Asianet Suvarna News Asianet Suvarna News

ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?: ರೋಚಕ ಮಾಹಿತಿ ಬಹಿರಂಗ

ಲ್ಯಾಂಡರ್‌ ಸುರಕ್ಷಿತ!| ಚಂದ್ರನ ಮೇಲೆ ವಾಲಿ ನಿಂತಿದೆ ವಿಕ್ರಂ, ಸಂಪರ್ಕಕ್ಕೆ ಯತ್ನ| ಇಳಿಯಲು ನಿಗದಿಯಾಗಿದ್ದ ಸ್ಥಳದ ಬಳಿಯೇ ಇದೆ ಲ್ಯಾಂಡರ್‌| - ಚಂದ್ರನ ಮೇಲೆ ಅಪ್ಪಳಿಸಿದರೂ ‘ಇಡಿ’ಯಾಗಿಯೇ ಇದೆ ವಿಕ್ರಂ|ಸಂಪರ್ಕ ಮರು ಸಾಧಿಸಲು ಇಸ್ರೋ ವಿಜ್ಞಾನಿಗಳ ಸತತ ಯತ್ನ| ಚಂದ್ರನ ಅಂಗಳದಲ್ಲಿ ಇಳಿಯುತ್ತಿದ್ದ ವೇಳೆ ಸಂಪರ್ಕ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್| ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?: ರೋಚಕ ಮಾಹಿತಿ ಬಹಿರಂಗ

Chandrayaan 2 This Is How ISRO Found The Vikram Lander Which Lost Signal
Author
Bangalore, First Published Sep 10, 2019, 8:11 AM IST

ಬೆಂಗಳೂರು[ಸೆ.10]: ಭೂಮಿಯ ಜತೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿರುವ ಚಂದ್ರಯಾನ-2 ನೌಕೆಯ ‘ಲ್ಯಾಂಡರ್‌’ ಛಿದ್ರವಾಗಿಲ್ಲ. ಆದರೆ ವಾಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್‌ ಜತೆ ಸಂಪರ್ಕವನ್ನು ಮರುಸ್ಥಾಪಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಅವಿರತ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಸೆ.7ರಂದು ನಸುಕಿನ ಜಾವ ಚಂದ್ರನಿಂದ 2.1 ಕಿ.ಮೀ. ಎತ್ತರದಲ್ಲಿರುವಾಗ ನಿಗೂಢ ರೀತಿಯಲ್ಲಿ ಸಂಪರ್ಕ ಕಳೆದುಕೊಂಡಿದ್ದ ಲ್ಯಾಂಡರ್‌ ಇರುವ ಜಾಗವನ್ನು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್‌ ಭಾನುವಾರ ಪತ್ತೆ ಹಚ್ಚಿತ್ತು. ವಿಶೇಷ ಎಂದರೆ, ಇಸ್ರೋ ವಿಜ್ಞಾನಿಗಳು ಯಾವ ಜಾಗದಲ್ಲಿ ಲ್ಯಾಂಡರ್‌ ಅನ್ನು ಇಳಿಸಲು ಉದ್ದೇಶಿಸಿದ್ದರೋ ಅದಕ್ಕೆ ಸಮೀಪದಲ್ಲೇ ಲ್ಯಾಂಡರ್‌ ಬಿದ್ದಿರುವುದು ಆರ್ಬಿಟರ್‌ ಸೆರೆ ಹಿಡಿದಿರುವ ಚಿತ್ರದಲ್ಲಿ ಗೋಚರವಾಗಿದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ! ಮೂಡಿತು ಭರವಸೆಯ ಕಿರಣ

ಲ್ಯಾಂಡರ್‌ ಜತೆಗಿನ ಸಂಪರ್ಕವನ್ನು ಮರುಸ್ಥಾಪಿಸಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ವಿಜ್ಞಾನಿಗಳು ಆರಂಭಿಸಿದ್ದಾರೆ. ಬೆಂಗಳೂರಿನ ಪೀಣ್ಯದ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಹಾಗೂ ಕಮಾಂಡ್‌ ನೆಟ್‌ವರ್ಕ್ (ಇಸ್ಟ್ರಾಕ್‌) ಕೇಂದ್ರದಲ್ಲಿನ ವಿಜ್ಞಾನಿಗಳು ಈ ಸಂಬಂಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಲ್ಯಾಂಡರ್‌ನಲ್ಲಿನ ವ್ಯವಸ್ಥೆ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರೆ ಮಾತ್ರ ಸಂಪರ್ಕ ಮರುಸಾಧಿಸಬಹುದು. ಆದರೆ ಆ ಸಂಭವ ಇಲ್ಲದ ಕಾರಣ ಮರುಸಂಪರ್ಕ ಸಾಧ್ಯತೆ ಕ್ಷೀಣವಾಗಿದೆ ಎಂದೂ ಹೇಳಿದ್ದಾರೆ.

 ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?:

ಲ್ಯಾಂಡರ್‌ನಿಂದ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಲ್ಯಾಂಡರ್‌ ಇಳಿಯಲು ನಿಗದಿಯಾಗಿದ್ದ ಸ್ಥಳವನ್ನೇ ಗುರಿಯಾಗಿಸಿ, ಚಂದ್ರನ ಸುತ್ತಲೂ ಸುತ್ತುತ್ತಿರುವ ಆರ್ಬಿಟರ್‌ ಶನಿವಾರ ಫೋಟೋವೊಂದನ್ನು ಕ್ಲಿಕ್ಕಿಸಿತ್ತು. ಈ ಫೋಟೋದಲ್ಲಿ ಅಸ್ಪಷ್ಟವಸ್ತುವೊಂದು ಗೋಚರವಾಗಿತ್ತು. ಆದರೆ ಈ ವೇಳೆ ಫೋಟೋದಲ್ಲಿ ಸೆರೆಯಾಗಿದ್ದು ಲ್ಯಾಂಡರ್‌ ಹೌದೋ ಅಲ್ಲವೋ ಎಂಬುದು ಇಸ್ರೋಗೆ ಖಚಿತವಿರಲಿಲ್ಲ. ಅದಕ್ಕಾಗಿ ಅದೇ ಅಕ್ಷಾಂಶ ಮತ್ತು ರೇಖಾಂಶದಲ್ಲಿ ಹಿಂದಿನ ದಿನ ಆರ್ಬಿಟರ್‌ ತೆಗೆದಿದ್ದ ಫೋಟೋಗಳನ್ನೇ ತಾಳೆ ಹಾಕಲಾಯಿತು.

ಭರವಸೆಯ ಬೆಳಕು: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ!

ಈ ವೇಳೆ ಹಿಂದಿನ ದಿನದ ಫೋಟೋದಲ್ಲಿ ಲ್ಯಾಂಡರ್‌ ಬಿದ್ದ ಸ್ಥಳದಲ್ಲಿ ಯಾವುದೇ ವಸ್ತುಗಳ ಕುರುಹು ಸಿಕ್ಕಿರಲಿಲ್ಲ. ಹೀಗಾಗಿ ತಾವು ಸೆರೆಹಿಡಿದಿದ್ದು ವಿಕ್ರಂ ಲ್ಯಾಂಡರ್‌ನದ್ದೇ ಎಂದು ಇಸ್ರೋ ವಿಜ್ಞಾನಿಗಳಿಗೆ ಖಚಿತವಾಯ್ತು.

Follow Us:
Download App:
  • android
  • ios