Asianet Suvarna News Asianet Suvarna News

Social Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

*14 ತಿಂಗಳಲ್ಲಿ  ಪ್ರಧಾನಿ ಮೋದಿ ಖಾತೆ ಎರಡನೇ ಬಾರಿ ಹ್ಯಾಕ್
*ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಎಷ್ಟು ಸೇಫ್‌?
*ಹ್ಯಾಕರ್‌ಗಳ ಬಲೆಗೆ ಬೀಳದಂತೆ ನಿಮ್ಮ ಖಾತೆ ರಕ್ಷಿಸುವುದು ಹೇಗೆ
*ಇಲ್ಲಿವೆ ನೀವು ಪಾಲಿಸಬೇಕಾದ ಕೆಲವು ಸರಳ ಸೂತ್ರಗಳು   
 

How to protect Social Media Accounts from Hackers Here are simple tips mnj
Author
Bengaluru, First Published Dec 13, 2021, 1:24 PM IST

ಭಾನುವಾರ (ಡಿ. 12) ಪ್ರಧಾನ ಮಂತ್ರಿ (PM Narendra Modi) ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ಮೋದಿ ವೈಯಕ್ತಿಕ ಖಾತೆ ಆ್ಯಕ್ಸಸ್‌ ಪಡೆದಿದ್ದ ಹ್ಯಾಕರ್ಸ್‌ ಭಾರತದಲ್ಲಿ ಬಿಟ್‌ಕಾಯಿನ್ ವ್ಯವಹಾರವನ್ನು ಅಧಿಕೃತಗೊಳಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದರು. ಕೆಲ ಸಮಯದ ನಂತರ ಪ್ರಧಾನಿ ಕಾರ್ಯಾಲಯ ಪ್ರಧಾನಿ ಟ್ವೀಟರ್‌ ಖಾತೆಯನ್ನು ಮರುಸ್ಥಾಪಿಸಲಾಗಿದೆ ಎಂದು ಖಚಿತಪಡಿಸಿತ್ತು. ಕಳೆದ 14 ತಿಂಗಳಲ್ಲಿ  ಪ್ರಧಾನಿ ಮೋದಿ ಖಾತೆ ಎರಡನೇ ಬಾರಿ ಹ್ಯಾಕ್ ಆಗಿದೆ.

ದೇಶದ ಪ್ರಧಾನ ಮಂತ್ರಿ ಟ್ವೀಟರ್‌ ಖಾತೆಯೇ ಹ್ಯಾಕ್‌ ಆಗಿದೆ ಎಂದರೆ ನಿಮ್ಮ ಖಾತೆಯೂ ಹ್ಯಾಕ್‌ ಆಗುವ ಸಾಧ್ಯತೆಗಳಿವೆ. ನಿಮ್ಮ ಟ್ವೀಟರ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣ ಖಾತೆ ಹ್ಯಾಕ್ ಅಗಲು ಕಾರಣವೇನು? ಖಾತೆ ಹ್ಯಾಕ್‌ ಆಗಿದೆ ಎಂದು ತಿಳಿಯುವುದು ಹೇಗೆ? ಹ್ಯಾಕ್‌ ಆಗದಂತೆ ತಡೆಯುವುದು ಹೇಗೆ? ಹ್ಯಾಕ್‌ ಆದಾಗ ಅನುಸರಿಸಬೇಕಾದ ಕ್ರಮಗಳೇನು ಈ ಎಲ್ಲದರ ಬಗ್ಗೆ ಇಲ್ಲಿದೆ ಕ್ವೀಕ್‌ ಮಾಹಿತಿ!

