ಹಬಲ್ ಕಣ್ಣಿಗೆ ಬಿದ್ದ ಸುಂದರ ನೀಲಿ ನಕ್ಷತ್ರಗಳ ಗ್ಯಾಲಕ್ಸಿ!

ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಹಬಲ್ ಟೆಲಿಸ್ಕೋಪ್| ವಿಶ್ವ ಮೂಲೆ ಮೂಲೆಯಲ್ಲಿರುವ ಹೊಸ ಗ್ಯಾಲಕ್ಸಿಗಳನ್ನು ಕಂಡು ಹಿಡಿಯುವುದರಲ್ಲಿ ಹಬಲ್ ತಲ್ಲೀನ| ಕೆನಿಸ್ ವೆನಾಸಿಟಾಯ್ ತಾರಾವಲಯದಲ್ಲಿರುವ M94 ಗ್ಯಾಲಕ್ಸಿ ಪತ್ತೆ ಹಚ್ಚಿದ ಹಬಲ್| ಅಂಚಿನಲ್ಲಿ ನೀಲಿ ನಕ್ಷತ್ರಗಳನ್ನು ಹೊಂದಿರುವ ಸುಂದರ ಗ್ಯಾಲಕ್ಸಿ| 10 ಮಿಲಿಯನ್ ವರ್ಷಗಳ ಹಿಂದೆ ರಚನೆಗೊಂಡಿರುವ ಯುವ ನೀಲಿ ನಕ್ಷತ್ರಗಳ ಸಮೂಹ| ಭೂಮಿಯಿಂದ ಕೇವಲ 15 ಮಿಲಿಯನ್ ಜ್ಯೊತಿರ್ವರ್ಷ ದೂರ ಇರುವ M94| ಬರೋಬ್ಬರಿ 30 ಸಾವಿರ ಜ್ಯೋತಿರ್ವರ್ಷದಷ್ಟು ವ್ಯಾಸ ಹೊಂದಿರುವ M94 ಗ್ಯಾಲಕ್ಸಿ| 

NASA Hubble Detects Starburst M94 Galaxy

ವಾಷಿಂಗ್ಟನ್(ಡಿ.02): ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಹಬಲ್ ಟೆಲಿಸ್ಕೋಪ್, ವಿಶ್ವ ಮೂಲೆ ಮೂಲೆಯಲ್ಲಿರುವ ಹೊಸ ಗ್ಯಾಲಕ್ಸಿಗಳನ್ನು ಕಂಡು ಹಿಡಿಯುವುದರಲ್ಲಿ ಎತ್ತಿದ ಕೈ.

ಅದರಂತೆ ಕೆನಿಸ್ ವೆನಾಸಿಟಾಯ್ ತಾರಾವಲಯದಲ್ಲಿ ತನ್ನ ಅಂಚಿನಲ್ಲಿ ನೀಲಿ ನಕ್ಷತ್ರಗಳನ್ನು ಹೊಂದಿರುವ ಸುಂದರ ಗ್ಯಾಲಕ್ಸಿಯೊಂದನ್ನು ಹಬಲ್ ಸೆರೆ ಹಿಡಿದಿದೆ.

ಒಂದಕ್ಕೊಂದು ಸಂಬಂಧ: ಹಬಲ್ ಪತ್ತೆ ಹಚ್ಚಿದ ಗ್ಯಾಲಕ್ಸಿಗಳ ಅನುಬಂಧ!

ಮೆಸ್ಸಿಯರ್94 ಅಥವಾ ಸಂಕ್ಷೀಪ್ತವಾಗಿ M94 ಎಂದು ಹೆಸರಿಸಲಾಗಿರುವ ಈ ಗ್ಯಾಲಕ್ಸಿ ಬರೋಬ್ಬರಿ 30 ಸಾವಿರ ಜ್ಯೋತಿರ್ವರ್ಷದಷ್ಟು ವ್ಯಾಸವನ್ನು ಹೊಂದಿದೆ.

M94 ಗ್ಯಾಲಕ್ಸಿಯ ಮಧ್ಯಭಾಗವೇ ಸುಮಾರು 7 ಸಾವಿರ ಜ್ಯೋತಿರ್ವರ್ಷದಷ್ಟು ಅಗಾಧ ವ್ಯಾಆಸ ಹೊಂದಿದ್ದು, ಹಬಲ್ ಈ ಮಧ್ಯಭಾಗವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದೆ.

ವಿಶ್ವದ ಅತ್ಯಂತ ದೊಡ್ಡ ಗ್ಯಾಲಕ್ಸಿ: ಒಳ ಹೊಕ್ಕರೆ ಹೊರ ಬರಲಾಗದು ಗ್ಯಾರಂಟೀ!

ಗ್ಯಾಲಕ್ಸಿ ಅಂಚಿನಲ್ಲಿ ಕೇವಲ 10 ಮಿಲಿಯನ್ ವರ್ಷಗಳ ಹಿಂದೆ ರಚನೆಗೊಂಡಿರುವ ಯುವ ನೀಲಿ ನಕ್ಷತ್ರಗಳ ಸಮೂಹವೇ ಇದ್ದು, ಇದೇ ಕಾರಣಕ್ಕೆ M94 ಗ್ಯಾಲಕ್ಸಿಯ ಅಂಚು ನೀಲಿ ಬಣ್ಣದಿಂದ ಕೂಡಿದೆ.

ಅಸಂಖ್ಯಾತ ನಕ್ಷತ್ರಗಳು ಜನ್ಮ ತಳೆಯುತ್ತಿರುವ M94 ಗ್ಯಾಲಕ್ಸಿ ಭೂಮಿಯಿಂದ ಕೇವಲ 15 ಮಿಲಿಯನ್ ಜ್ಯೊತಿರ್ವರ್ಷದಷ್ಟು ದೂರವಿದ್ದು, ಇದರ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಖಗೋಳಶಾಸ್ತ್ರಜ್ಞರಿಗೆ ಅನುಕೂಲಕರ ಎಂದು ನಾಸಾ ಹೇಳಿದೆ.

ಹಬಲ್ ಕಣ್ಣಿಗೆ ಬಿದ್ದ ತೀವ್ರ ವಿಕಿರಣ ಹೊರಸೂಸುತ್ತಿರುವ ಗ್ಯಾಲಕ್ಸಿ!

Latest Videos
Follow Us:
Download App:
  • android
  • ios