ನ್ಯೂಯಾರ್ಕ್(ಸೆ.19): ಚಂದ್ರನ ಅಂಗಳದಲ್ಲಿ ಇಸ್ರೋದ ವಿಕ್ರಮ್ ಲ್ಯಾಂಡರ್‌ ಪತ್ತೆ ಹಚ್ಚಲು ಹರಸಾಹಸ ಪಡುತ್ತಿರುವ ನಾಸಾ, ಸದ್ಯಕ್ಕೆ ವಿಕ್ರಮ್ ಲ್ಯಾಂಡರ್ ಪತ್ತೆ ಕಷ್ಟಸಾಧ್ಯ ಎಂದು ಹೇಳಿದ್ದಾರೆ.

ಚಂದ್ರನ ಮೇಲ್ಮೈಯನ್ನು ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ರಿಕನ್ನೈಸನ್ಸ್ ಆರ್ಬಿಟರ್(ಎಲ್ಆರ್ಒ) ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯಲಾಗಿದೆ. ಆದರೆ ಈ ಚಿತ್ರಗಳಲ್ಲಿ ಲ್ಯಾಂಡರ್ ಇರುವಿಕೆಯ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ನಾಸಾ ತಿಳಿಸಿದೆ.

ಎಲ್‌ಆರ್‌ಒ ಕ್ಲಿಕ್ಕಿಸಿದ ಪ್ರದೇಶದಲ್ಲಿ ಬೆಳಕಿನ ಸ್ಥಿತಿಗತಿ ಸ್ಪಷ್ಟವಾಗಿಲ್ಲದ ಕಾರಣ, ವಿಕ್ರಮ್ ಲ್ಯಾಂಡರ್ ಇರುವಿಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಮುಂದಿನ ಅಕ್ಟೋಬರ್ 14ರಂದು ಎಲ್‌ಆರ್‌ಒ ಮತ್ತೆ ಚಂದ್ರನ ಇದೇ ಪ್ರದೇಶವನ್ನು ಸುತ್ತಲಿದ್ದು, ಆ ವೇಳೆ ಮತ್ತೊಮ್ಮೆ ವಿಕ್ರಮ್ ಲ್ಯಾಂಡರ್‌ನ್ನು ಪತ್ತೆ ಹಚ್ಚಲು ಪ್ರಯತ್ನಿಸುವುದಾಗಿ ನಾಸಾ ತಿಳಿಸಿದೆ.