ನಿಮ್ಮ ಟ್ವೀಟರ್‌ ಖಾತೆ ಹ್ಯಾಕ್‌ ಆಗಲು ಇಲ್ಲಿವೆ 10 ಕಾರಣಗಳು

1. ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ದೋಷಗಳಿದ್ದೆರ ಹ್ಯಾಕರ್ಸ್‌ಗೆ ಬಂಪರ್‌ ಆಫರ್‌ 

2. ವಾಟ್ಸಪ್‌, ಫೇಸ್‌ಬುಕ್ ಅಥವಾ ಇತರ ಮೇಸೆಜ್ ಮೂಲಕ ಸ್ಪ್ಯಾಮ್‌ ಲಿಂಕ್‌ ಕ್ಲಿಕ್‌ ಮಾಡಿದಾಗ 

3. ನಿಮ್ಮ ಪರ್ಸನಲ್ ಅಕೌಂಟ್‌ ಮತ್ತು ಇ-ಮೇಲ್‌ ಐಡಿ ಹ್ಯಾಕ್‌ ಆದಾಗ

4. ನಿಮ್ಮ ಮೊಬೈಲ್‌ ಅಥವಾ ಇ-ಮೇಲ್‌ ಗೆ ಬಂದ OTP‌ ಇತರರೊಂದಿಗೆ ಶೇರ್‌ ಮಾಡಿದಾಗ

5. ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಬಳಕೆಯಿಂದ (ಹೋಟೆಲ್‌, ರೈಲು ನಿಲ್ದಾಣ ಇತ್ಯಾದಿ)

ಇದನ್ನೂ ಓದಿ: WhatsApp New features: ಈಗ ನೀವು ವಾಟ್ಸಾಪ್‌ ಸಂದೇಶಗಳಿಗೆ ಸಮಯ ನಿಗದಿಪಡಿಸಬಹುದು ಹೇಗೆ ಗೊತ್ತಾ..?

6.ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಾಗ (ಜನ್ಮ ದಿನಾಂಕ, ಮೊಬೈಲ್‌ ನಂಬರ್‌ ಇತ್ಯಾದಿ)

7.ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಸೆಕ್ಯೂರಿಟಿ ಸೆಟ್ಟಿಂಗ್‌ ಸರಿಯಾಗಿ ನಿರ್ವಹಿಸಿದಿದ್ದರೆ

8.ನೀವು ಸ್ಪ್ಯಾಮ್ ವೆಬ್‌ಸೈಟ್‌ಗೆ ಹೋಗಿ Cookies ಅನುಮತಿ ನೀಡಿದಾಗ 

9.ಅಂತರ್ಜಾಲದಲ್ಲಿ ನೀವು ಹುಡುಕಾಡುವ ಇಮೇಜ್‌ನಲ್ಲಿ ಸ್ಪ್ಯಾಮ್‌ ಲಿಂಕ ಕ್ಲಿಕ್‌ ಮಾಡಿದಾಗ ಅಥವಾ

10.ನಿಮ್ಮ ಖಾತೆಯ್ನು ಸುರಕ್ಷಿತಗೊಳಿಸಲು ನೀವು ಬಳಸುವ ಪಾಸ್‌ವರ್ಡ್ ವೀಕ್‌ (Weak Password) ಇದ್ದರೆ ನಿಮ್ಮ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕರ್ಸ್‌ ಕೈಗೆ ಸೀಗುವ ಸಾಧ್ಯತೆಗಳಿವೆ

ನಿಮ್ಮ ಖಾತೆ ಹ್ಯಾಕ್‌ ಆಗಿದೆಯೇ ಎಂದು ತಿಳಿಯುವುದು ಹೇಗೆ?

ಕೆಲವು ಹಂತಗಳ ಸಹಾಯದಿಂದ, ನಿಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಇವುಗಳ ಸಹಾಯದಿಂದ, ಸಾಧನದ ಲಾಗಿನ್ ಮತ್ತು ಖಾತೆಯ ಎಲ್ಲಾ ಇತಿಹಾಸದ ಸಂಪೂರ್ಣ ವಿವರಗಳನ್ನು ನೀವು ತಿಳಿದುಕೊಳ್ಳಬಹುದು. ಜತೆಗೆ ಅಕೌಂಟ್‌ ಸೆಟ್ಟಿಂಗ್‌ಗೆ ಹೋಗಿ ನಿಮ್ಮ ಲಾಗಿನ್‌ ಹಿಸ್ಟರಿ ಚೆಕ್‌ ಮಾಡುವ ಮೂಲಕ ಯಾರಾದರೂ ಬೇರೆ ಸಾಧನಗಳಿಂದ ನಿಮ್ಮ ಖಾತೆಗೆ ಲಾಗಿನ ಆಗಿರುವುದನ್ನು ಪರೀಕ್ಷಿಸಬಹುದು.

