾಗಲಿಲ್ಲ ಎಂದು ರೋಶ್ನಿ ವಾಲಿಯಾ (Roshni Walia) ಟ್ವೀಟ್ ಮಾಡಿದ್ದಾರೆ.
ಶಿಫ್ಟ್ ಮುಗಿತೆಂದು ವಿಮಾನ ಪ್ರಯಾಣ ಮುಂದುವರೆಸಲು ನಿರಾಕರಿಸಿದ ಪಾಕ್ ಪೈಲಟ್
ಇವರ ಟ್ವಿಟ್‌ಗೆ ಗೋ ಫಸ್ಟ್ (Go First) ವಿಮಾನಯಾನ ಸಂಸ್ಥೆ ಪ್ರತ್ಯುತ್ತರ ನೀಡಿದ್ದು, ಏರ್‌ಲೈನ್ ಈ ವಿಷಯವನ್ನು ಪರಿಶೀಲಿಸುವ ಸಲುವಾಗಿ ತಮ್ಮ ಪ್ರಯಾಣದ ವಿವರಗಳನ್ನು ಹಂಚಿಕೊಳ್ಳುವಂತೆ ರೋಶ್ನಿ ಅವರಿಗೆ ಕೇಳಿಕೊಂಡಿದೆ. ವಾಲಿಯಾ ಜೂನ್ 14 ರಂದು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದರು.
ಪ್ರತಿಯೊಬ್ಬರೂ ಸೆಖೆ ತಡೆಯಲಾಗದೆ ಕಂಗೆಟ್ಟಿದ್ದಾರೆ. ವಿಮಾನವೂ 5:30ಕ್ಕೆ ಟೇಕ್ ಆಫ್ ಆಗಿದ್ದು, ಈಗ ಸಮಯ 6:20 ಆದಾಗ್ಯೂ ಎಸಿ ಕೆಲಸ ಮಾಡುತ್ತಿಲ್ಲ. ಕ್ಯಾನ್ಸರ್ ರೋಗಿಯೊಬ್ಬರಂತೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹವಾ ನಿಯಂತ್ರಕ ಕೆಲಸ ಮಾಡದಿದ್ದಲ್ಲಿ ವಿಮಾನವೂ ಟೇಕ್ ಆಫ್ ಆಗುವಂತಿಲ್ಲ. ನಾವು ಒನ್ ವೇ ಪ್ರಯಾಣಕ್ಕೆ 12,000 ರೂಪಾಯಿಯನ್ನು ಪಾವತಿಸಿದ್ದೇವೆ. ಏತಕ್ಕಾಗಿ? ದಯವಿಟ್ಟು ಏನಾದರೂ ಮಾಡಿ, ಕ್ರಮ ಕೈಗೊಳ್ಳಿ ಎಂದು ಪ್ರಯಾಣಿಕರು ವಿಡಿಯೋದಲ್ಲಿ ಹೇಳುತ್ತಿದ್ದಾರೆ.
ಈ ಟ್ವಿಟ್‌ನ್ನುಯಾರೋ ಟ್ವಿಟ್ಟರ್ ಬಳಕೆದಾರರು ನಾಗರಿಕ ವಿಮಾನಯಾನ ನಿರ್ದೇಶನಾಲಯದ (civil aviation regulator) ಡಿಜಿಸಿಎಗೆ (DGCA) ಟ್ಯಾಗ್ ಮಾಡಿದ್ದು, ತನಿಖೆ ಮಾಡುವಂತೆ ಕೇಳಿದ್ದಾರೆ.