Asianet Suvarna News Asianet Suvarna News

UPI Payments Safety: ಹಣ ಪಾವತಿಗಾಗಿ UPI ಬಳಸುತ್ತಿರಾ? ಹಾಗಾದ್ರೆ ಈ ಮುನ್ನೆಚ್ಚರಿಕೆ ಕ್ರಮ ತಪ್ಪದೇ ಪಾಲಿಸಿ!

Google Pay, PhonePe, Paytmಗಳಂತಹ ಹಲವಾರು ಆ್ಯಪ್‌ಗಳು ಆನ್‌ಲೈನ್ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತವೆ. UPI ಪಾವತಿಗಳನ್ನು ಮಾಡುವಾಗ ನೀವು ಪರಿಗಣಿಸಬೇಕಾದ ಕೆಲವು ಸುರಕ್ಷತಾ ಸಲಹೆಗಳು ಇಲ್ಲಿವೆ.
 

UPI payments safety tips and tricks to avoid loss of money in online frauds mnj
Author
Bengaluru, First Published Dec 20, 2021, 3:04 PM IST

Tech Desk: ದೇಶದಲ್ಲಿ ಡಿಜಿಟಲೀಕರಣವನ್ನು ಉತ್ತೇಜಿಸಲು ಸರ್ಕಾರವು ಹಲವಾರು ನಿಯಮಗಳನ್ನು ಹೊರತಂದಿದೆ. ವಿಶೇಷವಾಗಿ ಹಣದ ವಹಿವಾಟುಗಳಿಗಾಗಿ ಸಾಕಷ್ಟು ಡಿಜಿಟಲ್‌ ಸೌಲಭ್ಯಗಳನ್ನು ನೀಡಿದೆ. ಕೊರೋನವೈರಸ್ ಸಾಂಕ್ರಾಮಿಕ ರೋಗ ಹರಡಿದ ನಂತರ ಜನರು ನಗದು ಬದಲು ಆನ್‌ಲೈನ್ ಅಥವಾ ಡಿಜಿಟಲ್ ವಹಿವಾಟುಗಳಿಗೆ ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಇದರ ಪರಿಣಾಮವಾಗಿ, GPay, Paytm, PhonePe ನಂತಹ ಅಪ್ಲಿಕೇಶನ್‌ಗಳ ಬೃಹತ್ ಡೌನ್‌ಲೋಡ್ ಹೆಚ್ಚಾಗಿದೆ. ಈ ಮೂಲಕ UPI ಮೂಲಕ ಆನ್‌ಲೈನ್ ಪಾವತಿಗಳನ್ನು ಮಾಡುವುದು ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿದೆ.

 ಆದಾಗ್ಯೂ, UPI ಪಾವತಿಯು ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿದೆ. ಆದ್ದರಿಂದ, ನೀವು  UPI Payments ಬಳಸುವ ಮುನ್ನ ಸುರಕ್ಷತಾ ಸಲಹೆಗಳು ಮತ್ತು ತಂತ್ರಗಳ ಬಗ್ಗೆ ತಿಳಿದಿರಬೇಕು. ಈ ಮೂಲಕ ಹಣ ನಷ್ಟವಾಗುವುದನ್ನು ತಪ್ಪಿಸುವುದರ ಜತೆಗ ಜಾಗರೂಕರಾಗಿರಬೇಕು ಮತ್ತು ಆನ್‌ಲೈನ್ ಅಥವಾ ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಬೇಕು. ಒಂದು ತಪ್ಪು ಲಿಂಕ್‌ನ ಕ್ಲಿಕ್‌ ಮಾಡಿದರೆ ವಂಚಕರ ಗಾಳಕ್ಕೆ ಬೀಳುವುದು ಖಡಾಖಂಡಿತ. ನಿಮ್ಮ ATM Card ಅಥವಾ UPIನ ಸೀಕ್ರೆಟ್ ಪಿನ್‌ ಸೇರಿದಂತೆ ನಿಮ್ಮ ವೈಯುಕ್ತಿಕ  ವಿವರಗಳನ್ನು ಒದಗಿಸುವುದು ನಿಮಗೆ ದೊಡ್ಡ ನಷ್ಟವನ್ನು ಉಂಟುಮಾಡಬಹುದು.

