ಸಾರೆಗಮ ಕ್ಯಾರವಾನ್‌ ಎಂಬ ರೆಟ್ರೋ ಫೀಲ್‌ ರೇಡಿಯೋ

ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವಸ್ತುಗಳಲ್ಲೂ, ಎಲ್ಲಾ ಫ್ಯಾಶನ್‌ಗಳಿಗೂ ಅನ್ವಯಿಸುತ್ತಿದೆ.  ಆಧುನಿಕತೆಗೆ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಹಳೇ ರೇಡಿಯೋಗಳು ಮಾಯವಾದವು. ಆದರೆ ರೇಡಿಯೋ ಕಟ್ಟಿ ಕೊಟ್ಟ ನೆನಪು ಮಾತ್ರ ಇನ್ನೂ ಮಾಸಿಲ್ಲ. ಇದೀಗ ರೆಟ್ರೋ ಫೀಲ್ ರೇಡಿಯೋ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೂತನ ರೇಡಿಯೋ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

Saregama Carvaan Smart and retro radio A gift for music lovers

ಬೆಂಗಳೂರು(ಆ.17): ಹಾಡು ಕೇಳುವುದಕ್ಕೆ ಆರಂಭದಲ್ಲಿದ್ದ ಡಿಸ್ಕ್‌ಗಳು ಮಾಯವಾಗಿ, ಟೇಪ್‌ ರೆಕಾರ್ಡರುಗಳು ಬಂದವು. ಈ ಮಧ್ಯೆ ರೇಡಿಯೋಗಳಲ್ಲಿ ಚಿತ್ರಗೀತೆಗಳೂ ಭಾವಗೀತೆಗಳೂ ಪ್ರಸಾರ ಆಗುತ್ತಿದ್ದವು. ಟೇಪ್‌ ರೆಕಾರ್ಡರುಗಳು ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ರೇಡಿಯೋ ಹಿಂದಕ್ಕೆ ಸರಿಯಿತು. ರೇಡಿಯೋ ಇನ್ನೇನು ಕಣ್ಮರೆಯಾಯಿತು ಅನ್ನುವ ಹೊತ್ತಿಗೆ ಎಫ್ಪೆಮ್‌ ರೇಡಿಯೋಗಳು ಜನಪ್ರಿಯವಾದವು. ಮೊಬೈಲು, ಸೌಂಡ್‌ ಬಾರ್‌, ಕಾರು- ಹೀಗೆ ಎಲ್ಲೆಂದರಲ್ಲಿ ಎಫ್ಪೆಮ್ಮುಗಳು ಸಿಗುವಂತಾದ ನಂತರ ಹಳೆಯ ಮೆಚ್ಚಿನ ರೇಡಿಯೋ ಮೂಲೆ ಸೇರಿತು.

ಇದನ್ನೂ ಓದಿ: ಪ್ರಸಿದ್ಧ ಸಾಹಿತಿಗಳ ಕತೆಗಳನ್ನು ಉಚಿತವಾಗಿ ಆ್ಯಪ್ ನಲ್ಲಿ ‘ಆಲಿಸಿರಿ’!

ಯಾವುದು ಚಾಲ್ತಿಯಲ್ಲಿಲ್ಲವೋ ಅದರತ್ತಲೇ ಮನಸ್ಸು ತುಡಿಯುತ್ತಿರುತ್ತದೆ ಅನ್ನುವುದನ್ನು ಅರ್ಥಮಾಡಿಕೊಂಡ ಸಾರೆಗಮ ಸಂಸ್ಥೆ ಹಾಡುಗಳನ್ನು ತುಂಬಿಕೊಂಡ, ಹಳೆಯ ರೇಡಿಯೋ ಆಕಾರದ, ಆ್ಯಂಟೆನಾ ಇರುವ ಬಣ್ಣಬಣ್ಣದ ರೇಡಿಯೋಗಳನ್ನು ಮಾರುಕಟ್ಟೆಗೆ ಬಿಡಲು ಶುರುಮಾಡಿತು. ಇದರ ವೈಶಿಷ್ಟ್ಯವೆಂದರೆ ಒಂದೊಂದು ರೇಡಿಯೋದಲ್ಲಿ ಮೊದಲೇ ತುಂಬಿಟ್ಟ5000 ಹಾಡುಗಳು. ಅವರವರು ತಮಗೆ ಬೇಕಾದ ಗಾಯಕರ ಹಾಡುಗಳನ್ನು ಆರಿಸಿಕೊಳ್ಳುವ ಅವಕಾಶ.