1. ನೀವು ಮಾಡಿರುವ ಪೋಸ್ಟ್‌ ಬಿಟ್ಟು ಇತರ ಪೋಸ್ಟ್‌ಗಳು ನಿಮ್ಮ TimeLineನಲ್ಲಿದ್ದರೆ

2.ನಿಮಗೆ ಗೊತ್ತಾಗದೆ ನಿಮ್ಮ Followers ಅಥವಾ Contactsಗೆ ಮೇಸೆಜೆ ಹೋಗಿದ್ದರೆ

3.ಲಾಗಿನ ಮಾಡುವಲ್ಲಿ ದೋಷ ಮತ್ತು ನಿಮ್ಮ ಖಾತೆಗೆ ಲಾಗಿನ್‌ ಆಗದಿರುವುದು ಅಥವಾ

4.ನಿಮ್ಮ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್ ನಲ್ಲಿ ಹೊಸ ಗೇಮ್‌ ಅಥವಾ ಆ್ಯಪ್‌ ನೋಟಿಫಿಕೇಶನ್‌ ಬಂದರೆ ನಿಮ್ಮ ಖಾತೆ ಹ್ಯಾಕ್‌ ಅಗಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ: Advisory To Parents: ನಿಮ್ಮ ಮಕ್ಕಳನ್ನು ಆನಲೈನ್‌ ವಂಚಕರಿಂದ ರಕ್ಷಿಸಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ!

ನಿಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಸುರಕ್ಷಿತವಾಗಿರಿಸಲು  ಇಲ್ಲಿವೆ 8 ಸಲಹೆಗಳು 

1.ಆ್ಯಪ್‌ಗಳಲ್ಲಿ 2 Factor Authentication ಆನ್‌ ಮಾಡಿ

2. ವೈಯುಕ್ತಿಕ ಬಳಕೆಗಾಗಿ ಪ್ರತ್ಯೇಕ ಇ-ಮೇಲ್‌ ಐಡಿ ರಚಿಸಿ

3.ಅಪರಿಚಿತರು ಕಳುಹಿಸಿದ ಯಾವುದೇ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಡಿ

4.ಗೂಗಲ್‌ ಅಥವಾ ಇತರ ಜಾಲಗಳಲ್ಲಿ Remember Password ಬಳಕೆ ಮಾಡಬೇಡಿ

5.Browser History ಹಾಗೂ Cache Memory ಆಗಾಗ ಡೀಲಿಟ್‌ ಮಾಡಿ

6.ಸಾಧ್ಯವಾದಲ್ಲಿ ನಿಮ್ಮ ಮೊಬೈಲ್‌ನಲ್ಲೂ Anti Virus ಇನ್ಸ್ಟಾಲ್‌ ಮಾಡಿ

7.ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ Wifi ಯಿಂದ ಅಂತರ ಕಾಯ್ದುಕೊಳ್ಳಿ 

