ನವ​ದೆ​ಹ​ಲಿ[ಜು.25]: ಮೊಬೈಲ್‌ ವೀಕ್ಷ​ಣೆ​ಯಲ್ಲಿ ಅತಿ ಹೆಚ್ಚಿನ ಸಮಯ ಕಳೆ​ಯು​ತ್ತಿ​ರುವ ಭಾರ​ತೀ​ಯ​ರಿಗೆ ಅಮೆ​ರಿಕ ಮೂಲದ ವಿಡಿಯೋ ಸ್ಟ್ರೀಮಿಂಗ್‌ ಅಪ್ಲಿ​ಕೇ​ಶ​ನ್‌ ‘ನೆಟ್‌​ಪ್ಲಿ​ಕ್ಸ್‌’ ಹೊಸ ಕೊಡುಗೆ ಪ್ರಕಟಿಸಿದೆ.

ಮಾಸಿಕ 199 ರೂ ಬೆಲೆಯ ಚಂದಾ​ದಾರ ಯೋಜನೆ ಪರಿ​ಚ​ಯಿ​ಸಿದೆ. ಈ ಮೂಲಕ ಚಲ​ನ​ಚಿತ್ರ, ಟಿವಿ ಹಾಗೂ ಧಾರ​ವಾಹಿಗಳನ್ನು ಹೆಚ್ಚಿನ ಸಂಖ್ಯೆ​ಯಲ್ಲಿ ವೀಕ್ಷಿ​ಸು​ತ್ತಿರುವ ಭಾರ​ತೀ​ಯರಿಗೆ ಇದೀಗ ಅಮೆ​ಜಾನ್‌ ಪ್ರೈಮ್‌ ಮತ್ತು ಹಾಟ್‌​ಸ್ಟಾ​ರ್‌ ಜತೆಗೆ ಇದೀಗ ‘ನೆಟ್‌​ಪ್ಲಿ​ಕ್ಸ್‌’ ಕೂಡ ಕಡಿಮೆ ಮೊತ್ತ​ದಲ್ಲಿ ಲಭ್ಯ​ವಾಗಲಿದೆ.

ಈಗಾ​ಗಲೇ ನೆಟ್‌​ಪ್ಲಿಕ್ಸ್‌ ಮಾಸಿಕ .499 ಮತ್ತು .799 ಯೋಜನೆ ಹೊಂದಿದ್ದು ಅದನ್ನು ಟೀವಿಗಳಲ್ಲಿ ವೀಕ್ಷಿಸಬಹುದು.