ವಾಷಿಂಗ್ಟನ್(ನ.23): ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ ಹಬಲ್ ದೂರದರ್ಶಕ ಯಂತ್ರ, ತೀವ್ರ ವಿಕಿರಣವನ್ನು ಹೊರಸೂಸುತ್ತಿರುವ ಗ್ಯಾಲಕ್ಸಿಯೊಂದನ್ನು ಪತ್ತೆ ಹಚ್ಚಿದೆ.

ಎನ್‌ಜಿಸಿ 3749 ಎಂದು ಹೆಸರಿಸಲಾಗಿರುವ ನಕ್ಷತ್ರಪುಂಜ ಊಹೆಗೂ ಮೀರಿ ಅತೀ ಹೆಚ್ಚು ವಿಕಿರಣವನ್ನು ಹೊರಹಾಕುತ್ತಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಸೆಂಟರ್ ಆಫ್ ಮಿಲ್ಕಿ ವೇ ನೋಡಿ: ಅಂತಿಂಥದ್ದಲ್ಲ ‘ದೊಡ್ಮನೆ’ ಮೋಡಿ!

ಎನ್‌ಜಿಸಿ 3749 ಗ್ಯಾಲಕ್ಸಿಯಿಂದ ಒಳಬರುವ ಬೆಳಕನ್ನು ವರ್ಣಪಟಲಕ್ಕೆ ಹರಡಿ ಅದರ ಗುಣಲಕ್ಷಣಗಳನ್ನು ವಿಶ್ಲೇಷಿಸಿದಾಗ, ಗ್ಯಾಲಕ್ಸಿಯಿಂದ ಅಗಾಧ ಪ್ರಮಾಣದ ವಿಕಿರಣ ಹೊರಸೂಸುತ್ತಿರುವುದು ಗೋಚರವಾಗಿದೆ ಎನ್ನಲಾಗಿದೆ.

ಎಲ್ಲಾ ಗೆಲಕ್ಸಿಗಳು ಬಲವಾದ ವಿಕಿರಣ ಹೊರಸೂಸುವ ರೇಖೆಗಳನ್ನು ಪ್ರದರ್ಶಿಸುವುದಿಲ್ಲ. ಆದರೆ ಎನ್‌ಜಿಸಿ 3749 ಮಾತ್ರ ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಮಿಲ್ಕಿ ವೇ ಗ್ಯಾಲಕ್ಸಿ ಕಪ್ಪುರಂಧ್ರ ವಿಸ್ಫೋಟ: ಇನ್ನೂ ಬಿಟ್ಟಿಲ್ಲ ಭೂಮಿ ನುಂಗುವ ಚಟ!

ಭೂಮಿಯಿಂದ ಸುಮಾರು 135 ಮಿಲಿಯನ್ ಜ್ಯೋತಿವರ್ಷ ದೂರದಲ್ಲಿರುವ ಎನ್‌ಜಿಸಿ 3749 ಗ್ಯಾಲಕ್ಸಿ,  ಮಧ್ಯಮ ಪ್ರಕಾಶಮಾನವುಳ್ಳ ನಕ್ಷತ್ರಪುಂಜ ಎಂದು ಹೇಳಲಾಗಿದೆ. 

ನಕ್ಷತ್ರದ ಹುಟ್ಟು ಅದೆಷ್ಟು ಸುಂದರ: ಗ್ಯಾಲಕ್ಸೀಯೇ ಇವಕ್ಕೆಲ್ಲಾ ಮಂದಿರ!

ಎನ್‌ಜಿಸಿ 3749 ಗ್ಯಾಲಕ್ಸಿ ನ್ಯೂಕ್ಲಿಯಸ್ ಎಂದು ಕರೆಯಲ್ಪಡುವ ಕೇಂದ್ರ ಹೊಂದಿದ್ದು, ಇದು ತೀವ್ರವಾದ ವಿಕಿರಣವನ್ನು ಹೊರಸೂಸುತ್ತಿದೆ. ಆದರೆ ಈ ಗ್ಯಾಲಕ್ಸಿಯಲ್ಲಿ ಪರಮಾಣು ಚಟುವಟಿಕೆಯ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ನಾಸಾ ಮಾಹಿತಿ ನೀಡಿದೆ.