8.Cyber Cafe ಅಥವಾ Internet ಅಂಗಡಿಗಳಲ್ಲಿ ನಿಮ್ಮ ವೈಯುಕ್ತಿಕ ಖಾತೆಯಿಂದ ಲಾಗಿನ ಆಗಬೇಡಿ

ನಿಮ್ಮ ಟ್ವೀಟರ್ ಖಾತೆ ಹ್ಯಾಕ್‌ ಆಗಿದ್ದರೆ ತಕ್ಷಣ ಈ ಕ್ರಮ ಕೈಗೊಳ್ಳಿ

Forgot Password ಅಥವಾ Reset Password ಬಳಸಿ ನಿಮ್ಮ ಪಾಸವರ್ಡ್ ಮೊದಲು ರಿಸೆಟ್‌ ಮಾಡಿ. ನಂತರ ನಿಮ್ಮ ಖಾತೆಯಿಂದ ಲಾಗಿನ್‌ ಮಾಡಲು ಪ್ರಯತ್ನಿಸಿ. ಪಾಸ್‌ವರ್ಡ್ ಅನ್ನು ರಿಸೆಟ್‌ ಮಾಡಿದ ನಂತರವೂ ತಮ್ಮ ಖಾತೆಯನ್ನು ಮರುಪಡೆಯಲು ಸಾಧ್ಯವಾಗದ ಬಳಕೆದಾರರು ಸಹಾಯಕ್ಕಾಗಿ ಟ್ವೀಟರ್ ಸಹಾಯ ಫೋರಮ್ ಅನ್ನು ಸಂಪರ್ಕಿಸಬಹುದು.‌ ಅಲ್ಲಿ ವಿನಂತಿಯನ್ನು ಸಲ್ಲಿಸುವ ಮೂಲಕ ನೀವು  ಟ್ವೀಟರ್ ಅನ್ನು ಸಂಪರ್ಕಿಸಬೇಕು. ಈ ವೇಳೆ ಹ್ಯಾಕ್ ಮಾಡಿದ   ಟ್ವೀಟರ್ ಖಾತೆಗೆ ಸಂಬಂಧಿಸಿದ ಇಮೇಲ್ ಐಡಿಯನ್ನು ಬಳಸಲು ಮರೆಯದಿರಿ. 

ಇದನ್ನು ಓದಿ: Instagram Drug Dealerಗಳ ಕೈಚಳಕ : ಎರಡೇ ಕ್ಲಿಕ್‌ನಲ್ಲಿ ಮಾದಕ ವಸ್ತು ಮಾರಾಟ!

ಈ ಬಳಿಕ ಟ್ವೀಟರ್ ನಂತರ ಹೆಚ್ಚುವರಿ ಮಾಹಿತಿ ಮತ್ತು ಸೂಚನೆಗಳನ್ನು ಆ ಇಮೇಲ್ ವಿಳಾಸಕ್ಕೆ ಕಳುಹಿಸುತ್ತದೆ. ‌ಸಪೋರ್ಟ್ ವಿನಂತಿಯನ್ನು ಸಲ್ಲಿಸುವಾಗಟ್ವೀಟರ್‌ಗೆ ಬಳಕೆದಾರ ಹೆಸರು ಮತ್ತು  ನಿಮ್ಮ ಖಾತೆಯಲ್ಲಿ ಕೊನೆಯದಾಗಿ ಲಾಗ್‌ ಇನ್‌ ಆದ  ದಿನಾಂಕ ಈ  ಎರಡೂ ಮಾಹಿತಿ ಅಗತ್ಯವಿರುತ್ತದೆ. ಈ ಮೂಲಕ ನಿಮ್ಮ ಟ್ವೀಟರ್‌ ಖಾತೆ ನೀವು ರಿಸ್ಟೋರ್‌ ಮಾಡಬಹುದು. ಕೇವಲ ಟ್ವೀಟರ್‌ ಮಾತ್ರವಲ್ಲದೇ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಕಂಪನಿಗಳು ಅಕೌಂಟ್‌ ರಿಸ್ಟೋರ್‌ ಸೇವೆಯನ್ನು ಒದಗಿಸುತ್ತವೆ. ನಿಮ್ಮ ಖಾತೆ ಹ್ಯಾಕ್‌ ಆಗಿದೆ ಎಂದು ತಿಳಿದ ತಕ್ಷಣ ಈ ಕ್ರಮಗಳನ್ನು ಕೈಗೊಳ್ಳಿ.

Follow Us:
Download App:
  • android
  • ios