Most Spammed Countries: ಅತಿ ಹೆಚ್ಚು ಸ್ಪ್ಯಾಮ್ ಕರೆಗಳು ಸ್ವೀಕರಿಸಿದ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ!
*ಸ್ಪ್ಯಾಮ್ ಕರೆಗಳಲ್ಲಿ ಶೇಕಡಾ 93.5 ರಷ್ಟು ಸೇಲ್ಸ್ ಕಾಲ್ಸ್
*ಒಂಬತ್ತನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ
*ತಿಂಗಳಿಗೆ ಸರಾಸರಿ 15 ಸ್ಪ್ಯಾಮ್ ಕರೆ ಸ್ವೀಕರಿಸಿದ ಇಂಡಿಯನ್ಸ್!
Tech Desk: ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಸ್ಪ್ಯಾಮ್ ಕರೆಗಳು (Spam Calls) ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ನೀವು ಕೂಡ ಸಹಜವಾಗಿ ಕಂಪನಿ ಆಫರ್, ಕಾಲರ್ ಟ್ಯೂನ್‌ಗಳಂತಹ ಕರೆಗಳನ್ನು ಸ್ವೀಕರಿಸಿರಬಹುದು. ಕೆಲವೊಮ್ಮೆ ಇಂಥಹ ಕರೆಗಳು ಜನರಿಗೆ ಸಾಕಷ್ಟು ತೊಂದರೆಗಳನ್ನು ಕೊಡುತ್ತವೆ. ಟಿಲಿಕಾಮ್ ಕಂಪನಿಗಳು ಡು ನಾಟ್ ಡಿಸ್ಟ್‌ರ್ಬ್ (Do not Disturb) ಆಯ್ಕೆಯನ್ನು ನೀಡಿದ್ದರು ಸ್ಪ್ಯಾಮರ್‌ಗಳಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ!
ಭಾರತದಲ್ಲಿ ಕಳೆದ ವರ್ಷದಲ್ಲಿ ಈ ಸಮಸ್ಯೆಯು ಇನ್ನೂ ಹೆಚ್ಚಾಗಿದ್ದು ಪ್ರಪಂಚದಲ್ಲೇ ಅತಿ ಹೆಚ್ಚು ಸ್ಪ್ಯಾಮ್ ಕರೆ ಸ್ವೀಕರಿಸಿದ ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟ್ರೂ ಕಾಲರ್‌ನ (Truecaller) ಹೊಸ ವರದಿಯು ಸ್ಪ್ಯಾಮ್ ಕರೆಗಳು ಮತ್ತು ಜಗತ್ತಿನಾದ್ಯಂತ ಅದರ ಪರಿಣಾಮಗಳ ಕುರಿತು ವಿವರವಾದ ಅಧ್ಯಯನವನ್ನು ಬಹಿರಂಗಪಡಿಸಿದೆ. ಸ್ಪ್ಯಾಮ್ ಕರೆಗಳಿಂದ ಹೆಚ್ಚು ಪ್ರಭಾವಿತವಾಗಿರುವ ಟಾಪ್ 20 ದೇಶಗಳ ಪಟ್ಟಿಯಲ್ಲಿ ಭಾರತವು ಈ ವರ್ಷ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
9ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ!
2020 ರಲ್ಲಿ ಭಾರತವು ಸ್ಪ್ಯಾಮ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು ಆದರೆ ಈಗ ಬ್ರೆಜಿಲ್, ಪೆರು ಮತ್ತು ಉಕ್ರೇನ್ ನಂತರ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ಬಳಕೆದಾರರಿಗೆ ತಿಂಗಳಿಗೆ ಸರಾಸರಿ 32.9 ಸ್ಪ್ಯಾಮ್ ಕರೆಗಳೊಂದಿಗೆ ಬ್ರೆಜಿಲ್ ಅಗ್ರಸ್ಥಾನದಲ್ಲಿದೆ, ಪೆರು ಪ್ರತಿ ಬಳಕೆದಾರರಿಗೆ ತಿಂಗಳಿಗೆ 18.02 ಕರೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತದ ಬಳಕೆದಾರರು ತಿಂಗಳಿಗೆ ಸರಾಸರಿ 15 ಸ್ಪ್ಯಾಮ್ ಕರೆ ಸ್ವೀಕರಿಸಿದ್ದಾರೆ ಎಂದು ವರದಿ ಹೇಳಿದೆ ಟ್ರೂ ಕಾಲರ್ ವರದಿ ಪ್ರಕಾರ ಸ್ಪ್ಯಾಮ್ ಕರೆ ಸ್ವೀಕರಿಸಿದ ಟಾಪ್ 20 ದೇಶಗಳು.
