ಒಂದಕ್ಕೊಂದು ಸಂಬಂಧ: ಹಬಲ್ ಪತ್ತೆ ಹಚ್ಚಿದ ಗ್ಯಾಲಕ್ಸಿಗಳ ಅನುಬಂಧ!
ಬ್ರಹ್ಮಾಂಡದಲ್ಲಿ ಗ್ಯಾಲಕ್ಸಿಗಳದ್ದು ಏಕಾಂತವಾಸ| ಬ್ರಹ್ಮಾಂಡದಲ್ಲಿ ಏಕಾಂಗಿಯಾಗಿ ಸಂಚರಿಸುವ ಗ್ಯಾಲಕ್ಸಿಗಳು| ಒಂದು ಗ್ಯಾಲಕ್ಸಿಯಿಂದ ಮತ್ತೊಂದು ಗ್ಯಾಲಕ್ಸಿಗೆ ಅಗಾಧ ದೂರ| ಪರಸ್ಪರ ಹತ್ತಿರವಿರುವ ಗ್ಯಾಲಕ್ಸಿಗಳನ್ನು ಪತ್ತೆ ಹಚ್ಚಿದ ನಾಸಾದ ಹಬಲ್ ಟೆಲಿಸ್ಕೋಪ್| ಎನ್‌ಜಿಸಿ 6285 ಮತ್ತು ಎನ್‌ಜಿಸಿ 6286 ಗ್ಯಾಲಕ್ಸಿಗಳನ್ನು ಗುರುತಿಸಿದ ಹಬಲ್| ಗ್ಯಾಲಕ್ಸಿ ಜೋಡಿಯನ್ನು ಆರ್ಪ್ 293 ಎಂದು ಹೆಸರಿಸಿದ ವಿಜ್ಞಾನಿಗಳು| ಡ್ರಾಕೊ (ಡ್ರ್ಯಾಗನ್) ತಾರಾ ವಲಯದಲ್ಲಿರುವ ಅವಳಿ ಗ್ಯಾಲಕ್ಸಿ| , ಭೂಮಿಯಿಂದ ಸುಮಾರು 250 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿರುವ ಆರ್ಪ್ 293|
ವಾಷಿಂಗ್ಟನ್(ನ.30): ಈ ಬ್ರಹ್ಮಾಂಡದಲ್ಲಿ ಗ್ಯಾಲಕ್ಸಿಗಳದ್ದು ಏಕಾಂತವಾಸ. ಕೋಟಿ ಕೋಟಿ ನಕ್ಷತ್ರಗಳನ್ನು ಹಾಗೂ ಗ್ರಹಕಾಯಗಳನ್ನು ತಮ್ಮ ಒಡಲಲ್ಲಿಟ್ಟುಕೊಂಡಿರುವ ಗ್ಯಾಲಕ್ಸಿಗಳು ಮಾತ್ರ ಈ ಬ್ರಹ್ಮಾಂಡದಲ್ಲಿ ಏಕಾಂಗಿಯಾಗಿ ಸಂಚರಿಸುತ್ತವೆ.
ಹಬಲ್ ಕಣ್ಣಿಗೆ ಬಿದ್ದ ತೀವ್ರ ವಿಕಿರಣ ಹೊರಸೂಸುತ್ತಿರುವ ಗ್ಯಾಲಕ್ಸಿ!
ಒಂದು ಗ್ಯಾಲಕ್ಸಿಯಿಂದ ಮತ್ತೊಂದು ಗ್ಯಾಲಕ್ಸಿಗೆ ಇರುವ ದೂರದ ಪರಿಣಾಮ, ಬಹುತೇಕ ಎಲ್ಲಾ ಗ್ಯಾಲಕ್ಸಿಗಳು ಏಕಾಂತವನ್ನು ಅನುಭವಿಸುತ್ತವೆ. ಆದರೆ ನಾಸಾದ ಹಬಲ್ ಟಲಿಸ್ಕೋಪ್ ಪತ್ತೆ ಹಚ್ಚಿರುವ ಎರಡು ಗ್ಯಾಲಕ್ಸಿಗಳು ಮಾತ್ರ ಪರಸ್ಪರ ಉತ್ತಮ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿವೆ.
ಎನ್‌ಜಿಸಿ 6285 (ಎಡಭಾಗ) ಮತ್ತು ಎನ್‌ಜಿಸಿ 6286 (ಬಲಭಾಗ) ಎಂದು ಹೆಸರಿಸಲಾಗಿರುವ ಈ ಗ್ಯಾಲಕ್ಸಿಗಳು ಪರಸ್ಪರ ಅತ್ಯಂತ ಹತ್ತಿರದಲ್ಲಿವೆ ಎಂದು ನಾಸಾ ಹೇಳಿದೆ.
ವಿಶ್ವದ ಅತ್ಯಂತ ದೊಡ್ಡ ಗ್ಯಾಲಕ್ಸಿ: ಒಳ ಹೊಕ್ಕರೆ ಹೊರ ಬರಲಾಗದು ಗ್ಯಾರಂಟೀ!
ಈ ಗ್ಯಾಲಕ್ಸಿ ಜೋಡಿಯನ್ನು ಆರ್ಪ್ 293 ಎಂದು ಹೆಸರಿಸಲಾಗಿದ್ದು, ಗುರುತ್ವಾಕರ್ಷಣೆ ಹಾಗೂ ಅನಿಲ ಮತ್ತು ಧೂಳುಗಳು ಈ ಎರಡೂ ಗ್ಯಾಲಕ್ಸಿಗಳನ್ನು ಪರಸ್ಪರ ಸೆಳೆಯುತ್ತಿದೆ ಎನ್ನಲಾಗಿದೆ.
ಡ್ರಾಕೊ (ಡ್ರ್ಯಾಗನ್) ತಾರಾ ವಲಯದಲ್ಲಿರುವ ಆರ್ಪ್ 293 ಅವಳಿ ಗ್ಯಾಲಕ್ಸಿ, ಭೂಮಿಯಿಂದ ಸುಮಾರು 250 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.