ಇದನ್ನೂ ಓದಿ: ಇನ್ನು ಮೊಬೈಲ್‌ನಲ್ಲೂ ನೆಟ್‌​ಫ್ಲಿಕ್ಸ್‌: ಮಾಸಿ​ಕ 199ರ ರೂ ಪ್ಯಾಕ್‌ನಲ್ಲಿ!

ಅದು ಕೊಂಚ ದುಬಾರಿ ಅಂತ ಎಲ್ಲರೂ ಮಾತಾಡುವ ಹೊತ್ತಿಗೇ ಸಾರೆಗಮ, ಕ್ಯಾರವಾನ್‌ ಮಿನಿ ಎಂಬ ಪುಟ್ಟರೇಡಿಯೋವನ್ನು ಮಾರುಕಟ್ಟೆಗೆ ಬಿಟ್ಟಿದೆ. ಅಂಗೈಯಲ್ಲಿ ಹಿಡಿದುಕೊಳ್ಳಬಹುದಾದ, ಜೇಬಿನಲ್ಲೂ ಇಟ್ಟುಕೊಳ್ಳಬಹುದಾದ ಈ ಪುಟ್ಟರೇಡಿಯೋದಲ್ಲಿ 351 ಹಾಡುಗಳಿರುತ್ತವೆ. ಜೊತೆಗೇ, ಯುಎಸ್‌ಬಿ ಪೋರ್ಟ್‌, ಬ್ಲೂಟೂಥ್‌, ಎಫ್ಪೆಮ್‌ ರೇಡಿಯೋ ಕೂಡ ಇರುತ್ತದೆ. ಆಕ್ಸ್‌ ಇನ್‌ ಕೂಡ ಲಭ್ಯವಿದೆ.

ಇದನ್ನೂ ಓದಿ: ಶಾಲೆಗಳಲ್ಲಿ ಅಲೆಕ್ಸಾ ಟೀಚರ್: ಮಕ್ಕಳಿಗೆ ಬೈಯಲ್ಲಾ, ಹೊಡಿಯಲ್ಲ!

ಇದೀಗ ಮಾರುಕಟ್ಟೆಯಲ್ಲಿರುವ ಕ್ಯಾರವಾನ್‌ ಮಿನಿ 2.0ದಲ್ಲಿರುವ 351 ಹಾಡುಗಳಲ್ಲಿ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಮತ್ತು ಶಂಕರ್‌ನಾಗ್‌ ಹಾಡುಗಳಿವೆ.

ಇದೊಂಥರ ರೆಟ್ರೋ ಫೀಲ್‌ ಕೊಡುವ ರೇಡಿಯೋ. ಟೇಬಲ್ಲಿನ ಮೇಲಿಟ್ಟರೆ ಮುದ್ದಾಗಿ ಕಾಣುವ ಇದು ನಾಲ್ಕಾರು ಬಣ್ಣಗಳಲ್ಲಿ ದೊರೆಯುತ್ತದೆ. ಕನ್ನಡದ ಹಾಡುಗಳಿರುವ ರೇಡಿಯೋ ಕೆಂಪು ಬಣ್ಣದ್ದು. ಇದರಲ್ಲಿ ಯಾವ ಹಾಡುಗಳಿಗೆ ಅನ್ನುವ ಪುಟ್ಟಪಟ್ಟಿಯೂ ಜೊತೆಗಿರುತ್ತದೆ. ಆದರೆ ನಿಮಗೆ ಬೇಕಾದ ಹಾಡುಗಳನ್ನು ಆಯ್ಕೆ ಮಾಡಿ ಕೇಳುವುದಕ್ಕೆ ಅವಕಾಶ ಇಲ್ಲ. ಆನ್‌ ಮಾಡುತ್ತಿದ್ದಂತೆ, ಅದರೊಳಗೆ ಸಂಗ್ರಹಗೊಂಡ ಸರದಿಯ ಪ್ರಕಾರವೇ ಹಾಡು ಮೂಡಿ ಬರುತ್ತದೆ. ಶಫಲ್‌ ಮಾಡುವ ಅವಕಾಶವಾಗಲೀ, ಥಟ್ಟನೆ ಬೇಕಾದ ಹಾಡಿಗೆ ಸಾಗುವ ಸೌಲಭ್ಯವಾಗಲೀ ಇಲ್ಲ.

ಈ ಪುಟ್ಟರೇಡಿಯೋದ ಬೆಲೆ 2,490 ರುಪಾಯಿ.

Latest Videos
Follow Us:
Download App:
  • android
  • ios