ಸೇಲ್ಸ್ ಮತ್ತು ಟೆಲಿಮಾರ್ಕೆಟಿಂಗ್ ಕರೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ ಎಂದು ವರದಿ ಹೇಳಿದೆ. ಈ ವರ್ಷ, ಎಲ್ಲಾ ವರ್ಗಗಳ ಮಾರಾಟ-ಸಂಬಂಧಿತ ಸ್ಪ್ಯಾಮ್ ಕರೆಗಳು ಒಟ್ಟು 93.5 ಪ್ರತಿಶತ ಪಾಲನ್ನು ಹೊಂದಿವೆ. ಹಣಕಾಸು ಸೇವೆಗಳು (Financial Calls) ಸ್ಪ್ಯಾಮ್ ಕರೆಗಳಲ್ಲಿ ಶೇಕಡಾ 3.1 ರಷ್ಟಿದ್ದರೆ, ಉಪದ್ರವಕಾರಿ ಕರೆಗಳು (Nuisance calls) ಮತ್ತು ಸ್ಕ್ಯಾಮ್ ಕರೆಗಳು ಕ್ರಮವಾಗಿ ಶೇಕಡಾ 2 ಮತ್ತು 1.4 ಶೇಕಡಾ ಪಾಲನ್ನು ಹೊಂದಿವೆ.
“ಈ ವರ್ಷ ಭಾರತದಲ್ಲಿ ಕೇವಲ ಒಬ್ಬ ಸ್ಪ್ಯಾಮರ್‌ನಿಂದ 202 ಮಿಲಿಯನ್ ಸ್ಪ್ಯಾಮ್ ಕರೆಗಳನ್ನು ಮಾಡಲಾಗಿದೆ. ಅದು ಪ್ರತಿದಿನ 6,64,000 ಕ್ಕೂ ಹೆಚ್ಚು ಕರೆಗಳು ಮತ್ತು ಪ್ರತಿದಿನ 27,000 ಪ್ರತಿ ಗಂಟೆಗೆ ಕರೆಗಳು ”ಎಂದು ವರದಿ ಹೇಳಿದೆ.
ಸ್ಪ್ಯಾಮ್ ಎಸ್‌ಎಮ್‌ಎಸ್ ಬಗ್ಗೆಯೂ ಟ್ರೂ ಕಾಲರ್ ವರದಿ
ದೇಶದಲ್ಲಿ ಅತ್ಯಂತ ಸಾಮಾನ್ಯವಾದ ಹಗರಣಗಳಲ್ಲಿ ಒಂದು KYC (Know your customer) ಹಗರಣವಾಗಿ ಉಳಿದಿದೆ. ಇಲ್ಲಿ ವಂಚಕರು ಬ್ಯಾಂಕ್, ವ್ಯಾಲೆಟ್ ಅಥವಾ ಡಿಜಿಟಲ್ ಪಾವತಿ (Digital Payment) ಸೇವೆಯಂತೆ ನಟಿಸುತ್ತಾರೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದಂತೆ ತಮ್ಮ KYC ಡಾಕ್ಯುಮೆಂಟ್ ಅಪ್ಡೇಟ್ ಮಾಡುವಂತೆ ಬಳಕೆದಾರರನ್ನು ಕೇಳುತ್ತಾರೆ. ಈ ಹಗರಣ ವ್ಯಾಪಕವಾಗಿದ್ದು ಈ ಬಗ್ಗೆ ಕೂಡ ಟ್ರೂ ಕಾಲರ್ ವರದಿ ಮಾಡಿದೆ.
ಇನ್ನೂ ಸ್ಪ್ಯಾಮ್ ಎಸ್‌ಎಮ್‌ಎಸ್ (Spam SMS) ಬಗ್ಗೆಯೂ ವರದಿ ಮಾಡಿರುವ ಟ್ರೂ ಕಾಲರ್ ಸ್ಪ್ಯಾಮ್ ಮೇಸೆಜ್ ಸ್ವೀಕರಿಸಿದ ಅಗ್ರ 20 ದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲೀ ಭಾರತ ಸ್ಥಾನ ಪಡೆದಿಲ್ಲ ಎಂಬುದು ಸಂತಸದ ಸುದ್ದಿ. ಈ ಪಟ್ಟಿಯಲ್ಲಿ ಕ್ಯಾಮರೂನ್, ಸೋಮಾಲಿಯಾ ಹಾಗೂ ತಾಂಝಾನಿಯಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ:
1) Meta Exposes Spy Firms: ಖಾಸಗಿ ಪತ್ತೆದಾರಿ ಸಂಸ್ಥೆಗಳ 1,500 ನಕಲಿ ಖಾತೆ ಬ್ಯಾನ್ ಮಾಡಿದ ಫೇಸ್‌ಬುಕ್!
2) Tesla CEO Elon Musk ಪ್ರತಿಷ್ಠಿತ ಟೈಮ್ ಮ್ಯಾಗಝೀನ್ ವರ್ಷದ ವ್ಯಕ್ತಿ!
3) Google:ಅಮೆರಿಕದಲ್ಲಿ ಉದ್ಯೋಗಿಗಳ ವೇತನ ಹೊಂದಾಣಿಕೆಗೆ ಮುಂದಾದ ಗೂಗಲ್!