ಆನ್‌ಲೈನ್ ಪಾವತಿ ಪ್ರಕ್ರಿಯೆ ಸರಳ ಮತ್ತು ಸುಲಭ!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಪಾವತಿ ಸೌಲಭ್ಯಗಳು ಎಲ್ಲೆಡೆ ಲಭ್ಯವಿದೆ. ದೊಡ್ಡ ಶಾಪಿಂಗ್ ಮಾಲ್‌ನಿಂದ ಸಣ್ನ ಓಣಿಗಳಲ್ಲಿರುವ ಕಿರಾಣಿ ಅಂಗಡಿಯಾಗಿರಬಹುದು, ಪ್ರತಿಯೊಬ್ಬರೂ ಆನ್‌ಲೈನ್ ಪೇಮೆಂಟ್‌ಗಳನ್ನು ಸ್ವೀಕರಿಸುತ್ತಾರೆ. ಆನ್‌ಲೈನ್ ಪಾವತಿ ಮಾಡುವ ಪ್ರಕ್ರಿಯೆಯು ಸರಳ ಮತ್ತು ಸುಲಭವಷ್ಟೇ ಅಲ್ಲದೆ  ನಗದು ಅಥವಾ ಚಿಲ್ಲರೆ ಹಣವನ್ನು ಇಟ್ಟುಕೊಳ್ಳುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ಮೂಲಕ ಆನ್‌ಲೈನ್ ಪಾವತಿ ಮಾಡಲು ನೀವು ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ, ಮೊತ್ತ, ಪಿನ್ ನಮೂದಿಸಿ ಮತ್ತು ನಿಮ್ಮ ಪಾವತಿಯನ್ನು ಮಾಡಬೇಕಾಗುತ್ತದೆ

Google Pay, PhonePe, Paytmಗಳಂತಹ ಹಲವಾರು ಆ್ಯಪ್‌ಗಳು ಆನ್‌ಲೈನ್ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತವೆ. ನೀವು ಇವುಗಳಲ್ಲಿ ಯಾವುದಾದರೂ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ವಂಚನೆ ಮತ್ತು ಹಣದ ನಷ್ಟವನ್ನು ತಪ್ಪಿಸಲು ನೀವು ಕೆಲವು ವಿಷಯಗಳನ್ನು ಕಾಳಜಿ ವಹಿಸಬೇಕಾಗುತ್ತದೆ. UPI ಪಾವತಿಗಳನ್ನು ಮಾಡುವಾಗ ನೀವು ಪರಿಗಣಿಸಬೇಕಾದ ಕೆಲವು ಸುರಕ್ಷತಾ ಸಲಹೆಗಳು ಇಲ್ಲಿವೆ.

Top UPI payments safety tips and tricks

1.Screen Lock: ನಿಮ್ಮ ಫೋನ್‌ಗೆ ಮಾತ್ರವಲ್ಲದೆ ಎಲ್ಲಾ ಪಾವತಿ ಅಥವಾ ಹಣಕಾಸು ವಹಿವಾಟು ಅಪ್ಲಿಕೇಶನ್‌ಗಳಿಗೂ ನೀವು  ಸ್ಕ್ರೀನ್ ಲಾಕ್, ಪಾಸ್‌ವರ್ಡ್ ಅಥವಾ ಪಿನ್ ಅನ್ನು ಹೊಂದಿಸಬೇಕು. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಬಳಸಿ ಸರಳ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಬಾರದು. ಸಾಧ್ಯವಾದಷ್ಟು ನಿಮ್ಮ ಬಗ್ಗೆ ಇತರರಿಗೆ ಒಂದಿಷ್ಟೂ ತಿಳಿಯದ ಮಾಹಿತಿ ಬಳಸಿ ನೀವು ಪಾಸ್‌ವರ್ಡ್ ರಚಿಸಬಹುದು. ಇದು ಸುರಕ್ಷಿತ ಮತ್ತು ವಂಚಕರ ಬಲೆಗೆ ಬೀಳದಂತೆ ತಡೆಯುವ ಪ್ರಾಥಮಿಕ ಮಾರ್ಗ

2.Do not share your PIN: ನಿಮ್ಮ ಪಿನ್ ಅನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಮ್ಮ ಪಿನ್ ಅನ್ನು ಹಂಚಿಕೊಳ್ಳುವುದರಿಂದ ನೀವು ವಂಚನೆಗಳಿಗೆ ಗುರಿಯಾಗಬಹುದು. ನಿಮ್ಮ ಪಿನ್‌ ಬಳಸಿ ಯಾರಾದರೂ ನಿಮ್ಮ ಫೋನ್ ಆ್ಯಕ್ಸಸ್‌ ಪಡೆದು  ಮೊತ್ತವನ್ನು ವರ್ಗಾಯಿಸಬಹುದು. ನಿಮ್ಮ ಪಿನ್ ಬಹಿರಂಗಗೊಂಡಿದೆ ಎಂದು ನೀವು ಭಾವಿಸಿದರೆ, ನೀವು ತಕ್ಷಣ ಅದನ್ನು ಬದಲಾಯಿಸಬೇಕು.

