ಲಾರ್ಡ್ ಆಫ್ ದ ರಿಂಗ್ಸ್: ಶತಮಾನದ ಸೂರ್ಯಗ್ರಹಣಕ್ಕೆ ದಿನಗಣನೆ!

ಶತಮಾನದ ಸೂರ್ಯಗ್ರಹಣಕ್ಕೆ ಶುರುವಾಗಿದೆ ದಿನಗಣನೆ| ಬರೋಬ್ಬರಿ 172 ವರ್ಷಗಳಿಗೊಮ್ಮೆ ಸಂಭವಿಸುವ ಕಂಕಣ ಸೂರ್ಯಗ್ರಹಣ| ಸೂರ್ಯನ ಸುತ್ತ ವಿಶೇಷ ವೃತ್ತ ಗೋಚರಿಸುವ ಅಪರೂಪದ ಕಂಕಣ ಸೂರ್ಯಗ್ರಹಣ| ಹೊಳೆಯುವ ಬಳೆಯಂತೆ ಕಾಣುವ ಸೂರ್ಯನ ಅಂಚು| ಅಬುದಾಬಿಯ ಗರ್ಬಿಯಾ ಅಥವಾ ಲಿವಾ ಪ್ರದೇಶದಲ್ಲಿ ಮಾತ್ರ ಕಂಕಣ ಸೂರ್ಯಗ್ರಹಣ ಗೋಚರ| ಡಿ.26ರ ಬೆಳಗಿನ ಸುಮಾರು 7:35 ರಿಂದ 7:38ರವರೆಗೆ ಕಂಕಣ ಸೂರ್ಯಗ್ರಹಣ| 

Ring Of Fire A Rare Solar Eclipse Set For December

ಅಬುದಾಬಿ(ನ.23): ಆಗಸದ ವಿಸ್ಮಯಕಾರಿ ವಿದ್ಯಮಾನಗಳಲ್ಲಿ ಸೂರ್ಯಗ್ರಹಣ ಅತ್ಯಂತ ಪ್ರಮುಖವಾದುದು. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ರೇಖೆಯಲ್ಲಿ ಬಂದಾಗ ಸಂಭವಿಸುವ ಅಪರೂಪದ ವಿದ್ಯಮಾನ ಖಗೋಳ ಪ್ರೀಯರಿಗೆ ಹಬ್ಬವೇ ಸರಿ.

ಅದರಂತೆ ಬರುವ ಡಿಸೆಂಬರ್’ನಲ್ಲಿ ಬರೋಬ್ಬರಿ 172 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಖಗೋಳ ಪ್ರೀಯರೆಲ್ಲಾ ಗಂಟುಮೂಟೆ ಕಟ್ಟಿಕೊಂಡು ಯುಎಇ ಗೆ ಪ್ರಯಾಣ ಬೆಳೆಸಿದ್ದಾರೆ.

ಇಂದು ಪೂರ್ಣ ಸೂರ್ಯಗ್ರಹಣ: ಭಾರತಕ್ಕಿಲ್ಲ ನೋಡುವ ಭಾಗ್ಯ!

ಹೌದು, ಮುಂಬರುವ ಡಿಸೆಂಬರ್ 26ರಂದು ಯುಎಇ ನಲ್ಲಿ ಅಪರೂಪದಲ್ಲೇ ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಕಂಕಣ ಸೂರ್ಯಗ್ರಹಣದ ವೇಳೆ ಸೂರ್ಯನ ಸುತ್ತ ವಿಶಿಷ್ಟವಾದ ವೃತ್ತ ರೂಪುಗೊಳ್ಳುವುದು ವಿಶೇಷ.

ಅಬುದಾಬಿಯ ಗರ್ಬಿಯಾ ಅಥವಾ ಲಿವಾ ಪ್ರದೇಶದಲ್ಲಿ ಮಾತ್ರ ಕಂಕಣ ಸೂರ್ಯಗ್ರಹಣ ಗೋಚರವಾಗುವುದು ವಿಶೇಷ. ಕಳೆದ ಬಾರಿ 1847ರಲ್ಲಿ ಇದೇ ಪ್ರದೇಶದಲ್ಲಿ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು.

ಅಂಗಾರಕನಲ್ಲಿ ಒಂದಲ್ಲ, ಎರಡು ಸೂರ್ಯಗ್ರಹಣ: ವಿಡಿಯೋ!

ಗರ್ಬಿಯಾ ಅಥವಾ ಲಿವಾ ಪ್ರದೇಶದಿಂದ ಆಗ್ನೇಯ ಇಂಡೋನೇಷಿಯಾ ಹಾಗೂ ಮಲೇಷಿಯಾ ಮತ್ತು ಫಿಲಿಪೈನ್ಸ್ ದೇಶವಾಸಿಗಳಿಗೂ ಕಂಕಣ ಸೂರ್ಯಗ್ರಹಣ ನೋಡುವ ಭಾಗ್ಯ ದೊರೆಯಲಿದೆ.

ಡಿ.26ರ ಬೆಳಗಿನ ಸುಮಾರು 7:35 ರಿಂದ 7:38ರವರೆಗೆ ಅಂದರೆ ಕೇವಲ 2 ನಿಮಿಷ 47 ಸೆಕೆಂಡ್’ಗಳವರೆಗೆ ಮಾತ್ರ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ.

ಇಂದು ವರ್ಷದ ಮೊದಲ ಕಂಕಣ ಸೂರ್ಯ ಗ್ರಹಣ

 ಏನಿದು ಕಂಕಣ ಸೂರ್ಯಗ್ರಹಣ?:

ಚಂದ್ರನ ಬಿಂಬ ಸೂರ್ಯನ ಅಂಚನ್ನು ಮಾತ್ರ ಬಿಟ್ಟು ಉಳಿದೆಲ್ಲಾ ಭಾಗವನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಈ ವೇಳೆ ಸೂರ್ಯನ ಸುತ್ತಲೂ ವಿಶಿಷ್ಟವಾದ ವೃತ್ತವೊಂದು ನಿರ್ಮಾಣಗೊಳ್ಳುತ್ತದೆ.

ಸೂರ್ಯಗ್ರಹಣದ ವೇಳೆ ಚಂದ್ರನ ಕಪ್ಪು ಬಿಂಬವನ್ನು ಆವರಿಸಿದ ಸೂರ್ಯಬಿಂಬವು ಬಳೆಯಂತೆ ಪ್ರಜ್ವಲಿಸುತ್ತದೆ. ಸೂರ್ಯಬಿಂಬದ ಹೊಳೆಯುವ ಭಾಗ ಒಂದು ಬಳೆಯಂತೆ ಕಾಣುವುದರಿಂದ ಇದನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

ಈ ವಿದ್ಯಮಾನವನ್ನು ಇಂಗ್ಲಿಷ್’ನಲ್ಲಿ Ring of Fire ಎಂದು ಕರೆಯಲಾಗುತ್ತದೆ. ಸೂರ್ಯನ ಅಂಚು ಅತ್ಯಂತ ಪ್ರಕಾಶಮಾನವಾಗಿ ಕಾಣುವುದರಿಂದ ಅಂಚಿನಲ್ಲಿ ಬೆಂಕಿ ಉರುಯುತ್ತಿರುವ ಹಾಗೆ ಭಾಸವಾಗುತ್ತದೆ.

Latest Videos
Follow Us:
Download App:
  • android
  • ios