ಸೂರ್ಯನ ಮೇಲ್ಮೈಯ ಸ್ಪಷ್ಟ ಫೋಟೋಗಳು ಸೆರೆ| ವಿಶ್ವದ ಅತಿದೊಡ್ಡ ಸೌರ ದೂರದರ್ಶಕ ಯಂತ್ರದಲ್ಲಿ ಅಪರೂಪದ ಫೋಟೋಗಳು ಸೆರೆ| ಡೇನಿಯಲ್ ಕೆ. ಇನೌಯೆ ಸೌರ ದೂರದರ್ಶಕದ ಮೂಲಕ ಸೂರ್ಯನ ಅಧ್ಯಯನ|  ನಮ್ಮನಕ್ಷತ್ರದ ಇದುವರೆಗಿನ ಅತ್ಯುನ್ನತ ಹೈ ರೆಸಲ್ಯೂಶನ್ ಚಿತ್ರಗಳು| 'ಸೌರ ಮಾರುತವು ಭೂಮಿಯ ಕಾಂತಕ್ಷೇತ್ರದಲ್ಲಿ ಬೆರೆತು ಅರೋರಾ ನಿರ್ಮಾಣಕ್ಕೆ ಕಾರಣ'| ಇನೌಯೆ ಸೌರ ದೂರದರ್ಶಕದ ನಿರ್ದೇಶಕ ಥಾಮಸ್ ರಿಮೆಲ್ಲೆ ಅಭಿಮತ| ಸೂರ್ಯನ ಪ್ಲಾಸ್ಮಾ ಮತ್ತು ಕರೋನಲ್ ಮಾಸ್ ಎಜೆಕ್ಷನ್ಸ್‌ನಿಂದ ಭೂಮಿಯ ಮೇಲೆ ಪರಿಣಾಮ|

ವಾಷಿಂಗ್ಟನ್(ಜ.30): ಇದೇ ಮೊದಲ ಬಾರಿಗೆ ಸೂರ್ಯನ ಮೇಲ್ಮೈಯ ಸ್ಪಷ್ಟ ಫೋಟೋಗಳನ್ಜು ಸೆರೆ ಹಿಡಿಯಲಾಗಿದ್ದು, ಸೂರ್ಯನ ಪ್ರಕ್ಷುಬ್ಧ ಮೇಲ್ಮೈ ಚಿತ್ರಣ ಇಡೀ ವಿಶ್ವದ ಗಮನ ಸೆಳೆದಿದೆ.

ವಿಶ್ವದ ಅತಿದೊಡ್ಡ ಸೌರ ದೂರದರ್ಶಕ ಡೇನಿಯಲ್ ಕೆ. ಇನೌಯೆ (ಡಿಕೆಐಎಸ್‌ಟಿ) ಮೂಲಕ, ಕಳೆದ ತಿಂಗಳು ಸೂರ್ಯನ ಮೇಲ್ಮೈನ ಮೊದಲ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ಭಾಸ್ಕರನ ಕರುಳು ಸೀಳಿದ ಪಾರ್ಕರ್: ಬಗೆದು ಕಳಿಸಿದ ಮಾಹಿತಿ ಸೂಪರ್!

ಇದು ನಮ್ಮನಕ್ಷತ್ರದ ಇದುವರೆಗಿನ ಅತ್ಯುನ್ನತ ಹೈ ರೆಸಲ್ಯೂಶನ್ ಚಿತ್ರಗಳಾಗಿದ್ದು, ಬೆಂಕಿ ಉಂಡೆಯ ಪ್ರಕ್ಷುಬ್ಧ ಮೇಲ್ಮೈ ಸ್ಪಷ್ಟವಾಗಿ ಕಾಣುತ್ತದೆ.

ಈ ಕುರಿತು ಮಾಹಿತಿ ನೀಡಿರುವ ಡೇನಿಯಲ್ ಕೆ. ಇನೌಯೆ ಸೌರ ದೂರದರ್ಶಕದ ನಿರ್ದೇಶಕ ಥಾಮಸ್ ರಿಮೆಲ್ಲೆ, ಈ ಹಿಂದೆ ಎಂದೂ ಕಂಡಿರದ ಸೂರ್ಯನ ಮೇಲ್ಮೈ ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ಹೇಳಿದ್ದಾರೆ.

Scroll to load tweet…

ಸೂರ್ಯ ನಿರಂತರವಾಗಿ ಎಲ್ಲಾ ದಿಕ್ಕುಗಳಲ್ಲಿಯೂ ತನ್ನಲ್ಲಿರುವ ಆಣ್ವಿಕ ವಸ್ತುಗಳನ್ನು ಬಾಹ್ಯಾಕಾಶಕ್ಕೆ ದೂಡುತ್ತಿದ್ದು, ಈ ಸೌರ ಮಾರುತವು ಭೂಮಿಯ ಕಾಂತಕ್ಷೇತ್ರದಲ್ಲಿ ಬೆರೆತು ಅರೋರಾ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಯಿಂದ ಬಹಿರಂಗಗೊಂಡಿದೆ.

ಸೂರ್ಯನ ಪ್ಲಾಸ್ಮಾ ಮತ್ತು ಕರೋನಲ್ ಮಾಸ್ ಎಜೆಕ್ಷನ್ಸ್ (ಸಿಎಮ್ಇ) ಎಂದು ಕರೆಯಲ್ಪಡುವ ಕಣಗಳ ದೊಡ್ಡ ಭಾಗಗಳನ್ನು ಹೊರ ಹಾಕುತ್ತಿದ್ದು, ಇವು ಭೂಮಿಯನ್ನು ತಲುಪಿದರೆ ಮಾನವ ನಿರ್ಮಿತ ಉಪಗ್ರಹಗಳು ಮತ್ತು ಪವರ್ ಗ್ರಿಡ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ!

ಸೂರ್ಯನ ಮೇಲೆ ಸ್ವಾಭಾವಿಕವಾಗಿ ಸಂಭವಿಸುವ ಘಟನೆಗಳು ಭೂಮಿಯ ಮೇಲೆ ಅಗಾಧ ಪರಿಣಾಮ ಬೀರುವ ಕ್ಷಮತೆ ಹೊಂದಿದೆ ಎಂದು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ನಿರ್ದೇಶಕ ವ್ಯಾಲೆಂಟಿನ್ ಪಿಲೆಟ್ ಅಭಿಪ್ರಾಯಪಟ್ಟಿದ್ದಾರೆ.