3.Do not click on unverified links or attend fake calls: ಕೆಲವು ಪರಿಶೀಲಿಸದ ಲಿಂಕ್‌ಗಳನ್ನು ಹೊಂದಿರುವ ಬಹಳಷ್ಟು ನಕಲಿ ಸಂದೇಶಗಳು ನಿಮ್ಮ ಇನ್‌ಬಾಕ್ಸ್‌ನಲ್ಲಿ ಬರುತ್ತಿರಬಹುದು. ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ನೀವು ತಪ್ಪಿಸಬೇಕು ಏಕೆಂದರೆ ಇವು ನಿಮಗೆ ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ನೀವು ನಕಲಿ ಕರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕರೆ ಮಾಡುವವರು ನಿಮ್ಮ ಬ್ಯಾಂಕ್ ಅಥವಾ ಇತರ ಸಂಸ್ಥೆಯಿಂದ ಕರೆ ಮಾಡುತ್ತಿರುವಂತೆ ನಟಿಸುತ್ತಾರೆ ಮತ್ತು PIN, OTP, ಇತ್ಯಾದಿಗಳಂತಹ ನಿಮ್ಮ ವಿವರಗಳನ್ನು ಕೇಳಬಹುದು. 

ಹ್ಯಾಕರ್‌ಗಳು ಸಾಮಾನ್ಯವಾಗಿ ಲಿಂಕ್‌ಗಳನ್ನು ಹಂಚಿಕೊಳ್ಳುತ್ತಾರೆ ಅಥವಾ ಕರೆಗಳನ್ನು ಮಾಡುತ್ತಾರೆ ಮತ್ತು ಪರಿಶೀಲನೆಗಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಹೇಳುತ್ತಾರೆ. ಬ್ಯಾಂಕ್‌ಗಳು ಎಂದಿಗೂ PIN, OTP ಅಥವಾ ಯಾವುದೇ ಇತರ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ ಎಂಬುದನ್ನು ಗಮನಿಸಬಹುದು.

4.Keep updating UPI App regularly: ಪ್ರತಿ ಅಪ್ಲಿಕೇಶನ್‌ಗೆ ಅಪ್ಡೇಟ್‌ನ ಅಗತ್ಯವಿದೆ ಮತ್ತು ಪ್ರತಿ ಅಪ್‌ಡೇಟ್ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತರುತ್ತದೆ. ನೀವು ಯಾವಾಗಲೂ UPI ಪಾವತಿ ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸುತ್ತಿರಬೇಕು.

5.Avoid using multiple payment applications: ಡಿಜಿಟಲ್‌ ಪೇಮೆಂಟ್‌ ಹೆಸರಿನಲ್ಲಿ ಸಾಕಷ್ಟು ಅಪ್ಲಿಕೇಶನ್‌ಗಳು ಲಭ್ಯವಿವೆ. ಆದರೆ ನಿಮ್ಮ ಫೋನ್‌ನಲ್ಲಿ ಹಲವಾರು ಪೇಮೆಂಟ್‌ ಅಪ್ಲಿಕೇಶನ್‌ಗಳನ್ನು ಇಟ್ಟುಕೊಳ್ಳುವುದನ್ನು ನೀವು ತಪ್ಪಿಸಬೇಕು. ನೀವು ವಿಶ್ವಾಸಾರ್ಹ ಮತ್ತು ಪರಿಶೀಲಿಸಿದ ಪಾವತಿ ಅಪ್ಲಿಕೇಶನ್‌ಗಳನ್ನು ಮಾತ್ರ ಇನ್ಸ್ಟಾಲ್‌ ಮಾಡಬೇಕು. 

ಇದನ್ನೂ ಓದಿ:

1) Most Spammed Countries: ಅತಿ ಹೆಚ್ಚು ಸ್ಪ್ಯಾಮ್ ಕರೆಗಳು ಸ್ವೀಕರಿಸಿದ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ!

2) Social Media Law Violation: ಮೆಟಾ, ಟ್ವಿಟರ್, ಟಿಕ್‌ಟಾಕ್‌ಗೆ ಬಿತ್ತು ಭರ್ಜರಿ ದಂಡ!

3) Social Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

Follow Us:
Download App:
  • android
  • ios